ಹೃದಯ ವೀಣೆ ಮಿಟಬೆಕೆ?

Tuesday, December 14, 2010

ಅವರು ಹೀಗೇಕೆ ?

ನನ್ನ ಸಣ್ಣ ಸಣ್ಣ ಆಸೆಗಳು
ನೆರವೆರದಿದ್ದಾಗ ನನ್ನ
ಮೇಲೆ ನನಗೆ ತಾಳಲಾಗದ
ಕೋಪ , ತಾಪ ..

ಒಂದು ಸಿಕ್ಕಾಗ ಮತ್ತೊಂದರ
ಬಯಕೆ , ಎಂದು ಮುಗಿಯದ
ಬೇಕು, ಒಂದರ ಹಿಂದೆ
ಮತ್ತೊಂದು ಬಯಕೆ ...

ನಮ್ಮಮ್ಮ ನಮ್ಮಪ್ಪ ಒಂಥರಾ
ವಿಚಿತ್ರ, ಅವರ ಬಾಳಿನಲ್ಲಿ
ಯಾವಾಗಲು ಬರಿ ನನ್ನ ಬಾಳಿನ
ಬಣ್ಣ ಬಣ್ಣದ ಚಿತ್ರ ..

ಅವರ ಬೇಕು- ಬೇಡಗಳು
ಎಂದು ಅವರನ್ನು ಬಾಧಿಸಲೇ
ಇಲ್ಲ, ಐಶಾರಮದ ಬದುಕು
ಮತ್ತ್ಯಾವದೋ ಕನಸಿಲ್ಲ .

ನಗು ನಗುತ್ತಲೇ ನೋವನ್ನೆಲ್ಲ
ಅನುಭವಿಸಿದರು, ಕಷ್ಟಪಟ್ಟರು
ಆದರು ನನಗೇಕೆ ಅದರ ಅರಿವು
ಎಂದು ಆಗಲೇ ಇಲ್ಲ ..

ನಿಮ್ಮ
ಹರೀಶ ಬೀರಗೆ

Sunday, October 24, 2010

ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ
ಹುಚ್ಚನೆ ಸರಿ, ಬದುಕು
ಪೂರ್ತಿ ಸೆಣೆಸಾಟ.
ಮೋಸ ಅರಿಯದ ಜೀವಿ
ಆದರು ಜಗತ್ತನೇ ಗೆಲ್ಲುವ
ಬಯಕೆ .
ತನ್ನ ನೋವಿಗಿಂತ ಬೇರೆಯವರ
ನೋವಿಗೆ ಮಿಡಿಯುತಿತ್ತು
ಎಂದೆಂದು ಆತನ ಹೃದಯ.
ಬೇರೆಯವರ ದುಃಖಕ್ಕೆ
ಕಂಬನಿ ಸುರಿಸುತಿದ್ದ
ಸಹೃದಯಿ ..
ಓ ದೇವರೇ ನಿನೆಂಥ
ಪಾಪಿ, ಅದೊಂದು
ಬೆಳೆಯುತಿದ್ದ ಮೊಗ್ಗು .
ಹರೆಯದ ಯುವಕ
ಆದರೆ ಎಂದೆಂದು
ಮನಸಿನಿಂದ ಮಗು.
ನಿಷ್ಯಬ್ದವಾಗಿಸಿದೆ ಆ
ತೊದಲು ಮಾತುಗಳು
ಬರಿ ಕ್ಷಣ ಮಾತ್ರದಲಿ .
ಚಿಗುರಿನಲಿ ಚಿವುಟು ಹಾಕಿದೆ
ಮತ್ತೊಂದು ಎಳೆಯ
ಸಸಿಯನ್ನು , ನಿನ್ನ ಇರುವು
ತೋರಿಸಬೇಕೆಂದು ...

ನಿಮ್ಮ
ಹರೀಶ
(ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

ಅಮ್ಮ

ಅಮ್ಮ ನನ್ನ ಬಾಳಿಗೆ ನೀನೆ
ದಾರಿ ದೀಪ, ನಿನ್ನ ನೆನಪುಗಳು
ಇರದ ಬದುಕು ತಾಳಲಾಗದ
ಒಂದು ದೊಡ್ಡ ಶಾಪ .

