Posts

Showing posts from 2008

ನಾನು ಮತ್ತು ಅಮ್ಮನ ನೆನಪು

Image
ಸುತ್ತಲಿನ ಸುಂದರ ಜಗತ್ತಿನಲ್ಲಿ ಸಂತೋಷವೇ ನನ್ನ ಮೈ ಮರೆಸುತಿದ್ದಾಗ ಅರೆ ಗಳಿಗೆ ಅಮ್ಮ ನಿನ್ನ ಮರೆತಿದ್ದೆ. ಕಣ್ಣು ಕೋರೈಸುವ ಬೆಳಕು ದಾರಿ ತಪ್ಪಿಸುವ ಮನಸು ಹರೆಯದ ನೂರಾರು ಕನಸುಗಳ ನಡುವೆ, ಅಮ್ಮ ನಿನ್ನ ಮರೆತಿದ್ದೆ. ನಶ್ವರ ಜಗತ್ತಿನ ನಿಶೆಯಲಿ ಅರೆ ಗಳಿಗೆ ನನ್ನನ್ನೇ ನಾನು ಮರೆತಾಗ ಹುಚ್ಚಾಗಿ, ಹೌದಮ್ಮ ನಿನ್ನ ಕೂಡಾ ಮರೆತಿದ್ದೆ. ಸಾಕಾಗಿ ಹೋಗಿದೆಯಮ್ಮ ಜಗತ್ತಿನ ಚಿತ್ರ ವಿಚಿತ್ರ ದ್ರಶ್ಯಗಳು, ಕನಸಿನೊಳಗೊಮ್ಮೆ ಬಂದು ಕಣ್ಣಿರ ಒರೆಸಮ್ಮ ಸಾಕಾಗಿದೆ ನಿನ್ನ ಕಂದ ನೀಗೆ ಬದುಕಿಂದು. ನಿಮ್ಮ ಹರ್ಷ

