ಹೃದಯ ವೀಣೆ ಮಿಟಬೆಕೆ?

Sunday, October 24, 2010

ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ
ಹುಚ್ಚನೆ ಸರಿ, ಬದುಕು
ಪೂರ್ತಿ ಸೆಣೆಸಾಟ.
ಮೋಸ ಅರಿಯದ ಜೀವಿ
ಆದರು ಜಗತ್ತನೇ ಗೆಲ್ಲುವ
ಬಯಕೆ .
ತನ್ನ ನೋವಿಗಿಂತ ಬೇರೆಯವರ
ನೋವಿಗೆ ಮಿಡಿಯುತಿತ್ತು
ಎಂದೆಂದು ಆತನ ಹೃದಯ.
ಬೇರೆಯವರ ದುಃಖಕ್ಕೆ
ಕಂಬನಿ ಸುರಿಸುತಿದ್ದ
ಸಹೃದಯಿ ..
ಓ ದೇವರೇ ನಿನೆಂಥ
ಪಾಪಿ, ಅದೊಂದು
ಬೆಳೆಯುತಿದ್ದ ಮೊಗ್ಗು .
ಹರೆಯದ ಯುವಕ
ಆದರೆ ಎಂದೆಂದು
ಮನಸಿನಿಂದ ಮಗು.
ನಿಷ್ಯಬ್ದವಾಗಿಸಿದೆ ಆ
ತೊದಲು ಮಾತುಗಳು
ಬರಿ ಕ್ಷಣ ಮಾತ್ರದಲಿ .
ಚಿಗುರಿನಲಿ ಚಿವುಟು ಹಾಕಿದೆ
ಮತ್ತೊಂದು ಎಳೆಯ
ಸಸಿಯನ್ನು , ನಿನ್ನ ಇರುವು
ತೋರಿಸಬೇಕೆಂದು ...

ನಿಮ್ಮ
ಹರೀಶ
(ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

ಅಮ್ಮ

ಅಮ್ಮ ನನ್ನ ಬಾಳಿಗೆ ನೀನೆ
ದಾರಿ ದೀಪ, ನಿನ್ನ ನೆನಪುಗಳು
ಇರದ ಬದುಕು ತಾಳಲಾಗದ
ಒಂದು ದೊಡ್ಡ ಶಾಪ .

ದೂರವಾದೆ ನನ್ನ ಬಾಳಿನಿಂದ
ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು
ಮರಳಿ ಬರದ ಲೋಕಕ್ಕೆ
ನಿಶ್ಯಬ್ದವಾಗಿ ಪಯಣಿಸಿದೆ .

ತಲೆಯ ಮೇಲೆ ಕೈಯಾಡಿಸದೇ
ನೀನು, ಎದ್ದಾಗಲೆಲ್ಲ ನಾನು
ನನ್ನ ಸುತ್ತಲೆಲ್ಲಾ ಬರಿ
ಅಂಧಕಾರವೇ ಕವಿಯುತ್ತಿತ್ತು.

ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು
ನಡೆಸಿ, ಮುಗ್ಧ ಮಗುವಾಗಿಸಿದೆ.
ನಾನೇನು ಮಾಡಲಿ ಈಗ ಈ ಕ್ರೂರ
ಜಗತ್ತಿನಲಿ ನಾನು ಎಕಾಂಗಿಯಮ್ಮ.

ನಿಮ್ಮ

ಹರೀಶ್

Tuesday, October 12, 2010

ಕನಸು

ಕದಡಿದ ಕನಸಲಿ
ನೋವಿನ ಮಡುವಿನಲ್ಲಿ
ತೊಳಲಾಡುತ್ತಿದೆ ಮನಸು

ನನ್ನರಿವೆ ನನಗಿರದೇ
ಎಲ್ಲೆಲ್ಲೋ ಹರಿದು ಮನವು
ಕೈ ಜಾರುತ್ತಿದೆ ಕನಸು

ಮೌಲ್ಯ ಕಳೆದುಕೊಂಡ ಬದುಕು,
ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್
ಈ ಮನಸು ಹುಳುಕು .

ನನ್ನ ಮಾತಿಗೆ ನಾನೆ ಬದ್ಧನಲ್ಲ
ಸುಮ್ಮನೆ ಗೊಣಗುತ್ತೇನೆ
ನಿಮ್ಮೆಲ್ಲರ್ ನಡುವೆ ಜಾಣನಾಗಿ

ಸಾಕಿನ್ನು ಮನಸೇ ಸಾಕಾಗಿದೆ
ನನಗೆ, ಇಗಲಾದರು ಮೋಸ
ಮಾಡದಿರು ನನಗೆ ...

ನಿಮ್ಮ
ಹರೀಶ್