ದೂರವಾದೆ ನನ್ನ ಬಾಳಿನಿಂದ
ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು
ಮರಳಿ ಬರದ ಲೋಕಕ್ಕೆ
ನಿಶ್ಯಬ್ದವಾಗಿ ಪಯಣಿಸಿದೆ .

ತಲೆಯ ಮೇಲೆ ಕೈಯಾಡಿಸದೇ
ನೀನು, ಎದ್ದಾಗಲೆಲ್ಲ ನಾನು
ನನ್ನ ಸುತ್ತಲೆಲ್ಲಾ ಬರಿ
ಅಂಧಕಾರವೇ ಕವಿಯುತ್ತಿತ್ತು.

ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು
ನಡೆಸಿ, ಮುಗ್ಧ ಮಗುವಾಗಿಸಿದೆ.
ನಾನೇನು ಮಾಡಲಿ ಈಗ ಈ ಕ್ರೂರ
ಜಗತ್ತಿನಲಿ ನಾನು ಎಕಾಂಗಿಯಮ್ಮ.

ನಿಮ್ಮ

ಹರೀಶ್

Tuesday, October 12, 2010

ಕನಸು

ಕದಡಿದ ಕನಸಲಿ
ನೋವಿನ ಮಡುವಿನಲ್ಲಿ
ತೊಳಲಾಡುತ್ತಿದೆ ಮನಸು

ನನ್ನರಿವೆ ನನಗಿರದೇ
ಎಲ್ಲೆಲ್ಲೋ ಹರಿದು ಮನವು
ಕೈ ಜಾರುತ್ತಿದೆ ಕನಸು

ಮೌಲ್ಯ ಕಳೆದುಕೊಂಡ ಬದುಕು,
ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್
ಈ ಮನಸು ಹುಳುಕು .

ನನ್ನ ಮಾತಿಗೆ ನಾನೆ ಬದ್ಧನಲ್ಲ
ಸುಮ್ಮನೆ ಗೊಣಗುತ್ತೇನೆ
ನಿಮ್ಮೆಲ್ಲರ್ ನಡುವೆ ಜಾಣನಾಗಿ

ಸಾಕಿನ್ನು ಮನಸೇ ಸಾಕಾಗಿದೆ
ನನಗೆ, ಇಗಲಾದರು ಮೋಸ
ಮಾಡದಿರು ನನಗೆ ...

ನಿಮ್ಮ
ಹರೀಶ್

Tuesday, September 7, 2010

ನನ್ನ ನೆಚ್ಚಿನ ಹಾಡು

http://www.youtube.com/watch?v=uP0vv6QgH3E

ನಮ್ಮ ಮನೆಯ ಜ್ಯೋತಿ

ನಮ್ಮ ಮನೆಯ ಜ್ಯೋತಿ
ನಮ್ಮಮ್ಮ, ತನ್ನ ಬೆಳಕಿನಲಿ
ನಮ್ಮನ್ನೆಲ್ಲ ಕೊನೆಯವರೆಗೂ
ಬೆಳಗಿದಳು ....

ನಮ್ಮ ಬಾಳಿನ ಪ್ರತಿ
ಬಯಕೆಗಳನ್ನು ಕಾಮಧೆನುವಿಗು
ಮಿಗಿಲಾಗಿ ಅವಳು
ಪುರೈಸಿದಳು .....

ಮಿಗಿಲಾದ ದೊಡ್ಡ ದೊಡ್ಡ
ಪ್ರಶ್ನೆ ನಮ್ಮ ಬದುಕಿನಲಿ
ನಮ್ಮಮ್ಮ , ಅಪ್ಪಾಜಿಯ
ಕಿರುನಗೆಯಲಿ ಕರಗಿದವು .

ಅವರ ಕಣ್ಣಂಚಿನ ಆತಂಕ
ಮನದಲ್ಲಿರುವ ನೋವುಗಳು ,
ನಮ್ಮೆದುರಿಗೆ ಎಂದು ಕಾಣದೆ
ಮುಚ್ಚಿ ಹಾಗೆ ಹೋದವು ..

