ಹೃದಯ ವೀಣೆ ಮಿಟಬೆಕೆ?

Wednesday, March 27, 2013

ಹುಡುಕಿ ತಾ ನನ್ನ


ಹುಡುಕಿ ತಾ ನನ್ನ,
ಗೆಳತಿಯೇ
ಕಳೆದು ಹೋಗಿರುವೆ ನಾನು!

ಸುತ್ತಲಿನ ಜಂಜಾಟದಲ್ಲಿ ಸಿಗದೇ
ಹೋಗಿರುವೆ ನಾನು!

ಕೈಗೆಟುಕದ ಬಿಸಿಲ್ಗುದರೆಯ
ಬೆಂಬತ್ತಿ ದಣಿದು ಹೋಗಿರುವೆ.
ನನ್ನ ಕೈಹಿಡಿಸಿ ಹೊರಗೆ ದಾರಿ
ತೋರಿಸು ಓಲವೇ

ಮೋಹಪಾಶದಿ ನನ್ನ
ಬಿಡಿಸುವ
ಗುರುವಾಗೂ,
ಅರಿವಾಗು ಒಲವೇ..

ಹುಡುಕಿ ತಾ ಓಲವೇ
ಕಳೆದು ಹೋಗಿರುವೆ ನಾನು..

ಅರಿವು ಸಾಗುವ ದಾರಿ
ಗುರುವಿದ್ದರು ಕಾಣೆನು
ಮಾಯೆ ಪೊರೆಯೆ ಸಲುಹಿ
ಕುರುಡನಾಗಿ ನಿಂದಿಹೆನು
ವಿಷವೆಂದರಿತು,
ಸಿಹಿರಸದ
ಹಾಗೇ ಸವಿಯುತ್ತಿರಲು
ಮನವೇ,  ಒಲವೇ,
ಕೈಹಿಡಿದು
ನಡೆಸು ನನ್ನ
ದಾರಿತಪ್ಪುವ ಮೊದಲು,
ಹಿಂತಿರುಗಿ ಬರಲಾರಾದಷ್ಟು
ಮುಂದೆ ಹೋಗುವ  ಮುನ್ನ..

ನಿಮ್ಮ
ಹರ್ಷಾ


Friday, March 22, 2013

ಅವನು

ಅವನು ಬದುಕೀದ್ದಾಗ
ಒಮ್ಮೇ ಕಣ್ಣೆತ್ತಿ  ಕೂಡಾ
ನೊಡಲಿಲ್ಲಾ ಇವಳು
ಅವನ ಪ್ರೇಮ ಪತ್ರಗಳು

ಅವನು ಸತ್ತ ಮೇಲೆ
ಗೋರಿಯ ಬಳಿ
ಕುಳಿತು ಓದಿ ಬಿಕ್ಕಿ
ಬಿಕ್ಕಿ ಅತ್ತಳು

ನಿಮ್ಮ
ಹರ್ಷಾ 

Saturday, March 16, 2013

ಏಕಾಂಗಿ

ನೀ ಬರಲಾರೆ ತಿರುಗಿ
ದೂರ ದೂರ ಹೋದವಳು!!
ಶಬ್ದದ ವೇಗವ ದಾಟಿ
ನಿಶ್ಯಬ್ಧವಾಗಿ ಹೋದವಳು!!
ಹಸಿನಗೆಯ ಮುಚ್ಚಿಟ್ಟು,
ಹುಸಿಕೋಪವ ತೋರುತ್ತಾ
ಹಸಿರಾಗಿಸುವಳು  ನನ್ನ ಬರಡು
ಬಾಳನ್ನು.
ಎಂದು ನಂಬಿರಲು,
ನಗು-ನಗುತ್ತಲೇ ಹೋದಳು!
ಪಿಸುಮಾತನ್ನು ಹೇಳದೇ
ಗೆಜ್ಜೆ ಕಾಲಲ್ಲಿ  ಹೋದರೂ
ಹೆಜ್ಜೆಯ ನಾದದ ಹುಟ್ಟಡಗಿಸಿ
ಸದ್ದು ಮಾಡದೇ ಹೋದಳು!
ತೆರೆದ ಕಣ್ಣಲಿ ಕಂಡರೂ
ರೆಪ್ಪೆ ಮೀಟುಕಿಸುವ ಮುನ್ನ
ಕಣ್ಮರೆಯಾಗಿ ಹೋದಳು!
ಏಕಾಂಗಿಯಾಗಿ ಬಿಟ್ಟು ನನ್ನ.........

ನಿಮ್ಮ

ಹರ್ಷಾ