ಹೃದಯ ವೀಣೆ ಮಿಟಬೆಕೆ?

Tuesday, November 13, 2012

ರವಿಯೇ


ಕವಿದಿರುವದು ಕತ್ತಲೆ
ಮನದಾಳದಲ್ಲಿ ,
 ಬಾ
ರವಿಯೇ,
ದಯೆತೋರು
ನಿನ್ನ ಕಿರಣಗಳ ಚೆಲ್ಲಿ..

ನೋವು ನಲಿವುಗಳ
ದಾಟಿ,
ಸುಖ ದುಃಖಗಳ
ಮೆಟ್ಟಿ
ಮುಂದೆ ಸಾಗುವ ಶಕ್ತಿ
ದಯಪಾಲಿಸು.

ಸ್ವಾರ್ಥ ಸಾಗರದಲ್ಲಿ
ಈಜಿ
ಗೆದ್ದರೂ..
ಮನದ ಶಾಂತಿಯನ್ನೆಲ್ಲೋ
ಕಳೆದುಕೊಂಡೆ!

ನಾಗರೀಕತೆಯ
ಮುಖವಾಡದಲಿ
ಅನಾಗರಿಕ ಮನಸನ್ನು
ಮುಚ್ಚಿಟ್ಟು!,
ಒಣ ಹಿರಿಮೆಯಲಿ
ಕೃತಕ ನಗೆ  ಬೀರಿ
ಮುಂದೆ ನಡೆದೆ!

ಸಾಕು,
ಹಗಲುವೇಷ,
ಮನ ಕುಗ್ಗಿ ಹೋಗಿದೆ.
ದಯೆ ತೋರು
ಭುವಿಯ ಜಂಜಾಟದಲ್ಲಿ..
ಕಳೆದು
ಹೋಗುವ ಮುನ್ನ
ಕಿತ್ತು ಒಗೆಯಬೇಕು
ಮೋಹಪಾಶವನ್ನ..

ನಿನ್ನ

ಹರ್ಷ