Posts

Showing posts from 2012

ಬರಿಗೈ ಹುಡುಗ

ನಾ ಬರಿಗೈ ಹುಡುಗ ನನ್ನಲ್ಲಿ ಏನಿಲ್ಲ.. ಕೊಡುವ ಮನಸು ನೀಡುವ ಕೈ ಎಂದು ಏನನ್ನೂ ಕೊಟ್ಟಿಲ್ಲ! ಪಡೆದೆ ಏನೆಲ್ಲಾ! ಯಾರ್ಯಾರಿಂದಲೋ!! ಲೆಕ್ಕವಿಡದೆ ಮರೆತು ಬಿಟ್ಟೆ! ದಡ್ದನು ನಾನಲ್ಲ.! ನೆನಪಿರುವದೇ ಆದರೂ ಮರೆಯುವ ನಾಟಕ! ನನಗಿಂತ ಚೆನ್ನಾಗಿ ಯಾರು ಕಲಿಯಲೇ ಇಲ್ಲ!! ಕಪಟವನ್ನೇ  ಮುಗ್ಧತೆಯಾಗಿ ಬಿಂಬಿಸುವ ನನ್ನ ಪರಿ!! ಯಾರಿಗೂ ಎಂದೂ ತಿಳಿಯಲಿಲ್ಲ.. ಏಲ್ಲರಲ್ಲೂ ಒಂದಾಗಿ ನಾ ಕಂಡರೂ ನನ್ನಂಥ ಏಕಾಂಗಿ ಯಾರಿಲ್ಲಾ.!! ನನ್ನ ಮನಸಿಗೇ ನನ್ನಂತೆ ಮೋಸಗೊಳಿಸುವ ಪರಿ ನನ್ನ ಹಾಗೇ ಬೇರೆ ಯಾರಿಗೂ ಬರುವುದಿಲ್ಲ!!. ನಾ ಬರಿಗೈ ಹುಡುಗ. ನನ್ನ ಹಾಗೇ ನೀವು ಯಾರಿಲ್ಲ!! ಕಣ್ಣನ್ನ್ನು ಮುಚ್ಚಿ ಅಂತರಂಗದಲ್ಲಿ ಇಣುಕಿ, ನೋಡಿ ನಿಮ್ಮೊಳಗೆ ಇರುವುದು! ನಾನು!! ಅದು ನೀವಲ್ಲ!! ನಿಮ್ಮ ಹರ್ಷಾ

ರವಿಯೇ

ಕವಿದಿರುವದು ಕತ್ತಲೆ ಮನದಾಳದಲ್ಲಿ ,  ಬಾ ರವಿಯೇ, ದಯೆತೋರು ನಿನ್ನ ಕಿರಣಗಳ ಚೆಲ್ಲಿ.. ನೋವು ನಲಿವುಗಳ ದಾಟಿ, ಸುಖ ದುಃಖಗಳ ಮೆಟ್ಟಿ ಮುಂದೆ ಸಾಗುವ ಶಕ್ತಿ ದಯಪಾಲಿಸು. ಸ್ವಾರ್ಥ ಸಾಗರದಲ್ಲಿ ಈಜಿ ಗೆದ್ದರೂ.. ಮನದ ಶಾಂತಿಯನ್ನೆಲ್ಲೋ ಕಳೆದುಕೊಂಡೆ! ನಾಗರೀಕತೆಯ ಮುಖವಾಡದಲಿ ಅನಾಗರಿಕ ಮನಸನ್ನು ಮುಚ್ಚಿಟ್ಟು!, ಒಣ ಹಿರಿಮೆಯಲಿ ಕೃತಕ ನಗೆ  ಬೀರಿ ಮುಂದೆ ನಡೆದೆ! ಸಾಕು, ಹಗಲುವೇಷ, ಮನ ಕುಗ್ಗಿ ಹೋಗಿದೆ. ದಯೆ ತೋರು ಭುವಿಯ ಜಂಜಾಟದಲ್ಲಿ.. ಕಳೆದು ಹೋಗುವ ಮುನ್ನ ಕಿತ್ತು ಒಗೆಯಬೇಕು ಮೋಹಪಾಶವನ್ನ.. ನಿನ್ನ ಹರ್ಷ

