ಹೃದಯ ವೀಣೆ ಮಿಟಬೆಕೆ?

Sunday, July 20, 2008

ಪ್ರೀತಿಯ ಕುಮಾರನಿಗೆ


ಪ್ರೀತಿಯ ಕುಮಾರನಿಗೆ,

ನನ್ನ ಬದುಕಿನಲ್ಲಿ ನಾನು ಎಲ್ಲಕಿಂತ ಹೆಚ್ಚಾಗಿ ಪ್ರೀತಿಸದ ವ್ಯಕ್ತಿ ನೀನು, ನಿನಗೂ ಗೊತ್ತಿರಬಹುದು, ನೀನೆ ಹೇಳಿದ್ದೆ ಅಂದು ರಾತ್ರಿ ನೀನು ನಿನ್ನ ತಮ್ಮನ ಜ್ಯೋತೇ ಮೂವಿಗೆ ಹೋಗಬೇಕಾದರೆ ನಿನ್ನ ಮೊಬೈಲ್ ಗೆ ಅದ್ಯವಾದೋ ಮಿಸ್ ಕಾಲ್. ನಿಜ ಹೇಳ್ತೀನಿ ನನ್ನಾಣೆಗು ಅದೊಂದು ರಾಂಗ್ ನಂಬರ್ ಕಾಲ್ ಅಷ್ಟೇ. ನೀನು ದೊಡ್ಡ ಹಟಮಾರಿ ಮರುದಿನ ಎಷ್ಟೊಂದು ಸಲ ಕಾಲ್ ಮಾಡಿದ್ದೆ ಕೊನೆಗೆ ನಾನೊಮ್ಮೆ ಫೋನ್ ಎತ್ತಿದಾಗ ನಿನ್ನ ಜ್ಯೋತೇ ನಾನು ಮಾತಾಡಿದ್ದೆ.ನಿನ್ನ ಆ ಮಾತಾಡೋ ಶೈಲಿ ನಿಜಕ್ಕೂ ಕಣೋ ಯಾವುದೇ ಹುಡುಗಿ, ಎಷ್ಟೇ ಕನ್ಸರ್ವೇಟಿವ್ ಆಗಿರಲಿ ನಿನ್ನ ಮಾತು ಕೆಳಿದರೆ ಢಮಾರ್, ಮತ್ತೆ ಮತ್ತೆ ಮಾತಾಡಿಸಬೇಕು ಅನಿಸುತ್ತೆ.

