ಹೃದಯ ವೀಣೆ ಮಿಟಬೆಕೆ?

Friday, October 12, 2012

ಮನಸೇ

 ಮನಸೇ ಹಾಗೇ, ತಿಳಿದು ತಿಳಿಯದ
ಗೆಳತಿಯ ಹಾಗೆ. ಒಮ್ಮೆ ಮುನಿಸು
ಒಮ್ಮೆ ಪ್ರೀತಿ ಮತ್ತೊಮ್ಮೆ ಮೌನದಲಿ
ಶರಣಾಗುತ್ತೆ, ಏಕಾಂಗಿಯಾಗಿ ಬಿಟ್ಟು ನನ್ನ

ಮುದ್ದು ಮಾಡಿ ಅಪ್ಪಿದ್ದರು ಒಪ್ಪದೇ
ಬಿಟ್ಟು ಹೋಗುವುದು ದೂರವಾಗಿ.
ನನ್ನಿಂದ ಕಾರಣವೂ ತಿಳಿಸದೇ
ದಿನವೊಂದು ಹೊಸ ಒಗಟಾಗಿ.


ನಿನ್ನ ಅರ್ಥ ಮಾಡಿಕೊಳ್ಳಲು
ಏನೆಲ್ಲಾ ಮಾಡಿದೇ ಮನವೇ  ?
ಜೊತೆಯಾಗಿ   ಹೆಣೆದಿಲ್ಲವೇ
ಸಾವಿರಾರು ಕನಸು

 ನೀನು ಬಯಸಿದಾಗ ಅತ್ತೆ .
ನಗಿಸಿದಾಗ ನಕ್ಕೇ ..ಬದುಕೆಲ್ಲಾ
 ಕುಣಿದೆ ನಾನು ನೀನು ಕುಣಿಸಿದ
ತಾಳಕ್ಕೆ ಗೊಂಬೆಯ ಹಾಗೆ!

ಒಮ್ಮೆ  ಅಮ್ಮನ ಹಾಗೇ ಕರುಣಾಮಯಿ
ಕೆಲವೊಮ್ಮೆ  ಪ್ರೇಯಸಿಯ  ಮುನಿಸು 
ಮತ್ತೆ  ಕೆಲವೊಮ್ಮೆ ಅರಿಯಲಾಗದ
ಮುಗ್ಧ ಮಗುವಿನ ಹಠ ..

ನಾವಿಬ್ಬರೂ ಕಂಡ ಕನಸುಗಳಿಗೆ
ಬಣ್ಣ ಹಚ್ಚಿ ಸುಂದರ ಚಿತ್ರವಾಗಿಸಿ ತೋರಿಸುವೆ
ರಮಿಸಿ ತರುವೆ ನನ್ನ ಮನಸನ್ನು  
ಗಾಢವಾಗಿ ಬಿಗಿದಪ್ಪಿ ಧನ್ಯತೆಯಲ್ಲಿ...

ನಿಮ್ಮ
ಹರ್ಷಾ

Tuesday, October 9, 2012

ಬೆಳಕು ಕಾಣಲೇ ಇಲ್ಲಾ


ಜಗವೆಲ್ಲವೂ ರವಿ ನಿನ್ನ
ಸುಂದರ ಕಿರಣಗಳಿಗೆ
 ಮೈಯೊಡ್ಡಿ
ಹೊಸ ಜೀವಂತಿಕೆಯ ಸುಖ
ಅನುಭವಿಸುತಿದ್ದರೂ
 ಹರುಷದಿಂದ..
ಆದರೂ ನನಗ್ಯಾಕೆ ಪ್ರೀತಿ?
ಅರಿಯೆ ಅದೇನೋ ಮೋಹ
ಹರಿಹರಿದು  ಬರುವುದು ಪ್ರೀತಿ
ಕತ್ತಲೆಯ ಮೇಲೆ ಹಾಗೇ
ತೆಗೆಯದೇ ಮನದ ಕಿಟಕಿ ಬಾಗಿಲ
ಹಸನು ಮಾಡದ ಮನದ
ಹೊಲದಲಿ  ಕೃಷಿಕನಾಗಲು
ಹೊರಟೆ,
ಅರಿಯದೇ ಕೊನೆಗೂ
ಕಾಣಲಿಲ್ಲ ಮನವು ನೇಗಿಲು
ಬರಿದೇ ಸುತ್ತುತಿದ್ದೆ!
ಅರಿಯದೇ
ಸುತ್ತ ಅಜ್ಞಾನದ  ಕಾವಲು!

ನಿಮ್ಮ
ಹರ್ಷಾ