ನಮ್ಮ ನಗುವಿನಲ್ಲಿ ನಕ್ಕು ,
ನಮ್ಮ ನೋವಿಗೆ ಮರುಗಿ
ನಮಗಾಗಿ ನಿಮ್ಮ ಬದುಕೇ
ಸವೆದು ಹೋದವು ...

Saturday, May 29, 2010

ನಿರ್ಲಜ್ಜ ಮನಸು

ಮನಸೇ ನೀನೇಕೆ ಹೀಗೆ ?
ತುಸು ನಾಚಿಕೆಯು
ಬೇಡವೇ ನಿನಗೆ

ಇನ್ನೆಷ್ಟು ದಿನ ನನ್ನನ್ನು
ಓಡಿಸುವೆ ನಿನ್ನ ಆಸೆಯ
ದಾಸನಾಗಿಸಿ ನನಗೆ

ಎಷ್ಟು ಸಿಕ್ಕರೂ ಮತ್ತೆ
ಬಯಸುವೆ, ಮಿತಿಮೀರಿದ
ದುರಾಸೆಯಲ್ಲಿ ...

ಸಾಕಿನ್ನು ನಾನಿಲ್ಲ ನಿನ್ನ
ದಾಸ, ನನ್ನ ಮತ್ತೆ ಕೇಳಬೇಕು
ಇಂದಿನಿಂದ ನೀನು ಮುಂದೆ .

ನಿಮ್ಮ
ಹರೀಶ್

ನಾ ಬಯಸಿದ ಹೂವು


ನಾ ಬಯಸಿದ ಹೂವು
ನನ್ನದಾಗಲಿಲ್ಲ
ಯಾರದು ಮುಡಿಸೇರಿ
ಹೊರತು ನಿಂತಿತಲ್ಲಾ
ಏನೆಲ್ಲ ಮಾಡಿದೆ ಮನಸೇ
ನಿನಗೆ ತಿಳಿ ಹೇಳಲು ..
ಆದರು ನೀನೇಕೆ
ತಿಳಿಯಲಿಲ್ಲ ...
ಮತ್ತೆ ಮತ್ತೆ ಅದೇ
ಕೇಳುವೆ
ಬದುಕು ಹೀಗೇಕೆ ?
ಸಿಗಬಹುದು ಎಂದು
ಗೊತ್ತಿದ್ದರು
ಕೈ ಚಾಚಲಗದು ಬಾಳಲ್ಲಿ ...
ಓ ಕ್ರೂರ ವಿಧೆಯೇ
ಹೀಗೇಕೆ
ಆಟವಾಡಿದೆ ನನ್ನ ಬಾಳಲ್ಲಿ ..

ನಿಮ್ಮ
ಹರೀಶ್

ನನ್ನ ಮಾತುಗಳು

ಮೌನವಾಗಲಿ ನನ್ನ ಮಾತುಗಳು
ನನ್ನ ಅಂತರಂಗದಲ್ಲೇ ಸ್ಥಬ್ದವಾಗಿ
ಯಾರಿಗೂ ನೋವನು ಕೊಡದೆ, ಚುಚ್ಚಲಿ
ನನ್ನ ಹೃದಯಕೆ ಮುಳ್ಳಾಗಿ .....

ನನ್ನ ಮಾತುಗಳಲ್ಲಿ ನನ್ನತನದ
ಪ್ರೀತಿಯಿಲ್ಲ, ವಿಷ ಕಾರುತ್ತಿವೆ
ಸುತ್ತಲಿನ ಪರಿಸರದಲ್ಲಿ ಬರಿ
ನೋವನ್ನೇ ಪಸರಿಸುತ ...

ಸುಮ್ಮನಾಗುವ ಹರಸಾಹಸ
ಮಾಡುತಿದ್ದೇನೆ ಆದರು ಹರಿದು
ಬರುತ್ತವೆ ಲಂಗು ಲಗಾಮಿಲ್ಲದ
ಕುದುರೆಯ ಹಗೆ ಬಾಯಿ ತಪ್ಪಿ ..

