ಹೃದಯ ವೀಣೆ ಮಿಟಬೆಕೆ?

Saturday, October 26, 2013

ಕವಿತೇ

ಕೈಬಿಟ್ಟು ಹೋದಳು ಕವಿತೇ
ನನ್ನಿಂದ ದೂರವಾಗಿ
ಕಣ್ಣ ರೆಪ್ಪೇಯಲ್ಲಿ ಕಾಪಾಡಿದ್ದೇ
ಬಚ್ಚಿಟ್ಟಿದೆ ಯಾರಿಗೂ
ಕಾಣದ ಹಾಗೇ,
ಅರಿವಿರದೆ ಸರ ಸರನೆ
ಹರಿದು ಹೋದಳು ಕಣ್ಣೀರ
ಹನಿಗಳಲ್ಲಿ ಸೇರಿ

ಕೈತುತ್ತು ತಿನ್ನಿಸಿದ ಅಮ್ಮನ
ನೆನಪಾದಾಗ, ನನ್ನವಳ
ಮುಂಗುರುಳಿನಲ್ಲಿ ಚಂದ್ರನನ್ನು
ಹುಡುಕಲು ಇಣುಕಿದಾಗ,
ಕೆಲವೊಮ್ಮೆ ನಲಿವನಲಿ
ಕೆಲವೊಮ್ಮೆ ನೋವಿನಲಿ
ಮತ್ತೆ ಕೆಲವೊಮ್ಮೆ ಬೇಸರದ
ತೆಕ್ಕೆಯಲ್ಲಿ ಒಬ್ಬಂಟಿಗನಾಗಿ
ನರಳುತಿದ್ದಾಗ, ಅರಿಯದೇ
ಪ್ರತ್ಯಕ್ಷವಾಗುತಿದ್ದಳು ಕವಿತೇ
ಬಿಗಿದಪ್ಪಿ ನನ್ನ, ನೆರಳಾಗಿ
ಸಾಗುತಿದ್ದಳು ನಾನು
ಸಾಗಿದಡೆಯೆಲ್ಲ

ಏನಾಯಿತು ಕವಿತೇ
ಬಿಟ್ಟು ಹೋದದ್ದಾದರೂ ಯಾಕೆ?
ತುಂಬಾ ಪ್ರೀತಿಸಿದ ನನಗೇ
ವಿರಹ ವೇದನೆ ಯಾಕೇ ?
ಬಾ ಕವಿತೇ ಮರಳಿ ನನ್ನ
ಬಾಳಲ್ಲಿ ನೀನು, ಹರಿದು ಬರಲಿ ಮತ್ತೇ
ಬೇಳಕು ದೂಡಿ ಕತ್ತಲೇಯನ್ನು

ಹರ್ಷಾWednesday, September 4, 2013

ಪೂರ್ಣಗೊಳ್ಳದ ಕವನ

ಗೆಳೆಯಾ ನಮ್ಮಿಬ್ಬರ ನಂಟು
ಒಂಥರಾ ಪೂರ್ಣಗೊಳ್ಳದ ಕವನ
ನೂರು ಭಾವನೆಗಳು
ಮನದಲ್ಲಿ ಮೂಡಿದರು ಅಸ್ಪಷ್ಟತೆ,
ಗೊಂದಲ
ಸಾವಿರ ಸಲ ಪ್ರಯತ್ನಪಟ್ಟರು
ಕಾಗದದಲ್ಲಿ ಮೂಡಿಸಲು ವಿಫ಼ಲ.


ಕೆಲವು ಸಾಲುಗಳು ಮೂಡಿರಲು
ಗೊತ್ತಿಲ್ಲ,
ಅದೇಕೋ ಮನಸು
ಖಾಲಿ  ಖಾಲಿ.. ..
ಪದಗಳು
ಹುಡುಕಿ ಸುಮ್ಮನೇ ಜೋಡಿಸುವದು ?
ಕ್ಷಮಿಸು ನನಗೇ ಎಂದು ಇರಲಿಲ್ಲ 
ಆ ಖಯಾಲಿ
ಶಿಲ್ಪ ಕೆತ್ತುವ ಮೊದಲೇ ಶಿಲ್ಪಿ,

ರೂಪದರ್ಶಿಯು ಯೌವನ
ಕಳೆದು ಕೊಂಡ ಹಾಗೇ
ಅದೊಂದು ಅರ್ಧ ಕಡಿದ ಆವಸ್ಥೆ,

ಅತ್ತ ಶಿಲ್ಪವೂ ಅಲ್ಲ, 
ಇತ್ತ ಕಲ್ಲೂ ಅಲ್ಲ.
ನಿಮ್ಮ 
ಹರ್ಷಾ 

Sunday, June 9, 2013

ಭಾವ ಜೀವಿಯ ಮೌನ


ಮಾತು ಸಾವಿರ
ತುಟಿಯಂಚಿನಲ್ಲಿ
ಕುಣಿದಾಡಿ
ಹೊರಹೊಮ್ಮಲು 
ತವಕಿಸುತ್ತಿರಲು
ಮನಸೇ ನೀನಗೇಕೆ
ಇಷ್ಟ ಬರಿ ಮೌನ ?