ಪ್ರೀತಿಯ ಕುಮಾರನಿಗೆ

Image
ಪ್ರೀತಿಯ ಕುಮಾರನಿಗೆ, ನನ್ನ ಬದುಕಿನಲ್ಲಿ ನಾನು ಎಲ್ಲಕಿಂತ ಹೆಚ್ಚಾಗಿ ಪ್ರೀತಿಸದ ವ್ಯಕ್ತಿ ನೀನು, ನಿನಗೂ ಗೊತ್ತಿರಬಹುದು, ನೀನೆ ಹೇಳಿದ್ದೆ ಅಂದು ರಾತ್ರಿ ನೀನು ನಿನ್ನ ತಮ್ಮನ ಜ್ಯೋತೇ ಮೂವಿಗೆ ಹೋಗಬೇಕಾದರೆ ನಿನ್ನ ಮೊಬೈಲ್ ಗೆ ಅದ್ಯವಾದೋ ಮಿಸ್ ಕಾಲ್. ನಿಜ ಹೇಳ್ತೀನಿ ನನ್ನಾಣೆಗು ಅದೊಂದು ರಾಂಗ್ ನಂಬರ್ ಕಾಲ್ ಅಷ್ಟೇ. ನೀನು ದೊಡ್ಡ ಹಟಮಾರಿ ಮರುದಿನ ಎಷ್ಟೊಂದು ಸಲ ಕಾಲ್ ಮಾಡಿದ್ದೆ ಕೊನೆಗೆ ನಾನೊಮ್ಮೆ ಫೋನ್ ಎತ್ತಿದಾಗ ನಿನ್ನ ಜ್ಯೋತೇ ನಾನು ಮಾತಾಡಿದ್ದೆ.ನಿನ್ನ ಆ ಮಾತಾಡೋ ಶೈಲಿ ನಿಜಕ್ಕೂ ಕಣೋ ಯಾವುದೇ ಹುಡುಗಿ, ಎಷ್ಟೇ ಕನ್ಸರ್ವೇಟಿವ್ ಆಗಿರಲಿ ನಿನ್ನ ಮಾತು ಕೆಳಿದರೆ ಢಮಾರ್, ಮತ್ತೆ ಮತ್ತೆ ಮಾತಾಡಿಸಬೇಕು ಅನಿಸುತ್ತೆ. ಮಿಸ್ ಕಾಲ್ ನಿಂದಾದ ಪರಿಚಯ ಬೇರೆಯವರಿಗೆ ಯಾವಾಗಲು ಯುವರ್ ಕಾಲ್ ಈಸ್ ವೇಟಿಂಗ್ ಅನ್ನೋ ಮಟ್ಟಕ್ಕೆ ತುಂಬಾ ಮಾತಡಿದ್ದಿವಿ,ಬಹಳಷ್ಟು ಸಲ ನಿನಗೆ ಗೊತ್ತಿರದ ವಿಷಾಯನೇ ಇಲ್ಲ ಅನಿಸುವ ಮಟ್ಟಿಗೆ ನಿನ್ನ ಕನ್ವಿನ್ಸಿಂಗ್ ಸ್ಟೈಲ್ ನನಗೆ ತುಂಬಾನೆ ಹುಚ್ಚು ಹಿಡಿಸುತಿತ್ತು. ನಾವಿಬ್ಬರು ಕೊನೆಗೊಮ್ಮೆ ಭೇಟಿ ಆದಾಗ ಒಮ್ಮೆಲೇ ನಿನ್ನ ಮುತ್ತಿಡಬೆಕು ಅನ್ನುವ ಭಾವನೆ ಉಕ್ಕಿತಾದರೂ, ಫ್ರೀ ಆಗಿ ಸಿಗೋ ಹುಡುಗಿ ಅನ್ಕೊಬಾರದು  ಅಂತ ಸುಮ್ಮನಾಗಿದ್ದೆ . ಥೂ ನೀವು ಕವಿಗಳು ಹೀಗೆನಾ, ಬರಿ ಭಾವನೆ ಕೆಡಿಸಿ ಕಾಡುವ ನೀಚರೇನೋ ಅಂತ ಅನಿಸುವ ಮಟ್ಟಿಗೆ ನನ್ನ ಭಾವನೆಗಳ್ಲನ್ನು ಕೆಣಕಿ ಒಮ್ಮೆಯೂ ಮುಟ್ಟದೆ ಹೋದ ಪಾಪಿ ನೀನು.ಪ್ರತಿ

ನೆನಪಿನ ಮಾತು

Image
ಯಾವ ನೆನಪಿನ ಮಾತು ಇಂದು ಕಾಡೀತು ಗೆಳತಿ, ಎಂದಿನಿಂದ ನೀನು ಆದೇದೊಡ್ಡ ಹೃದಯದ ಒಡತೀ? ಹೋದ ವರುಷದ ಚಳಿಗಾಲದ ರಾತ್ರಿಯೊಮ್ಮೆನನ್ನ ಅಪ್ಪಿಕೊಂಡು, ಮುತ್ತುಗಳಸುರಿಮಳೆ ಸುರಿಸಿದವಳು ನೀನೆ ಅಲ್ಲವೇ ಹುಡುಗಿ ? ಮಳೆಗಾಲದಲಿ ನಿಮ್ಮೋರಿಗೆ ಹೊರಟಾಗ ನನ್ನ ಬಿಟ್ಟು ಎರಡು ದಿನ, ನಿನ್ನ ಬಿಟ್ಟುಹೇಗಿರಲಿ ಎಂದು, ಮಳೆ ಹನಿಗಳಿಗಿಂತ ನಮ್ಮಕಣ್ಣಿರೆ ನೆಲವನ್ನೂ ನೆನೆಸಿದ್ದು ಹೇಗೆ ಮರೆತೆ ನೀನು? ಬೇಸಿಗೆಯಲ್ಲೊಮ್ಮೆ ನಾವಿಬ್ಬರು ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು ಚುಕ್ಕಿಗಳನ್ನುಹೆಕ್ಕಿ, ಹೆಕ್ಕಿ ಎಣಿಸಿದ್ದು, ಮುಂಜಾನೆ ಎರಡು ಚುಕ್ಕಿ ನಿನ್ನ ಕಣ್ಣಲ್ಲೇ ಇದೆ ಎಂದು ನಾನು ಆಂದಾಗ, ನನ್ನ ಹುಚ್ಚನೆಂದು ನಕ್ಕಿದ್ದು ನೆನಪಿದೆ ತಾನೇ? ನಿನ್ನ ನಾ ಮರೆತಿರುವೆ, ಅದೊಂದು ಕೆಟ್ಟ ಕನಸು, ನಿನಗಾಗಿ ಇಲ್ಲ ನನ್ನ ಈ ಮನಸು.. ಎನ್ನುವ ನಿನ್ನ ತುಟಿಗಳಲ್ಲಿ ಇನ್ನೂ ನನ್ನ ಮುತ್ತಿನ ಮತ್ತಿದೆ, ನಿನ್ನ ಆ ಕಣ್ಣುಗಳಲ್ಲಿ ಇಂದಿಗೂ ಕಾಣುತ್ತಿದೆ ನನ್ನ ಪ್ರತಿಬಿಂಬ, ನಿನ್ನ ನಾನು ನಂಬಲೇ? ಆಥವಾ ನಿನ್ನೊಳಗಿರುವ ನನ್ನ ನಾ ನಂಬಲೇ ಹೇಳು ಗೆಳತಿ? ನಿಮ್ಮ ಹರ್ಷಾ

