ಹೃದಯ ವೀಣೆ ಮಿಟಬೆಕೆ?

Wednesday, June 27, 2007

ಅಮ್ಮನ ನೆನಪು
ನಿನ್ನ ನೆನಪು ಇಂದು
ಅಮ್ಮ ನನಗೆ ಮತ್ತೆ
ಮತ್ತೆ ಕಾಡುತಿದೆ.....

ನೀನಿಲ್ಲದ ಬದುಕು ಏಕೋ
ಇಂದು ತುಂಬಾ ಬೇಸರ
ಎನಿಸುತಿದೆ....

ರೆಪ್ಪೆ ಮುಚ್ಚಲು ಹೆದರುವದು
ಕಣ್ಣೀರ್ ಹನಿಗಳು ಯಾರಿಗೂ
ಕಾಣದಿರಲಿ ಎಂದು

ತಲೆಯ ಮೇಲೆ ಯಾರಾದರೂ
ಕೈ ಇಟ್ಟರು ಹೀಗೆ, ಹಿಂತುರುಗಿ
ನೋಡುವೆ ನೀನಿರಬಹುದು ಎಂದು

ಮುಂಜಾವಿನಲಿ ರಂಗೋಲಿ ಹಾಕುವ
ಹೆಣ್ಣುಮಕ್ಕಳಾತ್ತ ಕದ್ದು ನೋಡುವೆ
ನಿನ್ನ ಮುಖ ಕಾಣಿಸಬಹುದು ಎಂದು

ಪ್ರತಿ ದಿನ ಬಹಳ ಹೊತ್ತಿನವರೆಗೂ
ಮಲಗುವೆ ನೀನು ಹಣೆಯ ಮೇಲೆ
ಮುತ್ತಿಕ್ಕಿ ಎಬ್ಬಿಸುವೆಯೆಂದು