ಹೃದಯ ವೀಣೆ ಮಿಟಬೆಕೆ?

Tuesday, November 10, 2015

ಸೌಂದರ್ಯ

ನನ್ನ ಸೌಂದರ್ಯ ನಿನ್ನ 
ಹೃದಯದಲಿ ಮೂಡಿರೇ, ನಾನೆಂದೆಂದಿಗೂ 
ನಿನಗೆ ಸ್ಪೂರ್ತಿಯ ಸೆಲೆ 

ನನ್ನ ಸೌಂದರ್ಯ ಬರೀ 
ನಿನ್ನ ಕಣ್ಣಲ್ಲಿ ನಾಟಿರೆ ಹೇಳು ನಲ್ಲನೇ
ನನಗೆಲ್ಲಿದೆ ನೆಲೆ.

ಹರ್ಷಾ 

Sunday, October 18, 2015

ಭಾವನೆಗಳು

ಎಲ್ಲಾ ಭಾವನೆಗಳು
ಹರಿಯಬಿಡಲಾಗುವದಿಲ್ಲಾ
ಕೆಲವೊಂದು ಮುಚ್ಚಿಡಬೇಕು
ಬಚ್ಚಿಡಬೇಕು, ಹೃದಯದಲಿ
ಧುಮ್ಮುಕ್ಕಿ ಹರಿಯುತಿದ್ದರೂ
ತುಟಿಯಂಚಿನಲ್ಲಿ ಬಾರದ
ಹಾಗೆ ನಾಲಿಗೆಯನ್ನೇ
ಅಡ್ಡಗೋಡೆಯಾಗಿಸಬೇಕು.
ನೀ ಕೊಟ್ಟ ರಸನಿಮಿಶಗಳನ್ನು
ಒಬ್ಬನೇ ಸವಿದಿದ್ದೆ ಕೆಲವೊಮ್ಮೆ
ನಾ ಸ್ವಾರ್ಥಿಯಾಗಿ, ಮತ್ತೇ
ನೋವನ್ನು ಹಂಚಿಕೊಳ್ಳಲಿಕ್ಕೆ
ಮತ್ತ್ಯಾರದೋ ಭುಜವನ್ನೇಕೆ
ಹುಡುಕಬೇಕು?
ನೋವಿರಲಿ ನಲಿವಿರಲಿ
ಕಣ್ಣು ಮುಚ್ಚಿ ನಿನ್ನಲ್ಲಿ
ಒಂದಾಗಲೇಬೇಕು.
ಕವನಕ್ಕೆ ದಕ್ಕದ ನೂರಾರು
ಭಾವನೆಗಳು ಹೃದಯದಲ್ಲೇ
ಮೌನ ರಾಗ ಹಾಡಬೇಕು..

Saturday, June 6, 2015

ಮರತೆ ಹೋಗಿವೆ ಕಂಗಳು
ಕ್ಯಾಮೆರಾ ಬಂದಾದ ಮೇಲೆ
ಸೆರೆ ಹಿಡಿಯಲೂ ಯಾವುದೇ
ದ್ರಶ್ಯಗಳು ಕಣ್ಣಂಚಿನಲಿ

ಅರೆಗಳಿಗೆ ನೋಡಲು
ಪುರುಸೋತ್ತಿಲ್ಲಾ ನಮಗೆ
ಕಣ್ಣೆತ್ತಿ ಸುತ್ತಲೂ
ಕಣ್ಣೆನಿದ್ದರು ಲೇನ್ಸಿನ ಹಿಂದೇ
ಜೀವಂತಿಕೆಯ ನಿರ್ಜಿವ
ಚಿತ್ರ ಕ್ಲಿಕ್ಕ್ಕಿಸಲು

ಕೂಗಿ ಕರೆದರೇ ಕೇಳಿ ಓಡಿ
ಬರುವಷ್ಟೇ ದೂರ ನನ್ನ
ಪ್ರಾಣಸ್ನೆಹಿತರು....... ಆದರೂ
ತಡಕಾಡುತ್ತಿರುತ್ತೆನೆ
ಅಂತರಜಾಲದಲಿ ಪ್ರಸ್ತುತವಿರುವ
ಅಪ್ರಸ್ತುತವಿರುವ ಗೆಳೆಯರನ್ನು

ಸಾಗಬೇಕಿದೆ ಹಿಂತುರಿಗಿ
ಮತ್ತದೇ ದಾರಿಯಲಿ, ಕೆಲಗಳಿಗೆ
ಮರೇತು ಆಧುನಿಕತೆಯ
ಮೋಹಪಾಶವನ್ನು ಬದಿಗಿಟ್ಟು
ಕ್ರಮಿಸಬೇಕಿದೆ ಸ್ವಲ್ಪ ದೂರ
ಅವರಿಟ್ಟ ಹೆಜ್ಜೇಯ ಮೇಲೆ
ಹೆಜ್ಜೆಯನಿಟ್ಟು, ಆಗ ಮಾತ್ರ
ಸಾಧ್ಯ ಬದುಕುವದು ಮರೇತು
ಜೀವಂತಿಕೆಯ ನಾಟಕ ಆಡುವದು