ಮಿಸ್ ಕಾಲ್ ನಿಂದಾದ ಪರಿಚಯ ಬೇರೆಯವರಿಗೆ ಯಾವಾಗಲು ಯುವರ್ ಕಾಲ್ ಈಸ್ ವೇಟಿಂಗ್ ಅನ್ನೋ ಮಟ್ಟಕ್ಕೆ ತುಂಬಾ ಮಾತಡಿದ್ದಿವಿ,ಬಹಳಷ್ಟು ಸಲ ನಿನಗೆ ಗೊತ್ತಿರದ ವಿಷಾಯನೇ ಇಲ್ಲ ಅನಿಸುವ ಮಟ್ಟಿಗೆ ನಿನ್ನ ಕನ್ವಿನ್ಸಿಂಗ್ ಸ್ಟೈಲ್ ನನಗೆ ತುಂಬಾನೆ ಹುಚ್ಚು ಹಿಡಿಸುತಿತ್ತು. ನಾವಿಬ್ಬರು ಕೊನೆಗೊಮ್ಮೆ ಭೇಟಿ ಆದಾಗ ಒಮ್ಮೆಲೇ ನಿನ್ನ ಮುತ್ತಿಡಬೆಕು ಅನ್ನುವ ಭಾವನೆ ಉಕ್ಕಿತಾದರೂ, ಫ್ರೀ ಆಗಿ ಸಿಗೋ ಹುಡುಗಿ ಅನ್ಕೊಬಾರದು  ಅಂತ ಸುಮ್ಮನಾಗಿದ್ದೆ . ಥೂ ನೀವು ಕವಿಗಳು ಹೀಗೆನಾ, ಬರಿ ಭಾವನೆ ಕೆಡಿಸಿ ಕಾಡುವ ನೀಚರೇನೋ ಅಂತ ಅನಿಸುವ ಮಟ್ಟಿಗೆ ನನ್ನ ಭಾವನೆಗಳ್ಲನ್ನು ಕೆಣಕಿ ಒಮ್ಮೆಯೂ ಮುಟ್ಟದೆ ಹೋದ ಪಾಪಿ ನೀನು.ಪ್ರತಿಯೊಮ್ಮೆ ನಿನ್ನ ಕಂಡಾಗ ನಿನ್ನ ಅಪ್ಪಿ ಮುತ್ತುಗಳ ಸರಮಾಲೆ, ಸುರಿಸಬೇಕು ಎಂದು ಕೊಂಡಿದ್ದೆ. ಕಳ್ಳ ನಿನಾಗೆಲ್ಲ ಗೊತ್ತು ಅದಕ್ಕೆ ಒಮ್ಮೆ ನೀನು ಹೆಳಿದ್ದೆ "ನೋಡು ನಿನಗೆ ಇನ್ನು 20 ವಯಸ್ಸು, 2nd ಫೇಸ್ M.B.B.S ನಲ್ಲಿ ಓದುತಿದ್ದಿಯಾ, ನನಗೀಗ 29 ನಮ್ಮನೆಯವರ ಮನಸಿನ ಹಾಗೆ ಅವರು ಇಷ್ಟ ಪಡೋ ಹುಡುಗಿನ ಮದುವೆಯಾಗಬೇಕು. ಸುಮ್ಮನೇ ಭಾವಾವೇಶದಲ್ಲಿ ಬಂದು ನಿನ್ನ ಬದುಕು ಹಾಳು ಮಾಡುವದು ನನಗೆ ಇಷ್ಟ ಇಲ್ಲ". ನಿಜಕ್ಕೂ ಕಣೋ ನನಗೆ ನೀನು ತುಂಬಾ ಹಿಡಿಸಿದ್ದೆ, ನಿನ್ನ ನಿಜ ಮಾತುಗಳನ್ನು ಕೇಳಿ ಒಮ್ಮೆಲೇ ನಿನ್ನ ಮೇಲೆ ಮುತ್ತುಗಳ ಸುರಿಮಳೆ ಸುರಿಸಿದ್ದೆ. ನೀನು ನನಗೆ ಬಜಾರೀ ಅಂತ ತಿಳಿಲಿಲ್ಲಾ  ತಾನೇ?. ತಿಳಿದರು ನನಗೇನೂ ಚಿಂತೆ ಇಲ್ಲ. ನೀನು ನಿಜಕ್ಕೂ ಅದಕ್ಕೆ ಡೆಸರ್ವಿಂಗ್ ಅಂತ ಅನಿಸಿತ್ತು ಕೊಟ್ಟೆ  ಅಷ್ಟೇ .

