ಹೃದಯ ವೀಣೆ ಮಿಟಬೆಕೆ?

Saturday, June 9, 2012

ಅವನು ಪ್ರಿತಿಸಲೇ ಇಲ್ಲ

ಅವನು ಪ್ರಿತಿಸಲೇ ಇಲ್ಲ  
ನನ್ನ ಅಂದವ ಹೊಗಳಿ,  
ನನ್ನ ಕಣ್ನ್ನುಗಳಲ್ಲಿ ಕಣ್ಣನಿಟ್ಟು
ನೂರಾರು ಆಣೇ ಪ್ರಮಾಣ ಮಾಡಿದ
ಆದರು ಆತ ಪ್ರಿತಿಸಲೇ ಇಲ್ಲ
ಅವನು ಹೇಳಿದ ಮಾತುಗಳು
ತೋರಿಸಿದ ಕನಸುಗಳು
ಹಂಚಿಕೊಂಡ ಭಾವನೆಗಳು
ಒಂದು ಸುಳ್ಳು ಎನಿಸಲೇ ಇಲ್ಲ

ನನ್ನ ನೋವುಗಳನ್ನೆಲ್ಲಾ ಅನುಭವಿಸಿ
ನನಗಾಗಿ ಮಿಡಿಯುತಿದ್ದ, ಅವನ್ಯಾಕೋ
ಪರಕೀಯ ಅನಿಸಲೇ ಇಲ್ಲ
ಇಷ್ಟು ಹತ್ತಿರವಾಗಿ ತುಂಬ
ದೂರವಾದ, ನನ್ನ ಆಕ್ರಂದನವನ್ನು
ಕೇಳಿಯೂ ಕೆಳದಾದ .
ಅವನ್ಯಾಕೆ ನನ್ನ ಪ್ರೀತಿ
ಮರೆತು ಹೋದ

ನಿಮ್ಮ
ಹರ್ಷಾ  

ಅಮ್ಮ

ತನ್ನ ನೋವನ್ನು ಮರೆತು
ಕಂದನ ನೋವಿಗೆ
ಮರುಗುವಳು
ಅಮ್ಮ .

ತನ್ನ ಬದುಕನು ಮರೆತು
ಕಂದನ ಸುಂದರ್ ಬಾಳನು
ಹೆಣೆಯುವಳು
ಅಮ್ಮ

ತನ್ನ ಬೇಕು ಬೇಡಗಳ
ಪರಿವೆ ಇರದೇ ಕಂದನ
ಆಸೆಗಳನ್ನು ಪೂರೈಸುವ
ಕಾಮಧೇನು ಅಮ್ಮ.

ಕಂದನ ಮೊಗದಲ್ಲಿನ
ನಲಿವು ಕಂಡು, ಬದುಕು
ಸಾರ್ಥಕ ಎಂದು
ಮೆರೆಯುವವಳು ಅಮ್ಮ

ಸಹನೆಗೆ ಮತ್ತೊಂದು
ಹೆಸರೇ ಅಮ್ಮ , ಮಮತೆಯ
ಸಾಗರ ಅಮ್ಮನ
ಮಡಿಲು