Posts

ಪೂರ್ಣಗೊಳ್ಳದ ಕವನ

ಗೆಳೆಯಾ ನಮ್ಮಿಬ್ಬರ ನಂಟು ಒಂಥರಾ ಪೂರ್ಣಗೊಳ್ಳದ ಕವನ ನೂರು ಭಾವನೆಗಳು ಮನದಲ್ಲಿ  ಮೂಡಿದರು ಅಸ್ಪಷ್ಟತೆ, ಗೊಂದಲ ಸಾವಿರ ಸಲ ಪ್ರಯತ್ನಪಟ್ಟರು ಕಾಗದದಲ್ಲಿ ಮೂಡಿಸಲು ವಿಫ಼ಲ. ಕೆಲವು ಸಾಲುಗಳು ಮೂಡಿರಲು ಗೊತ್ತಿಲ್ಲ, ಅದೇಕೋ ಮನಸು ಖಾಲಿ  ಖಾಲಿ.. .. ಪದಗಳು ಹುಡುಕಿ ಸುಮ್ಮನೇ ಜೋಡಿಸುವದು ? ಕ್ಷಮಿಸು ನನಗೇ ಎಂದು ಇರಲಿಲ್ಲ  ಆ ಖಯಾಲಿ ಶಿಲ್ಪ ಕೆತ್ತುವ ಮೊದಲೇ ಶಿಲ್ಪಿ, ರೂಪದರ್ಶಿಯು ಯೌವನ ಕಳೆದು ಕೊಂಡ ಹಾಗೇ ಅದೊಂದು ಅರ್ಧ ಕಡಿದ ಆವಸ್ಥೆ, ಅತ್ತ ಶಿಲ್ಪವೂ ಅಲ್ಲ,  ಇತ್ತ ಕಲ್ಲೂ ಅಲ್ಲ. ನಿಮ್ಮ  ಹರ್ಷಾ 

ಭಾವ ಜೀವಿಯ ಮೌನ

ಮಾತು ಸಾವಿರ ತುಟಿಯಂಚಿನಲ್ಲಿ ಕುಣಿದಾಡಿ ಹೊರಹೊಮ್ಮಲು  ತವಕಿಸುತ್ತಿರಲು ಮನಸೇ ನೀನಗೇಕೆ ಇಷ್ಟ ಬರಿ ಮೌನ ? ಆದ್ಯಾವ ಶಕ್ತಿಯೋ ಅರಿಯೇ ನಿನ್ನಲ್ಲಿ ನೋವು ನಲಿವುಗಳು ನಿನ್ನ ಯಾಕೆ ಭಾದಿಸವು ನನಗೇ ಪೀಡಿಸುವ ನಿಶ್ಯಬ್ಧತೆಯ ವಿಷಗಳಿಗೆಗಳು ನಿನಗೇಕೆ ಅನಿಸುವವು ರಸನಿಮಿಷಗಳು  ಮನಸೇ, ನಿನಗೇಕೆ ಇಷ್ಟ ಬರಿ ಮೌನ, ಕಾನನದ ನಡು ಹೆದರಿದ ಹೆಬ್ಬುಲಿಯ ಹಾಗೇ ನಾನು ಒದ್ದಾಡುತ್ತಿರಲು, ನಿರ್ಭಯ ಕೋಗಿಲೆಯ ಹಾಗೇ ಹಾಡುತ್ತಿರುವೆ ವಸಂತಗಾನ! ನಿಮ್ಮ ಹರ್ಷಾ 

