Posts

Showing posts from May, 2010

ನಿರ್ಲಜ್ಜ ಮನಸು

ಮನಸೇ ನೀನೇಕೆ ಹೀಗೆ ? ತುಸು ನಾಚಿಕೆಯು ಬೇಡವೇ ನಿನಗೆ ಇನ್ನೆಷ್ಟು ದಿನ ನನ್ನನ್ನು ಓಡಿಸುವೆ ನಿನ್ನ ಆಸೆಯ ದಾಸನಾಗಿಸಿ ನನಗೆ ಎಷ್ಟು ಸಿಕ್ಕರೂ ಮತ್ತೆ ಬಯಸುವೆ, ಮಿತಿಮೀರಿದ ದುರಾಸೆಯಲ್ಲಿ ... ಸಾಕಿನ್ನು ನಾನಿಲ್ಲ ನಿನ್ನ ದಾಸ, ನನ್ನ ಮತ್ತೆ ಕೇಳಬೇಕು ಇಂದಿನಿಂದ ನೀನು ಮುಂದೆ . ನಿಮ್ಮ ಹರೀಶ್

ನಾ ಬಯಸಿದ ಹೂವು

Image
ನಾ ಬಯಸಿದ ಹೂವು ನನ್ನದಾಗಲಿಲ್ಲ ಯಾರದು ಮುಡಿಸೇರಿ ಹೊರತು ನಿಂತಿತಲ್ಲಾ ಏನೆಲ್ಲ ಮಾಡಿದೆ ಮನಸೇ ನಿನಗೆ ತಿಳಿ ಹೇಳಲು .. ಆದರು ನೀನೇಕೆ ತಿಳಿಯಲಿಲ್ಲ ... ಮತ್ತೆ ಮತ್ತೆ ಅದೇ ಕೇಳುವೆ ಬದುಕು ಹೀಗೇಕೆ ? ಸಿಗಬಹುದು ಎಂದು ಗೊತ್ತಿದ್ದರು ಕೈ ಚಾಚಲಗದು ಬಾಳಲ್ಲಿ ... ಓ ಕ್ರೂರ ವಿಧೆಯೇ ಹೀಗೇಕೆ ಆಟವಾಡಿದೆ ನನ್ನ ಬಾಳಲ್ಲಿ .. ನಿಮ್ಮ ಹರೀಶ್

ನನ್ನ ಮಾತುಗಳು

ಮೌನವಾಗಲಿ ನನ್ನ ಮಾತುಗಳು ನನ್ನ ಅಂತರಂಗದಲ್ಲೇ ಸ್ಥಬ್ದವಾಗಿ ಯಾರಿಗೂ ನೋವನು ಕೊಡದೆ, ಚುಚ್ಚಲಿ ನನ್ನ ಹೃದಯಕೆ ಮುಳ್ಳಾಗಿ ..... ನನ್ನ ಮಾತುಗಳಲ್ಲಿ ನನ್ನತನದ ಪ್ರೀತಿಯಿಲ್ಲ, ವಿಷ ಕಾರುತ್ತಿವೆ ಸುತ್ತಲಿನ ಪರಿಸರದಲ್ಲಿ ಬರಿ ನೋವನ್ನೇ ಪಸರಿಸುತ ... ಸುಮ್ಮನಾಗುವ ಹರಸಾಹಸ ಮಾಡುತಿದ್ದೇನೆ ಆದರು ಹರಿದು ಬರುತ್ತವೆ ಲಂಗು ಲಗಾಮಿಲ್ಲದ ಕುದುರೆಯ ಹಗೆ ಬಾಯಿ ತಪ್ಪಿ .. ನನಗಾಗಿ ಬಾಳು ಸವೆಸಿದವರಿಗೆ ಬಿಸಿಕದಲೆಯಾಗಿ ನನ್ನ ಮಾತುಗಳು ಎಂದು ಮಾಸದ ಗಾಯ, ಕೊಡುತ್ತಿರಲು ನೋವ ತಾಳಲಾಗದು ದೇವರೇ ... ಸ್ಥಬ್ಧವಾಗಿಸು ನನ್ನುಸಿರು ಮುಂದೆಂದು ನಾನು ಮಾತಾಡದ ಹಾಗೆ.... ನಿಮ್ಮ ಹರೀಶ್

