ಹೃದಯ ವೀಣೆ ಮಿಟಬೆಕೆ?

Sunday, September 30, 2007

ನಿನ್ನ ಮರೆಯವ ಮುನ್ನ..... ನನ್ನುಸಿರು....ಮುಂಜಾವಿನ ಅರಳಿ ನಿಂತ
ಗುಲಾಬಿ ಹೂವಲ್ಲ ಗೆಳತಿ
ನಮ್ಮಬ್ಬಿರಾ ಈ ಪ್ರೀತಿ....

ಸುಡುವ ರವಿಯ ತಾಪಕ್ಕೆ
ಕರಗಿ ನೀರ ಹನಿಯಾಗುವ
ಮಂಜಂತೇ ಕ್ಷಣಿಕವಲ್ಲ ಈ ಪ್ರೀತಿ..

ಒಮ್ಮೊಮ್ಮೆ ಬಿಸಿ ಕ್ಷಣದಲ್ಲೇ
ಮರೆಯಾಗುವ ತಂಗಾಳಿಯಲ್ಲ ಗೆಳತಿ
ನಮ್ಮಿಬ್ಬರ ಈ ಪ್ರೀತಿ......

ನಿನ್ನ ನೀನು ಮರೆತರು
ಮರೆಯಬಹುದು, ನನ್ನ
ಬದುಕಿನ ಕೊನೆಯ ಉಸಿರಿನವರೆಗೂ....
ನಿನ್ನ ನೆನಪನ್ನು ಹೆಕ್ಕಿ ಹೆಕ್ಕಿ
ನನ್ನೆದೆಯ ಮೇಲೆಲ್ಲಾ ಕೆತ್ತುವೆ
ಸುಂದರ ಚಿತ್ತಾರವಾಗಿಸಿ....

ನಿನ್ನ ಮರೆಯುವ ಮಾತು
ಜಗತ್ತಿನ ದೊಡ್ಡ ಮಿಥ್ಯ..
ನಮ್ಮಿಬ್ಬರ ಪ್ರೀತಿ ಎಂದು
ಸುಳ್ಳಗಾದ ಸತ್ಯ.....

ನನ್ನ ಉಸಿರು ನಿಲ್ಲುವ
ಕೊನೆಯ ಗಳಿಗೆಯಲ್ಲೂ..
ಮನ ತುಂಬಿ ಪ್ರಾಥಿಸುವೆ
ನನ್ನ ದೇವರನ್ನೊಮ್ಮೆ
ಅವಳ ಕೆಲವು ನೆನಪುಗಳನ್ನು
ಮತ್ತೇ ಮತ್ತೇ ನೆನಪಿಸು ನನಗೆ,
ಸುಂದರ ಕಾವ್ಯವಾಗಲಿ ನನ್ನ
ಸಾವು ಅವಳ ನೆನಪಿನ ಅಪ್ಪುಗೆಯಲಿ...

ನಿಮ್ಮ

ಹರ್ಷ

Wednesday, June 27, 2007

ಅಮ್ಮನ ನೆನಪು
ನಿನ್ನ ನೆನಪು ಇಂದು
ಅಮ್ಮ ನನಗೆ ಮತ್ತೆ
ಮತ್ತೆ ಕಾಡುತಿದೆ.....

ನೀನಿಲ್ಲದ ಬದುಕು ಏಕೋ
ಇಂದು ತುಂಬಾ ಬೇಸರ
ಎನಿಸುತಿದೆ....