ಹುಡುಕಿ ತಾ ನನ್ನ

ಹುಡುಕಿ ತಾ ನನ್ನ, ಗೆಳತಿಯೇ ಕಳೆದು ಹೋಗಿರುವೆ ನಾನು! ಸುತ್ತಲಿನ ಜಂಜಾಟದಲ್ಲಿ ಸಿಗದೇ ಹೋಗಿರುವೆ ನಾನು! ಕೈಗೆಟುಕದ ಬಿಸಿಲ್ಗುದರೆಯ ಬೆಂಬತ್ತಿ ದಣಿದು ಹೋಗಿರುವೆ. ನನ್ನ ಕೈಹಿಡಿಸಿ ಹೊರಗೆ ದಾರಿ ತೋರಿಸು ಓಲವೇ ಮೋಹಪಾಶದಿ ನನ್ನ ಬಿಡಿಸುವ ಗುರುವಾಗೂ, ಅರಿವಾಗು ಒಲವೇ.. ಹುಡುಕಿ ತಾ ಓಲವೇ ಕಳೆದು ಹೋಗಿರುವೆ ನಾನು.. ಅರಿವು ಸಾಗುವ ದಾರಿ ಗುರುವಿದ್ದರು ಕಾಣೆನು ಮಾಯೆ ಪೊರೆಯೆ ಸಲುಹಿ ಕುರುಡನಾಗಿ ನಿಂದಿಹೆನು ವಿಷವೆಂದರಿತು, ಸಿಹಿರಸದ ಹಾಗೇ ಸವಿಯುತ್ತಿರಲು ಮನವೇ,  ಒಲವೇ, ಕೈಹಿಡಿದು ನಡೆಸು ನನ್ನ ದಾರಿತಪ್ಪುವ ಮೊದಲು, ಹಿಂತಿರುಗಿ ಬರಲಾರಾದಷ್ಟು ಮುಂದೆ ಹೋಗುವ  ಮುನ್ನ.. ನಿಮ್ಮ ಹರ್ಷಾ

ಅವನು

ಅವನು ಬದುಕೀದ್ದಾಗ ಒಮ್ಮೇ ಕಣ್ಣೆತ್ತಿ  ಕೂಡಾ ನೊಡಲಿಲ್ಲಾ ಇವಳು ಅವನ ಪ್ರೇಮ ಪತ್ರಗಳು ಅವನು ಸತ್ತ ಮೇಲೆ ಗೋರಿಯ ಬಳಿ ಕುಳಿತು ಓದಿ ಬಿಕ್ಕಿ ಬಿಕ್ಕಿ ಅತ್ತಳು ನಿಮ್ಮ ಹರ್ಷಾ 

ಏಕಾಂಗಿ

ನೀ ಬರಲಾರೆ ತಿರುಗಿ ದೂರ ದೂರ ಹೋದವಳು!! ಶಬ್ದದ ವೇಗವ ದಾಟಿ ನಿಶ್ಯಬ್ಧವಾಗಿ ಹೋದವಳು!! ಹಸಿನಗೆಯ ಮುಚ್ಚಿಟ್ಟು, ಹುಸಿಕೋಪವ ತೋರುತ್ತಾ ಹಸಿರಾಗಿಸುವಳು  ನನ್ನ ಬರಡು ಬಾಳನ್ನು. ಎಂದು ನಂಬಿರಲು, ನಗು-ನಗುತ್ತಲೇ ಹೋದಳು! ಪಿಸುಮಾತನ್ನು ಹೇಳದೇ ಗೆಜ್ಜೆ ಕಾಲಲ್ಲಿ  ಹೋದರೂ ಹೆಜ್ಜೆಯ ನಾದದ ಹುಟ್ಟಡಗಿಸಿ ಸದ್ದು ಮಾಡದೇ ಹೋದಳು! ತೆರೆದ ಕಣ್ಣಲಿ ಕಂಡರೂ ರೆಪ್ಪೆ ಮೀಟುಕಿಸುವ ಮುನ್ನ ಕಣ್ಮರೆಯಾಗಿ ಹೋದಳು! ಏಕಾಂಗಿಯಾಗಿ ಬಿಟ್ಟು ನನ್ನ......... ನಿಮ್ಮ ಹರ್ಷಾ 

