ಹೃದಯ ವೀಣೆ ಮಿಟಬೆಕೆ?

Sunday, March 18, 2007

ನಿನ್ನ ಕಣ್ಣಿರ ಹನಿಗೊಂದು

ನಿನ್ನ ಕಣ್ಣಿರ ಹನಿಗೊಂದು
ಆರ್ಥ ಕೊಡಲು ಗೆಳತಿ...
ಏನೆಲ್ಲಾ ಪ್ರಯತ್ನ ಮಾಡಿ ಸೊತೆ....

ನಿನ್ನ ತುಟಿಗಳಲ್ಲಿ ಆ ನಗು
ಮತ್ತೇ ಈ ನೆನೆದ ಕಣ್ಣುಗಳು
ಇದರರ್ಥ ಏನು ಹೆಳುವೆಯಾ ಗೆಳತಿ...

ನಿನ್ನ ತಿಳಿಯುವ ತವಕದಲಿ
ಪ್ರತಿ ದಿನ ಬಯಸುತಿರುವೆ
ಇರಲು ನಿನ್ನ ಜೊತೆಯಲಿ...

ಪ್ರತಿ ಗಳಿಗೆ ನಿನ್ನ ಜೊತೆ
ಕಳೆದರು ಪ್ರತಿ ಬಾರಿ ಆಗುವೆ
ಹೊಸ ಒಗಟು ಯಾಕೆ ನನ್ನ ಬದುಕಲಿ...

ತಿಳಿದಿರಲಿಲ್ಲ ಇಷ್ಟೊಂದು
ರಹಸ್ಯಗಳು, ನೊವುಗಳಿರಬಹುದು
ನಿನ್ನ ಆ ಸುಂದರ ಕಣ್ಣುಗಳಲ್ಲಿ...

ಅದಕ್ಕೇ ಇರಬಹುದು ಗೆಳತಿ ನೀನು
ಹೇಳ್ತಿಯಾ, ಮತುಗಳು ಹೆಳಲಾರದನ್ನು
ಕಣ್ಣುಗಳು ಹೆಳುತ್ತವೆ ಎಂದು...........

Harish Beerage

ಕನಸಿನ ಕನ್ಯೆ


ಬದುಕಿನಲ್ಲಿ ಬಾ ಗೆಳತಿ

ಯಾಕೆ ಕಾಡಿಸುವೆ ನನ್ನ

ಪ್ರತಿ ದಿನ ಕನಸಲ್ಲಿ...


ಹೇಗೆ ತಿಳಿಸಿ ಹೆಳಲಿ

ನಿನಗೆ, ಎಷ್ಟೊಂದು ಪ್ರೀತಿ

ಇದೆ, ನಿನಗಾಗಿ ಈ ಮನಸಲ್ಲಿ.


ಪ್ರತಿ ಗಳಿಗೆ ಬಯಸುವೆ

ಕಣ್ಣು ಮುಚ್ಚಲು, ನಿನ್ನ

ಸುಂದರ ಮೊಗವು ಕಾಣಲು......


ಹೆದರುವದು ಈ ಮನಸು

ಎಚ್ಚೆತ್ಟುಕೊಳ್ಳಲು, ಕಣ್ಣು ಬಿಟ್ಟರೆ

ನೀನು ತಪ್ಪಿ ಹೋಗುವೆಯೆಂದು.


ಈ ನನ್ನ ನಿದ್ರೆ ಚಿರನಿದ್ರೆಯಾದರೂ ಚಿಂತೆ ಇಲ್ಲ,

ನನ್ನ ಮುಚ್ಚಿದ ರೆಪ್ಪೆಗಳಮೇಲೊಮ್ಮೆ

ನೀನು ಮುತ್ತಿಟ್ಟರೆ ಸಾಕು ಗೆಳತಿ...

ಜೀವದ ಗೆಳತಿಗೆ

ತಿಳಿದೆಯಾದರೂ ಹೇಗೇ
ಗೆಳತಿ ಕೆಳಿಸದೆ ಹೋಯಿತು
ನಿನ್ನ ಕೂಗು ನನಗೆ ಎಂದು

ಬೇರೆ ಬೇರೆ ಏನು ನಮ್ಮಿಬ್ಬರ
ನೋವುಗಳೂ, ಆಗಿರಲು
ನಮ್ಮಿಬ್ಬರ ಹ್ರದಯಗಳು ಒಂದು

ಕಾಣಿಸದೇ ಹೋಗಿತ್ತು ಕ್ರೂರ
ಜಗತ್ತು ನಮ್ಮಿಬ್ಬರ ಕಣ್ಣಿಗೆ
ಪ್ರೀತಿ ಮಾಡುವಾಗ ಎಂದು......

ಹೂವಿನ ಹಾದಿಯಲ್ಲ ಗೆಳತಿ
ಈ ಪ್ರೀತಿ, ಪ್ರತಿ ಹೆಜ್ಜೆಗೂ ಬರಿ
ಮುಳ್ಳು ಕಟ್ಟಿಟ್ಟ ಬುತ್ತಿ..

ನೀನಿಲ್ಲದೇ ಕೊರಗಿ ಸತ್ತರು
ಚಿಂತೆಯಿಲ್ಲ ನಾನು ತಾಳದೇ ನೋವು.
ನೊಡದಾಗದು ನನಗೆ ನಿನ್ನ ಕಣ್ಣಿರ
ಹನಿಯಿಂದ ತೊಯ್ದ ಮೊಗವು.........