Posts

Showing posts from 2014

ಶಿಲಾಬಾಲೆ

ಶಿಲ್ಪಿ ಕಡೆದ ಬೇಲೂರ  ಶಿಲಾಬಾಲೆಯ ಮೇಲೆ  ಗಗನದಿಂದ ಕೈತಪ್ಪಿ ಆಯಿತು  ಅಮೃತದ ಹನಿ ಸಿಂಚನ ನನ್ನೊಲವೆಂದು ಹೇಳಲು  ಮನ ಪರಿತಪಿಸುವುದು ,  ನಿನ್ನ ಕಂಡಾಗಲೆಲ್ಲ  ನನ್ನ ಹೃದಯದಲಿ ರೋಮಾಂಚನ ದೇಗುಲದ ಗೋಡೆಯಲ್ಲಿ ನಿಂತು ಶತಶತಮಾನ ಆದೆ ಸ್ನೇಹಿಯೇ ನೀನು ಪರಿಶುದ್ಧ, ಪ್ರವರ್ಧಮಾನ ಕಣ್ಣು ಕೋರೈಸುತ್ತಿಲ್ಲ ಬರೀ ನಿನ್ನ ರೂಪ, ಅದರಲ್ಲಿ ಅಡಗಿದೆ ಅರಿಯೆ ಅದಾವುದೋ ಶಕ್ತಿ ಸ್ವರೂಪ ಕರೆಯಲೇ ನಿನ್ನ ಕೈ ಬೀಸಿ ಮನಸಾರೆ...? ಬೇಡ , ನೀನು ಹೆಣ್ಣಲ್ಲ, ಹೆಣ್ಣಿನ ಸಾಕ್ಷಾತ್ಕಾರ ನನಗೆ ನಿಲುಕದ ತಾರೆ ನಿಮ್ಮ ಹರ್ಷಾ    

ರಾತ್ರಿ

ರಾತ್ರಿ ಅನ್ನುವದು ಅಮ್ಮನ ಮಡಿಲು ನೂರಾರು ನೋವು ನಲಿವುಗಳ ಮರೇಸಿ ನೇರವಾಗುವದು ನೀದ್ದೆಗೆ ಜರುಗಲು

ಪಯಣಿಗರು

ಬಾಳ ದಾರಿಯಲಿ ಪಯಣಿಗರಷ್ಟೆ ನಾವು ಎನ್ನುವದು ಎಂದೆಂದಿಗೂ ಅಳಿಸಲಾಗದ ಸತ್ಯ ಅದು ಮರೆತು ಹೋದಲ್ಲೆಲ್ಲಾ ನೆಲೆಯೂರುವ ಕನಸು ಕಾಣುವೆವು ನಿತ್ಯ ನಿಮ್ಮ   ಹರ್ಷಾ 

ಆಣೆಕಟ್ಟು

ಭೋರ್ಗರೆಯುವ ಭಾವನೆಗಳ ಹತ್ತಿಕ್ಕಿ ಕಟ್ಟಿರುವೆ ಮನಸಲ್ಲೊಂದು ಆಣೆಕಟ್ಟು ನಿನ್ನ ನೆನಪುಗಳ ಇಟ್ಟಿಗೆಯಾಗಿಸಿ ಪೋಣಿಸಿದ ಗೋಡೆಗೆ, ನನ್ನ ನೆತ್ತರು ನೀರಾಗಿ, ಜೊತೆಯಾಗಿ ಕಳೆದ ರಸನಿಮಿಷಗಳ ಕೂಡಿ ಕೆಸರಾಗಿ, ಕಟ್ಟಿರುವೆ ಯಾರು ಎಂದಿಗೂ ಒಡೆಯಲಾಗದ ತಡೆಗೋಡೆಯನೊಂದು ಅಯ್ಯೋ ಅದೆಲ್ಲಿ ಮರೆತೇ ? ಎಲ್ಲಿ ನನ್ನೆದೆಯ ಬಡಿತ? ಹೃದಯ ಹೇಳಿತು ಗೆಳೆಯ ನೀನು ಕಟ್ಟಲಿಲ್ಲ ಅವಳ ನೆನಪುಗಳ ತಡೆಯುವ ಗೋಡೆಯ..... ನೀನು ಕಟ್ಟಿದ್ದು ನನ್ನ ಜೀವಂತ ಸಮಾಧಿಯ ಹರ್ಷಾ 