ನನಗಾಗಿ ಬಾಳು ಸವೆಸಿದವರಿಗೆ
ಬಿಸಿಕದಲೆಯಾಗಿ ನನ್ನ ಮಾತುಗಳು
ಎಂದು ಮಾಸದ ಗಾಯ, ಕೊಡುತ್ತಿರಲು
ನೋವ ತಾಳಲಾಗದು ದೇವರೇ ...
ಸ್ಥಬ್ಧವಾಗಿಸು ನನ್ನುಸಿರು ಮುಂದೆಂದು
ನಾನು ಮಾತಾಡದ ಹಾಗೆ....

ನಿಮ್ಮ

ಹರೀಶ್

Tuesday, May 4, 2010

ಒಂದು ಸುಂದರ ಕನಸು

ಒಂದು ಸುಂದರ ಕನಸು
ನೀಡು ತಾಯೆ ಜಗನ್ಮಾತೆ .
ನಮ್ಮಮ್ಮನ ಮಡಿಲಿನಲ್ಲಿ
ಮತ್ತೆ ಮಗುವಾಗಿಸು ನನ್ನ .

ಎನನ್ನು ಅರಿಯದ ಆ ಹಸಿನಗೆ
ನನ್ನ ಉಸಿರಾಗಲಿ ಮತ್ತೊಮ್ಮೆ
ನನ್ನ ಈ ತುಟಿಗಳ ಹುಸಿನಗೆಯ
ಮಾಸಿ ಮತ್ತೊಮ್ಮೆ ಶಿಶುವಾಗಿಸು.

ಯಾರದೋ ನೋವಿಗೆ ಸ್ಪಂದಿಸುವ
ಹೃದಯ ನಿಡು ನನಗೆ, ಬರಿ ಅಮೃತವೇ
ಹೊರಹೊಮ್ಮಲಿ ನನ್ನದೆಯಲಿ, ಬತ್ತಿ
ಹೋಗಲಿ ನನ್ನೆದೆಯಲಿ ವಿಷದ ಬುಗ್ಗೆ ..

ತಿದ್ದಿ ತಿದ್ದಿ ನಮ್ಮಮ್ಮ ಕಲಿಸಿದ
ಆ ಮುದ್ದು ಮುದ್ದು ಮಾತುಗಳು
ರಾರಾಜಿಸಲಿ ನನ್ನ ತುಟಿಯ ಅಂಚಿನಲ್ಲಿ
ಮರೆಮಾಚಿ ಕಪಟದ ಸವಿನುಡಿಯ ..

ಎಂದು ಬತ್ತದ ಹಾಗೆ ನಮ್ಮಮ್ಮನ
ಸವಿನೆನಹುಗಳು, ನನ್ನೆದೆಯಲೆಲ್ಲ
ಬೆಳಗುತ್ತಿರಲಿ , ಎಂದೆಂದು
ನನಗೆ ದಾರಿದೀಪವಾಗಿ ..

ನಿಮ್ಮ

ಹರೀಶ್

ಅಮ್ಮ

ಅಮ್ಮ, ಸೋತಿರುವನು
ನಿನ್ನ ಮುದ್ದು ಕಂದ,
ಕಾಲದ ಚಕ್ರವ್ಯುಹದಲಿ ಸಿಲುಕಿ
ಏಕಾಂಗಿಯಾಗಿ ..

ಬತ್ತಿ ಹೋಗುವ ಕನಸಿನ
ಚಿಲುಮೆಯನು ಕಂಡು,
ನಲುಗಿ ಹೋಗಿದೆ ಜೀವ
ಸೋಲು ಸಾಕಾಗಿ ....

ನನ್ನ ಕಣ್ಣಿಗೆ ಕನಸು ಕಟ್ಟುವ
ಪರಿಯ ತಿಳಿಸಿ,
ನನ್ನ ಬದುಕಿಗೆ ಸುಂದರ
ಮುನ್ನುಡಿ ಬರೆದೆ ...

ನೀನಿರುವಾಗ ಸೋಲಿನಲ್ಲು
ನಲಿವಿತ್ತು ..ನನ್ನ ಬದುಕಿನಲಿ
ಈಗ ಗೆಲುವಿನಲ್ಲು
ನಲಿವಿಲ್ಲ ಅಮ್ಮ ....

