Posts

ಬರಿಗೈ ಹುಡುಗ

ನಾ ಬರಿಗೈ ಹುಡುಗ ನನ್ನಲ್ಲಿ ಏನಿಲ್ಲ.. ಕೊಡುವ ಮನಸು ನೀಡುವ ಕೈ ಎಂದು ಏನನ್ನೂ ಕೊಟ್ಟಿಲ್ಲ! ಪಡೆದೆ ಏನೆಲ್ಲಾ! ಯಾರ್ಯಾರಿಂದಲೋ!! ಲೆಕ್ಕವಿಡದೆ ಮರೆತು ಬಿಟ್ಟೆ! ದಡ್ದನು ನಾನಲ್ಲ.! ನೆನಪಿರುವದೇ ಆದರೂ ಮರೆಯುವ ನಾಟಕ! ನನಗಿಂತ ಚೆನ್ನಾಗಿ ಯಾರು ಕಲಿಯಲೇ ಇಲ್ಲ!! ಕಪಟವನ್ನೇ  ಮುಗ್ಧತೆಯಾಗಿ ಬಿಂಬಿಸುವ ನನ್ನ ಪರಿ!! ಯಾರಿಗೂ ಎಂದೂ ತಿಳಿಯಲಿಲ್ಲ.. ಏಲ್ಲರಲ್ಲೂ ಒಂದಾಗಿ ನಾ ಕಂಡರೂ ನನ್ನಂಥ ಏಕಾಂಗಿ ಯಾರಿಲ್ಲಾ.!! ನನ್ನ ಮನಸಿಗೇ ನನ್ನಂತೆ ಮೋಸಗೊಳಿಸುವ ಪರಿ ನನ್ನ ಹಾಗೇ ಬೇರೆ ಯಾರಿಗೂ ಬರುವುದಿಲ್ಲ!!. ನಾ ಬರಿಗೈ ಹುಡುಗ. ನನ್ನ ಹಾಗೇ ನೀವು ಯಾರಿಲ್ಲ!! ಕಣ್ಣನ್ನ್ನು ಮುಚ್ಚಿ ಅಂತರಂಗದಲ್ಲಿ ಇಣುಕಿ, ನೋಡಿ ನಿಮ್ಮೊಳಗೆ ಇರುವುದು! ನಾನು!! ಅದು ನೀವಲ್ಲ!! ನಿಮ್ಮ ಹರ್ಷಾ

ರವಿಯೇ

ಕವಿದಿರುವದು ಕತ್ತಲೆ ಮನದಾಳದಲ್ಲಿ ,  ಬಾ ರವಿಯೇ, ದಯೆತೋರು ನಿನ್ನ ಕಿರಣಗಳ ಚೆಲ್ಲಿ.. ನೋವು ನಲಿವುಗಳ ದಾಟಿ, ಸುಖ ದುಃಖಗಳ ಮೆಟ್ಟಿ ಮುಂದೆ ಸಾಗುವ ಶಕ್ತಿ ದಯಪಾಲಿಸು. ಸ್ವಾರ್ಥ ಸಾಗರದಲ್ಲಿ ಈಜಿ ಗೆದ್ದರೂ.. ಮನದ ಶಾಂತಿಯನ್ನೆಲ್ಲೋ ಕಳೆದುಕೊಂಡೆ! ನಾಗರೀಕತೆಯ ಮುಖವಾಡದಲಿ ಅನಾಗರಿಕ ಮನಸನ್ನು ಮುಚ್ಚಿಟ್ಟು!, ಒಣ ಹಿರಿಮೆಯಲಿ ಕೃತಕ ನಗೆ  ಬೀರಿ ಮುಂದೆ ನಡೆದೆ! ಸಾಕು, ಹಗಲುವೇಷ, ಮನ ಕುಗ್ಗಿ ಹೋಗಿದೆ. ದಯೆ ತೋರು ಭುವಿಯ ಜಂಜಾಟದಲ್ಲಿ.. ಕಳೆದು ಹೋಗುವ ಮುನ್ನ ಕಿತ್ತು ಒಗೆಯಬೇಕು ಮೋಹಪಾಶವನ್ನ.. ನಿನ್ನ ಹರ್ಷ