ಹೃದಯ ವೀಣೆ ಮೀಟಿದಾಗ

Image
ಯಾಕೆ ಆರ್ಥವಾಗದೇ ಹೋಯಿತು ಗೆಳತಿ ನನ್ನ ಮೌನದ ಮಾತುಗಳು. ಯಾಕೆ ಸ್ಪಂದಿಸದೇ ಹೋಯಿತು ನಿನ್ನ ಆ ವೀಣೆಯ ತಂತಿಗಳು ನನ್ನ ಬಿಂಬವ ಹುಡುಕಲು ಕಾತರಿಸಿದೆ ನಿನ್ನ ಕಣ್ಣುಗಳಲ್ಲಿ ಒಂದು ಸಲ ತಲೆ ಎತ್ತಿಕುಡಾ ನೋಡಲಿಲ್ಲ ಯಾಕೆ ನನ್ನ ಕಣ್ಣುಗಳಲ್ಲಿ ದೂರದ ಉರಿಂದ ಓಡೋಡಿ ಬಂದೆ ಗೆಳತಿ ನಿನ್ನ ವೀಣೆಯ ನಾದ ಕೇಳಿ ನಾನಿರುವಾಗ ನಿನ್ನೆದುರು ಯಾಕೆ ನಿನಗೆ ಮೌನ ರಾಗವೇ ಹಿತವಾಯಿತು ಗೆಳತಿ ನಿನ್ನ ಮೌನ ರಾಗ, ನನ್ನ ಉಸಿರು ಕೊಲ್ಲುವ ಮೊದಲೇ ಒಮ್ಮೆ ಮೀಟಾಬಾರದೆಕೆ ಗೆಳತಿ ನಿನ್ನ ವಿಣೆಯ ತಂತಿ ಸುತ್ತಲಿನ ನಿಶಬ್ದದ ಭೀತಿಯನೂ ಹೋಗಲಾಡಿಸಿ ಒಮ್ಮೆಲೇ ಯಾಕೆ ಹೊರಬರಬಾರದು ನಮ್ಮಿಬ್ಬರ ಪ್ರೀತಿ ನಿಮ್ಮ ಹರ್ಷಾ 