ಮರಳಿ ಬಾ ಮತ್ತೊಮ್ಮೆ
ನನ್ನ ಬದುಕಿನಲಿ ..
ತಲೆ ಸವರಿ ಮುತ್ತೊಂದ
ಹಣೆಯ ಮೇಲೆ ಕೊಟ್ಟು

ನಿಮ್ಮ

ಹರ್ಷಾ
Saturday, March 20, 2010

ಗೆಳತಿ,

ಗೆಳತಿ,
ಮತ್ತೆ ನೆನಪಾಗುತಿದೆ ,
ಮಂಜಾದ ಕಣ್ಣು..
ನಿನ್ನ ಸುಪ್ತ ಕನಸುಗಳು
ಬಾಡಿ ಹೋಗುವ ಹೆದರಿಕೆ ...

ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು.

ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ .....
ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ.

ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆನಾಗಿರಲಿಲ್ಲ ಆದರು ನಿನ್ನ ಮತ್ತೆ ಬೇರೆ, ನಾನು ನೋಡಿದ ಎಲ್ಲ ಹುಡುಗಿಯರಿಗಿಂತ ನೀನೇನು ಸುಂದರಿ ಅಲ್ಲ, ಆದರು ಅದೇಕೋ ನಿನ್ನ ಪ್ರತಿ ಅರಿವಾಗುತಿದೆ ಬೇರೆ.

ನಾನು ಮದುವೆಯ ಸಲುವಾಗಿ ಹುಡುಗಿ ನೋಡುತಲಿದ್ದೆ, ಆದರೆ ನೀನು ಇನ್ನು ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅದು ಹೇಗೆ ನಮ್ಮಿಬ್ಬರ ನಡುವೆ ಪ್ರೀತಿ ಅಷ್ಟೊಂದು ಗಾಢವಾಗಿ ಬೆಳೆಯಿತು ಇನ್ನು ಅರ್ಥವಾಗ್ತಾ ಇಲ್ಲ. ನಿನ್ನ ಮತ್ತು ನನ್ನ ಪ್ರೀತಿಯ ಮೊದಲ ಕೊಂಡಿ ಮಾಯಾಜಾಲ ಮತ್ತು ಫೋನ್ , ಕನಸಿನ ಜಗತ್ತ್ತಿನ ನಮ್ಮ ಸ್ನೇಹ ವಾಸ್ತವದ ಜಗತ್ತಿಗೆ ಬಂದದ್ದು ನೀನು ದಾವಣಗೆರೆಯಿಂದ ಬೆಂಗಳೂರಿಗೆ ಕಾಲೇಜ್ ಗೆ ಬಂದಾಗ, ನನ್ನಾಣೆ ಮೋದ ಮೊದಲು ನಾನು ಕೂಡ ಚೆಲ್ಲಾಟನೆ ಮಾಡ್ತಿದ್ದೆ, ಮೊದಲ ಭೇಟಿಯಲ್ಲೇ ನೀನು ನನ್ನ ತುಟಿಗಳನ್ನು ಮುತ್ತಿನ ಮತ್ತಿನಿಂದ ಗಮ್ಮತ್ತೆರಿಸಿದೆ ಕ್ಷಣ ಕಲ ನಾನು ಕೂಡ ಸ್ಥಬ್ಧ, ಹೀಗೇಕೆ ಎಂದು ನಾನು ಕೇಳಿದಾಗ ನಿನ್ನ ಉತ್ತರ ಇಂದು ಕೂಡ ನನ್ನ ಕಿವಿಯಲ್ಲಿ ಸ್ಪಷ್ಟವಾಗಿ ಕೇಳುತ್ತೆ. ರೀ ಅಜ್ಜ ನೀವೇ ಹೇಳಿದ್ದು ತಾನೆ ನಾವಿಬ್ಬರು ಭೇಟಿ ಆದಾಗ ಅಪರಿಚಿತರ ಹಾಗೆ ವರ್ತಿಸಿದರೆ ನನಗೆ ಕೋಪ ಬರುತ್ತೆ ಅಂತ ಅದಕ್ಕೆ ಮುದುಕ ನಿನಗೆ ಮುತ್ತು ಕೊಟ್ಟೆ....ಅದೇ ಮೊದಲನೇ ಸಲ ನಾನು ತಪ್ಪು ಮಾಡುತಲಿದ್ದೇನೋ ಎನ್ನುವ ಭಾವನೆ ಮನಸಿನಲ್ಲಿ ಮೂಡಿತ್ತು. ಆದರೆ ನನ್ನ ಯೋಚನಾ ಲಹರಿಗೆ ನಿನ್ನ ಪ್ರಶ್ನೆ ಒಮ್ಮೆಲೇ ಬ್ರೆಕ್ಕ್ ಹಾಕಿತ್ತು

