ಹೃದಯ ವೀಣೆ ಮಿಟಬೆಕೆ?

Saturday, March 31, 2012

ಅವಳು

ಅವಳು ನನ್ನವಳು ಆಗಲೇ ಇಲ್ಲ
ನನ್ನ ಮಾತಿಗೆ ನಕ್ಕು, ನನ್ನ ಮೌನಕ್ಕೆ
ಹೊಸ ಅರ್ಥ ಹುಡುಕಲು ಹೆಣಗಾಡಿದ
ನನ್ನ ಗೆಳತಿ ನನ್ನವಳು ಆಗಲೇ ಇಲ್ಲ

ನಾವಿಬ್ಬರು ಕುಳಿತು ಕಲ್ಪಿಸಿದ ಹವಾಗೊಪುರವನ್ನು
ನಾನು ಇದು ನಮ್ಮ ಕನಸು ಎಂದು ಹೇಳಿದಾಗ
ಮುನಿಸಿನಿಂದ ಇದು ನಾಳೆಯ ವಾಸ್ತವ ಎಂದು
ಹೇಳಿ ಅವಳು ಮಾತಾಡಿರಲಿಲ್ಲ ..

ನನ್ನ ಕಂಗಳಿಂದ ವಿಷಯ ತಿಳಿಯುತಿದ್ದ
ನನ್ನ ಪ್ರೇಯಸಿ, ನನ್ನೆದೆಯ ಉಸಿರ ರಾಗಕ್ಕೆ
ಹೊಸ ಪ್ರೇಮ ಗೀತೆಯನ್ನೊಂದು ರಚಿಸುತಿದ್ದಳು
ನನಗಾಗಿ ಪ್ರೀತಿಯಲಿ

ಪ್ರತಿ ಮಾತಿಗೂ ನನ್ನ ಮನವರಿತೆ
ನಡೆಯುತಿದ್ದಳು ಪುಟ್ಟ ಹುಡುಗಿಯ ಹಾಗೇ
ಆದರು ನನ್ನ ಬಿಟ್ಟು ಹೊರಟುಹೋದಳು
ಒಮ್ಮೆಯೂ ಹಿಂತಿರುಗಿ ನೋಡದೆ ಹಾಗೇ


ನಿಮ್ಮ
Harish