ಅವಳ ನೆನಪು

Image
ತಂಗಾಳೀ ನಡುವಾಗ ಕುಳಿತಾಗಲೆಲ್ಲಾ...... ಮರೆಯಬೇಕು ಅಂದುಕೊಂಡಾಗಲೆಲ್ಲಾ. ಒತ್ತೊತ್ತಿ ಬರುತಾವ ಅಚ್ಚಾದ ನೆನಪು. ಆ ನಿನ್ನ ಮಲ್ಲಿಗೆ ಕಣ್ಣಿನ ಹೊಳಪು ಆ ನಿನ್ನ ಸುಂದರ ತುಟಿಗಳ ಕೆಂಪು ನನ್ನ ಸುತ್ತಲೆಲ್ಲಾ ಬಿಸಿ ಸ್ಪರ್ಶವಾಗಿ..... ಹತ್ತಿರದಲೇ ನಿಂತು ಮಾತಾಡಿದ ಹಾಗೇ... ಹಣೆಯ ಮೇಲೊಂದು ಮುತ್ತಿಟ್ಟ ಹಾಗೇ.. ದೂರದಲಿ ನಿಂತು ಅಣಕಿಸುವ ಹಾಗೇ.... ಎಚ್ಚೆತ್ಟು ಕೊಳ್ಳುವಷ್ಟರಲ್ಲಿ ಮರೆಯಾಗುತ್ತವೆ ಸುತ್ತಲಿನ ತಂಗಾಳಿಯಲ್ಲಿ ನೀರ ಹನಿಗಳಾಗಿ ಲೀನವಾಗಿ ಹೋಗುತ್ತವೆ ನೋಡುತ್ತಿರುವ ಹಾಗೇ ಎದ್ದು ನಡೆಯುವಾಗ ಹನಿಹುಲ್ಲು ಮುತ್ತಿಟ್ಟರು ಅವಕ್ಕಾಗಿ ನೋಡುವೆ ಪಾದಗಳತ್ತ. ನೀ ಕಾಣದೆ ಇರಲು ಸುಸ್ತಾಗಿ ನುಕುತ್ತಿರುವೆ ಬದುಕ ಕ್ಷಣಗಳು ಒಂದೊಂದನ್ನೇ ಎಣಿಸುತ್ತಾ. ನಿಮ್ಮ ಹರ್ಷಾ

ದೂರದ ಕನಸೀನೂರಿಗೆ..

ದೂರದ ಕನಸೀನೂರಿಗೆ, ಕ್ಷಮಿಸು ನನ್ನ ನಾ ಬರಲಾರೆ ನಿನ್ನ ಜೊತೆ ನಾ ಗೆಳತಿ... ಸೋತು ಸಾಕಾಗಿ ಹೋಗಿದೆ ನನಗೆ ನೈಜ ಜಗತ್ತೇ, ಹೆಳುವರು ಈ ಜಗತ್ತು ಮತ್ತು ಇಲ್ಲಿರುವದು ಎಲ್ಲ ನೈಜ ಅಂತೆ. ಎಲ್ಲ ಸುಳ್ಳಿನ ಕಂತೆ ತುಂಬಿ ಹೋಗಿದೆ ಇಲ್ಲಿ, ಹೇಳು ಯಾವುದು ವಾಸ್ತವ, ಯಾವುದು ಸುಳ್ಳು ತಿಳಿಯದೇ ಸುಸ್ತಾಗಿ ಹೋಗಿದ್ದೇನೆ ನಾನು.. ನಿನ್ನ ಕನಸೀನೂರಿನಲ್ಲಿ ಹೇಳು ಹೊಟ್ಟೆ ತುಂಬಲ್ಲು ಮಾಡಬೇಕಾಗಿಲ್ಲವೇ ದೀನಪೂರ್ತಿ ಕಂಪ್ಯೂಟರ್ ಜೊತೆ ಗುದ್ದಾಟ..? ಖುಷಿ ಪಡಲು ಒದ್ದಾಡಬೇಕಾಗಿಲ್ಲವೆ ಎಮ್. ಜಿ ರೋಡು ಪಿಜ್ಜಾ ಹಟ್ ಗಳ ಸಹವಾಸ ಮುರು ತಾಸು ಬೇಸರ ದೂಡಲು ಆಸರೆ ಬೇಡವೇ ಮುಲ್ಟಿಪ್ಲೆಕ್ಷಗಳ ನಿಬಿಡ ಜನರ ಕಾಟ..? ಹಾಗಿದ್ದರೆ ಹೇಳು, ಇಂದೆ ಓಡೋಡಿ ಬರುವೆ ನಿನ್ನ ಸನಿಹ , ಈ ವಾಸ್ತವದ ಜಗತ್ತನ್ನು ಬಿಟ್ಟು ನಿನ್ನ ಹಿಂದೆ ಓಡೋಡಿ ಬರುವೆ ಇಂದೆ ಕೈ ಹಿಡಿದು ಕರೆದೊಯ್ಯಿ ನನ್ನ ನಿನ್ನ ಕನಸಿನೂರಿಗೆ.. ಹರೀಶ್ ಎನ್. ಬೀರಗೆ