ಹರ್ಷಾ

Tuesday, April 14, 2015

ನಿನ್ನೊಂದಿಗೆ ಬದುಕುತ್ತೇನೆ 
ನೀನು ಬಿಟ್ಟು ಹೋದ ಮೇಲೆ 
ಒಮ್ಮೊಮ್ಮೆ ನಿನ್ನ ಭಾವಚಿತ್ರದ 
ಜೊತೆ ಕುಣಿದು ಕುಪ್ಪಳಿಸಿ 
ಪದೇಪದೇ ಕೇಳುತ್ತೇನೆ ನಿನ್ನ 
ರೆಕಾರ್ಡ್ ಮಾಡಿದ ಹಳೆಯ 
ಸಂಭಾಷಣೆಗಳು ಹಾಗೆ .... 

ನಿನ್ನ ನೆನಪುಗಳು ನಿನಗಿಂತ 
ಅದೆಷ್ಟು ಮಧುರ ...
ನೀಡುವುದಿಲ್ಲ ನಿನ್ನಷ್ಟು ನೋವು 
ನೀ ಬಿಟ್ಟು ಹೋದರೂ ನನ್ನ , 
ಇಂದಿಗೂ ಕಾಪಾಡುತ್ತಿವೆ ನನಗೆ 
ನೀಡುತ್ತಲೇ ಪ್ರೀತಿಯ ಕಾವು ....

Harsha
ನಾನು ಕವಿತೆ , ಹರಿವ 
ಮಂಜುಳ ಸಲಿಲ 
ಕೈ ಬೀಸಿ ಕರೆದರೆ ನಿನ್ನ 
ಬೊಗಸೆ ತುಂಬುವೆ, ಹಾಗೇ 
ಜತನ , ಸೋರಿಯೂ ಹೋಗಬಲ್ಲೆ ... 

ನೀ ಕಂಡರೆ ನಿನ್ನ ಪ್ರೇಯಸಿಯು 
ಸುರಸುಂದರಿ , ಬೇಲೂರ ಶಿಲ್ಪ , 
ಆಗಸದ ತಾರೆ , ಬಳುಕುವ ಮೈಸಿರಿ 
ನಿನ್ನೊಳಗಿನ ಆಸೆ ನಾನು, 

ಅಷ್ಟೇ ಅಲ್ಲ , ಹಸಿದವರ , ನೊಂದವರ 
ಮೂಕ ರೋದನೆಯೂ ಆದೇನು.... 
ನೀ ಕಂಡ ಹಾಗೆ 
ನಿನ್ನ ಮನದ ಪ್ರತಿಬಿಂಬ ನಾನು. 

- ಹರ್ಷ

Wednesday, July 23, 2014

ಶಿಲಾಬಾಲೆ

ಶಿಲ್ಪಿ ಕಡೆದ ಬೇಲೂರ 
ಶಿಲಾಬಾಲೆಯ ಮೇಲೆ 
ಗಗನದಿಂದ ಕೈತಪ್ಪಿ ಆಯಿತು 
ಅಮೃತದ ಹನಿ ಸಿಂಚನ

ನನ್ನೊಲವೆಂದು ಹೇಳಲು 
ಮನ ಪರಿತಪಿಸುವುದು , 
ನಿನ್ನ ಕಂಡಾಗಲೆಲ್ಲ 
ನನ್ನ ಹೃದಯದಲಿ ರೋಮಾಂಚನ

ದೇಗುಲದ ಗೋಡೆಯಲ್ಲಿ
ನಿಂತು ಶತಶತಮಾನ
ಆದೆ ಸ್ನೇಹಿಯೇ ನೀನು
ಪರಿಶುದ್ಧ, ಪ್ರವರ್ಧಮಾನ

ಕಣ್ಣು ಕೋರೈಸುತ್ತಿಲ್ಲ
ಬರೀ ನಿನ್ನ ರೂಪ, ಅದರಲ್ಲಿ
ಅಡಗಿದೆ ಅರಿಯೆ ಅದಾವುದೋ
ಶಕ್ತಿ ಸ್ವರೂಪ

ಕರೆಯಲೇ ನಿನ್ನ ಕೈ ಬೀಸಿ
ಮನಸಾರೆ...? ಬೇಡ , ನೀನು
ಹೆಣ್ಣಲ್ಲ, ಹೆಣ್ಣಿನ ಸಾಕ್ಷಾತ್ಕಾರ
ನನಗೆ ನಿಲುಕದ ತಾರೆ

ನಿಮ್ಮ
ಹರ್ಷಾ 

 