ಅಶೋಕ್.. ನೀವು ಕಲ್ಪಿಸಿಕೊಂಡಷ್ಟು ನಾನು ಚೆನ್ನಾಗಿಲ್ಲ ಅಲ್ವಾ ?
ಹೌದು ಲಕ್ಕಿ ನಿಜ, ಆದರೆ ನಿನ್ನ ಮಾತು, ನಿನ್ನ ನಡೆ, ನಿನ್ನ ಮುಗ್ಧತೆ ಎಲ್ಲ ನಿನ್ನನು ಎಲ್ಲರಿಗಿಂತ ಸುಂದರಿಯಗಿಸಿದೆ, ನಾನು ಇನ್ನು ವಿಚಾರ ಮಾಡುತ್ತಲೇ ಇದ್ದೆ. ಆದರೆ ಮತ್ತೆ ಅದೇ ಪ್ರಶ್ನೆ ನೀನು ಕೇಳಿದಾಗ ಆದೇಕೋ ಗೊತ್ತಿಲ್ಲ ನಿನ್ನ ಹಣೆಯ ಮೇಲೆ ಮುತ್ತಿಟ್ಟೆ, ಲೋ ಮುದುಕ ನಿನಗೆ ಮುತ್ತು ಎಲ್ಲಿ ಕೊಡಬೇಕು ಎನ್ನುವ ಪರಿಗ್ನ್ಯಾನ ಕೂಡ ಇಲ್ಲ ಎಂದು ಕಾಡಿಸಿದಾಗ ಒಮ್ಮೆಲೇ ಮುತ್ತಿನ ಸುರಿಮಳೆ ನೆ ಸುರಿಸಿದ್ದೆ.ನಮ್ಮಿಬ್ಬರ ಪ್ರೀತಿ ತುಂಬಾ ಭಿನ್ನ ಎಂದು ನೀನು ಯಾವಾಗಲು ಹೇಳುತಿದ್ದೆ, ಹೌದು ಕಣೆ ಅದು ತುಂಬಾನೇ ಸತ್ಯ.ನಿನ್ನ ಪ್ರತಿ ಮಾತು ಮರೆಯುವದು ಎಷ್ಟೊಂದು ಕಷ್ಟ ಎಂದು ನನಗೆ ಇವಾಗ ಅರಿವಾಗುತ್ತಿದೆ, ನನ್ನನ್ನು ಕ್ಷಮಿಸು ಬಹುಶ ನಿನ್ನಲ್ಲಿ ಇರುವಷ್ಟು ವಿಲ್ ಪವರ್ ನನ್ನಲ್ಲಿ ಇರಲಿಲ್ಲ. ಇಂದಿಗೂ ನಿನ್ನ ಮಂಜಾದ ಆ ಕಣ್ಣುಗಳು ನೆನಪಾದಾಗ ನನ್ನ ಬದುಕಿನ ದೊಡ್ಡ ತಪ್ಪಿನ ಅರಿವಾಗುತ್ತದೆ. ಗೊತ್ತಿರದೇ ನನ್ನ ಕಣ್ಣುಗಳು ತೇವವಾಗುತ್ತವೆ.