ರಾಧೇ

ನೀನು ನನ್ನವಳಲ್ಲ,  ನಾ ಕೈ ಬೀಸೀ ಕರೆದಾಗ  ಓಡಿ ಬರುವ ಪ್ರೇಯಸಿಯು ನೀನಲ್ಲ  ಕಾದ ಕಣ್ಣುಗಳಿಗೆ  ತಂಪನೆರೆಯುವ ಭಾವ  ಎದೆಗಪ್ಪಿ ಕಣ್ಣೀರ ಸುರಿಸಿ  ನನ್ನೆದೆಯ ತೊಯ್ಸುತ್ತಿದ್ದ  ನಿನ್ನ ಆ ಪರಿಯ ಅನುಭೂತಿಯ  ಕ್ಷಣಗಳು ಮತ್ತೆ ಮರುಕಳಿಸುವುದೇ ಇಲ್ಲ  ನೀ ರಾಧೆಯಾಗಿದ್ದ  ದಿನಗಳಲ್ಲಿ  ನಾ ಮೊಹನನಾಗಲೇ ಇಲ್ಲ  ಕಲಿಯುಗದಲ್ಲೂ ನನಗಾಗಿ  ಯುಗ ಯುಗಗಳೇ ಕಾಯುವೆ  ಎಂದು ನಂಬಿ ಕೆಟ್ಟೆನಲ್ಲ  ಬರಿ ರಾಧೆಯೇ  ಏಕೆ ಕಾಯಬೇಕು,  ಬೇಯಬೇಕು ವಿರಹದಲ್ಲಿ? ನೋವು ದುಃಖ  ವಿರಹ  ವೇದನೇಗಳ ಸಮಪಾಲು  ಮೋಹನನಿಗೂ ದಕ್ಕಲಿ ನಿನ್ನ ಹರ್ಷಾ

ಓದಲಾಗದ ಸಾಲುಗಳು

ಬಿಳಿ ಕಾಗದದ ಮೇಲೆ ಮೂಡಿಸಿದ ಬಿಳಿ ಶಾಯಿಯ ಸಾಲುಗಳು, ಓದದೇ ಹೋದೆ ನೀನು ಕಪ್ಪಾಗದಿರಲಿ ನಿನ್ನ ಹೇಸರು ಎಂದು ನನ್ನ ಭಾವನೆಗಳ ವ್ಯಕ್ತ ಪಡಿಸದೇ ಹೋದೆ ನಾನು ನನ್ನ ಮೌನ ಕ್ಷಣ ಮಾತ್ರ ಸಹಿಸದ ನೀನು, ಒಎಂದು ಮ್ಮೆಯಾದರೂ ಪ್ರಯತ್ನಿಸಬಹುದಾಗಿತ್ತಲ್ಲವೆ ಅರಿಯಲು ನನ್ನ ಮೌನವನ್ನು ಅರಿತು ಅರಿಯದೇ ಹೋದೆಯೋ ? ಅರಿಯಲು ವಿಫಲವಾದೆಯೋ ನಾನರಿಯೇ , ಆದರೂ ನನ್ನ ಬದುಕಲಿ ಎಂದು ಮರೆಯದ ಒಗಟಾದೆ ನೀನು ನಿನ್ನ ಹರ್ಷಾ

ಕ್ಷಮಿಸದಿರು ನನ್ನ

ಮಲಗಲೇ ಬೇಕು, ನಡುರಾತ್ರಿ ಸಮೀಪಿಸುತ್ತಿದೆ, ದಣಿವಾಗಿದೆ ದೇಹಕ್ಕೆ ಆದರೂ ಮನಸೇಕೋ ಚಡಪಡಿಸುತ್ತಿದೆ  ನೋವಿನಲಿ ನಿನ್ನ ಹೃದಯದ ಬಡಿತ ಮುಂದೆಂದು ಕೇಳಿಸದು ಕಟುಕನಾಗಿರಲು ನಾನು ನಿನ್ನ ನೋವು ಕೇಳದೇ ಹೋದೆ ಕ್ಷಮಿಸದಿರು ನನ್ನ, ತಪ್ಪು ಮಾಡಿರುವೇ ನಾನೂ ಕೋರಗಬೇಕು ಮರುಗಬೇಕು ನೀನು ಅನುಭವಿಸಿದ ನೋವು ನಾನು ಅನುಭವಿಸಲೇ  ಬೇಕು ಕತ್ತಲೆಯ ರಾತ್ರಿಯಲಿ ತಿಳಿ ಆಗಸದಲಿ, ಸುತ್ತಲಿನ ಚುಕ್ಕಿಗಳ ನಡುವೇ ನಿನ್ನ ಕಲ್ಪಿಸಿಕೊಳ್ಳಬೇಕು. ಹಸಿಯಾಗಿಸಿ ನಿರೇರೆಯಬೇಕು ನಿನ್ನ ನೇನಪನ್ನು ಎಂದು ಮಾಸದ ಹಾಗೇ ನನ್ನ ಹೃದಯದ ಬಡಿತವಾಗಿಸಿ ಹರ್ಷಾ ಬೀರಗೆ