Tuesday, June 10, 2014

ರಾತ್ರಿ

ರಾತ್ರಿ ಅನ್ನುವದು ಅಮ್ಮನ ಮಡಿಲು
ನೂರಾರು ನೋವು ನಲಿವುಗಳ
ಮರೇಸಿ ನೇರವಾಗುವದು
ನೀದ್ದೆಗೆ ಜರುಗಲು

Sunday, June 8, 2014

ಪಯಣಿಗರು

ಬಾಳ ದಾರಿಯಲಿ ಪಯಣಿಗರಷ್ಟೆ ನಾವು
ಎನ್ನುವದು ಎಂದೆಂದಿಗೂ ಅಳಿಸಲಾಗದ ಸತ್ಯ
ಅದು ಮರೆತು ಹೋದಲ್ಲೆಲ್ಲಾ ನೆಲೆಯೂರುವ
ಕನಸು ಕಾಣುವೆವು ನಿತ್ಯ


ನಿಮ್ಮ 
 ಹರ್ಷಾ 

ಆಣೆಕಟ್ಟು


ಭೋರ್ಗರೆಯುವ ಭಾವನೆಗಳ
ಹತ್ತಿಕ್ಕಿ ಕಟ್ಟಿರುವೆ
ಮನಸಲ್ಲೊಂದು ಆಣೆಕಟ್ಟು
ನಿನ್ನ ನೆನಪುಗಳ ಇಟ್ಟಿಗೆಯಾಗಿಸಿ
ಪೋಣಿಸಿದ ಗೋಡೆಗೆ, ನನ್ನ
ನೆತ್ತರು ನೀರಾಗಿ, ಜೊತೆಯಾಗಿ
ಕಳೆದ ರಸನಿಮಿಷಗಳ ಕೂಡಿ ಕೆಸರಾಗಿ,
ಕಟ್ಟಿರುವೆ ಯಾರು ಎಂದಿಗೂ
ಒಡೆಯಲಾಗದ
ತಡೆಗೋಡೆಯನೊಂದು

ಅಯ್ಯೋ ಅದೆಲ್ಲಿ ಮರೆತೇ ?
ಎಲ್ಲಿ ನನ್ನೆದೆಯ ಬಡಿತ?
ಹೃದಯ ಹೇಳಿತು ಗೆಳೆಯ
ನೀನು ಕಟ್ಟಲಿಲ್ಲ ಅವಳ
ನೆನಪುಗಳ ತಡೆಯುವ ಗೋಡೆಯ.....
ನೀನು ಕಟ್ಟಿದ್ದು ನನ್ನ
ಜೀವಂತ ಸಮಾಧಿಯ


ಹರ್ಷಾ 

Saturday, April 19, 2014

ರಾಧೇ

ನೀನು ನನ್ನವಳಲ್ಲ, 
ನಾ ಕೈ ಬೀಸೀ ಕರೆದಾಗ 
ಓಡಿ ಬರುವ ಪ್ರೇಯಸಿಯು ನೀನಲ್ಲ 

ಕಾದ ಕಣ್ಣುಗಳಿಗೆ 
ತಂಪನೆರೆಯುವ ಭಾವ 
ಎದೆಗಪ್ಪಿ ಕಣ್ಣೀರ ಸುರಿಸಿ 
ನನ್ನೆದೆಯ ತೊಯ್ಸುತ್ತಿದ್ದ 
ನಿನ್ನ ಆ ಪರಿಯ ಅನುಭೂತಿಯ 
ಕ್ಷಣಗಳು ಮತ್ತೆ ಮರುಕಳಿಸುವುದೇ ಇಲ್ಲ 

ನೀ ರಾಧೆಯಾಗಿದ್ದ  ದಿನಗಳಲ್ಲಿ 
ನಾ ಮೊಹನನಾಗಲೇ ಇಲ್ಲ 

ಕಲಿಯುಗದಲ್ಲೂ ನನಗಾಗಿ 
ಯುಗ ಯುಗಗಳೇ ಕಾಯುವೆ 
ಎಂದು ನಂಬಿ ಕೆಟ್ಟೆನಲ್ಲ 

ಬರಿ ರಾಧೆಯೇ 
ಏಕೆ ಕಾಯಬೇಕು, 
ಬೇಯಬೇಕು ವಿರಹದಲ್ಲಿ?
ನೋವು ದುಃಖ  ವಿರಹ 
ವೇದನೇಗಳ ಸಮಪಾಲು 
ಮೋಹನನಿಗೂ ದಕ್ಕಲಿ

ನಿನ್ನ ಹರ್ಷಾ

Thursday, March 6, 2014

ಓದಲಾಗದ ಸಾಲುಗಳು


ಬಿಳಿ ಕಾಗದದ ಮೇಲೆ
ಮೂಡಿಸಿದ ಬಿಳಿ ಶಾಯಿಯ
ಸಾಲುಗಳು, ಓದದೇ ಹೋದೆ ನೀನು

ಕಪ್ಪಾಗದಿರಲಿ ನಿನ್ನ ಹೇಸರು
ಎಂದು ನನ್ನ ಭಾವನೆಗಳ ವ್ಯಕ್ತ
ಪಡಿಸದೇ ಹೋದೆ ನಾನು

ನನ್ನ ಮೌನ ಕ್ಷಣ ಮಾತ್ರ ಸಹಿಸದ
ನೀನು, ಒಎಂದು ಮ್ಮೆಯಾದರೂ
ಪ್ರಯತ್ನಿಸಬಹುದಾಗಿತ್ತಲ್ಲವೆ
ಅರಿಯಲು ನನ್ನ ಮೌನವನ್ನು