ರೆಪ್ಪೆ ಮುಚ್ಚಲು ಹೆದರುವದು
ಕಣ್ಣೀರ್ ಹನಿಗಳು ಯಾರಿಗೂ
ಕಾಣದಿರಲಿ ಎಂದು

ತಲೆಯ ಮೇಲೆ ಯಾರಾದರೂ
ಕೈ ಇಟ್ಟರು ಹೀಗೆ, ಹಿಂತುರುಗಿ
ನೋಡುವೆ ನೀನಿರಬಹುದು ಎಂದು

ಮುಂಜಾವಿನಲಿ ರಂಗೋಲಿ ಹಾಕುವ
ಹೆಣ್ಣುಮಕ್ಕಳಾತ್ತ ಕದ್ದು ನೋಡುವೆ
ನಿನ್ನ ಮುಖ ಕಾಣಿಸಬಹುದು ಎಂದು

ಪ್ರತಿ ದಿನ ಬಹಳ ಹೊತ್ತಿನವರೆಗೂ
ಮಲಗುವೆ ನೀನು ಹಣೆಯ ಮೇಲೆ
ಮುತ್ತಿಕ್ಕಿ ಎಬ್ಬಿಸುವೆಯೆಂದು

Sunday, May 27, 2007

ನನ್ನುಸಿರು

ಯಾಕೆ ಬೇಕು
ಕೊಲ್ಲಲು
ಖಡ್ಗ ಗೆಳತಿ.
ನಿನ್ನ ಈ ಪ್ರೀತಿಯ
ಹರಿತ ಮಾತುಗಳೇ,
ಸಾಕು ನನಗೆ
ಆ ಇರುಳ ಮೌನವು
ಕವಿಯುವ ಮೊದಲೇ
ಮೌನವಗುವದು
ನನ್ನುಸಿರು
ನಿನ್ನ ಕಣ್ಣುಗಳಲ್ಲಿ
ನನ್ನ ಕಾಣುವ
ಬಯಕೆಯಿಂದ
ಹೃದಯ ಸ್ಥ೦ಭನವಾಗಿ.

ನಿಮ್ಮ
ಹರ್ಷ

Sote nimage

Iandu sote nanu
nimage,Nimma matin
naduve mukanagi..
Hege matadali
hellu gellati..
Avall matinind gottaitu..
avalladu "seeme(a)"
merid gnayan..
aandavagi jodisuttale
gellati padgall salugallanu
oandagisi sundarvad
humaleya jodisuttalle
nijakku avallondu
"malini"ye sari..
Mattugalli sotu
notada aatvadidare
hege,yendu kuda
veechar madide
kelavu gallige
aadaru yenu madali
nedalare ee notava
avallu kanngallinda
hor hommide tej "rashmi"
Matte hellu nanna
manase ninage iandu
mounave aasare..
kandu ko ninna
"harush"ava mounadali
mataduta ninage nine....

(Reply to malini poem in Iaralu Mouna in DAM)

ಬಯಕೆ

ಕನಸು ಸುಂದರವೆಂದು
ಕಣ್ಣು ಮುಚ್ಚಿ
ಬದುಕುವದೆ ಗೆಳತಿ

ವಾಸ್ತವದಲಿ ನೋವುಗಳಿದೆ
ಎಂದು ಬರಿ ಕನಸಿನ
ಲೋಕದಲಿ ವಿಹರಿಸುವದೆ?

ವಿರಹ ವೇದನೆಗೆ ಹೇದರಿ
ಪ್ರಿತಿಸದೇ ಬಾಳುವದು
ಸರಿಯೇನು ಗೆಳತಿ ?

ತವಕವಲ್ಲ ಗೆಳತಿ ಇದು
ಬಯಕೆ, ಭಾವನೆಗಳು
ತುಂಬಿ ತುಳುಕುತ್ತಿರುವ
ಆ ಸ್ಪೂರ್ತಿಯ ಸೆಲೆಯನ್ನು
ಕಾಣುವ ಆಸೆ ಈ
ನನ್ನ ಮನಕ್ಕೆ ...

Wednesday, April 25, 2007

ಹೇದರದಿರು ಬಾ ಗೆಳತಿಯೇ


ಹೇದರದಿರು  ಬಾ
ಗೆಳತಿಯೇ
ಓಮ್ಮೆ  ಮೋಗ
ತೋರಿಸು ಹೋಗು
ನನ್ನ, ಯಾಕೇ
ಮರೇಮಾಚುತ್ತಿರುವೇ ಹೀಗೆ
ಹೇಗೇ ಅಳಿಸಲಿ 
ಭಾವನೇಗಳು ನನ್ನ
ಶತಮಾನದಿಂದ
ಕತ್ತಲೆಯೇ ಗತಿಯಾಯಿತು
ಗೇಳತಿ, ನವೀನ ಯುಗದ
ಹುಡುಗೀ ನೀನು
ಇದು ಸರಿಯೇ ನಿನಗೇ
ಯಾಕೇ ಅಳುಕುವೇ
ದೂಡಿ ಬಾ ಭಯವನ್ನು
ನಾ ಕಾದಿರುವೇನು
ನೀನಗಾಗಿ

ನಿಮ್ಮ
ಹರ್ಷಾ

Sunday, March 18, 2007

ನಿನ್ನ ಕಣ್ಣಿರ ಹನಿಗೊಂದು

ನಿನ್ನ ಕಣ್ಣಿರ ಹನಿಗೊಂದು
ಆರ್ಥ ಕೊಡಲು ಗೆಳತಿ...
ಏನೆಲ್ಲಾ ಪ್ರಯತ್ನ ಮಾಡಿ ಸೊತೆ....

ನಿನ್ನ ತುಟಿಗಳಲ್ಲಿ ಆ ನಗು
ಮತ್ತೇ ಈ ನೆನೆದ ಕಣ್ಣುಗಳು
ಇದರರ್ಥ ಏನು ಹೆಳುವೆಯಾ ಗೆಳತಿ...