ಒಂದು ಸುಂದರ ಕನಸು

ಒಂದು ಸುಂದರ ಕನಸು ನೀಡು ತಾಯೆ ಜಗನ್ಮಾತೆ . ನಮ್ಮಮ್ಮನ ಮಡಿಲಿನಲ್ಲಿ ಮತ್ತೆ ಮಗುವಾಗಿಸು ನನ್ನ . ಎನನ್ನು ಅರಿಯದ ಆ ಹಸಿನಗೆ ನನ್ನ ಉಸಿರಾಗಲಿ ಮತ್ತೊಮ್ಮೆ ನನ್ನ ಈ ತುಟಿಗಳ ಹುಸಿನಗೆಯ ಮಾಸಿ ಮತ್ತೊಮ್ಮೆ ಶಿಶುವಾಗಿಸು. ಯಾರದೋ ನೋವಿಗೆ ಸ್ಪಂದಿಸುವ ಹೃದಯ ನಿಡು ನನಗೆ, ಬರಿ ಅಮೃತವೇ ಹೊರಹೊಮ್ಮಲಿ ನನ್ನದೆಯಲಿ, ಬತ್ತಿ ಹೋಗಲಿ ನನ್ನೆದೆಯಲಿ ವಿಷದ ಬುಗ್ಗೆ .. ತಿದ್ದಿ ತಿದ್ದಿ ನಮ್ಮಮ್ಮ ಕಲಿಸಿದ ಆ ಮುದ್ದು ಮುದ್ದು ಮಾತುಗಳು ರಾರಾಜಿಸಲಿ ನನ್ನ ತುಟಿಯ ಅಂಚಿನಲ್ಲಿ ಮರೆಮಾಚಿ ಕಪಟದ ಸವಿನುಡಿಯ .. ಎಂದು ಬತ್ತದ ಹಾಗೆ ನಮ್ಮಮ್ಮನ ಸವಿನೆನಹುಗಳು, ನನ್ನೆದೆಯಲೆಲ್ಲ ಬೆಳಗುತ್ತಿರಲಿ , ಎಂದೆಂದು ನನಗೆ ದಾರಿದೀಪವಾಗಿ .. ನಿಮ್ಮ ಹರೀಶ್

ಅಮ್ಮ

ಅಮ್ಮ, ಸೋತಿರುವನು ನಿನ್ನ ಮುದ್ದು ಕಂದ, ಕಾಲದ ಚಕ್ರವ್ಯುಹದಲಿ ಸಿಲುಕಿ ಏಕಾಂಗಿಯಾಗಿ .. ಬತ್ತಿ ಹೋಗುವ ಕನಸಿನ ಚಿಲುಮೆಯನು ಕಂಡು, ನಲುಗಿ ಹೋಗಿದೆ ಜೀವ ಸೋಲು ಸಾಕಾಗಿ .... ನನ್ನ ಕಣ್ಣಿಗೆ ಕನಸು ಕಟ್ಟುವ ಪರಿಯ ತಿಳಿಸಿ, ನನ್ನ ಬದುಕಿಗೆ ಸುಂದರ ಮುನ್ನುಡಿ ಬರೆದೆ ... ನೀನಿರುವಾಗ ಸೋಲಿನಲ್ಲು ನಲಿವಿತ್ತು ..ನನ್ನ ಬದುಕಿನಲಿ ಈಗ ಗೆಲುವಿನಲ್ಲು ನಲಿವಿಲ್ಲ ಅಮ್ಮ .... ಮರಳಿ ಬಾ ಮತ್ತೊಮ್ಮೆ ನನ್ನ ಬದುಕಿನಲಿ .. ತಲೆ ಸವರಿ ಮುತ್ತೊಂದ ಹಣೆಯ ಮೇಲೆ ಕೊಟ್ಟು ನಿಮ್ಮ ಹರ್ಷಾ