ಮನಸೇ

 ಮನಸೇ ಹಾಗೇ, ತಿಳಿದು ತಿಳಿಯದ ಗೆಳತಿಯ ಹಾಗೆ. ಒಮ್ಮೆ ಮುನಿಸು ಒಮ್ಮೆ ಪ್ರೀತಿ ಮತ್ತೊಮ್ಮೆ ಮೌನದಲಿ ಶರಣಾಗುತ್ತೆ, ಏಕಾಂಗಿಯಾಗಿ ಬಿಟ್ಟು ನನ್ನ ಮುದ್ದು ಮಾಡಿ ಅಪ್ಪಿದ್ದರು ಒಪ್ಪದೇ ಬಿಟ್ಟು ಹೋಗುವುದು ದೂರವಾಗಿ. ನನ್ನಿಂದ ಕಾರಣವೂ ತಿಳಿಸದೇ ದಿನವೊಂದು ಹೊಸ ಒಗಟಾಗಿ. ನಿನ್ನ ಅರ್ಥ ಮಾಡಿಕೊಳ್ಳಲು ಏನೆಲ್ಲಾ ಮಾಡಿದೇ ಮನವೇ  ? ಜೊತೆಯಾಗಿ   ಹೆಣೆದಿಲ್ಲವೇ ಸಾವಿರಾರು ಕನಸು  ನೀನು ಬಯಸಿದಾಗ ಅತ್ತೆ . ನಗಿಸಿದಾಗ ನಕ್ಕೇ ..ಬದುಕೆಲ್ಲಾ  ಕುಣಿದೆ ನಾನು ನೀನು ಕುಣಿಸಿದ ತಾಳಕ್ಕೆ ಗೊಂಬೆಯ ಹಾಗೆ! ಒಮ್ಮೆ  ಅಮ್ಮನ ಹಾಗೇ ಕರುಣಾಮಯಿ ಕೆಲವೊಮ್ಮೆ  ಪ್ರೇಯಸಿಯ  ಮುನಿಸು  ಮತ್ತೆ  ಕೆಲವೊಮ್ಮೆ ಅರಿಯಲಾಗದ ಮುಗ್ಧ ಮಗುವಿನ ಹಠ .. ನಾವಿಬ್ಬರೂ ಕಂಡ ಕನಸುಗಳಿಗೆ ಬಣ್ಣ ಹಚ್ಚಿ ಸುಂದರ ಚಿತ್ರವಾಗಿಸಿ ತೋರಿಸುವೆ ರಮಿಸಿ ತರುವೆ ನನ್ನ ಮನಸನ್ನು   ಗಾಢವಾಗಿ ಬಿಗಿದಪ್ಪಿ ಧನ್ಯತೆಯಲ್ಲಿ... ನಿಮ್ಮ ಹರ್ಷಾ

ಬೆಳಕು ಕಾಣಲೇ ಇಲ್ಲಾ

ಜಗವೆಲ್ಲವೂ ರವಿ ನಿನ್ನ ಸುಂದರ ಕಿರಣಗಳಿಗೆ  ಮೈಯೊಡ್ಡಿ ಹೊಸ ಜೀವಂತಿಕೆಯ ಸುಖ ಅನುಭವಿಸುತಿದ್ದರೂ  ಹರುಷದಿಂದ.. ಆದರೂ ನನಗ್ಯಾಕೆ ಪ್ರೀತಿ? ಅರಿಯೆ ಅದೇನೋ ಮೋಹ ಹರಿಹರಿದು  ಬರುವುದು ಪ್ರೀತಿ ಕತ್ತಲೆಯ ಮೇಲೆ ಹಾಗೇ ತೆಗೆಯದೇ ಮನದ ಕಿಟಕಿ ಬಾಗಿಲ ಹಸನು ಮಾಡದ ಮನದ ಹೊಲದಲಿ  ಕೃಷಿಕನಾಗಲು ಹೊರಟೆ, ಅರಿಯದೇ ಕೊನೆಗೂ ಕಾಣಲಿಲ್ಲ ಮನವು ನೇಗಿಲು ಬರಿದೇ ಸುತ್ತುತಿದ್ದೆ! ಅರಿಯದೇ ಸುತ್ತ ಅಜ್ಞಾನದ  ಕಾವಲು! ನಿಮ್ಮ ಹರ್ಷಾ 

ನೆನಪಾದಾಗ ....