ಅರಿತು ಅರಿಯದೇ ಹೋದೆಯೋ ?
ಅರಿಯಲು ವಿಫಲವಾದೆಯೋ
ನಾನರಿಯೇ , ಆದರೂ ನನ್ನ
ಬದುಕಲಿ ಎಂದು ಮರೆಯದ
ಒಗಟಾದೆ ನೀನು

ನಿನ್ನ
ಹರ್ಷಾ
Thursday, February 13, 2014

ಕ್ಷಮಿಸದಿರು ನನ್ನ


ಮಲಗಲೇ ಬೇಕು, ನಡುರಾತ್ರಿ
ಸಮೀಪಿಸುತ್ತಿದೆ, ದಣಿವಾಗಿದೆ
ದೇಹಕ್ಕೆ ಆದರೂ ಮನಸೇಕೋ
ಚಡಪಡಿಸುತ್ತಿದೆ  ನೋವಿನಲಿ

ನಿನ್ನ ಹೃದಯದ ಬಡಿತ
ಮುಂದೆಂದು ಕೇಳಿಸದು
ಕಟುಕನಾಗಿರಲು ನಾನು ನಿನ್ನ
ನೋವು ಕೇಳದೇ ಹೋದೆ

ಕ್ಷಮಿಸದಿರು ನನ್ನ, ತಪ್ಪು
ಮಾಡಿರುವೇ ನಾನೂ
ಕೋರಗಬೇಕು
ಮರುಗಬೇಕು ನೀನು
ಅನುಭವಿಸಿದ ನೋವು
ನಾನು ಅನುಭವಿಸಲೇ  ಬೇಕು

ಕತ್ತಲೆಯ ರಾತ್ರಿಯಲಿ
ತಿಳಿ ಆಗಸದಲಿ, ಸುತ್ತಲಿನ
ಚುಕ್ಕಿಗಳ ನಡುವೇ ನಿನ್ನ
ಕಲ್ಪಿಸಿಕೊಳ್ಳಬೇಕು.
ಹಸಿಯಾಗಿಸಿ
ನಿರೇರೆಯಬೇಕು
ನಿನ್ನ ನೇನಪನ್ನು ಎಂದು
ಮಾಸದ ಹಾಗೇ ನನ್ನ
ಹೃದಯದ ಬಡಿತವಾಗಿಸಿ

ಹರ್ಷಾ ಬೀರಗೆ

Sunday, January 19, 2014

ಮೋಸಗಾರಅವನು ಮೋಸಗಾರ ಅಂತ
ನನಗೂ ಗೊತ್ತು, ತುಟಿ ಬಿಚ್ಚಿ
ಅವನಿಗೇ ಕೇಳಿದರೆ ಬಹುಶ
ಅವನು ನಿರಾಕರಿಸಲಾರ

ಅವನದೇನಿದ್ದರು ಕಣ್ಣ
ಸನ್ನೆಯಲ್ಲೇ ಆಕ್ರಮಣ
ಮಾತುಗಳಿಗೆ ಎಂದು ಸಿಗದ
ಜಾರಿ ಹೋಗುವ ಪೋರ

ಮುಗ್ಧ ಮಗುವೂ ಹೌದು
ಮೋಸದ ಲೇಪವಿಲ್ಲ
ಆದರೂ ಅರಿಯೇ ಮನ
ಸೆಳೆಯುವ ಮಾಟಗಾರ

ಮರೆಯಬೇಕೂ ಅಂದಾಗಲೆಲ್ಲಾ
ನೆನಪಾಗುವನು, ನನ್ನನ್ನೇ
ಮರೆತೇನು ಕೆಲವೊಮ್ಮೆ ಆದರೂ
ನೆನಪಾಗದೇ ಇರನು ಕ್ಷಣಕಾಲ


ಮಾಂತ್ರಿಕನವನು ನೋಟದಲ್ಲೇ
ತರಂಗಗಳನೆಬ್ಬಿಸುವನು
ಮನಸ್ಸಿನಲ್ಲಿ, ಆದರೂ ಅವನೇಷ್ಟು
ಪ್ರಶಾಂತನಾಗಿಹನು 

ನಿನ್ನ  ಮುರುಳೀಯ ನಾದಕ್ಕೆ ಎಲ್ಲಾ ಮರೇತು
ಓಡೋಡಿ ಬರಲೇ ಬೇಕು ನಾನು, ಓ ಹೃದಯ ಚೋರನೆ
ನನ್ನ ಕರೇಯುವ ಮೋದಲು ಒಮ್ಮೆಯಾದರೂ ಜಗದ 
ಪರಿವೇ ಮಾಡಬಾರದೇ ನೀನು


Wednesday, January 8, 2014

ಚೋರ್ ಬಜಾರು

ಮನಸು ಚೋರ್ ಬಜಾರು
ನಾನಿರಬೇಕು ಅದರಿಂದ ಹುಷಾರು

ಅದು ಬಯಸುವ ವಸ್ತು
ಯಾರಪ್ಪನದಾದರೇನು
ಸೊತ್ತು, ಕೇಳದು
ಯಾರ ಮಾತು
ಪಡೆದೇ ತೋರಿಸುವದು
ತನ್ನ ಹುಕುಮತ್ತು

ಯಾರದೋ ಅಂಗಳದ
ಗುಲಾಬಿ ನನ್ನಯ
ಮುಡಿಗೆ ಯಾಕೆ?
ಆದರು ಕೇಳದು
ಕೀಳುವ ಮುನ್ನ
ನಾನು ಮಾಡುವದು
ತಪ್ಪು ಅನಿಸದು.