ಮನಸೇ

 ಮನಸೇ ಹಾಗೇ, ತಿಳಿದು ತಿಳಿಯದ ಗೆಳತಿಯ ಹಾಗೆ. ಒಮ್ಮೆ ಮುನಿಸು ಒಮ್ಮೆ ಪ್ರೀತಿ ಮತ್ತೊಮ್ಮೆ ಮೌನದಲಿ ಶರಣಾಗುತ್ತೆ, ಏಕಾಂಗಿಯಾಗಿ ಬಿಟ್ಟು ನನ್ನ ಮುದ್ದು ಮಾಡಿ ಅಪ್ಪಿದ್ದರು ಒಪ್ಪದೇ ಬಿಟ್ಟು ಹೋಗುವುದು ದೂರವಾಗಿ. ನನ್ನಿಂದ ಕಾರಣವೂ ತಿಳಿಸದೇ ದಿನವೊಂದು ಹೊಸ ಒಗಟಾಗಿ. ನಿನ್ನ ಅರ್ಥ ಮಾಡಿಕೊಳ್ಳಲು ಏನೆಲ್ಲಾ ಮಾಡಿದೇ ಮನವೇ  ? ಜೊತೆಯಾಗಿ   ಹೆಣೆದಿಲ್ಲವೇ ಸಾವಿರಾರು ಕನಸು  ನೀನು ಬಯಸಿದಾಗ ಅತ್ತೆ . ನಗಿಸಿದಾಗ ನಕ್ಕೇ ..ಬದುಕೆಲ್ಲಾ  ಕುಣಿದೆ ನಾನು ನೀನು ಕುಣಿಸಿದ ತಾಳಕ್ಕೆ ಗೊಂಬೆಯ ಹಾಗೆ! ಒಮ್ಮೆ  ಅಮ್ಮನ ಹಾಗೇ ಕರುಣಾಮಯಿ ಕೆಲವೊಮ್ಮೆ  ಪ್ರೇಯಸಿಯ  ಮುನಿಸು  ಮತ್ತೆ  ಕೆಲವೊಮ್ಮೆ ಅರಿಯಲಾಗದ ಮುಗ್ಧ ಮಗುವಿನ ಹಠ .. ನಾವಿಬ್ಬರೂ ಕಂಡ ಕನಸುಗಳಿಗೆ ಬಣ್ಣ ಹಚ್ಚಿ ಸುಂದರ ಚಿತ್ರವಾಗಿಸಿ ತೋರಿಸುವೆ ರಮಿಸಿ ತರುವೆ ನನ್ನ ಮನಸನ್ನು   ಗಾಢವಾಗಿ ಬಿಗಿದಪ್ಪಿ ಧನ್ಯತೆಯಲ್ಲಿ... ನಿಮ್ಮ ಹರ್ಷಾ