ನಿನ್ನ ತಿಳಿಯುವ ತವಕದಲಿ
ಪ್ರತಿ ದಿನ ಬಯಸುತಿರುವೆ
ಇರಲು ನಿನ್ನ ಜೊತೆಯಲಿ...

ಪ್ರತಿ ಗಳಿಗೆ ನಿನ್ನ ಜೊತೆ
ಕಳೆದರು ಪ್ರತಿ ಬಾರಿ ಆಗುವೆ
ಹೊಸ ಒಗಟು ಯಾಕೆ ನನ್ನ ಬದುಕಲಿ...

ತಿಳಿದಿರಲಿಲ್ಲ ಇಷ್ಟೊಂದು
ರಹಸ್ಯಗಳು, ನೊವುಗಳಿರಬಹುದು
ನಿನ್ನ ಆ ಸುಂದರ ಕಣ್ಣುಗಳಲ್ಲಿ...

ಅದಕ್ಕೇ ಇರಬಹುದು ಗೆಳತಿ ನೀನು
ಹೇಳ್ತಿಯಾ, ಮತುಗಳು ಹೆಳಲಾರದನ್ನು
ಕಣ್ಣುಗಳು ಹೆಳುತ್ತವೆ ಎಂದು...........

Harish Beerage

ಕನಸಿನ ಕನ್ಯೆ


ಬದುಕಿನಲ್ಲಿ ಬಾ ಗೆಳತಿ

ಯಾಕೆ ಕಾಡಿಸುವೆ ನನ್ನ

ಪ್ರತಿ ದಿನ ಕನಸಲ್ಲಿ...


ಹೇಗೆ ತಿಳಿಸಿ ಹೆಳಲಿ

ನಿನಗೆ, ಎಷ್ಟೊಂದು ಪ್ರೀತಿ

ಇದೆ, ನಿನಗಾಗಿ ಈ ಮನಸಲ್ಲಿ.


ಪ್ರತಿ ಗಳಿಗೆ ಬಯಸುವೆ

ಕಣ್ಣು ಮುಚ್ಚಲು, ನಿನ್ನ

ಸುಂದರ ಮೊಗವು ಕಾಣಲು......


ಹೆದರುವದು ಈ ಮನಸು

ಎಚ್ಚೆತ್ಟುಕೊಳ್ಳಲು, ಕಣ್ಣು ಬಿಟ್ಟರೆ

ನೀನು ತಪ್ಪಿ ಹೋಗುವೆಯೆಂದು.


ಈ ನನ್ನ ನಿದ್ರೆ ಚಿರನಿದ್ರೆಯಾದರೂ ಚಿಂತೆ ಇಲ್ಲ,

ನನ್ನ ಮುಚ್ಚಿದ ರೆಪ್ಪೆಗಳಮೇಲೊಮ್ಮೆ

ನೀನು ಮುತ್ತಿಟ್ಟರೆ ಸಾಕು ಗೆಳತಿ...

ಜೀವದ ಗೆಳತಿಗೆ

ತಿಳಿದೆಯಾದರೂ ಹೇಗೇ
ಗೆಳತಿ ಕೆಳಿಸದೆ ಹೋಯಿತು
ನಿನ್ನ ಕೂಗು ನನಗೆ ಎಂದು

ಬೇರೆ ಬೇರೆ ಏನು ನಮ್ಮಿಬ್ಬರ
ನೋವುಗಳೂ, ಆಗಿರಲು
ನಮ್ಮಿಬ್ಬರ ಹ್ರದಯಗಳು ಒಂದು

ಕಾಣಿಸದೇ ಹೋಗಿತ್ತು ಕ್ರೂರ
ಜಗತ್ತು ನಮ್ಮಿಬ್ಬರ ಕಣ್ಣಿಗೆ
ಪ್ರೀತಿ ಮಾಡುವಾಗ ಎಂದು......

ಹೂವಿನ ಹಾದಿಯಲ್ಲ ಗೆಳತಿ
ಈ ಪ್ರೀತಿ, ಪ್ರತಿ ಹೆಜ್ಜೆಗೂ ಬರಿ
ಮುಳ್ಳು ಕಟ್ಟಿಟ್ಟ ಬುತ್ತಿ..

ನೀನಿಲ್ಲದೇ ಕೊರಗಿ ಸತ್ತರು
ಚಿಂತೆಯಿಲ್ಲ ನಾನು ತಾಳದೇ ನೋವು.
ನೊಡದಾಗದು ನನಗೆ ನಿನ್ನ ಕಣ್ಣಿರ
ಹನಿಯಿಂದ ತೊಯ್ದ ಮೊಗವು.........