ಹೃದಯ ವೀಣೆ ಮಿಟಬೆಕೆ?

Tuesday, May 6, 2008

ನೆನಪಿನ ಮಾತು

ಯಾವ ನೆನಪಿನ ಮಾತು
ಇಂದು ಕಾಡೀತು ಗೆಳತಿ,
ಎಂದಿನಿಂದ ನೀನು
ಆದೇದೊಡ್ಡ ಹೃದಯದ ಒಡತೀ?

ಹೋದ ವರುಷದ ಚಳಿಗಾಲದ
ರಾತ್ರಿಯೊಮ್ಮೆನನ್ನ ಅಪ್ಪಿಕೊಂಡು,
ಮುತ್ತುಗಳಸುರಿಮಳೆ ಸುರಿಸಿದವಳು
ನೀನೆ ಅಲ್ಲವೇ ಹುಡುಗಿ ?

ಮಳೆಗಾಲದಲಿ ನಿಮ್ಮೋರಿಗೆ ಹೊರಟಾಗ
ನನ್ನ ಬಿಟ್ಟು ಎರಡು ದಿನ, ನಿನ್ನ
ಬಿಟ್ಟುಹೇಗಿರಲಿ ಎಂದು, ಮಳೆ ಹನಿಗಳಿಗಿಂತ
ನಮ್ಮಕಣ್ಣಿರೆ ನೆಲವನ್ನೂ ನೆನೆಸಿದ್ದು ಹೇಗೆ ಮರೆತೆ ನೀನು?

ಬೇಸಿಗೆಯಲ್ಲೊಮ್ಮೆ ನಾವಿಬ್ಬರು
ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು
ಚುಕ್ಕಿಗಳನ್ನುಹೆಕ್ಕಿ, ಹೆಕ್ಕಿ ಎಣಿಸಿದ್ದು, ಮುಂಜಾನೆ
ಎರಡು ಚುಕ್ಕಿ ನಿನ್ನ ಕಣ್ಣಲ್ಲೇ ಇದೆ
ಎಂದು ನಾನು ಆಂದಾಗ,
ನನ್ನ ಹುಚ್ಚನೆಂದು ನಕ್ಕಿದ್ದು ನೆನಪಿದೆ ತಾನೇ?

ನಿನ್ನ ನಾ ಮರೆತಿರುವೆ, ಅದೊಂದು
ಕೆಟ್ಟ ಕನಸು, ನಿನಗಾಗಿ ಇಲ್ಲ ನನ್ನ ಈ ಮನಸು..
ಎನ್ನುವ ನಿನ್ನ ತುಟಿಗಳಲ್ಲಿ ಇನ್ನೂ ನನ್ನ
ಮುತ್ತಿನ ಮತ್ತಿದೆ, ನಿನ್ನ ಆ ಕಣ್ಣುಗಳಲ್ಲಿ
ಇಂದಿಗೂ ಕಾಣುತ್ತಿದೆ ನನ್ನ ಪ್ರತಿಬಿಂಬ,
ನಿನ್ನ ನಾನು ನಂಬಲೇ? ಆಥವಾ ನಿನ್ನೊಳಗಿರುವ
ನನ್ನ ನಾ ನಂಬಲೇ ಹೇಳು ಗೆಳತಿ?


ನಿಮ್ಮ

ಹರ್ಷಾ