ಬೇಸರ

ಬೇಗ ಮುಳುಗು ಸೂರ್ಯಾನೆ ಸಂಜೆಯಾಗಲೀ ಇಂದು.. ಸಾಗಿ ಹೋಗಲಿ ನನ್ನ ಬದುಕಿನ ದಿನವೂ ಮತ್ತೊಂದು...... ಕಿಟಕಿಯಿಂದ ಕಣ್ಣು ಹಾಯಿಸಿ ನೋಡುತ್ತೇನೆ ಮುಂಜಾವಿನಲಿ ಎದ್ದು, ಮಂಜಿನ ಸೀರೆ ಉಟ್ಟ ಸುಂದರ ಪರ್ವತಗಳು, ನನ್ನ ನೋಡಿ ನಾಚಿದಂತೆ ದೂರದಲಿ..... ಕಣ್ಣು ಬಿಡದೆ ಕೆಳುತ್ತಾನೆ ಗೆಳೆಯ, ಭಾಯಿ ಶೇವಿಂಗ್ ಆಯಿತಾ, ಇವತ್ತಿಂದು ಏನು ಮೆನೂ ?, ಬರಿ ಇರುವಾಗ ಬ್ರೆಡ್ ಮತ್ತು ಮ್ಯಾಗಿ ಎರಡೇ ಆಪ್ಶನು (option)................ ಇಲ್ಲಿನ ರಸ್ತೆಗಳು ನೋಡು, ಎಷ್ಟು ಸುಂದರ ಇಲ್ಲಿನ ಪಾರ್ಕುಗಳು, ಇಲ್ಲಿನ ಮಾತೆ ಬೇರೆ ಎಂದು ಪ್ರತಿ ಸಲ ಆವನೂ ಹೇಳುವಾಗ, ಕೋಪದಿಂದ ಮುಷ್ಟಿ ಬಿಗಿಯಾಗುತ್ತದೆ ತಡೆಯುತ್ತೇನೆ ಮನಸಿನಲ್ಲಿ ಬೇಡ ತಾಳು ಕನ್ನಡ ಮಾತಡಲು ಇರುವದೋಂದೇ ಆಪ್ಶನು (option) ಏನೇ ಅನ್ನಲಿ ನಮ್ಮ ಪೂಣೆ ಮಾತೆ ಬೇರೆ ಯಾವ ಬಸ್ ನಲ್ಲಿ ಕುಳಿತರೂ ಎಲ್ಲಾ ನಮ್ಮವರೇ, ಆವ್ರ್ಯಾರು ನಾವ್ಯಾರೂ ಅನ್ನುವದು ಇಬ್ಬರಿಗೂ ಗೊತ್ತಿಲ್ಲ ವಡಾಪಾವ ಜ್ಯೋತೇ ಚಟ್ನಿ ತಿಂದ ಹಾಗೆ ಮಜಾನೇ ಬೇರೆ ಒಮ್ಮೊಮೆ ಅಣುಕಿಸುವದು ನನ್ನ ಹುಡುಗಿಯ ಮುಖ ಇಲ್ಲಿನ ಹುಡುಗಿಯರನ್ನು ನೋಡಿದಾಗೊಮ್ಮೆ, ಛಿ ಏನೋ ದಡ್ಡ ಯಾರ ಜ್ಯೋತೇ ನನ್ನ ಹೋಲಿಸುತ್ತಿರುವೆ ಎಂದು ಮುಖ ಕೆಡಿಸುತ್ತದೆಕೊಪದಲಿ ನನ್ನಿಂದ ದೂರವಾಗಿ ಹೋದ ಹಾಗೆ...... ನಿಮ್ಮ ಹರ್ಷ (ಟುರಿನ ನಾಗರದಲ್ಲಿದ್ದಾಗ ಬರೆದ ಕವನ)

ಮುಗಿಯದಿರಲೀ ಮಾತುಗಳು.....