ಬದುಕಿನಲ್ಲಿ ಕೆಲವೊಮ್ಮೆ  ಏನೋ ದೂರ ಹೋದಾಗ ನೂರಾರು ನೆನಪುಗಳು ಎಲ್ಲಾ ಚೆಲ್ಲಪಿಲ್ಲಿಯಾದಾಗ ಕನುಸುಗಳ ಬಣ್ಣಗಳು ಕೈ ತಪ್ಪಿ ಚೆಲ್ಲಿದಾಗ, ತಪ್ಪು ಯಾರದಾಗಿದ್ದರು ಸಿಡುಕು ನನ್ನದಾಗಿದ್ದಾಗ, ನೀ ಸ್ಮೃತಿ ಪಟಲದಲ್ಲಿ ಮೂಡುವಿ ಗೆಳೆಯ ನಾನೊಬ್ಬನೆ ಇದ್ದಾಗ.. ನಿಮ್ಮ ಹರೀಶ್ 

ಮೌನವು

ಮೌನದ ಗೀತೆಗೆ ಮೌನವೇ ರಾಗವು ಮೌನವು ಮನದಲಿ ನೆಲಸಿರೆ ಮೌನವು ಪ್ರೀತಿಯ ರಾಗಕೆ ತಾಳವು ಮೌನವು ದುಃಖದ ಮನಸಿಗೇ ಔಷದ ಮೌನವು ಹುಟ್ಟುವ ಮಾತಿಗೇ ಮೂಲವು ಮೌನವು ಅರುಹಿದೇ ಕನಸನು ಒಲುಮೆಯ ಮೌನವು ಹೇಳಿದೆ ಕಥೆಯನ್ನು ನಿಶ್ಯಬ್ದ ಮೌನವು ಮೌನವೇ ಮೌನಕೆ ಸಾಟಿಯೇ ಮೌನವು ಬದುಕಿನ ಅರ್ಥವೂ ಅರಿಯದ ಮೌನವು ಅರಿಯಲು ಹೋದರೆ ಸಿಗುವದು ಮೌನವು ನಿಮ್ಮ ಹರೀಶ 

ನನ್ನವಳು

ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ
ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇ ಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ

ಭ್ರಮೆ

ಮಾತು ಮರೆಯಾದಾಗ ಮೌನದಲ್ಲೇನೋ  ಅರಸುತ್ತಾ ಮರುಭೂಮಿಯ ನಡುವಲ್ಲಿ ಕಾನನವ ನೆನೆಯುತ್ತಾ ಕುಂಟು  ಪ್ರೇಯಸಿಯು ಕುಣಿಯುವ ನಿರೀಕ್ಷೆಯಲಿ ಕುರುಡನೋರ್ವ ಸೂರ್ಯನ ಉದಯಕ್ಕಾಗಿ ಕಾದಂತೆ ಬರಿ ಭ್ರಮೆಯ ಬದುಕನ್ನು ಸುತ್ತ ಹೆಣೆಯುತಿದ್ದರು ಸಹ ಸುಳ್ಳನ್ನೇ ನಿಜವೆಂದು ತಿಳಿಯುವದು ಬದುಕಿನ ಸಂತಸದ ಸೂತ್ರ ಬೀರುಗಾಳಿ ನಡುವೇ ಸಿಲುಕಿದರು ಜೀವದ ಹಂಗು ತೋರೆದರು ಬದುಕುವೇ ಎನ್ನುವ ನಂಬಿಕೆಯೇ ಮನುಷ್ಯನ ಜೀವಂತಿಕೆಗೆ ಆಧಾರ ನಿಮ್ಮ ಹರೀಶ್