ಬೆಳಕು ಕಾಣಲೇ ಇಲ್ಲಾ

ಜಗವೆಲ್ಲವೂ ರವಿ ನಿನ್ನ ಸುಂದರ ಕಿರಣಗಳಿಗೆ  ಮೈಯೊಡ್ಡಿ ಹೊಸ ಜೀವಂತಿಕೆಯ ಸುಖ ಅನುಭವಿಸುತಿದ್ದರೂ  ಹರುಷದಿಂದ.. ಆದರೂ ನನಗ್ಯಾಕೆ ಪ್ರೀತಿ? ಅರಿಯೆ ಅದೇನೋ ಮೋಹ ಹರಿಹರಿದು  ಬರುವುದು ಪ್ರೀತಿ ಕತ್ತಲೆಯ ಮೇಲೆ ಹಾಗೇ ತೆಗೆಯದೇ ಮನದ ಕಿಟಕಿ ಬಾಗಿಲ ಹಸನು ಮಾಡದ ಮನದ ಹೊಲದಲಿ  ಕೃಷಿಕನಾಗಲು ಹೊರಟೆ, ಅರಿಯದೇ ಕೊನೆಗೂ ಕಾಣಲಿಲ್ಲ ಮನವು ನೇಗಿಲು ಬರಿದೇ ಸುತ್ತುತಿದ್ದೆ! ಅರಿಯದೇ ಸುತ್ತ ಅಜ್ಞಾನದ  ಕಾವಲು! ನಿಮ್ಮ ಹರ್ಷಾ 

ನೆನಪಾದಾಗ ....

ಬದುಕಿನಲ್ಲಿ ಕೆಲವೊಮ್ಮೆ  ಏನೋ ದೂರ ಹೋದಾಗ ನೂರಾರು ನೆನಪುಗಳು ಎಲ್ಲಾ ಚೆಲ್ಲಪಿಲ್ಲಿಯಾದಾಗ ಕನುಸುಗಳ ಬಣ್ಣಗಳು ಕೈ ತಪ್ಪಿ ಚೆಲ್ಲಿದಾಗ, ತಪ್ಪು ಯಾರದಾಗಿದ್ದರು ಸಿಡುಕು ನನ್ನದಾಗಿದ್ದಾಗ, ನೀ ಸ್ಮೃತಿ ಪಟಲದಲ್ಲಿ ಮೂಡುವಿ ಗೆಳೆಯ ನಾನೊಬ್ಬನೆ ಇದ್ದಾಗ.. ನಿಮ್ಮ ಹರೀಶ್ 

ಮೌನವು

ಮೌನದ ಗೀತೆಗೆ ಮೌನವೇ ರಾಗವು ಮೌನವು ಮನದಲಿ ನೆಲಸಿರೆ ಮೌನವು ಪ್ರೀತಿಯ ರಾಗಕೆ ತಾಳವು ಮೌನವು ದುಃಖದ ಮನಸಿಗೇ ಔಷದ ಮೌನವು ಹುಟ್ಟುವ ಮಾತಿಗೇ ಮೂಲವು ಮೌನವು ಅರುಹಿದೇ ಕನಸನು ಒಲುಮೆಯ ಮೌನವು ಹೇಳಿದೆ ಕಥೆಯನ್ನು ನಿಶ್ಯಬ್ದ ಮೌನವು ಮೌನವೇ ಮೌನಕೆ ಸಾಟಿಯೇ ಮೌನವು ಬದುಕಿನ ಅರ್ಥವೂ ಅರಿಯದ ಮೌನವು ಅರಿಯಲು ಹೋದರೆ ಸಿಗುವದು ಮೌನವು ನಿಮ್ಮ ಹರೀಶ 

ನನ್ನವಳು

ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ
ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇ ಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ

ಭ್ರಮೆ

ಮಾತು ಮರೆಯಾದಾಗ ಮೌನದಲ್ಲೇನೋ  ಅರಸುತ್ತಾ ಮರುಭೂಮಿಯ ನಡುವಲ್ಲಿ ಕಾನನವ ನೆನೆಯುತ್ತಾ ಕುಂಟು  ಪ್ರೇಯಸಿಯು ಕುಣಿಯುವ ನಿರೀಕ್ಷೆಯಲಿ ಕುರುಡನೋರ್ವ ಸೂರ್ಯನ ಉದಯಕ್ಕಾಗಿ ಕಾದಂತೆ ಬರಿ ಭ್ರಮೆಯ ಬದುಕನ್ನು ಸುತ್ತ ಹೆಣೆಯುತಿದ್ದರು ಸಹ ಸುಳ್ಳನ್ನೇ ನಿಜವೆಂದು ತಿಳಿಯುವದು ಬದುಕಿನ ಸಂತಸದ ಸೂತ್ರ ಬೀರುಗಾಳಿ ನಡುವೇ ಸಿಲುಕಿದರು ಜೀವದ ಹಂಗು ತೋರೆದರು ಬದುಕುವೇ ಎನ್ನುವ ನಂಬಿಕೆಯೇ ಮನುಷ್ಯನ ಜೀವಂತಿಕೆಗೆ ಆಧಾರ ನಿಮ್ಮ ಹರೀಶ್