ನಿನಗೆ ನೆನಪಿರಬಹುದು, ಅಂದು ಮೊದಲನೆ ಸಲ ನೀನು ನನಗೆ ಅಪ್ಪಿಕೊಂಡಿದ್ದೆ, ನೀನೆ ಹೆಳಿದೆ ಥೂ ನಾನೊಬ್ಬ ಸ್ವಾರ್ಥಿ ತರಹ ಬಿಹೇವ್ ಮಾಡ್ತಾ ಇದ್ದೀನಿ ಅಂತ. ಒಂದೇ ಘಂಟೆಯಲ್ಲಿ ನೀನು ಸುಮಾರು ಒಂದು ಪಾಕೆಟ್ ಸಿಗರೇಟ್ ಸೆದ್ತಾ ಇರಬೇಕಾದರೆ ನನಗೆ ಅರ್ಥ ಆಗಿತ್ತು, ಏನೋ ಸೀರೀಯಸ್ ಮ್ಯಾಟರ್ ಅಂತ. ಆವಾಗ ನೀನೆ ಹೇಳಿದ್ದೆ "ಪರಿ" ನನಗೆ ಹುಡುಗಿ ಡಿಸೈಡ್ ಆಗಿದೆ.  ಛೀ ನಿನ್ನ, ನೀನೇನು ತಿಳಿದಿದ್ದೆ ನಾನು ಅಳ್ತಾ ಕುಡ್ತಿನಿ ಅಂತನಾ? ಪ್ರೇರಣಳಾ ಫೋಟೋ ನೋಡಿದ ಮೇಲೆ ಅನಿಸಿತು, ನಿಜಕ್ಕೂ  ದೇವತೆ ಕಣೋ! ನಿನ್ನ ಮನೇಯಲ್ಲಿ ನಿನ್ನ ಕಲ್ಪನೆಗೂ ಸಿಲುಕದ ಸುಂದರಿಯನ್ನೇ ಸೋಸೆಯಾಗಿ ಆಯ್ಕೆ ಮಾಡಿದ್ದಾರೆ. ನಾನು ನಿಜಕ್ಕೂ ಲಕ್ಕಿ ಕಣೋ, ನಿನ್ನ ಸ್ವಲ್ಪವಾದರೂ ಪ್ರೀತಿ ನಾನು ಅವಳಿಂದ ಕಸಿದಿದ್ದೆ.

ನೀನ್ಯಾಕೋ ಸಿಗರೇಟ್ ಸೆದ್ತಿಯಾ ಏಷ್ಟೊಂದು ಬೇಡ ಅಂದಿದ್ದೆ ನಿನಾಗೆಷ್ಟೋ ಸಲ, ಆವಾಗ ನೀನು ಹೆಳುವ ಮಾತು " ಐ ವಿಲ್ ಲೀವ್ ಇಟ್ ವನ್ಸ್  ಆಯ್  ಗೇಟ್ ಮ್ಯಾರೀ, ಎಲ್ಸ್ ಶಿ ವೋಂಟ್ ಅಲೋ ಮಿ ಟು ಕಿಸ್" ಥೂ ನಿನ್ನ, ಲಕ್ಕಿ ಗರ್ಲ್ ಕಣೊ ಅವಳು, ನೀನು ಅವಳಿಗಾಗಿ ಚೇಂಜ್ ಆಗೋಕ್ಕೆ ಬಯಸ್ತಾ ಇದ್ದೀಯಾ. ಬಹುಶ ನಾನು ನಿನ್ನ ಹೆಂಡ್ತಿಯಾಗಿದ್ದಾರೆ ನೀನು ಸಿಗರೇಟ್ ಸೆದಬೇಕು ಅಂದುಕೊಂಡಾಗಲೆಲ್ಲ ನಿನ್ನ ತುಟಿಗಳನ್ನು ನನ್ನ ತುಟಿಗಳಿಂದ ಲಾಕ್ ಮಾಡಿ ಬಿಡ್ತಾ ಇದ್ದೆ, ಹೋಗ್ಲಿ ಬಿಡು ನಮ್ಮಿಬ್ಬರ ಕಥೆ ಇಷ್ಟೇ ಅಂತ ಅನಿಸುತ್ತೆ. ನಿನಗೆ ನೆನಪಿರಬಹುದು ಆಮೇಲಿನ ನಮ್ಮಿಬ್ಬರ ಭೇಟಿ ತುಂಬಾನೆ ಜಾಸ್ತಿಯಾಗಿತ್ತು. ನನಗಿನ್ನೂ ನೆನಪಿದೆ ನೀನೊಮ್ಮೆ ಹೇಳಿದ್ದೆ ನಾನು ಸಾಯ್ತಾ ಇರಬೇಕಾದರೆ ನಾನು ನಿನ್ನ ತೊಡೆಯ ಮೇಲೆ ನನ್ನ ಹಣೆ ಇಟ್ಟು ಸಾಯಬೇಕು ಅಂತ. ಛೀ ಎಂತ ಮಾತು ಹೆಳ್ತಿಯಾ, ಐ ವಿಲ್ ಕಿಲ್ ಯೂ ಅಂತ ನಾನು ಹೇಳಿದ್ದಾಗ ನೀನು ಅದೇನೋ ದೊಡ್ಡ ದೊಡ್ಡ ಫಿಲಾಸಫೀ ಹೇಳಿದ್ದೆ.