ಸ್ವಾಗತ

ಅರಿಯೇ ಇದಾವ ಪರಿಯ ಕಾತರ ಪ್ರತಿಗಳಿಗೆಯು ಮನಸು ಅರಿಯದೇ ಮಾಡುವದು ಬರಿ ನಿನ್ನ ವಿಚಾರ ಅಗೋಚರ ನಿರಾಕಾರ ನನ್ನ ಬದುಕಿಗೊಂದು ಅರ್ಥ ನೀಡುವ ಮೂರ್ತಿ ನೀನೆ ಸಾಕಾರ ನನ್ನ ಕಣ್ಣಿನ ಕನಸು, ನನ್ನ ಹೃದಯಕೆ ಶಾಂತಿ, ನನ್ನ ಬದುಕಿಗೇ ನೀನೆ ಆಧಾರ ಸುಂದರ ಸುಮುಧರ ನಿನ್ನ ಇರುವಿಕೆಯೇ ನಮ್ಮ ಬದುಕಿಗೆ ದೈವದ ಸಾಕ್ಷಾತ್ಕಾರ ಅದ್ಭುತ ಜಗತ್ತು ಸೃಷ್ಟ್ಹಿಸಿದಾ ಪರಮಾತ್ಮನೇ ನಿನಗೆ ಕೋಟಿ ಕೋಟಿ  ನಮಸ್ಕಾರ ನಿಮ್ಮ ಹರ್ಷಾ

ಅವನು ಪ್ರಿತಿಸಲೇ ಇಲ್ಲ

ಅವನು ಪ್ರಿತಿಸಲೇ ಇಲ್ಲ   ನನ್ನ ಅಂದವ ಹೊಗಳಿ ,   ನನ್ನ ಕಣ್ ನ್ನುಗಳಲ್ಲಿ ಕಣ್ಣನಿಟ್ಟು ನೂರಾರು ಆಣೇ ಪ್ರಮಾಣ ಮಾಡಿದ ಆದರು ಆತ ಪ್ರಿತಿಸಲೇ ಇಲ್ಲ ಅವನು ಹೇಳಿದ ಮಾತುಗಳು ತೋರಿಸಿದ ಕನಸುಗಳು ಹಂಚಿಕೊಂಡ ಭಾವನೆಗಳು ಒಂದು ಸುಳ್ಳು ಎನಿಸಲೇ ಇಲ್ಲ ನನ್ನ ನೋವುಗಳನ್ನೆಲ್ಲಾ ಅನುಭವಿಸಿ ನನಗಾಗಿ ಮಿಡಿಯುತಿದ್ದ, ಅವನ್ಯಾಕೋ ಪರಕೀಯ ಅನಿಸಲೇ ಇಲ್ಲ ಇಷ್ಟು ಹತ್ತಿರವಾಗಿ ತುಂಬ ದೂರವಾದ, ನನ್ನ ಆಕ್ರಂದನವನ್ನು ಕೇಳಿಯೂ ಕೆಳದಾದ . ಅವನ್ಯಾಕೆ ನನ್ನ ಪ್ರೀತಿ ಮರೆತು ಹೋದ ನಿಮ್ಮ ಹರ್ಷಾ  

ಅಮ್ಮ

ತನ್ನ ನೋವನ್ನು ಮರೆತು ಕಂದನ ನೋವಿಗೆ ಮರುಗುವಳು ಅಮ್ಮ . ತನ್ನ ಬದುಕನು ಮರೆತು ಕಂದನ ಸುಂದರ್ ಬಾಳನು ಹೆಣೆಯುವಳು ಅಮ್ಮ ತನ್ನ ಬೇಕು ಬೇಡಗಳ ಪರಿವೆ ಇರದೇ ಕಂದನ ಆಸೆಗಳನ್ನು ಪೂರೈಸುವ ಕಾಮಧೇನು ಅಮ್ಮ . ಕಂದನ ಮೊಗದಲ್ಲಿನ ನಲಿವು ಕಂಡು , ಬದುಕು ಸಾರ್ಥಕ ಎಂದು ಮೆರೆಯುವವಳು ಅಮ್ಮ ಸಹನೆಗೆ ಮತ್ತೊಂದು ಹೆಸರೇ ಅಮ್ಮ , ಮಮತೆಯ ಸಾಗರ ಅಮ್ಮನ ಮಡಿಲು