ಮುಗಿಯದಿರಲಿ ನಿನ್ನ ಮಾತುಗಳು. ಗೆಳತಿ ನಿನ್ನ ಮಾತುಗಳೇ ನನ್ನ ಬದುಕಿಗೆ ಗಾಳಿ... ನನ್ನಾ ಹೃದಯದಾ ಬಡಿತಗಳು..................... ದ್ವೇಷವಾದರೂ ಮಾಡು, ಪ್ರೀತಿಯದರೂ ಮಾಡು, ನಿನ್ನ ಬದುಕಿನ ಒಂದು ಗಳಿಗೆಯಲ್ಲಾದ್ರೂ ನನ್ನ ನೆನಪು ಮಾಡು..... ನಿನ್ನ ಚಿತ್ರಕ್ಕೇ ಬಣ್ಣ ತುಂಬಲು ನನ್ನಾ ನೆತ್ತರಾದುರು ಹರಿಯಲಿ.... ಒಮ್ಮೆ ಮಾತು ಕೊಟ್ಟ ಮೇಲೆ ಈ ಜೀವನ ನಂದಲ್ಲ ನಿನ್ನದು...ಇಗೊ ನಿನಗೆ ಆರ್ಪಣೆ... ನಿನ್ನ ಕವನವೂ ನನಗೆ ಉಡುಗೊರೆಯಲ್ಲ ಗೆಳತಿ.. ನಾನು ನಾನಿಲ್ಲಾ ನನ್ನದ್ದು ಅನ್ನುವದು ಏನಿಲ್ಲ ನಿನ್ನ ನೆರಳಿನಲಿ ನನ್ನಾ ನಾನು ಮರೆತಿರುವೆ.. ಸಾಗರದ ನೀರಿಂದ ಸಾಗರಕ್ಕೆ ಪೂಜೆ ಸಲ್ಲಿಸುವದು ಬಹುಶ ಇದಕ್ಕೆ ಏನೋ... (Reply to Malini Poem 'Udugore' in Dam)

ನನ್ನ ಕವಿತೆ

ನನ್ನ ಕವಿತೆ, ಬರಿ ಪದಗಳ ಜಂಜಾಟದಲ್ಲಿ ಸೋಸಿ ಬಂದ ಸುಗಂಧವಲ್ಲ... ನನ್ನವಳ ಮಲ್ಲಿಗೆಯ ಕಂಪಿನ ಮಂಪರಿನಲ್ಲಿ ತೊಯ್ದು ಬಂದ ತೊದಲು ನುಡಿ... ನನ್ನ ಕವಿತೆ ಜಗತ್ತಿನ ಅದ್ಭುತಗಳ ನೋಡಿ ಉದ್ಗರಿಸಿ ಬಂದ ಸಾಲುಗಳಲ್ಲ.... ನನ್ನ ಕವಿತೆ ನನ್ನವಳ ಅಪ್ಪುಗೆಯ ಬಿಸಿ ಸ್ಪರ್ಶದಂತೆ ಯಾವಾಗಲು ಸನಿಹ ನನ್ನೊಡಗುಡಿ ನನ್ನಾ ಉಸಿರಾಗಿ.. ಇದು ನನ್ನಾ ಕವಿತೆಯೆಲ್ಲ ಗೆಳತಿ ಈ ಕವನ ನಿನ್ನದೆ, ನಿನ್ನ ಕಣ್ಣಂಚಿನ ನೊಟದಲಿ ಆಡಗಿರುವ ಸುಪ್ತ ನೊಟಗಳೆ, ಮಾತಾಗದೇ ಮೌನವಾಗಿರುವ ನಿನ್ನ ತುಟಿಯಂಚಿನಲಿ ಕಾಣುತಿರುವ ಅದುರುವ ಹೂವಿನ ದಳಗಳೆ, ಇಲ್ಲಿ ಮುಡಿರುವ ಪ್ರತಿ ಪ್ರತಿ ಸಾಲುಗಳು.. ಇದೋ ಇದು ನಿನ್ನ ಕವನವೇ ಸರಿ.. ನಿಮ್ಮ ಹರ್ಷ ಬೀರಗೇ (Reply to Malini Jain poem 'Nanna Kavite' in Dam)

