ಹೃದಯ ವೀಣೆ ಮಿಟಬೆಕೆ?

Saturday, March 15, 2008

ದೂರದ ಕನಸೀನೂರಿಗೆ..

ದೂರದ ಕನಸೀನೂರಿಗೆ,
ಕ್ಷಮಿಸು ನನ್ನ ನಾ
ಬರಲಾರೆ ನಿನ್ನ ಜೊತೆ
ನಾ ಗೆಳತಿ...

ಸೋತು ಸಾಕಾಗಿ ಹೋಗಿದೆ
ನನಗೆ ನೈಜ ಜಗತ್ತೇ,
ಹೆಳುವರು ಈ ಜಗತ್ತು ಮತ್ತು
ಇಲ್ಲಿರುವದು ಎಲ್ಲ ನೈಜ ಅಂತೆ.

ಎಲ್ಲ ಸುಳ್ಳಿನ ಕಂತೆ ತುಂಬಿ
ಹೋಗಿದೆ ಇಲ್ಲಿ, ಹೇಳು ಯಾವುದು
ವಾಸ್ತವ, ಯಾವುದು ಸುಳ್ಳು ತಿಳಿಯದೇ
ಸುಸ್ತಾಗಿ ಹೋಗಿದ್ದೇನೆ ನಾನು..

ನಿನ್ನ ಕನಸೀನೂರಿನಲ್ಲಿ ಹೇಳು
ಹೊಟ್ಟೆ ತುಂಬಲ್ಲು
ಮಾಡಬೇಕಾಗಿಲ್ಲವೇ ದೀನಪೂರ್ತಿ
ಕಂಪ್ಯೂಟರ್ ಜೊತೆ ಗುದ್ದಾಟ..?

ಖುಷಿ ಪಡಲು ಒದ್ದಾಡಬೇಕಾಗಿಲ್ಲವೆ
ಎಮ್. ಜಿ ರೋಡು ಪಿಜ್ಜಾ ಹಟ್ ಗಳ
ಸಹವಾಸ ಮುರು ತಾಸು ಬೇಸರ ದೂಡಲು ಆಸರೆ ಬೇಡವೇ
ಮುಲ್ಟಿಪ್ಲೆಕ್ಷಗಳ ನಿಬಿಡ ಜನರ ಕಾಟ..?

ಹಾಗಿದ್ದರೆ ಹೇಳು, ಇಂದೆ ಓಡೋಡಿ ಬರುವೆ
ನಿನ್ನ ಸನಿಹ , ಈ ವಾಸ್ತವದ ಜಗತ್ತನ್ನು ಬಿಟ್ಟು
ನಿನ್ನ ಹಿಂದೆ ಓಡೋಡಿ ಬರುವೆ ಇಂದೆ ಕೈ ಹಿಡಿದು
ಕರೆದೊಯ್ಯಿ ನನ್ನ ನಿನ್ನ ಕನಸಿನೂರಿಗೆ..

ಹರೀಶ್ ಎನ್. ಬೀರಗೆ

Wednesday, March 5, 2008

ಬೇಸರ

ಬೇಗ ಮುಳುಗು ಸೂರ್ಯಾನೆ
ಸಂಜೆಯಾಗಲೀ ಇಂದು..
ಸಾಗಿ ಹೋಗಲಿ ನನ್ನ ಬದುಕಿನ
ದಿನವೂ ಮತ್ತೊಂದು......

ಕಿಟಕಿಯಿಂದ ಕಣ್ಣು ಹಾಯಿಸಿ ನೋಡುತ್ತೇನೆ
ಮುಂಜಾವಿನಲಿ ಎದ್ದು, ಮಂಜಿನ
ಸೀರೆ ಉಟ್ಟ ಸುಂದರ ಪರ್ವತಗಳು,
ನನ್ನ ನೋಡಿ ನಾಚಿದಂತೆ ದೂರದಲಿ.....

ಕಣ್ಣು ಬಿಡದೆ ಕೆಳುತ್ತಾನೆ ಗೆಳೆಯ,
ಭಾಯಿ ಶೇವಿಂಗ್ ಆಯಿತಾ, ಇವತ್ತಿಂದು ಏನು
ಮೆನೂ ?, ಬರಿ ಇರುವಾಗ ಬ್ರೆಡ್ ಮತ್ತು
ಮ್ಯಾಗಿ ಎರಡೇ ಆಪ್ಶನು (option)................