ಅವಳು

ಅವಳು ನನ್ನವಳು ಆಗಲೇ ಇಲ್ಲ ನನ್ನ ಮಾತಿಗೆ ನಕ್ಕು, ನನ್ನ ಮೌನಕ್ಕೆ ಹೊಸ ಅರ್ಥ ಹುಡುಕಲು ಹೆಣಗಾಡಿದ ನನ್ನ ಗೆಳತಿ ನನ್ನವಳು ಆಗಲೇ ಇಲ್ಲ ನಾವಿಬ್ಬರು ಕುಳಿತು ಕಲ್ಪಿಸಿದ ಹವಾಗೊಪುರವನ್ನು ನಾನು ಇದು ನಮ್ಮ ಕನಸು ಎಂದು ಹೇಳಿದಾಗ ಮುನಿಸಿನಿಂದ ಇದು ನಾಳೆಯ ವಾಸ್ತವ ಎಂದು ಹೇಳಿ ಅವಳು ಮಾತಾಡಿರಲಿಲ್ಲ .. ನನ್ನ ಕಂಗಳಿಂದ ವಿಷಯ ತಿಳಿಯುತಿದ್ದ ನನ್ನ ಪ್ರೇಯಸಿ, ನನ್ನೆದೆಯ ಉಸಿರ ರಾಗಕ್ಕೆ ಹೊಸ ಪ್ರೇಮ ಗೀತೆಯನ್ನೊಂದು ರಚಿಸುತಿದ್ದಳು ನನಗಾಗಿ ಪ್ರೀತಿಯಲಿ ಪ್ರತಿ ಮಾತಿಗೂ ನನ್ನ ಮನವರಿತೆ ನಡೆಯುತಿದ್ದಳು ಪುಟ್ಟ ಹುಡುಗಿಯ ಹಾಗೇ ಆದರು ನನ್ನ ಬಿಟ್ಟು ಹೊರಟುಹೋದಳು ಒಮ್ಮೆಯೂ ಹಿಂತಿರುಗಿ ನೋಡದೆ ಹಾಗೇ ನಿಮ್ಮ Harish
ನಿನ್ನ ಮರೆತಾಗಲೋಮ್ಮೆ ನನ್ನನ್ನೇ ನಾನು ಮರೆತಿದ್ದೆ.. ಆದರು ಅರಿಯೆ ನಾನೇಕೆ ನಿನ್ನ ಮರೆತೇ . ನನ್ನ ಬದುಕಿಗೆ ಅರ್ಥ ಕಲ್ಪಿಸಿದವಳು ನೀನೆ, ಆದರು ನಾನೇಕೆ ನಿನ್ನ ಅರ್ಥ ಮಾಡಿಕೊಳ್ಳದೆ ಹೋದೆ ... ಕನಸು ಕಾಣುವದ ಕಲಿಸಿ ನನ್ನ ಈ ಕಂಗಳಿಗೆ ನೀನೇಕೆ ಒಂದು ಕನಸಾಗಿ ಹೋದೆ ..

ಯಾರು ನಾನು ?