ಆದ್ಯಾವ ಶಕ್ತಿಯೋ
ಅರಿಯೇ ನಿನ್ನಲ್ಲಿ
ನೋವು ನಲಿವುಗಳು
ನಿನ್ನ ಯಾಕೆ ಭಾದಿಸವು
ನನಗೇ ಪೀಡಿಸುವ
ನಿಶ್ಯಬ್ಧತೆಯ ವಿಷಗಳಿಗೆಗಳು
ನಿನಗೇಕೆ ಅನಿಸುವವು
ರಸನಿಮಿಷಗಳು 

ಮನಸೇ,
ನಿನಗೇಕೆ ಇಷ್ಟ
ಬರಿ ಮೌನ,
ಕಾನನದ ನಡು
ಹೆದರಿದ ಹೆಬ್ಬುಲಿಯ ಹಾಗೇ
ನಾನು ಒದ್ದಾಡುತ್ತಿರಲು,
ನಿರ್ಭಯ
ಕೋಗಿಲೆಯ ಹಾಗೇ
ಹಾಡುತ್ತಿರುವೆ
ವಸಂತಗಾನ!

ನಿಮ್ಮ
ಹರ್ಷಾ 

Wednesday, March 27, 2013

ಹುಡುಕಿ ತಾ ನನ್ನ


ಹುಡುಕಿ ತಾ ನನ್ನ,
ಗೆಳತಿಯೇ
ಕಳೆದು ಹೋಗಿರುವೆ ನಾನು!

ಸುತ್ತಲಿನ ಜಂಜಾಟದಲ್ಲಿ ಸಿಗದೇ
ಹೋಗಿರುವೆ ನಾನು!

ಕೈಗೆಟುಕದ ಬಿಸಿಲ್ಗುದರೆಯ
ಬೆಂಬತ್ತಿ ದಣಿದು ಹೋಗಿರುವೆ.
ನನ್ನ ಕೈಹಿಡಿಸಿ ಹೊರಗೆ ದಾರಿ
ತೋರಿಸು ಓಲವೇ

ಮೋಹಪಾಶದಿ ನನ್ನ
ಬಿಡಿಸುವ
ಗುರುವಾಗೂ,
ಅರಿವಾಗು ಒಲವೇ..

ಹುಡುಕಿ ತಾ ಓಲವೇ
ಕಳೆದು ಹೋಗಿರುವೆ ನಾನು..

ಅರಿವು ಸಾಗುವ ದಾರಿ
ಗುರುವಿದ್ದರು ಕಾಣೆನು
ಮಾಯೆ ಪೊರೆಯೆ ಸಲುಹಿ
ಕುರುಡನಾಗಿ ನಿಂದಿಹೆನು
ವಿಷವೆಂದರಿತು,
ಸಿಹಿರಸದ
ಹಾಗೇ ಸವಿಯುತ್ತಿರಲು
ಮನವೇ,  ಒಲವೇ,
ಕೈಹಿಡಿದು
ನಡೆಸು ನನ್ನ
ದಾರಿತಪ್ಪುವ ಮೊದಲು,
ಹಿಂತಿರುಗಿ ಬರಲಾರಾದಷ್ಟು
ಮುಂದೆ ಹೋಗುವ  ಮುನ್ನ..