ಲಕ್ಕಿ ನಿನ್ನಿಂದ ದೂರವಾಗುವದು ನನಗು ಸುಲಭವಾಗಿರಲಿಲ್ಲ, ಪ್ರತಿ ದಿನ ಪ್ರತಿ ಕ್ಷಣ ನಿನ್ನನು ಮೋಸ ಮಾಡುತಿದ್ದೇನೋ ಎಂದು ನನ್ನ ಮನಸ್ಸು ನನಗೆ ತುಂಬಾ ನೋವು ನೀಡುತ್ತಿತ್ತು . ನನ್ನಾಣೆ ನಾನು ನಿನ್ನನ್ನು ನನ್ನವಲಾಗಿಸಿಕೊಳ್ಳಬೇಕು ಎಂದು ತುಂಬಾನೇ ಪ್ರಯತ್ನ ಪಟ್ಟೆ ಆದರು ಆದೇಕೋ ವರ್ಕ್ ಔಟ್ ಆಗಲಿಲ್ಲ. ಯಾರ ತಪ್ಪು ಆದೆಲ್ಲ ಇಂದು ನನಗೆ ಹೇಳುವ ಬಯಕೆ ಕೂಡ ಇಲ್ಲ.

ನಿನ್ನ
ಮನಸ್ಸು

ಕಲುಷಿತವಾಗಿದೆ ಮನಸ್ಸು
ಹುಳುಕು ಕೊಳಕೆಲ್ಲ ತುಂಬಿ
ದುಂಬಿಯ ಬಯಕೆ ಹುಚ್ಚಿ
ಬಿಡು ನಿನಗ್ಯಾಕೆ ?
ಆಗಲಿಲ್ಲ ನೀನು ಪರಿಮಳ
ಸೂಸುವ ಹೂವು ...
ರಾಡಿಯಲ್ಲಿ ತೇಲುತ್ತಿರುವ ನಿನಗೆ
ಸಿಗುವದು ಸೊಳ್ಳೆಗಳ ಪ್ರೀತಿ,
ಎಂದೋ ಮಾರಿಬಿಟ್ಟೆ ನೀನು
ಮನುಷ್ಯತ್ವ, ನ್ಯಾಯ, ನೀತಿ.
ದೇವರ ಅಡಿಗೆ ಬಿಡು, ಯಾರದೋ
ಮುಡಿಗೂ ಸೇರದೆ ಹೋದೆ.
ಸಿಕ್ಕ ಸಿಕ್ಕವರ ಆಸೆಯ
ಬಯಕೆಯಲ್ಲಿ ಬಳಲಿ ಹೋದೆ ..
ಪಾಪ ನಿಸ್ಸಹಾಯಕ ಹೂವು
ಪಾಪಿ ಚಿ ನೀನೇಕೆ ಇನ್ನು ಕೆಲ
ಕಾಲ ತಾಳದೆ ಹೋದೆ....

ಹರ್ಷಾ

Saturday, March 13, 2010

ಕವಿತೆ


ಎಲ್ಲಿ ಹೋದೆ ಕವಿತೆ
ನನ್ನಿಂದ ದೂರವಾಗಿ
ಒಮ್ಮೆ ಮಿಂಚಿ ಮರುಕ್ಷಣದಲ್ಲೇ
ನನ್ನ ಬಾಳಿಂದ ಮರೆಯಾಗಿ

ನನ್ನ ಬದುಕು ಸುಂದರ
ಹೂದೊಟವಾಗಿಸಿದ್ದೆ ನೀನು
ಹೂವಿರದ ತೋಟಕ್ಕೆ
ಬೇಲಿಯ ಹೊರೆಯೇಕೆ ?

ನನ್ನ ಹೊಟ್ಟೆಯ ಹಸಿವಾಗಿದ್ದೆ ,
ನನ್ನಯ ಕಣ್ಣಿನ ನಿದ್ದೆ .
ಅರ್ಥವಿರದ ನನ್ನ ಬದುಕಿಗೆ
ನೀನೆ ಅರ್ಥ ಕೊಟ್ಟಿದ್ದೆ.

ಬಾ ಕವಿತೆ ಬಿಡು ಸಾಕು
ಈ ಕೋಪ, ತಾಪ
ನೆನಪಿರಲಿ ನಿನಗೆ ನೀನಿರದ
ಬದುಕು ನನಗೆ ಒಂದು ಶಾಪ .
ಹರ್ಷಾ