ಸಿಗದ ಪ್ರಶ್ನೆಯ ಸುತ್ತ ಸುತ್ತುತ್ತ , ನನಗೆ ನಾನೆ ಪ್ರಶ್ನೆ ಮಾಡುತ ಎತ್ತ ಸಾಗಿದೆ ನನ್ನ ಪಯಣ ಆಸೆಯ ಹೆಬ್ಬಾವು ನನ್ನಲ್ಲಿ ಆಗಾಗ ತಲೆ ಎತ್ತಿ , ಕೊಚ್ಚಿ ಹಾಕುವ ಮೊದಲು ಸ್ವಲ್ಪ ವಿಷ ಕಾರುವದು ನಿಜ ದ್ವೇಷ ರೋಷ ಅಸುಯೆಗಳು ಬೇರು ಬಿಟ್ಟಿದ್ದು ನಿಜ , ಗಿಡವಾಗುವ ಮೊದಲೇ ಮೆಟ್ಟಿ ಹಾಕಿದ್ದು ನಿಜ ನಾನು ಅಂದರೆ ನಾನಲ್ಲ ಹಾಗಿದ್ದರೆ ನಾನ್ಯಾರು ಎಂದು ನೂರಾರು ಸರಿ ಪ್ರಶ್ನಿಸಿದ್ದು ನಿಜ ನೀನೆ ಸೃಷ್ಟಿಸಿದ ಜಗದಲ್ಲಿ ನಿನ್ನ ಮಾತೆ ನಡೆಯುವದು , ಮತ್ತೇಕೆ ಈ ಪಾಪ ಪುಣ್ಯಗಳು ನಮ್ಮನ್ನು ಬಾಧಿಸುತ್ತವೆ ನಾವೆಲ್ಲರೂ ಅರಿತು ಅರಿಯದೆ ಮುಗ್ಧರಲ್ಲವೇ ತಂದೆಯೇ ಮತ್ತ್ಯಾಕೆ ಈ ನೋವುಗಳು ನಮ್ಮನ್ನು ಕಾಡುತ್ತವೆ ? ಹರೀಶ್ ಬೀರಗೆ

ಗೆಳೆಯಾ,

ಗೆಳೆಯಾ, ಹೇಗಿರುವೆ ? ಬಹುಶ ಚೆನ್ನಾಗಿರಬಹುದು ಎಂದು ಕೊಂಡಿದ್ದೇನೆ. ನನ್ನ ಬಗ್ಗೆ ಹೇಳುವಂಥ ವಿಶೇಷ ಏನು ಇಲ್ಲ . ಎಲ್ಲ ಕ್ಷೇಮ, ಅದೇ ೮ ಘಂಟೆ ಕಂಪ್ಯೂಟರ್ ಜ್ಯೋತೆ ಗುದ್ದಾಟ, ಮನೆ ತಲುಪಲು ಬೆಂಗಳೂರಿನ ಜನನಿಬಿಡ ಬಿದಿಗಳ ನಡುವೆ ಮೌನ ಹೋರಾಟ , ಮತ್ತದೇ ಬದುಕು ಮತ್ತದೇ ಜಂಜಾಟ, ಬದುಕಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಮಾರ ಒಂದು ಮಾತು ನಾವು ಚೇಂಜ್ ಬಯಸುತ್ತೇವೆ, ಆದರೆ ಕೆಲವೊಮ್ಮೆ ಬದಲಾವಣೆಗೆ ಹೆದರುತ್ತೇವೆ ಕೂಡ ... ಹೇ ಒಂದು ನಿಮಿಶ್ ಡೋಂಟ್ ವರಿ ಈ ಮಾತುಗಳು ನಿನ್ನವೇ, ಆದರೆ ನಾನು ಇವಾಗ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ . ಅಂತರ್ಜಾಲದ ಹಸನಿನಲ್ಲಿ ಮೊಳಕೆಯೊಡೆದ ಪ್ರೀತಿ ಪ್ರೇಮ ಸಾವಿರ ಸಾವಿರ, ಕೆಲವೊಮ್ಮೆ ಬರಿ ಅಂತರವಷ್ಟೇ ಅಲ್ಲ ಮನಸು ದೂರ ದೂರ ....ಗೆಳೆಯಾ ಈ ಸಾಲುಗಳು ನಿನ್ನ ಕವಿತೆಯದ್ದೆ ....ಪ್ಲೀಸ್ ಒಮ್ಮೆಯಾದರೂ ನಿಜ ಹೇಳು ಇದು ನಮ್ಮಿಬ್ಬರ ಕುರಿತು ಬರೆದದ್ದಂತು ಅಲ್ಲ ಅಲ್ಲವೇ? ನಮ್ಮ ಮನೆಯಂಗಳ ಬೆಳಗುವ ಚಂದಿರನನ್ನು ಮನೆಯ ಹಣತೆಯನ್ನಾಗಿಸುವ ಪ್ರಯತ್ನ ಮಾಡಬಾರದು, ನಿನ್ನ ಈ ಮಾತುಗಳು ನನಗೆ ನಿಜಕ್ಕೂ ವಿಚಿತ್ರವೆನಿಸುತಿತ್ತು. ಬರಿ ಇದೇಕೆ ನಿನ್ನ ಪ್ರತಿ ಮಾತು ನನಗೆ ಒಂದೇ ಒಗಟೇ, ರವಿ ನನಗೆ ಗೊತ್ತಿಲ್ಲ ಅದೇಕೋ ಏನೋ ನಿನ್ನ ಮಾತುಗಳು ನೀನು ಮಾಡುವ ಚರ್ಚೆಗಳು, ಯಾವುದೇ ವಿಷಯವನ್ನು ಬೇರೆ ಬೇರೆ ದ್ರಷ್ಟಿಕೊನದಲ್ಲಿ ನೀನು ನೋಡುವ ಬಗೆ ನಿಜಕ್ಕೂ ಅಧ್ಭುತ. ಆದರೆ ಒಂದಂತು ನಿಜ ನನಗೆ ಯಾವಾಗಲು ಅನಿಸುತಿತ್ತು ನಿನಗೆ ಸೋಲು ಇಷ್ಟ ...

