Posts

Showing posts from March, 2010

ಗೆಳತಿ,

ಗೆಳತಿ, ಮತ್ತೆ ನೆನಪಾಗುತಿದೆ , ಮಂಜಾದ ಕಣ್ಣು.. ನಿನ್ನ ಸುಪ್ತ ಕನಸುಗಳು ಬಾಡಿ ಹೋಗುವ ಹೆದರಿಕೆ ... ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು. ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ ..... ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ. ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆ

ಮನಸ್ಸು

ಕಲುಷಿತವಾಗಿದೆ ಮನಸ್ಸು ಹುಳುಕು ಕೊಳಕೆಲ್ಲ ತುಂಬಿ ದುಂಬಿಯ ಬಯಕೆ ಹುಚ್ಚಿ ಬಿಡು ನಿನಗ್ಯಾಕೆ ? ಆಗಲಿಲ್ಲ ನೀನು ಪರಿಮಳ ಸೂಸುವ ಹೂವು ... ರಾಡಿಯಲ್ಲಿ ತೇಲುತ್ತಿರುವ ನಿನಗೆ ಸಿಗುವದು ಸೊಳ್ಳೆಗಳ ಪ್ರೀತಿ, ಎಂದೋ ಮಾರಿಬಿಟ್ಟೆ ನೀನು ಮನುಷ್ಯತ್ವ, ನ್ಯಾಯ, ನೀತಿ. ದೇವರ ಅಡಿಗೆ ಬಿಡು, ಯಾರದೋ ಮುಡಿಗೂ ಸೇರದೆ ಹೋದೆ. ಸಿಕ್ಕ ಸಿಕ್ಕವರ ಆಸೆಯ ಬಯಕೆಯಲ್ಲಿ ಬಳಲಿ ಹೋದೆ .. ಪಾಪ ನಿಸ್ಸಹಾಯಕ ಹೂವು ಪಾಪಿ ಚಿ ನೀನೇಕೆ ಇನ್ನು ಕೆಲ ಕಾಲ ತಾಳದೆ ಹೋದೆ.... ಹರ್ಷಾ

ಕವಿತೆ

Image
ಎಲ್ಲಿ ಹೋದೆ ಕವಿತೆ ನನ್ನಿಂದ ದೂರವಾಗಿ ಒಮ್ಮೆ ಮಿಂಚಿ ಮರುಕ್ಷಣದಲ್ಲೇ ನನ್ನ ಬಾಳಿಂದ ಮರೆಯಾಗಿ ನನ್ನ ಬದುಕು ಸುಂದರ ಹೂದೊಟವಾಗಿಸಿದ್ದೆ ನೀನು ಹೂವಿರದ ತೋಟಕ್ಕೆ ಬೇಲಿಯ ಹೊರೆಯೇಕೆ ? ನನ್ನ ಹೊಟ್ಟೆಯ ಹಸಿವಾಗಿದ್ದೆ , ನನ್ನಯ ಕಣ್ಣಿನ ನಿದ್ದೆ . ಅರ್ಥವಿರದ ನನ್ನ ಬದುಕಿಗೆ ನೀನೆ ಅರ್ಥ ಕೊಟ್ಟಿದ್ದೆ. ಬಾ ಕವಿತೆ ಬಿಡು ಸಾಕು ಈ ಕೋಪ, ತಾಪ ನೆನಪಿರಲಿ ನಿನಗೆ ನೀನಿರದ ಬದುಕು ನನಗೆ ಒಂದು ಶಾಪ . ಹರ್ಷಾ