ಹೃದಯ ವೀಣೆ ಮಿಟಬೆಕೆ?

Saturday, September 29, 2012

ನೆನಪಾದಾಗ ....

ಬದುಕಿನಲ್ಲಿ ಕೆಲವೊಮ್ಮೆ  ಏನೋ
ದೂರ ಹೋದಾಗ
ನೂರಾರು ನೆನಪುಗಳು
ಎಲ್ಲಾ ಚೆಲ್ಲಪಿಲ್ಲಿಯಾದಾಗ
ಕನುಸುಗಳ ಬಣ್ಣಗಳು
ಕೈ ತಪ್ಪಿ ಚೆಲ್ಲಿದಾಗ,
ತಪ್ಪು ಯಾರದಾಗಿದ್ದರು
ಸಿಡುಕು ನನ್ನದಾಗಿದ್ದಾಗ,
ನೀ ಸ್ಮೃತಿ ಪಟಲದಲ್ಲಿ
ಮೂಡುವಿ ಗೆಳೆಯ
ನಾನೊಬ್ಬನೆ ಇದ್ದಾಗ..

ನಿಮ್ಮ
ಹರೀಶ್ 

ಮೌನವು

ಮೌನದ ಗೀತೆಗೆ
ಮೌನವೇ ರಾಗವು
ಮೌನವು ಮನದಲಿ
ನೆಲಸಿರೆ ಮೌನವು
ಪ್ರೀತಿಯ ರಾಗಕೆ
ತಾಳವು ಮೌನವು
ದುಃಖದ ಮನಸಿಗೇ
ಔಷದ ಮೌನವು
ಹುಟ್ಟುವ ಮಾತಿಗೇ
ಮೂಲವು ಮೌನವು
ಅರುಹಿದೇ ಕನಸನು
ಒಲುಮೆಯ ಮೌನವು
ಹೇಳಿದೆ ಕಥೆಯನ್ನು
ನಿಶ್ಯಬ್ದ ಮೌನವು
ಮೌನವೇ ಮೌನಕೆ
ಸಾಟಿಯೇ ಮೌನವು
ಬದುಕಿನ ಅರ್ಥವೂ
ಅರಿಯದ ಮೌನವು
ಅರಿಯಲು ಹೋದರೆ
ಸಿಗುವದು ಮೌನವು

ನಿಮ್ಮ
ಹರೀಶ