ಅಮ್ಮ, ಸೋತಿರುವನು ನಿನ್ನ ಮುದ್ದು ಕಂದ, ಕಾಲದ ಚಕ್ರವ್ಯುಹದಲಿ ಸಿಲುಕಿ ಏಕಾಂಗಿಯಾಗಿ .. ಬತ್ತಿ ಹೋಗುವ ಕನಸಿನ ಚಿಲುಮೆಯನು ಕಂಡು, ನಲುಗಿ ಹೋಗಿದೆ ಜೀವ ಸೋಲು ಸಾಕಾಗಿ .... ನನ್ನ ಕಣ್ಣಿಗೆ ಕನಸು ಕಟ್ಟುವ ಪರಿಯ ತಿಳಿಸಿ, ನನ್ನ ಬದುಕಿಗೆ ಸುಂದರ ಮುನ್ನುಡಿ ಬರೆದೆ ... ನೀನಿರುವಾಗ ಸೋಲಿನಲ್ಲು ನಲಿವಿತ್ತು ..ನನ್ನ ಬದುಕಿನಲಿ ಈಗ ಗೆಲುವಿನಲ್ಲು ನಲಿವಿಲ್ಲ ಅಮ್ಮ .... ಮರಳಿ ಬಾ ಮತ್ತೊಮ್ಮೆ ನನ್ನ ಬದುಕಿನಲಿ .. ತಲೆ ಸವರಿ ಮುತ್ತೊಂದ ಹಣೆಯ ಮೇಲೆ ಕೊಟ್ಟು ನಿಮ್ಮ ಹರ್ಷಾ
ನಿನ್ನ ನೆನಪು ಇಂದು ಅಮ್ಮ ನನಗೆ ಮತ್ತೆ ಮತ್ತೆ ಕಾಡುತಿದೆ..... ನೀನಿಲ್ಲದ ಬದುಕು ಏಕೋ ಇಂದು ತುಂಬಾ ಬೇಸರ ಎನಿಸುತಿದೆ.... ರೆಪ್ಪೆ ಮುಚ್ಚಲು ಹೆದರುವದು ಕಣ್ಣೀರ್ ಹನಿಗಳು ಯಾರಿಗೂ ಕಾಣದಿರಲಿ ಎಂದು ತಲೆಯ ಮೇಲೆ ಯಾರಾದರೂ ಕೈ ಇಟ್ಟರು ಹೀಗೆ, ಹಿಂತುರುಗಿ ನೋಡುವೆ ನೀನಿರಬಹುದು ಎಂದು ಮುಂಜಾವಿನಲಿ ರಂಗೋಲಿ ಹಾಕುವ ಹೆಣ್ಣುಮಕ್ಕಳಾತ್ತ ಕದ್ದು ನೋಡುವೆ ನಿನ್ನ ಮುಖ ಕಾಣಿಸಬಹುದು ಎಂದು ಪ್ರತಿ ದಿನ ಬಹಳ ಹೊತ್ತಿನವರೆಗೂ ಮಲಗುವೆ ನೀನು ಹಣೆಯ ಮೇಲೆ ಮುತ್ತಿಕ್ಕಿ ಎಬ್ಬಿಸುವೆಯೆಂದು
ಸುತ್ತಲಿನ ಸುಂದರ ಜಗತ್ತಿನಲ್ಲಿ ಸಂತೋಷವೇ ನನ್ನ ಮೈ ಮರೆಸುತಿದ್ದಾಗ ಅರೆ ಗಳಿಗೆ ಅಮ್ಮ ನಿನ್ನ ಮರೆತಿದ್ದೆ. ಕಣ್ಣು ಕೋರೈಸುವ ಬೆಳಕು ದಾರಿ ತಪ್ಪಿಸುವ ಮನಸು ಹರೆಯದ ನೂರಾರು ಕನಸುಗಳ ನಡುವೆ, ಅಮ್ಮ ನಿನ್ನ ಮರೆತಿದ್ದೆ. ನಶ್ವರ ಜಗತ್ತಿನ ನಿಶೆಯಲಿ ಅರೆ ಗಳಿಗೆ ನನ್ನನ್ನೇ ನಾನು ಮರೆತಾಗ ಹುಚ್ಚಾಗಿ, ಹೌದಮ್ಮ ನಿನ್ನ ಕೂಡಾ ಮರೆತಿದ್ದೆ. ಸಾಕಾಗಿ ಹೋಗಿದೆಯಮ್ಮ ಜಗತ್ತಿನ ಚಿತ್ರ ವಿಚಿತ್ರ ದ್ರಶ್ಯಗಳು, ಕನಸಿನೊಳಗೊಮ್ಮೆ ಬಂದು ಕಣ್ಣಿರ ಒರೆಸಮ್ಮ ಸಾಕಾಗಿದೆ ನಿನ್ನ ಕಂದ ನೀಗೆ ಬದುಕಿಂದು. ನಿಮ್ಮ ಹರ್ಷ
Comments