ಮೋಸಗಾರ

ಅವನು ಮೋಸಗಾರ ಅಂತ ನನಗೂ ಗೊತ್ತು, ತುಟಿ ಬಿಚ್ಚಿ ಅವನಿಗೇ ಕೇಳಿದರೆ ಬಹುಶ ಅವನು ನಿರಾಕರಿಸಲಾರ ಅವನದೇನಿದ್ದರು ಕಣ್ಣ ಸನ್ನೆಯಲ್ಲೇ ಆಕ್ರಮಣ ಮಾತುಗಳಿಗೆ ಎಂದು ಸಿಗದ ಜಾರಿ ಹೋಗುವ ಪೋರ ಮುಗ್ಧ ಮಗುವೂ ಹೌದು ಮೋಸದ ಲೇಪವಿಲ್ಲ ಆದರೂ ಅರಿಯೇ ಮನ ಸೆಳೆಯುವ ಮಾಟಗಾರ ಮರೆಯಬೇಕೂ ಅಂದಾಗಲೆಲ್ಲಾ ನೆನಪಾಗುವನು, ನನ್ನನ್ನೇ ಮರೆತೇನು ಕೆಲವೊಮ್ಮೆ ಆದರೂ ನೆನಪಾಗದೇ ಇರನು ಕ್ಷಣಕಾಲ ಮಾಂತ್ರಿಕನವನು ನೋಟದಲ್ಲೇ ತರಂಗಗಳನೆಬ್ಬಿಸುವನು ಮನಸ್ಸಿನಲ್ಲಿ, ಆದರೂ ಅವನೇಷ್ಟು ಪ್ರಶಾಂತನಾಗಿಹನು  ನಿನ್ನ  ಮುರುಳೀಯ ನಾದಕ್ಕೆ ಎಲ್ಲಾ ಮರೇತು ಓಡೋಡಿ ಬರಲೇ ಬೇಕು ನಾನು, ಓ ಹೃದಯ ಚೋರನೆ ನನ್ನ ಕರೇಯುವ ಮೋದಲು ಒಮ್ಮೆಯಾದರೂ ಜಗದ  ಪರಿವೇ ಮಾಡಬಾರದೇ ನೀನು

ಚೋರ್ ಬಜಾರು

ಮನಸು ಚೋರ್ ಬಜಾರು ನಾನಿರಬೇಕು ಅದರಿಂದ ಹುಷಾರು ಅದು ಬಯಸುವ ವಸ್ತು ಯಾರಪ್ಪನದಾದರೇನು ಸೊತ್ತು, ಕೇಳದು ಯಾರ ಮಾತು ಪಡೆದೇ ತೋರಿಸುವದು ತನ್ನ ಹುಕುಮತ್ತು ಯಾರದೋ ಅಂಗಳದ ಗುಲಾಬಿ ನನ್ನಯ ಮುಡಿಗೆ ಯಾಕೆ? ಆದರು ಕೇಳದು ಕೀಳುವ ಮುನ್ನ ನಾನು ಮಾಡುವದು ತಪ್ಪು ಅನಿಸದು. ಲಗಾಮು ಹಾಕಲು ಅದು ವಿವೇಕವಿರದ ಕುದರೆಯೇನಲ್ಲ ಬಲು ಜಾಣೇ.. ಆದರು ಸ್ವಾರ್ಥಿ, ತನ್ನ ಖುಷಿಗಾಗಿ ಯಾರಿಗೂ ನೋವು ಕೊಡಲು ಹೇಸದು. ಏ ದೇವರೇ ನಡೆಸು ಏನಾದರೂ ಕರಾಮತ್ತು ಠಿಕಾಣಿಗೇ ಬರಲಿ ನನ್ನ ಮನಸು ನಾನಲ್ಲವೇ ನಿನ್ನ ಸೊತ್ತು? ನಿಮ್ಮ ಹರ್ಷಾ