ಹೃದಯ ವೀಣೆ ಮಿಟಬೆಕೆ?

Tuesday, June 10, 2014

ರಾತ್ರಿ

ರಾತ್ರಿ ಅನ್ನುವದು ಅಮ್ಮನ ಮಡಿಲು
ನೂರಾರು ನೋವು ನಲಿವುಗಳ
ಮರೇಸಿ ನೇರವಾಗುವದು
ನೀದ್ದೆಗೆ ಜರುಗಲು

Sunday, June 8, 2014

ಪಯಣಿಗರು

ಬಾಳ ದಾರಿಯಲಿ ಪಯಣಿಗರಷ್ಟೆ ನಾವು
ಎನ್ನುವದು ಎಂದೆಂದಿಗೂ ಅಳಿಸಲಾಗದ ಸತ್ಯ
ಅದು ಮರೆತು ಹೋದಲ್ಲೆಲ್ಲಾ ನೆಲೆಯೂರುವ
ಕನಸು ಕಾಣುವೆವು ನಿತ್ಯ


ನಿಮ್ಮ 
 ಹರ್ಷಾ 

ಆಣೆಕಟ್ಟು


ಭೋರ್ಗರೆಯುವ ಭಾವನೆಗಳ
ಹತ್ತಿಕ್ಕಿ ಕಟ್ಟಿರುವೆ
ಮನಸಲ್ಲೊಂದು ಆಣೆಕಟ್ಟು
ನಿನ್ನ ನೆನಪುಗಳ ಇಟ್ಟಿಗೆಯಾಗಿಸಿ
ಪೋಣಿಸಿದ ಗೋಡೆಗೆ, ನನ್ನ
ನೆತ್ತರು ನೀರಾಗಿ, ಜೊತೆಯಾಗಿ
ಕಳೆದ ರಸನಿಮಿಷಗಳ ಕೂಡಿ ಕೆಸರಾಗಿ,
ಕಟ್ಟಿರುವೆ ಯಾರು ಎಂದಿಗೂ
ಒಡೆಯಲಾಗದ
ತಡೆಗೋಡೆಯನೊಂದು

ಅಯ್ಯೋ ಅದೆಲ್ಲಿ ಮರೆತೇ ?
ಎಲ್ಲಿ ನನ್ನೆದೆಯ ಬಡಿತ?
ಹೃದಯ ಹೇಳಿತು ಗೆಳೆಯ
ನೀನು ಕಟ್ಟಲಿಲ್ಲ ಅವಳ
ನೆನಪುಗಳ ತಡೆಯುವ ಗೋಡೆಯ.....
ನೀನು ಕಟ್ಟಿದ್ದು ನನ್ನ
ಜೀವಂತ ಸಮಾಧಿಯ


ಹರ್ಷಾ