ಬಾ ಗೆಳತಿ

Image
ನನ್ನ ಪ್ರೀತಿಯ ಕಂಪು ಅರಿಯದೇ ಹೊದೆಯಾ ಗೆಳತಿ... ನನ್ನ ಮನಸಿನ ಮಾತು ಕೇಳದೇ ಹೋಯಿತೆ ನಿನಗೆ... ನಿನ್ನ ಪ್ರೀತಿಯು ನನ್ನ ಮೌನದ ಮಾತನರಿತು ಮತ್ತೆ ಹೊಸ ಚಿಗುರಿನಂತೆ ಹಸನಾಗುವದು ಎಂದಿದ್ದೆ.. ಹಗಲು, ರಾತ್ರಿ, ನಿದ್ದೆ, ಎಚ್ಚಾರ ಇದಾವುದರ ಹಂಗಿಲ್ಲ ನನ್ನಾ ಪ್ರೀತಿಗೆ ಇದು ಎಂದೆಂದಿಗೂ ನಿರಂತರ. ಇದಕಿಲ್ಲ ಯಾವ ಆಂತರ ನಿನ್ನ ನೋಡಿದಾಗ ತೆರೆದ ರೆಪ್ಪೆ ಇನ್ನೂ ಮುಚ್ಚಿಲ್ಲಾ.. ನನ್ನ ಕಣ್ಣುಗಳಿಗೆ ನಿನ್ನ ಚಿತ್ರ ಮಾಸುವ ಭೀತಿ...... ಹುಸಿ ಮುನಿಸು ಬಿಡು ಹುಚ್ಚಿ.. ಹಾರಿ ಬಾ ಒಮ್ಮೆ ಗುಬ್ಬಚ್ಚಿಯ ತರಹ ನನ್ನ ಹೃದಯದ ಗೂಡಿನಲಿ ನೆನ್ನ ನೆನಪಿನಲಿ ನನ್ನುಸಿರು ನಿಲ್ಲುವ ಮೊದಲು....... ನಿಮ್ಮ ಹರ್ಷ ಬೀರಗೆ (Reply to Rajni poem in Dam)

ಹುಚ್ಚು ಹುಡುಗಿಯೇ......

Image
ನೀನು ಅವಳಲ್ಲ ಹುಡುಗಿ... ನಾನು ಬಯಸಿದ ಗೆಳತಿ... ನನ್ನ ಅಣುಕು ನೋಟವ ಕಂಡು ಅಂದುಕೊಂಡೇಯಾ ಪ್ರೀತಿ...... ನನ್ನ ಪಾಲಿಗೆ ಇದು ಬರಿ ಒಂದು ಆಟ....ಪ್ರಿತಿ ಎನ್ನೋದು ಹೃದಯ ಗೆಲ್ಲುವದು ನನ್ನ ಹಳೆಯ ಚಟ..... ಮರೆತು ಬಿಡು ಈಗಲಾದರೂ ನನಗೆ ಕ್ಷಮಿಸು, ನಾನಲ್ಲ ಅವನು ನಿನ್ನ ನಿಶಾಚಾರಿ ಕಣ್ಣುಗಳಿಗೆ ಮುತ್ತಿಕ್ಕಿ ತಂಪು ನೀಡುವವನು.... ನನ್ನಲ್ಲಿ ನಾನಿಲ್ಲ ಗೆಳತಿ.. ನಾನೇ ಹುಡುಕುತಿರುವೆ.. ಈಗ ನೀನೆ ಹೇಳು? ನಿನ್ನಲ್ಲಿ ನಾನು ಹೇಗೆ ಬಂದು ಸೇರಿಕೊಳ್ಳಲಿ ಹುಚ್ಚಿ..... (Reply to Ranjni poem Ninna Premada Jaala In 'Dam')