ಸ್ವಾಗತ

ಅರಿಯೇ ಇದಾವ ಪರಿಯ ಕಾತರ ಪ್ರತಿಗಳಿಗೆಯು ಮನಸು ಅರಿಯದೇ ಮಾಡುವದು ಬರಿ ನಿನ್ನ ವಿಚಾರ ಅಗೋಚರ ನಿರಾಕಾರ ನನ್ನ ಬದುಕಿಗೊಂದು ಅರ್ಥ ನೀಡುವ ಮೂರ್ತಿ ನೀನೆ ಸಾಕಾರ ನನ್ನ ಕಣ್ಣಿನ ಕನಸು, ನನ್ನ ಹೃದಯಕೆ ಶಾಂತಿ, ನನ್ನ ಬದುಕಿಗೇ ನೀನೆ ಆಧಾರ ಸುಂದರ ಸುಮುಧರ ನಿನ್ನ ಇರುವಿಕೆಯೇ ನಮ್ಮ ಬದುಕಿಗೆ ದೈವದ ಸಾಕ್ಷಾತ್ಕಾರ ಅದ್ಭುತ ಜಗತ್ತು ಸೃಷ್ಟ್ಹಿಸಿದಾ ಪರಮಾತ್ಮನೇ ನಿನಗೆ ಕೋಟಿ ಕೋಟಿ  ನಮಸ್ಕಾರ ನಿಮ್ಮ ಹರ್ಷಾ

ಅವನು ಪ್ರಿತಿಸಲೇ ಇಲ್ಲ

ಅವನು ಪ್ರಿತಿಸಲೇ ಇಲ್ಲ   ನನ್ನ ಅಂದವ ಹೊಗಳಿ ,   ನನ್ನ ಕಣ್ ನ್ನುಗಳಲ್ಲಿ ಕಣ್ಣನಿಟ್ಟು ನೂರಾರು ಆಣೇ ಪ್ರಮಾಣ ಮಾಡಿದ ಆದರು ಆತ ಪ್ರಿತಿಸಲೇ ಇಲ್ಲ ಅವನು ಹೇಳಿದ ಮಾತುಗಳು ತೋರಿಸಿದ ಕನಸುಗಳು ಹಂಚಿಕೊಂಡ ಭಾವನೆಗಳು ಒಂದು ಸುಳ್ಳು ಎನಿಸಲೇ ಇಲ್ಲ ನನ್ನ ನೋವುಗಳನ್ನೆಲ್ಲಾ ಅನುಭವಿಸಿ ನನಗಾಗಿ ಮಿಡಿಯುತಿದ್ದ, ಅವನ್ಯಾಕೋ ಪರಕೀಯ ಅನಿಸಲೇ ಇಲ್ಲ ಇಷ್ಟು ಹತ್ತಿರವಾಗಿ ತುಂಬ ದೂರವಾದ, ನನ್ನ ಆಕ್ರಂದನವನ್ನು ಕೇಳಿಯೂ ಕೆಳದಾದ . ಅವನ್ಯಾಕೆ ನನ್ನ ಪ್ರೀತಿ ಮರೆತು ಹೋದ ನಿಮ್ಮ ಹರ್ಷಾ  