ನಿನ್ನ ಮದುವೆ ಡಿಸೈಡ್ ಆಗಿ ನೀನು ಪುಣೆ ಇಂದ ಬೆಂಗಳೋರಿಗೆ ಹೋಗ್ತಾ ಇರಬೇಕಾದರೆ ನಾನು ನಿನಗೆ ತುಂಬಾನೆ ನಗು ಮುಖದಿಂದ ಕಳುಹಿಸಿದ್ದೆ. ಮತ್ತೆ ನಮ್ಮಿಬ್ಬರ ಭೇಟಿ ಈ ತರಹ ಆಗುತ್ತೆ ಅಂದುಕೊಂಡಿರಲಿಲ್ಲ.ನೀನು ಹೋಗಿ ತುಂಬಾನೆ ವರುಷಗಳಾಗಿರಬಹುದು ಕುಮಾರ್, ಆದರೆ ನಿನ್ನ ನೆನಪು ನನಗೆ ಪ್ರತಿ ಕ್ಷಣ ಬರ್ತಾ ಇರುತ್ತೆ. ಸ್ಮೋಕಿಂಗ್ ನಿಂದಾಗಿ ಲಂಗ್ಸ್ ಕೆಡಿಸಿಕೊಂಡು ಬಾರು ಎಷ್ಟೊಂದು ಪೇಶೆಂಟ್ಸ್ ನೋಡ್ತಾ ಇರ್ತೀನಿ. ಛೀ ನಾನೆಷ್ಟು ಕೆಟ್ಟವಳು ನನ್ನ ಕುಮಾರನ ಬಗ್ಗೆ ಹೀಗೆಲ್ಲಾ ವಿಚಾರ ಮಾಡ್ತಿನಲ್ವಾ ಅಂತ ಕೆಟ್ಟದಾಗಿ ಅನಿಸುತ್ತೆ. ಆದರೂ ನೀನೆಷ್ಟು ಸಲೀಸಾಗಿ ಸಾವು ಬದುಕಿನ ಬಗ್ಗೆ ಮಾತಾಡ್ತಾ ಇದ್ದೆ. ಬಹುಶ ಅದಕ್ಕೆ ನಿಮ್ಮಮ್ಮನ ಆಕಸ್ಮಿಕ ಮರಣದ ಪ್ರಭಾವ ಕೂಡ ಇರಬಹುದು ಅಂತ ಗೆಸ್ ಮಾಡಿದ್ದೆ. ನಿನಗೊಮ್ಮೆ ನೆನಪಿದೆಯಾ ಆದೊಮ್ಮೆ ನಿನ್ನ ಎದೆಯ ಮೇಲೆ ನಾನು ತಲೆ ಇಟ್ಟು ಮಲಗಿರಬೇಕಾದರೆ ನಾನು ಹೇಳಿದ್ದೆ, ಏನೋ ನಿನ್ನ ಹಾರ್ಟ್ ಬೀಟ್ ತುಂಬಾ ನಿಧನ ಕಣ್ಣೋ ಬಹುಶ್ ತುಂಬಾ Cಓ2 ತುಂಬಿರಬಹುದು ಅಂತ ನಾನೆಂದಾಗ, ಡೊಂಟ್ ವರೀ ನಾನು ಸಾಯಬೇಕಾದರೆ ನಿನಗೇ ಹರ್ಟ್ ಮತ್ತು ಲಂಗ್ಸ್ ಎರಡು ಗಿಫ್ಟ್ ಕೊಟ್ಟಿರ್ತಿನಿ, ಆವಾಗ ಎಲ್ಲಾ ತೇಗೆದು ಕ್ಲೀನ್ ಮಾಡು ಅಂತ ನಕ್ಕಿದ್ದೇ.