ಇಲ್ಲಿನ ರಸ್ತೆಗಳು ನೋಡು, ಎಷ್ಟು ಸುಂದರ
ಇಲ್ಲಿನ ಪಾರ್ಕುಗಳು, ಇಲ್ಲಿನ ಮಾತೆ ಬೇರೆ
ಎಂದು ಪ್ರತಿ ಸಲ ಆವನೂ ಹೇಳುವಾಗ,
ಕೋಪದಿಂದ ಮುಷ್ಟಿ ಬಿಗಿಯಾಗುತ್ತದೆ
ತಡೆಯುತ್ತೇನೆ ಮನಸಿನಲ್ಲಿ ಬೇಡ ತಾಳು
ಕನ್ನಡ ಮಾತಡಲು ಇರುವದೋಂದೇ ಆಪ್ಶನು (option)

ಏನೇ ಅನ್ನಲಿ ನಮ್ಮ ಪೂಣೆ ಮಾತೆ ಬೇರೆ
ಯಾವ ಬಸ್ ನಲ್ಲಿ ಕುಳಿತರೂ ಎಲ್ಲಾ ನಮ್ಮವರೇ,
ಆವ್ರ್ಯಾರು ನಾವ್ಯಾರೂ ಅನ್ನುವದು ಇಬ್ಬರಿಗೂ ಗೊತ್ತಿಲ್ಲ
ವಡಾಪಾವ ಜ್ಯೋತೇ ಚಟ್ನಿ ತಿಂದ ಹಾಗೆ ಮಜಾನೇ ಬೇರೆ

ಒಮ್ಮೊಮೆ ಅಣುಕಿಸುವದು ನನ್ನ ಹುಡುಗಿಯ ಮುಖ
ಇಲ್ಲಿನ ಹುಡುಗಿಯರನ್ನು ನೋಡಿದಾಗೊಮ್ಮೆ, ಛಿ ಏನೋ ದಡ್ಡ
ಯಾರ ಜ್ಯೋತೇ ನನ್ನ ಹೋಲಿಸುತ್ತಿರುವೆ ಎಂದು
ಮುಖ ಕೆಡಿಸುತ್ತದೆಕೊಪದಲಿ ನನ್ನಿಂದ ದೂರವಾಗಿ ಹೋದ ಹಾಗೆ......

ನಿಮ್ಮ

ಹರ್ಷ

(ಟುರಿನ ನಾಗರದಲ್ಲಿದ್ದಾಗ ಬರೆದ ಕವನ)

Saturday, March 1, 2008

ಮುಗಿಯದಿರಲೀ ಮಾತುಗಳು.....

ಮುಗಿಯದಿರಲಿ ನಿನ್ನ ಮಾತುಗಳು.
ಗೆಳತಿ ನಿನ್ನ ಮಾತುಗಳೇ ನನ್ನ
ಬದುಕಿಗೆ ಗಾಳಿ... ನನ್ನಾ ಹೃದಯದಾ
ಬಡಿತಗಳು.....................

ದ್ವೇಷವಾದರೂ ಮಾಡು,
ಪ್ರೀತಿಯದರೂ ಮಾಡು, ನಿನ್ನ
ಬದುಕಿನ ಒಂದು ಗಳಿಗೆಯಲ್ಲಾದ್ರೂ
ನನ್ನ ನೆನಪು ಮಾಡು.....

ನಿನ್ನ ಚಿತ್ರಕ್ಕೇ ಬಣ್ಣ ತುಂಬಲು
ನನ್ನಾ ನೆತ್ತರಾದುರು ಹರಿಯಲಿ....
ಒಮ್ಮೆ ಮಾತು ಕೊಟ್ಟ ಮೇಲೆ ಈ ಜೀವನ
ನಂದಲ್ಲ ನಿನ್ನದು...ಇಗೊ ನಿನಗೆ ಆರ್ಪಣೆ...

ನಿನ್ನ ಕವನವೂ ನನಗೆ ಉಡುಗೊರೆಯಲ್ಲ ಗೆಳತಿ.. ನಾನು
ನಾನಿಲ್ಲಾ ನನ್ನದ್ದು ಅನ್ನುವದು ಏನಿಲ್ಲ
ನಿನ್ನ ನೆರಳಿನಲಿ ನನ್ನಾ ನಾನು ಮರೆತಿರುವೆ..
ಸಾಗರದ ನೀರಿಂದ ಸಾಗರಕ್ಕೆ ಪೂಜೆ
ಸಲ್ಲಿಸುವದು ಬಹುಶ ಇದಕ್ಕೆ ಏನೋ...

(Reply to Malini Poem 'Udugore' in Dam)

ನನ್ನ ಕವಿತೆ

ನನ್ನ ಕವಿತೆ, ಬರಿ
ಪದಗಳ ಜಂಜಾಟದಲ್ಲಿ
ಸೋಸಿ ಬಂದ ಸುಗಂಧವಲ್ಲ...

ನನ್ನವಳ ಮಲ್ಲಿಗೆಯ
ಕಂಪಿನ ಮಂಪರಿನಲ್ಲಿ
ತೊಯ್ದು ಬಂದ ತೊದಲು ನುಡಿ...

ನನ್ನ ಕವಿತೆ ಜಗತ್ತಿನ
ಅದ್ಭುತಗಳ ನೋಡಿ ಉದ್ಗರಿಸಿ
ಬಂದ ಸಾಲುಗಳಲ್ಲ....

ನನ್ನ ಕವಿತೆ ನನ್ನವಳ ಅಪ್ಪುಗೆಯ
ಬಿಸಿ ಸ್ಪರ್ಶದಂತೆ ಯಾವಾಗಲು ಸನಿಹ
ನನ್ನೊಡಗುಡಿ ನನ್ನಾ ಉಸಿರಾಗಿ..