ನಿಮ್ಮ
ಹರ್ಷಾ


Friday, March 22, 2013

ಅವನು

ಅವನು ಬದುಕೀದ್ದಾಗ
ಒಮ್ಮೇ ಕಣ್ಣೆತ್ತಿ  ಕೂಡಾ
ನೊಡಲಿಲ್ಲಾ ಇವಳು
ಅವನ ಪ್ರೇಮ ಪತ್ರಗಳು

ಅವನು ಸತ್ತ ಮೇಲೆ
ಗೋರಿಯ ಬಳಿ
ಕುಳಿತು ಓದಿ ಬಿಕ್ಕಿ
ಬಿಕ್ಕಿ ಅತ್ತಳು

ನಿಮ್ಮ
ಹರ್ಷಾ 

Saturday, March 16, 2013

ಏಕಾಂಗಿ

ನೀ ಬರಲಾರೆ ತಿರುಗಿ
ದೂರ ದೂರ ಹೋದವಳು!!
ಶಬ್ದದ ವೇಗವ ದಾಟಿ
ನಿಶ್ಯಬ್ಧವಾಗಿ ಹೋದವಳು!!
ಹಸಿನಗೆಯ ಮುಚ್ಚಿಟ್ಟು,
ಹುಸಿಕೋಪವ ತೋರುತ್ತಾ
ಹಸಿರಾಗಿಸುವಳು  ನನ್ನ ಬರಡು
ಬಾಳನ್ನು.
ಎಂದು ನಂಬಿರಲು,
ನಗು-ನಗುತ್ತಲೇ ಹೋದಳು!
ಪಿಸುಮಾತನ್ನು ಹೇಳದೇ
ಗೆಜ್ಜೆ ಕಾಲಲ್ಲಿ  ಹೋದರೂ
ಹೆಜ್ಜೆಯ ನಾದದ ಹುಟ್ಟಡಗಿಸಿ
ಸದ್ದು ಮಾಡದೇ ಹೋದಳು!
ತೆರೆದ ಕಣ್ಣಲಿ ಕಂಡರೂ
ರೆಪ್ಪೆ ಮೀಟುಕಿಸುವ ಮುನ್ನ
ಕಣ್ಮರೆಯಾಗಿ ಹೋದಳು!
ಏಕಾಂಗಿಯಾಗಿ ಬಿಟ್ಟು ನನ್ನ.........

ನಿಮ್ಮ

ಹರ್ಷಾ 

Wednesday, January 2, 2013

ಸೂರ್ಯಾಸ್ತದ ಸಮಯ

ಸೂರ್ಯಾಸ್ತದ ಸಮಯ
ಅವನ ಬೆಳಕಿನ ಸನಿಹ
ಕುಳಿತು ಬಯಸಿತು ಮಗುವು
ಒಂದು ಹೊಸ ದಿನವು.

ಪುಟ್ಟ ಹೇಳಿಕೊಳ್ಳುತಿತ್ತು , ತನ್ನಲ್ಲಿ  ತಾನೇ
ಅಮ್ಮ ಮಾಡಬೇಕು ಒಂದು ಬಿಸಿ ರೊಟ್ಟಿ!
ತುಂಡು ನನಗೆ ಉಳಿದುದು ಅಣ್ಣ, ಅಪ್ಪ, ಅಮ್ಮಗೆ ಕೊಟ್ಟೆ
ಮತ್ತೇ ಹಸಿವಿಗೇ ? ಇರುವದು ಭಿಕ್ಷೆ ತಟ್ಟೆ!

ಯಾರ ಮನೆಯ ಮುಂದೇ ಕೈಚಾಚಿದರು
ಅಂದರೂ ಪರವಾಗಿಲ್ಲ ದರಿದ್ರಗಳು..
ಅನ್ನಬಾರದು ಪಾಪದ ಪೀಡೆಗಳು..
ಹಳಸಿದನ್ನು ಕೊಟ್ಟರೂ ಹೇಳುವೆ ಧನ್ಯವಾದಗಳು.

ಅಷ್ಟರಲ್ಲಿ ಸೂರ್ಯ ಮುಳುಗುತ್ತಿರಲು
ಮಗು ಹೇಳಿತು, ಇನ್ನೂ ಸ್ವಲ್ಪ ತಾಳು ಮಾಮಾ..
ಎದುರು ಮನೇ ನಿಮ್ಮಿ ಕಾರು ಒರೆಸುವ ಬಟ್ಟೇ
ಅದು ಕೊಟ್ಟರೂ  ನಾ ತುಂಬಾ ಸಂತೋಷಪಟ್ಟೆ!
ಇನ್ನೂ ಏನೋ ಹೇಳುತಿರುವಾಗಲೇ ಮಗು..
ಕಛೇರಿ ಕೆಲಸ ಮುಗಿಸಿದ ರವಿ, ಅಸ್ತಂಗತನಾಗುತ್ತಲೇ
ಹೇಳಿದ,
ಬರೆದಿಡಪ್ಪ ಮನವಿ..
ನಾಳೆ ಕೊಡುವಿಯಂತೆ!!

ನಿಮ್ಮ
ಹರ್ಷಾ

ನೆನಪು

ನನ್ನ ಮನದ ಮೂಲೆಯಲ್ಲಿ
ನಿನ್ನ ನೆನಪೆ ತುಂಬಿದೆ!
ಮರೆಯಬಯಸುವೇ ಆದರೇನು
ಹೊಸಕಾವ್ಯವಾಗಿ ನಿಂದಿದೆ!

ನಿನ್ನ ಮಾತು ನನ್ನ ಮೌನದಿ
ಕಥೆಯನೊಂದು ರಚಿಸಿದೆ!
ನಿನ್ನ ನಗುವ ಚಿತ್ರ (ಮುಖವು) ಕಂಡು
ನನ್ನ ಮುಖವು ಅರಳಿದೆ!