ಅಮ್ಮ

ತನ್ನ ನೋವನ್ನು ಮರೆತು ಕಂದನ ನೋವಿಗೆ ಮರುಗುವಳು ಅಮ್ಮ . ತನ್ನ ಬದುಕನು ಮರೆತು ಕಂದನ ಸುಂದರ್ ಬಾಳನು ಹೆಣೆಯುವಳು ಅಮ್ಮ ತನ್ನ ಬೇಕು ಬೇಡಗಳ ಪರಿವೆ ಇರದೇ ಕಂದನ ಆಸೆಗಳನ್ನು ಪೂರೈಸುವ ಕಾಮಧೇನು ಅಮ್ಮ . ಕಂದನ ಮೊಗದಲ್ಲಿನ ನಲಿವು ಕಂಡು , ಬದುಕು ಸಾರ್ಥಕ ಎಂದು ಮೆರೆಯುವವಳು ಅಮ್ಮ ಸಹನೆಗೆ ಮತ್ತೊಂದು ಹೆಸರೇ ಅಮ್ಮ , ಮಮತೆಯ ಸಾಗರ ಅಮ್ಮನ ಮಡಿಲು

ಅವಳು

ಅವಳು ನನ್ನವಳು ಆಗಲೇ ಇಲ್ಲ ನನ್ನ ಮಾತಿಗೆ ನಕ್ಕು, ನನ್ನ ಮೌನಕ್ಕೆ ಹೊಸ ಅರ್ಥ ಹುಡುಕಲು ಹೆಣಗಾಡಿದ ನನ್ನ ಗೆಳತಿ ನನ್ನವಳು ಆಗಲೇ ಇಲ್ಲ ನಾವಿಬ್ಬರು ಕುಳಿತು ಕಲ್ಪಿಸಿದ ಹವಾಗೊಪುರವನ್ನು ನಾನು ಇದು ನಮ್ಮ ಕನಸು ಎಂದು ಹೇಳಿದಾಗ ಮುನಿಸಿನಿಂದ ಇದು ನಾಳೆಯ ವಾಸ್ತವ ಎಂದು ಹೇಳಿ ಅವಳು ಮಾತಾಡಿರಲಿಲ್ಲ .. ನನ್ನ ಕಂಗಳಿಂದ ವಿಷಯ ತಿಳಿಯುತಿದ್ದ ನನ್ನ ಪ್ರೇಯಸಿ, ನನ್ನೆದೆಯ ಉಸಿರ ರಾಗಕ್ಕೆ ಹೊಸ ಪ್ರೇಮ ಗೀತೆಯನ್ನೊಂದು ರಚಿಸುತಿದ್ದಳು ನನಗಾಗಿ ಪ್ರೀತಿಯಲಿ ಪ್ರತಿ ಮಾತಿಗೂ ನನ್ನ ಮನವರಿತೆ ನಡೆಯುತಿದ್ದಳು ಪುಟ್ಟ ಹುಡುಗಿಯ ಹಾಗೇ ಆದರು ನನ್ನ ಬಿಟ್ಟು ಹೊರಟುಹೋದಳು ಒಮ್ಮೆಯೂ ಹಿಂತಿರುಗಿ ನೋಡದೆ ಹಾಗೇ ನಿಮ್ಮ Harish
ನಿನ್ನ ಮರೆತಾಗಲೋಮ್ಮೆ ನನ್ನನ್ನೇ ನಾನು ಮರೆತಿದ್ದೆ.. ಆದರು ಅರಿಯೆ ನಾನೇಕೆ ನಿನ್ನ ಮರೆತೇ . ನನ್ನ ಬದುಕಿಗೆ ಅರ್ಥ ಕಲ್ಪಿಸಿದವಳು ನೀನೆ, ಆದರು ನಾನೇಕೆ ನಿನ್ನ ಅರ್ಥ ಮಾಡಿಕೊಳ್ಳದೆ ಹೋದೆ ... ಕನಸು ಕಾಣುವದ ಕಲಿಸಿ ನನ್ನ ಈ ಕಂಗಳಿಗೆ ನೀನೇಕೆ ಒಂದು ಕನಸಾಗಿ ಹೋದೆ ..