ಇದು ನನ್ನಾ ಕವಿತೆಯೆಲ್ಲ ಗೆಳತಿ
ಈ ಕವನ ನಿನ್ನದೆ, ನಿನ್ನ ಕಣ್ಣಂಚಿನ
ನೊಟದಲಿ ಆಡಗಿರುವ ಸುಪ್ತ ನೊಟಗಳೆ,
ಮಾತಾಗದೇ ಮೌನವಾಗಿರುವ ನಿನ್ನ ತುಟಿಯಂಚಿನಲಿ
ಕಾಣುತಿರುವ ಅದುರುವ ಹೂವಿನ ದಳಗಳೆ, ಇಲ್ಲಿ ಮುಡಿರುವ
ಪ್ರತಿ ಪ್ರತಿ ಸಾಲುಗಳು.. ಇದೋ ಇದು ನಿನ್ನ ಕವನವೇ ಸರಿ..

ನಿಮ್ಮ

ಹರ್ಷ ಬೀರಗೇ

(Reply to Malini Jain poem 'Nanna Kavite' in Dam)

ಬಾ ಗೆಳತಿ


ನನ್ನ ಪ್ರೀತಿಯ ಕಂಪು
ಅರಿಯದೇ ಹೊದೆಯಾ ಗೆಳತಿ...
ನನ್ನ ಮನಸಿನ ಮಾತು
ಕೇಳದೇ ಹೋಯಿತೆ ನಿನಗೆ...

ನಿನ್ನ ಪ್ರೀತಿಯು ನನ್ನ
ಮೌನದ ಮಾತನರಿತು
ಮತ್ತೆ ಹೊಸ ಚಿಗುರಿನಂತೆ
ಹಸನಾಗುವದು ಎಂದಿದ್ದೆ..

ಹಗಲು, ರಾತ್ರಿ, ನಿದ್ದೆ, ಎಚ್ಚಾರ
ಇದಾವುದರ ಹಂಗಿಲ್ಲ ನನ್ನಾ
ಪ್ರೀತಿಗೆ ಇದು ಎಂದೆಂದಿಗೂ
ನಿರಂತರ. ಇದಕಿಲ್ಲ ಯಾವ ಆಂತರ

ನಿನ್ನ ನೋಡಿದಾಗ ತೆರೆದ ರೆಪ್ಪೆ
ಇನ್ನೂ ಮುಚ್ಚಿಲ್ಲಾ.. ನನ್ನ
ಕಣ್ಣುಗಳಿಗೆ ನಿನ್ನ ಚಿತ್ರ
ಮಾಸುವ ಭೀತಿ......

ಹುಸಿ ಮುನಿಸು ಬಿಡು ಹುಚ್ಚಿ..
ಹಾರಿ ಬಾ ಒಮ್ಮೆ ಗುಬ್ಬಚ್ಚಿಯ
ತರಹ ನನ್ನ ಹೃದಯದ ಗೂಡಿನಲಿ
ನೆನ್ನ ನೆನಪಿನಲಿ ನನ್ನುಸಿರು ನಿಲ್ಲುವ ಮೊದಲು.......

ನಿಮ್ಮ

ಹರ್ಷ ಬೀರಗೆ

(Reply to Rajni poem in Dam)

ಹುಚ್ಚು ಹುಡುಗಿಯೇ......

ನೀನು ಅವಳಲ್ಲ ಹುಡುಗಿ...
ನಾನು ಬಯಸಿದ ಗೆಳತಿ...
ನನ್ನ ಅಣುಕು ನೋಟವ ಕಂಡು
ಅಂದುಕೊಂಡೇಯಾ ಪ್ರೀತಿ......

ನನ್ನ ಪಾಲಿಗೆ ಇದು ಬರಿ
ಒಂದು ಆಟ....ಪ್ರಿತಿ ಎನ್ನೋದು
ಹೃದಯ ಗೆಲ್ಲುವದು
ನನ್ನ ಹಳೆಯ ಚಟ.....

ಮರೆತು ಬಿಡು ಈಗಲಾದರೂ
ನನಗೆ ಕ್ಷಮಿಸು, ನಾನಲ್ಲ ಅವನು
ನಿನ್ನ ನಿಶಾಚಾರಿ ಕಣ್ಣುಗಳಿಗೆ
ಮುತ್ತಿಕ್ಕಿ ತಂಪು ನೀಡುವವನು....

ನನ್ನಲ್ಲಿ ನಾನಿಲ್ಲ ಗೆಳತಿ.. ನಾನೇ
ಹುಡುಕುತಿರುವೆ.. ಈಗ ನೀನೆ ಹೇಳು?
ನಿನ್ನಲ್ಲಿ ನಾನು ಹೇಗೆ ಬಂದು
ಸೇರಿಕೊಳ್ಳಲಿ ಹುಚ್ಚಿ.....

(Reply to Ranjni poem Ninna Premada Jaala In 'Dam')