ಲಗಾಮು ಹಾಕಲು
ಅದು ವಿವೇಕವಿರದ
ಕುದರೆಯೇನಲ್ಲ
ಬಲು ಜಾಣೇ.. ಆದರು
ಸ್ವಾರ್ಥಿ, ತನ್ನ ಖುಷಿಗಾಗಿ
ಯಾರಿಗೂ ನೋವು
ಕೊಡಲು ಹೇಸದು.

ಏ ದೇವರೇ ನಡೆಸು
ಏನಾದರೂ ಕರಾಮತ್ತು
ಠಿಕಾಣಿಗೇ ಬರಲಿ
ನನ್ನ ಮನಸು
ನಾನಲ್ಲವೇ ನಿನ್ನ
ಸೊತ್ತು?

ನಿಮ್ಮ
ಹರ್ಷಾ Saturday, October 26, 2013

ಕವಿತೇ

ಕೈಬಿಟ್ಟು ಹೋದಳು ಕವಿತೇ
ನನ್ನಿಂದ ದೂರವಾಗಿ
ಕಣ್ಣ ರೆಪ್ಪೇಯಲ್ಲಿ ಕಾಪಾಡಿದ್ದೇ
ಬಚ್ಚಿಟ್ಟಿದೆ ಯಾರಿಗೂ
ಕಾಣದ ಹಾಗೇ,
ಅರಿವಿರದೆ ಸರ ಸರನೆ
ಹರಿದು ಹೋದಳು ಕಣ್ಣೀರ
ಹನಿಗಳಲ್ಲಿ ಸೇರಿ

ಕೈತುತ್ತು ತಿನ್ನಿಸಿದ ಅಮ್ಮನ
ನೆನಪಾದಾಗ, ನನ್ನವಳ
ಮುಂಗುರುಳಿನಲ್ಲಿ ಚಂದ್ರನನ್ನು
ಹುಡುಕಲು ಇಣುಕಿದಾಗ,
ಕೆಲವೊಮ್ಮೆ ನಲಿವನಲಿ
ಕೆಲವೊಮ್ಮೆ ನೋವಿನಲಿ
ಮತ್ತೆ ಕೆಲವೊಮ್ಮೆ ಬೇಸರದ
ತೆಕ್ಕೆಯಲ್ಲಿ ಒಬ್ಬಂಟಿಗನಾಗಿ
ನರಳುತಿದ್ದಾಗ, ಅರಿಯದೇ
ಪ್ರತ್ಯಕ್ಷವಾಗುತಿದ್ದಳು ಕವಿತೇ
ಬಿಗಿದಪ್ಪಿ ನನ್ನ, ನೆರಳಾಗಿ
ಸಾಗುತಿದ್ದಳು ನಾನು
ಸಾಗಿದಡೆಯೆಲ್ಲ

ಏನಾಯಿತು ಕವಿತೇ
ಬಿಟ್ಟು ಹೋದದ್ದಾದರೂ ಯಾಕೆ?
ತುಂಬಾ ಪ್ರೀತಿಸಿದ ನನಗೇ
ವಿರಹ ವೇದನೆ ಯಾಕೇ ?
ಬಾ ಕವಿತೇ ಮರಳಿ ನನ್ನ
ಬಾಳಲ್ಲಿ ನೀನು, ಹರಿದು ಬರಲಿ ಮತ್ತೇ
ಬೇಳಕು ದೂಡಿ ಕತ್ತಲೇಯನ್ನು

ಹರ್ಷಾWednesday, September 4, 2013

ಪೂರ್ಣಗೊಳ್ಳದ ಕವನ

ಗೆಳೆಯಾ ನಮ್ಮಿಬ್ಬರ ನಂಟು
ಒಂಥರಾ ಪೂರ್ಣಗೊಳ್ಳದ ಕವನ
ನೂರು ಭಾವನೆಗಳು
ಮನದಲ್ಲಿ ಮೂಡಿದರು ಅಸ್ಪಷ್ಟತೆ,
ಗೊಂದಲ
ಸಾವಿರ ಸಲ ಪ್ರಯತ್ನಪಟ್ಟರು
ಕಾಗದದಲ್ಲಿ ಮೂಡಿಸಲು ವಿಫ಼ಲ.