ಇಂದು ಎಮರ್ಜೆನ್ಸೀ ವಾರ್ಡ್‌ನ ಪೇಶೆಂಟ್ ನೋಡಿದ ಮೇಲೆ ಒಮ್ಮೆಲೇ ನನ್ನ ಬದುಕಿನಲ್ಲಿ ನಾನ್ಯಾಕೆ ಡಾಕ್ಟರ್ ಆಗಿದ್ದೀನಿ ಅಂತ ಮೊದಲನೆ ಸಲ ಅನಿಸಿತು. ಓ ದೇವರೇ ಹೀಗ್ಯಾಕೆ ಆಗುತ್ತೆ, ನನ್ನ ಕುಮಾರ್ ಸಾವು ಬದುಕಿನ ನಡುವೆ ಒದ್ದಾ ಡ್ತಾ ಇದ್ದಾನೆ. ಬೇರೆ ಯಾರಾದರೂ ಇದ್ದರೆ ಸಡನ್ ಆಗಿ ನಾನು ಏನೆಲ್ಲಾ ಮಾಡ್ತಿದ್ದೆ,ಇಂದು ನಾನೇಕೆ ನಿಸ್ಸಾಹಯಕಳು.

ದೇವರೇ ನನ್ನ ಕುಮಾರ್ ನನ್ನ ಎದುರಲ್ಲೇ ಹೀಗೇಕೆ ಬರಬೇಕಾಗಿತ್ತು, ನಿನ್ನ ಕಣ್ಣುಗಳಲ್ಲಿ ಇಂದು ಆದೇ ಮಾಂತ್ರಿಕತೆ ಇದೆ, ಆದರೂ ತುಂಬಾ ದಣಿದ ಹಾಗೆ ಕಾಣ್ತಾ ಇದ್ದೇ ಕಣೋ. ನಿನ್ನ ಪ್ರೇರಣಾ ಹೊರಗಡೆ ಅಳುತ್ತಾ ಕುಳ್ಳಿತಿದ್ದಳು, ತುಂಬಾ ಅದೃಷ್ಟವಂತೆ. ತನ್ನ ದುಖವನ್ನಾದರೂ ತೋರ್ಪಡಿಸಿಕೊಳ್ಳಬಹುದು, ಆದರೆ ನಾನು? ಛೀ ಏನೇನೋ ಯೋಚನೆ ಯಾಕೆ ಮಾಡ್ತೀನಿ ನಾನು ಸುಮ್ಮನೇ

"ಐ ಆಮ್ ಸಾರೀ ಕುಮಾರ್" ಬಟ್ ಸ್ಟಿಲ್ ಐ ಲವ್ ಯೂ. ಡಾಕ್ಟರ್ ಪ್ಲೀಸ್ ಸೇವ್ ಮೈ ಹಸ್ಬೆಂಡ್ ಎಂದು ಪ್ರೇರಣಾ
Dr. ಸಂಜೀವ ಗೆ ಗೋಗರೆಯುತ್ತಾ ಇದ್ದಾಗ ನನ್ನಿಂದ ತಾಳಲಾಗಲಿಲ್ಲ,

ಹೇ ಸಂಜೀವ್ ವೈ ಕ್ಯಾಂಟ್ ಯೂ ಮೇಕ್ ಇಟ್ ಫಾಸ್ಟ್ ?

Dr. ಪರಿ ವ್ಹಾಟ್ಸ್ ದಿಸ್? ಅರೆ ಯೂ ಓಕೇ?

ಐ ಅಂ ಸಾರೀ ಡಾಕ್ಟರ್? ಎಂದು ಕಾಣದ ಹಾಗೆ ಕಣ್ಣೀರನ್ನು ಒರೆಸಿದ್ದೆ.

ಈಟ್ಸ್ ಓಕೇ ಪರಿ, ಆಫ್ಟರ್ ಆಲ್ ವೀ ಡಾಕ್ಟರ್ಸ್ ಅರೆ ಆಲ್ಸೊ ಹ್ಯೂಮನ್ ಬೀಯಿಂಗ್ಸ್.