ಬುದ್ಧನಲ್ಲ

ನಾನೇನು ಬುದ್ಧನಲ್ಲ ಆದರು ಒಮ್ಮೊಮ್ಮೆ ವೈರಾಗ್ಯ ಹಾಯ್ದು ಹೋಗುವದು ನನ್ನ ಮನಸ್ಸಿನಲ್ಲಿ . ಸುತ್ತಲಿನ ಜನರ ನಡುವೆ ಹಾಯಾಗಿ ನಾನು ನಗುತ್ತಿರಬೇಕಾದರು ಮನಸ್ಸಿನಲ್ಲಿ ಚಡಪಡಿಸುತ್ತೇನೆ ನೋವಿನಲಿ .. ಕೆಲವೊಮ್ಮೆ ಮೌನದಲಿ ಮಾತಾಡುತ್ತೇನೆ ಆಗಾಗ ಮಾತಾಡುತಿದ್ದರು ಮನಸು ಹಾತೊರೆಯುತ್ತದೆ ಮೌನದ ಮಡಿಲಿನಲ್ಲಿ ಏನೆಲ್ಲ ಅರಿತರು ಯಾಕೆ ಮನಸ್ಸೇ ಸುಮ್ಮನೆ ಯಾಕೆ ಈ ಮುಖವಾಡ ಮುಗ್ಧನಂತೆ ಜಗತ್ತಿನಲ್ಲಿ

ಅವರು ಹೀಗೇಕೆ ?

ನನ್ನ ಸಣ್ಣ ಸಣ್ಣ ಆಸೆಗಳು ನೆರವೆರದಿದ್ದಾಗ ನನ್ನ ಮೇಲೆ ನನಗೆ ತಾಳಲಾಗದ ಕೋಪ , ತಾಪ .. ಒಂದು ಸಿಕ್ಕಾಗ ಮತ್ತೊಂದರ ಬಯಕೆ , ಎಂದು ಮುಗಿಯದ ಬೇಕು, ಒಂದರ ಹಿಂದೆ ಮತ್ತೊಂದು ಬಯಕೆ ... ನಮ್ಮಮ್ಮ ನಮ್ಮಪ್ಪ ಒಂಥರಾ ವಿಚಿತ್ರ, ಅವರ ಬಾಳಿನಲ್ಲಿ ಯಾವಾಗಲು ಬರಿ ನನ್ನ ಬಾಳಿನ ಬಣ್ಣ ಬಣ್ಣದ ಚಿತ್ರ .. ಅವರ ಬೇಕು- ಬೇಡಗಳು ಎಂದು ಅವರನ್ನು ಬಾಧಿಸಲೇ ಇಲ್ಲ, ಐಶಾರಮದ ಬದುಕು ಮತ್ತ್ಯಾವದೋ ಕನಸಿಲ್ಲ . ನಗು ನಗುತ್ತಲೇ ನೋವನ್ನೆಲ್ಲ ಅನುಭವಿಸಿದರು, ಕಷ್ಟಪಟ್ಟರು ಆದರು ನನಗೇಕೆ ಅದರ ಅರಿವು ಎಂದು ಆಗಲೇ ಇಲ್ಲ .. ನಿಮ್ಮ ಹರೀಶ ಬೀರಗೆ

ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ ಹುಚ್ಚನೆ ಸರಿ, ಬದುಕು ಪೂರ್ತಿ ಸೆಣೆಸಾಟ. ಮೋಸ ಅರಿಯದ ಜೀವಿ ಆದರು ಜಗತ್ತನೇ ಗೆಲ್ಲುವ ಬಯಕೆ . ತನ್ನ ನೋವಿಗಿಂತ ಬೇರೆಯವರ ನೋವಿಗೆ ಮಿಡಿಯುತಿತ್ತು ಎಂದೆಂದು ಆತನ ಹೃದಯ. ಬೇರೆಯವರ ದುಃಖಕ್ಕೆ ಕಂಬನಿ ಸುರಿಸುತಿದ್ದ ಸಹೃದಯಿ .. ಓ ದೇವರೇ ನಿನೆಂಥ ಪಾಪಿ, ಅದೊಂದು ಬೆಳೆಯುತಿದ್ದ ಮೊಗ್ಗು . ಹರೆಯದ ಯುವಕ ಆದರೆ ಎಂದೆಂದು ಮನಸಿನಿಂದ ಮಗು. ನಿಷ್ಯಬ್ದವಾಗಿಸಿದೆ ಆ ತೊದಲು ಮಾತುಗಳು ಬರಿ ಕ್ಷಣ ಮಾತ್ರದಲಿ . ಚಿಗುರಿನಲಿ ಚಿವುಟು ಹಾಕಿದೆ ಮತ್ತೊಂದು ಎಳೆಯ ಸಸಿಯನ್ನು , ನಿನ್ನ ಇರುವು ತೋರಿಸಬೇಕೆಂದು ... ನಿಮ್ಮ ಹರೀಶ (ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

ಅಮ್ಮ

ಅಮ್ಮ ನನ್ನ ಬಾಳಿಗೆ ನೀನೆ ದಾರಿ ದೀಪ, ನಿನ್ನ ನೆನಪುಗಳು ಇರದ ಬದುಕು ತಾಳಲಾಗದ ಒಂದು ದೊಡ್ಡ ಶಾಪ . ದೂರವಾದೆ ನನ್ನ ಬಾಳಿನಿಂದ ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು ಮರಳಿ ಬರದ ಲೋಕಕ್ಕೆ ನಿಶ್ಯಬ್ದವಾಗಿ ಪಯಣಿಸಿದೆ . ತಲೆಯ ಮೇಲೆ ಕೈಯಾಡಿಸದೇ ನೀನು, ಎದ್ದಾಗಲೆಲ್ಲ ನಾನು ನನ್ನ ಸುತ್ತಲೆಲ್ಲಾ ಬರಿ ಅಂಧಕಾರವೇ ಕವಿಯುತ್ತಿತ್ತು. ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು ನಡೆಸಿ, ಮುಗ್ಧ ಮಗುವಾಗಿಸಿದೆ. ನಾನೇನು ಮಾಡಲಿ ಈಗ ಈ ಕ್ರೂರ ಜಗತ್ತಿನಲಿ ನಾನು ಎಕಾಂಗಿಯಮ್ಮ. ನಿಮ್ಮ ಹರೀಶ್