ಕೆಲವು ಸಾಲುಗಳು ಮೂಡಿರಲು
ಗೊತ್ತಿಲ್ಲ,
ಅದೇಕೋ ಮನಸು
ಖಾಲಿ  ಖಾಲಿ.. ..
ಪದಗಳು
ಹುಡುಕಿ ಸುಮ್ಮನೇ ಜೋಡಿಸುವದು ?
ಕ್ಷಮಿಸು ನನಗೇ ಎಂದು ಇರಲಿಲ್ಲ 
ಆ ಖಯಾಲಿ
ಶಿಲ್ಪ ಕೆತ್ತುವ ಮೊದಲೇ ಶಿಲ್ಪಿ,

ರೂಪದರ್ಶಿಯು ಯೌವನ
ಕಳೆದು ಕೊಂಡ ಹಾಗೇ
ಅದೊಂದು ಅರ್ಧ ಕಡಿದ ಆವಸ್ಥೆ,

ಅತ್ತ ಶಿಲ್ಪವೂ ಅಲ್ಲ, 
ಇತ್ತ ಕಲ್ಲೂ ಅಲ್ಲ.
ನಿಮ್ಮ 
ಹರ್ಷಾ 

Sunday, June 9, 2013

ಭಾವ ಜೀವಿಯ ಮೌನ


ಮಾತು ಸಾವಿರ
ತುಟಿಯಂಚಿನಲ್ಲಿ
ಕುಣಿದಾಡಿ
ಹೊರಹೊಮ್ಮಲು 
ತವಕಿಸುತ್ತಿರಲು
ಮನಸೇ ನೀನಗೇಕೆ
ಇಷ್ಟ ಬರಿ ಮೌನ ?

ಆದ್ಯಾವ ಶಕ್ತಿಯೋ
ಅರಿಯೇ ನಿನ್ನಲ್ಲಿ
ನೋವು ನಲಿವುಗಳು
ನಿನ್ನ ಯಾಕೆ ಭಾದಿಸವು
ನನಗೇ ಪೀಡಿಸುವ
ನಿಶ್ಯಬ್ಧತೆಯ ವಿಷಗಳಿಗೆಗಳು
ನಿನಗೇಕೆ ಅನಿಸುವವು
ರಸನಿಮಿಷಗಳು 

ಮನಸೇ,
ನಿನಗೇಕೆ ಇಷ್ಟ
ಬರಿ ಮೌನ,
ಕಾನನದ ನಡು
ಹೆದರಿದ ಹೆಬ್ಬುಲಿಯ ಹಾಗೇ
ನಾನು ಒದ್ದಾಡುತ್ತಿರಲು,
ನಿರ್ಭಯ
ಕೋಗಿಲೆಯ ಹಾಗೇ
ಹಾಡುತ್ತಿರುವೆ
ವಸಂತಗಾನ!

ನಿಮ್ಮ
ಹರ್ಷಾ 

Wednesday, March 27, 2013

ಹುಡುಕಿ ತಾ ನನ್ನ


ಹುಡುಕಿ ತಾ ನನ್ನ,
ಗೆಳತಿಯೇ
ಕಳೆದು ಹೋಗಿರುವೆ ನಾನು!

ಸುತ್ತಲಿನ ಜಂಜಾಟದಲ್ಲಿ ಸಿಗದೇ
ಹೋಗಿರುವೆ ನಾನು!

ಕೈಗೆಟುಕದ ಬಿಸಿಲ್ಗುದರೆಯ
ಬೆಂಬತ್ತಿ ದಣಿದು ಹೋಗಿರುವೆ.
ನನ್ನ ಕೈಹಿಡಿಸಿ ಹೊರಗೆ ದಾರಿ
ತೋರಿಸು ಓಲವೇ

ಮೋಹಪಾಶದಿ ನನ್ನ
ಬಿಡಿಸುವ
ಗುರುವಾಗೂ,
ಅರಿವಾಗು ಒಲವೇ..

ಹುಡುಕಿ ತಾ ಓಲವೇ
ಕಳೆದು ಹೋಗಿರುವೆ ನಾನು..

ಅರಿವು ಸಾಗುವ ದಾರಿ
ಗುರುವಿದ್ದರು ಕಾಣೆನು
ಮಾಯೆ ಪೊರೆಯೆ ಸಲುಹಿ
ಕುರುಡನಾಗಿ ನಿಂದಿಹೆನು
ವಿಷವೆಂದರಿತು,
ಸಿಹಿರಸದ
ಹಾಗೇ ಸವಿಯುತ್ತಿರಲು
ಮನವೇ,  ಒಲವೇ,
ಕೈಹಿಡಿದು
ನಡೆಸು ನನ್ನ
ದಾರಿತಪ್ಪುವ ಮೊದಲು,
ಹಿಂತಿರುಗಿ ಬರಲಾರಾದಷ್ಟು
ಮುಂದೆ ಹೋಗುವ  ಮುನ್ನ..