ಎಸ್ ಯೂ ಅರೆ ರೈಟ್ ಡಾಕ್ಟರ್....ಎನ್ನುತ್ತಾ ಸುಮ್ಮನೇ ಹೀಗೆ ಪರೀಕ್ಷಿಸುವ ಹಾಗೆ ಮಾಡುತ್ತಾ ನಿನ್ನ ತಲೆ ಸವರಿದ್ದೆ ಕಣೋ..ಯಾರು ಇರದಿದ್ದರೆ ನಿನಗೆ ಅಪ್ಪಿ ಮುತ್ತಿ ಕಣ್ಣೀರಿನ ಸ್ನಾನ ಮಾಡಿಸುತ್ತಿರಬಹುದೇನೋ ಕುಮಾರ್.

ಮುಂದೇನು ನಡಿಯಿತೊ ಏನು ಗೊತ್ತಿಲ್ಲ, ಆಪರೇಶನ್ ಥಿಟರ್, ICU ವಾರ್ಡ್ ಇವೇನೂ ನನಗೆ ಹೊಸದಲ್ಲ, ಆದರೆ ಮೊದಲನೆ ಸಲ ನಾನೊಬ್ಬ ನಿಸ್ಸಹಾಯಕ ಪ್ರೇಯಸಿಯಾಗಿ ಕೂತಿದ್ದೆ. ಆಪರೇಶನ್ಗೇ ಹೋಗೋ ಮೊದಲು ಡಾಕ್ಟರ್.ಸಂಜೀವ್ ಗೆ ಹೇಳಿದ್ದೆ.
ಡಾಕ್ಟರ್ , ಐ ವಾಂಟ್ ಟು ಸೀ ಪೇಶೆಂಟ್ ಬಿಫೋರ್ ಆಲ್, ವನ್ಸ್ ಆಪರೇಶನ್ ಈಸ್ ಓವರ್.


ಓಕೇ ?

ಬಹುಷ್ ಯಾಕೆ ಎಂದು ಕೆಳುವ ಮನಸು ಡಾಕ್ಟರ್ ಸಂಜೀವ್‌ಗೆ ಆಗಲಿಲ್ಲ ಅನಿಸುತ್ತೆ, ನಾನು ಹೆಳುತಿದ್ದೆ ನನ್ನ ಕುಮಾರ್ ಆಂತ.

ಬಹುಶ ನೀನು ಗುಣವಾದ ಮೇಲೆ ನೀನು ಕಲ್ಪನೆಯೂ ಮಾಡಿರಲಿಕ್ಕಿಲ್ಲ ನಾನು ನಿನಗಾಗಿ ಹೊರಗಡೆ ಕಾಯುತ್ತಿರಬಹುದು ಎಂದು. ಬದುಕೇ ಹೀಗೆ ಪರದೆಯ ಹಿಂದೆ ಅಡಗಿರುವದು ಯಾವಾಗಲು ಬಾರಿ ತಾರ್ಕಿಕ ಸತ್ಯ.

ಐ ಆಮ್ ಸಾರೀ, ಎಂದು ಡಾಕ್ಟರ್. ಸಂಜೀವ್ ಧ್ವನಿ ಕೆಳಿದ ಕೂಡಲೇ ನೋ....ಐ ಹೇಟ್ ಯೂ ಗಾಡ್ ಎಂದು ಜೋರಾಗಿ ಚೀರಿದ್ದೆ.... ಇನ್ನೂ ಏನೆಲ್ಲಾ ಆಗುವ ಮುಂಚೇನೆ ಆಮ್ಮಾ ಬಂದು ಏನೈತೆ ಪರಿ? ಎಂದಾಗ, ವಾಸ್ತವಕ್ಕೆ ಬಂದಿದ್ದೆ, ಅಮ್ಮನು ಕಣ್ಣೀರು ಸುರಿಸುತಿದ್ದಳು, ಅಪ್ಪ ಕೂಡ ಏನು ಅರ್ಥವಾಗದೇ ನಿಂತಿದ್ದ. ನಾನು ಅಳುವದು ಕಂಡು ಅವರಿಬ್ಬರ ಕಣ್ಣಲ್ಲೂ ಕಣ್ಣೀರು ಕಾಣುತಿತ್ಟು. ಅಮ್ಮನನ್ನು ಅಪ್ಪಿಕೊಂಡು ಅವಳ ಸೀರೆಯೆನ್ನಲ್ಲ ಕಣ್ಣೀರಿಂದ ಒದ್ದೆಯಾಗಿಸಿದ್ದೆ. ಹುಚ್ಚು ಹುಡುಗಿ ಕೆಟ್ಟ ಕನಸನ್ನು ಕಂಡು ಅಳುವದೆ? ಎಂದು ಅಮ್ಮ ಸಂತೆಸುತಿದ್ದಳು.