ಜಗವು ಒಂದು ಓಟದ ಆಟ
ಬೇಗ ಗುರಿಯಾ ತಲುಪಿದೆ
ಸ್ವಲ್ಪ  ನಡಿದರು ಆಯಾಸಗೊಳ್ಳುವ
ನೀನು ಹೇಗೆ ಓಡಿದೆ?

ಜಗದ ಸಂತೆಯಲ್ಲಿ ನಿನ್ನ
ಕಂತೆ ಬೇಗ ಮುಗಿಯಿತೇ?
ಗುಲಾಬಿಯಂತೆ ಸಣ್ಣ ಬದುಕನು
ಬಣ್ಣದಿಂದ ರಚಿಸಿದೆ!

ನಿಮ್ಮ
ಹರ್ಷಾ
(Light 11 May 1998)

ಹೆಜ್ಜೆಗುರುತು

ಹೆಜ್ಜೆಗುರುತು ಮೂಡಿಸುವ
ಹೆಬ್ಬಯಕೆಯಲ್ಲಿ ಹೆಜ್ಜೆ
ಹೆಜ್ಜೆಗೂ ತುಳಿದರು.

ಅಳಿಸು ಹೋಗುವ
ಕೆಸರಿನಲ್ಲಿ ಗುರುತು
ಕಂಡು ಮೆರೆದರು

ನೆತ್ತರಿನ  ಕಾಲುವೆ ಹರಿಸಿ
ಸಾಮ್ರಾಜ್ಯ ಕಟ್ಟಿ
ಮೆರೆದರು!


ಕಾಲಚಕ್ರದಲ್ಲಿ ತಾವೊಂದು
ಘಳಿಗೆ ಎನ್ನುವದು
ಮರೆತರು!

ತಾ ಹೆಣೆದ ಬಲೆಯಲ್ಲಿ
ಉಸಿರು ಕಟ್ಟಿ ತಾನೇ
ಮಡಿದರು!

ಅಳಿದು ಹೋದವು
ಹೆಜ್ಜೆಗುರುತು
ಸಾಮ್ರಾಜ್ಯ ನಶಿಸಿ ಹೋದವು!

ಸಿಂಹಾಸನ
ಬಿರುದುಗಳು
ಎಲ್ಲಾ ಮರೇತು ಹೋದವು!

ಹೆಜ್ಜೆಗುರುತು
ಮೂಡಿಸು
ನನ್ನ ಕಂದ
ಬೇಡವೆನ್ನಲಾರೆ
ನಿನ್ನ
ನಾನೆಂದೂ

ಕಾಲಚಕ್ರದಿ
ನಶಿಸುವ ಮೋಹದ
ಸಾಮ್ರಾಜ್ಯ ಕಟ್ಟದಿರು.

ಹೃದಯನಾಳುವ
ದೊರೆಯಾಗು,
ನನ್ನ ಮಗುವೇ
ಮೂಡಿಬರಲಿ ಏಲ್ಲರ
ಹೃದಯದಲಿ....
ಎಂದೂ ಅಳಿಯದ
ಹೆಜ್ಜೆಗುರುತು!!

ನಿಮ್ಮ
ಹರ್ಷಾTuesday, January 1, 2013

ಕೋರಿಕೆ


ಓ ಮನಸೇ
ಕಾಡದಿರು ನನ್ನ
ನಾನೊಂದು ಮುಗ್ಧ
ಜೀವ

ಕಲಿಸದಿರು
ಪರಿ ಪರಿಯ ಮಾತು
ಪಸರಿಸದಿರಲಿ
ಹೃದಯದಿ ವಿಷವ
ಅಮ್ಮ ಕಲಿಸಿದ
ತೊದಲು ಮಾತುಗಳು
ಕಪಟವರಿಯದ
ಸುಂದರ ಮುತ್ತುಗಳು
ಬೆಳೆ-ಬೆಳೆಯುತ
ಕಲಿತೇ ನೀನು  ಏನೆಲ್ಲಾ
ವ್ಯಂಗ್ಯ ಕಪಟ ವಿಷಕಾರುವ
ಮಾತುಗಳು
ಓ ಮನಸೇ ಸಾಕಿನ್ನು
ಮಗುವಾಗಬೇಕು ನಾನು
ದಯೆತೋರು ಕೋರುವೆ
ನೀಡದಿರು  ನೋವು 
ಬಿತ್ತದಿರು ನನ್ನಲ್ಲಿ
ಮುಂದೆಂದು ಬೇವು

ನಿಮ್ಮ
ಹರ್ಷಾ