ನಿಮ್ಮ
ಹರ್ಷಾ


Friday, March 22, 2013

ಅವನು

ಅವನು ಬದುಕೀದ್ದಾಗ
ಒಮ್ಮೇ ಕಣ್ಣೆತ್ತಿ  ಕೂಡಾ
ನೊಡಲಿಲ್ಲಾ ಇವಳು
ಅವನ ಪ್ರೇಮ ಪತ್ರಗಳು

ಅವನು ಸತ್ತ ಮೇಲೆ
ಗೋರಿಯ ಬಳಿ
ಕುಳಿತು ಓದಿ ಬಿಕ್ಕಿ
ಬಿಕ್ಕಿ ಅತ್ತಳು

ನಿಮ್ಮ
ಹರ್ಷಾ 

Saturday, March 16, 2013

ಏಕಾಂಗಿ

ನೀ ಬರಲಾರೆ ತಿರುಗಿ
ದೂರ ದೂರ ಹೋದವಳು!!
ಶಬ್ದದ ವೇಗವ ದಾಟಿ
ನಿಶ್ಯಬ್ಧವಾಗಿ ಹೋದವಳು!!
ಹಸಿನಗೆಯ ಮುಚ್ಚಿಟ್ಟು,
ಹುಸಿಕೋಪವ ತೋರುತ್ತಾ
ಹಸಿರಾಗಿಸುವಳು  ನನ್ನ ಬರಡು
ಬಾಳನ್ನು.
ಎಂದು ನಂಬಿರಲು,
ನಗು-ನಗುತ್ತಲೇ ಹೋದಳು!
ಪಿಸುಮಾತನ್ನು ಹೇಳದೇ
ಗೆಜ್ಜೆ ಕಾಲಲ್ಲಿ  ಹೋದರೂ
ಹೆಜ್ಜೆಯ ನಾದದ ಹುಟ್ಟಡಗಿಸಿ
ಸದ್ದು ಮಾಡದೇ ಹೋದಳು!
ತೆರೆದ ಕಣ್ಣಲಿ ಕಂಡರೂ
ರೆಪ್ಪೆ ಮೀಟುಕಿಸುವ ಮುನ್ನ
ಕಣ್ಮರೆಯಾಗಿ ಹೋದಳು!
ಏಕಾಂಗಿಯಾಗಿ ಬಿಟ್ಟು ನನ್ನ.........

ನಿಮ್ಮ

ಹರ್ಷಾ 

Wednesday, January 2, 2013

ಸೂರ್ಯಾಸ್ತದ ಸಮಯ

ಸೂರ್ಯಾಸ್ತದ ಸಮಯ
ಅವನ ಬೆಳಕಿನ ಸನಿಹ
ಕುಳಿತು ಬಯಸಿತು ಮಗುವು
ಒಂದು ಹೊಸ ದಿನವು.

ಪುಟ್ಟ ಹೇಳಿಕೊಳ್ಳುತಿತ್ತು , ತನ್ನಲ್ಲಿ  ತಾನೇ
ಅಮ್ಮ ಮಾಡಬೇಕು ಒಂದು ಬಿಸಿ ರೊಟ್ಟಿ!
ತುಂಡು ನನಗೆ ಉಳಿದುದು ಅಣ್ಣ, ಅಪ್ಪ, ಅಮ್ಮಗೆ ಕೊಟ್ಟೆ
ಮತ್ತೇ ಹಸಿವಿಗೇ ? ಇರುವದು ಭಿಕ್ಷೆ ತಟ್ಟೆ!

ಯಾರ ಮನೆಯ ಮುಂದೇ ಕೈಚಾಚಿದರು
ಅಂದರೂ ಪರವಾಗಿಲ್ಲ ದರಿದ್ರಗಳು..
ಅನ್ನಬಾರದು ಪಾಪದ ಪೀಡೆಗಳು..
ಹಳಸಿದನ್ನು ಕೊಟ್ಟರೂ ಹೇಳುವೆ ಧನ್ಯವಾದಗಳು.

ಅಷ್ಟರಲ್ಲಿ ಸೂರ್ಯ ಮುಳುಗುತ್ತಿರಲು
ಮಗು ಹೇಳಿತು, ಇನ್ನೂ ಸ್ವಲ್ಪ ತಾಳು ಮಾಮಾ..
ಎದುರು ಮನೇ ನಿಮ್ಮಿ ಕಾರು ಒರೆಸುವ ಬಟ್ಟೇ
ಅದು ಕೊಟ್ಟರೂ  ನಾ ತುಂಬಾ ಸಂತೋಷಪಟ್ಟೆ!
ಇನ್ನೂ ಏನೋ ಹೇಳುತಿರುವಾಗಲೇ ಮಗು..
ಕಛೇರಿ ಕೆಲಸ ಮುಗಿಸಿದ ರವಿ, ಅಸ್ತಂಗತನಾಗುತ್ತಲೇ
ಹೇಳಿದ,
ಬರೆದಿಡಪ್ಪ ಮನವಿ..
ನಾಳೆ ಕೊಡುವಿಯಂತೆ!!

ನಿಮ್ಮ
ಹರ್ಷಾ

ನೆನಪು

ನನ್ನ ಮನದ ಮೂಲೆಯಲ್ಲಿ
ನಿನ್ನ ನೆನಪೆ ತುಂಬಿದೆ!
ಮರೆಯಬಯಸುವೇ ಆದರೇನು
ಹೊಸಕಾವ್ಯವಾಗಿ ನಿಂದಿದೆ!