ರಾತ್ರಿ 12 ಘಂಟೆ ಕಣೊ ಬಹುಶ ಮುಂಜಾನೆ 8 ಗಂಟೆಗೆ ನೀನು ಪುಣೆ ಬಿಟ್ಟು, ನನ್ನ ಬಿಟ್ಟು ಎಂದೆಂದಿಗೂ ಹೋಗ್ತಾ ಇದ್ದೀಯಾ. ನಿನಗಾಗಿ ನಿನ್ನೆ ತುಂಬಾ ಶಾಪಿಂಗ್ ಮಾಲ್ಸ್ ಅಡ್ಡಾಡಿದೆ, ಆದರೂ ನಿನಗೇ ಕೊಡಲು ಯಾವ ವಸ್ತುವೂ ಸೂಕ್ತವೆನಿಸಲಿಲ್ಲ, ನಿನ್ನ ವ್ಯಕ್ತಿತ್ವದ ಎದುರು ತುಂಬಾ ಸಣ್ಣದಾಗಿ ಕಂಡವು, ಹಾಗಾಗಿ ಬರಿಗೈಲಿ ವಾಪಾಸಾದೆ.

ಥೂ ಮುಂಜಾನೆ ಬೇಗ ನಿನ್ನ ಜ್ಯೊತೆ ಸ್ವಲ್ಪ ಸಮಯ ಕಳೆಯಬೇಕು ಅಂದು ಕೊಂಡಿದ್ದೆ, ಆದರೆ ಈ ಕೆಟ್ಟ ಕನಸು, ನಿದ್ದೆನು ಬರ್ತಾ ಇಲ್ಲಾ . ಯಾಕೇ ಈ  ಕನಸನ್ನೆ ನಿನ್ನ ಜ್ಯೊತೆ ಉಡುಗರೇಯಾಗಿ ಶೇರ್ ಮಾಡಬಾರದು ಅಂತ ಅನಿಸಿತು. ಆದನ್ನೆ ಪತ್ರವಾಗಿಸಿ ನಿನಗೆ ಗಿಫ್ಟ್ ಆಗಿ ಕೊಡ್ತಾ ಇದ್ದೇನೆ. ಕುಮಾರ್ ನಾನು ನನ್ನ ಜೀವಕ್ಕಿಂತ ಜಾಸ್ತಿಯಾಗಿ ನಿನ್ನ ಪ್ರೀತಿಸಿದರೂ ನಿನ್ನಿಂದ ಏನು ಕೇಳಿಲ್ಲ . ಆದರೂ ನನಗಾಗಿ ಸ್ಮೋಕಿಂಗ್ ಬಿಡು ಕಣೋ. ನೀನು ಹೋಗುವ ಮೊದಲು ನಿನಗೆ ಒಂದು ಡೀಪ್ ಕಿಸ್ ಕೊಟ್ಟಿರ್ತೀನಿ, ಪ್ಲೀಸ್ ನಾನು ಮುತ್ತಿಟ್ಟ ಆ ತುಟಿಗಳ ಮೇಲೆ ಎಂದು ಸಿಗರೇಟ್  ಫಿಲ್ಟರ್ ಮುಟ್ಟಬಾರದು ಕಣೋ. ನನಗಾಗಿ ಪ್ಲೀಸ್.

ಇಂತೂ ನಿನ್ನ ಹುಡುಗಿ

ಪರಿ
ಮಿಸ್ ಯೂ ಮುದುಕ.