ನಿನ್ನ ಮಾತು ನನ್ನ ಮೌನದಿ
ಕಥೆಯನೊಂದು ರಚಿಸಿದೆ!
ನಿನ್ನ ನಗುವ ಚಿತ್ರ (ಮುಖವು) ಕಂಡು
ನನ್ನ ಮುಖವು ಅರಳಿದೆ!

ಜಗವು ಒಂದು ಓಟದ ಆಟ
ಬೇಗ ಗುರಿಯಾ ತಲುಪಿದೆ
ಸ್ವಲ್ಪ  ನಡಿದರು ಆಯಾಸಗೊಳ್ಳುವ
ನೀನು ಹೇಗೆ ಓಡಿದೆ?

ಜಗದ ಸಂತೆಯಲ್ಲಿ ನಿನ್ನ
ಕಂತೆ ಬೇಗ ಮುಗಿಯಿತೇ?
ಗುಲಾಬಿಯಂತೆ ಸಣ್ಣ ಬದುಕನು
ಬಣ್ಣದಿಂದ ರಚಿಸಿದೆ!

ನಿಮ್ಮ
ಹರ್ಷಾ
(Light 11 May 1998)

ಹೆಜ್ಜೆಗುರುತು

ಹೆಜ್ಜೆಗುರುತು ಮೂಡಿಸುವ
ಹೆಬ್ಬಯಕೆಯಲ್ಲಿ ಹೆಜ್ಜೆ
ಹೆಜ್ಜೆಗೂ ತುಳಿದರು.

ಅಳಿಸು ಹೋಗುವ
ಕೆಸರಿನಲ್ಲಿ ಗುರುತು
ಕಂಡು ಮೆರೆದರು

ನೆತ್ತರಿನ  ಕಾಲುವೆ ಹರಿಸಿ
ಸಾಮ್ರಾಜ್ಯ ಕಟ್ಟಿ
ಮೆರೆದರು!


ಕಾಲಚಕ್ರದಲ್ಲಿ ತಾವೊಂದು
ಘಳಿಗೆ ಎನ್ನುವದು
ಮರೆತರು!

ತಾ ಹೆಣೆದ ಬಲೆಯಲ್ಲಿ
ಉಸಿರು ಕಟ್ಟಿ ತಾನೇ
ಮಡಿದರು!

ಅಳಿದು ಹೋದವು
ಹೆಜ್ಜೆಗುರುತು
ಸಾಮ್ರಾಜ್ಯ ನಶಿಸಿ ಹೋದವು!

ಸಿಂಹಾಸನ
ಬಿರುದುಗಳು
ಎಲ್ಲಾ ಮರೇತು ಹೋದವು!

ಹೆಜ್ಜೆಗುರುತು
ಮೂಡಿಸು
ನನ್ನ ಕಂದ
ಬೇಡವೆನ್ನಲಾರೆ
ನಿನ್ನ
ನಾನೆಂದೂ

ಕಾಲಚಕ್ರದಿ
ನಶಿಸುವ ಮೋಹದ
ಸಾಮ್ರಾಜ್ಯ ಕಟ್ಟದಿರು.

ಹೃದಯನಾಳುವ
ದೊರೆಯಾಗು,
ನನ್ನ ಮಗುವೇ
ಮೂಡಿಬರಲಿ ಏಲ್ಲರ
ಹೃದಯದಲಿ....
ಎಂದೂ ಅಳಿಯದ
ಹೆಜ್ಜೆಗುರುತು!!

ನಿಮ್ಮ
ಹರ್ಷಾTuesday, January 1, 2013

ಕೋರಿಕೆ


ಓ ಮನಸೇ
ಕಾಡದಿರು ನನ್ನ
ನಾನೊಂದು ಮುಗ್ಧ
ಜೀವ

ಕಲಿಸದಿರು
ಪರಿ ಪರಿಯ ಮಾತು
ಪಸರಿಸದಿರಲಿ
ಹೃದಯದಿ ವಿಷವ
ಅಮ್ಮ ಕಲಿಸಿದ
ತೊದಲು ಮಾತುಗಳು
ಕಪಟವರಿಯದ
ಸುಂದರ ಮುತ್ತುಗಳು
ಬೆಳೆ-ಬೆಳೆಯುತ
ಕಲಿತೇ ನೀನು  ಏನೆಲ್ಲಾ
ವ್ಯಂಗ್ಯ ಕಪಟ ವಿಷಕಾರುವ
ಮಾತುಗಳು
ಓ ಮನಸೇ ಸಾಕಿನ್ನು
ಮಗುವಾಗಬೇಕು ನಾನು
ದಯೆತೋರು ಕೋರುವೆ
ನೀಡದಿರು  ನೋವು 
ಬಿತ್ತದಿರು ನನ್ನಲ್ಲಿ
ಮುಂದೆಂದು ಬೇವು

ನಿಮ್ಮ
ಹರ್ಷಾ