ಸೂರ್ಯಾಸ್ತದ ಸಮಯ

ಸೂರ್ಯಾಸ್ತದ ಸಮಯ ಅವನ ಬೆಳಕಿನ ಸನಿಹ ಕುಳಿತು ಬಯಸಿತು ಮಗುವು ಒಂದು ಹೊಸ ದಿನವು. ಪುಟ್ಟ ಹೇಳಿಕೊಳ್ಳುತಿತ್ತು , ತನ್ನಲ್ಲಿ  ತಾನೇ ಅಮ್ಮ ಮಾಡಬೇಕು ಒಂದು ಬಿಸಿ ರೊಟ್ಟಿ! ತುಂಡು ನನಗೆ ಉಳಿದುದು ಅಣ್ಣ, ಅಪ್ಪ, ಅಮ್ಮಗೆ ಕೊಟ್ಟೆ ಮತ್ತೇ ಹಸಿವಿಗೇ ? ಇರುವದು ಭಿಕ್ಷೆ ತಟ್ಟೆ! ಯಾರ ಮನೆಯ ಮುಂದೇ ಕೈಚಾಚಿದರು ಅಂದರೂ ಪರವಾಗಿಲ್ಲ ದರಿದ್ರಗಳು.. ಅನ್ನಬಾರದು ಪಾಪದ ಪೀಡೆಗಳು.. ಹಳಸಿದನ್ನು ಕೊಟ್ಟರೂ ಹೇಳುವೆ ಧನ್ಯವಾದಗಳು. ಅಷ್ಟರಲ್ಲಿ ಸೂರ್ಯ ಮುಳುಗುತ್ತಿರಲು ಮಗು ಹೇಳಿತು, ಇನ್ನೂ ಸ್ವಲ್ಪ ತಾಳು ಮಾಮಾ.. ಎದುರು ಮನೇ ನಿಮ್ಮಿ ಕಾರು ಒರೆಸುವ ಬಟ್ಟೇ ಅದು ಕೊಟ್ಟರೂ  ನಾ ತುಂಬಾ ಸಂತೋಷಪಟ್ಟೆ! ಇನ್ನೂ ಏನೋ ಹೇಳುತಿರುವಾಗಲೇ ಮಗು.. ಕಛೇರಿ ಕೆಲಸ ಮುಗಿಸಿದ ರವಿ, ಅಸ್ತಂಗತನಾಗುತ್ತಲೇ ಹೇಳಿದ, ಬರೆದಿಡಪ್ಪ ಮನವಿ.. ನಾಳೆ ಕೊಡುವಿಯಂತೆ!! ನಿಮ್ಮ ಹರ್ಷಾ

ನೆನಪು

ನನ್ನ ಮನದ ಮೂಲೆಯಲ್ಲಿ ನಿನ್ನ ನೆನಪೆ ತುಂಬಿದೆ! ಮರೆಯಬಯಸುವೇ ಆದರೇನು ಹೊಸಕಾವ್ಯವಾಗಿ ನಿಂದಿದೆ! ನಿನ್ನ ಮಾತು ನನ್ನ ಮೌನದಿ ಕಥೆಯನೊಂದು ರಚಿಸಿದೆ! ನಿನ್ನ ನಗುವ ಚಿತ್ರ (ಮುಖವು) ಕಂಡು ನನ್ನ ಮುಖವು ಅರಳಿದೆ! ಜಗವು ಒಂದು ಓಟದ ಆಟ ಬೇಗ ಗುರಿಯಾ ತಲುಪಿದೆ ಸ್ವಲ್ಪ  ನಡಿದರು ಆಯಾಸಗೊಳ್ಳುವ ನೀನು ಹೇಗೆ ಓಡಿದೆ? ಜಗದ ಸಂತೆಯಲ್ಲಿ ನಿನ್ನ ಕಂತೆ ಬೇಗ ಮುಗಿಯಿತೇ? ಗುಲಾಬಿಯಂತೆ ಸಣ್ಣ ಬದುಕನು ಬಣ್ಣದಿಂದ ರಚಿಸಿದೆ! ನಿಮ್ಮ ಹರ್ಷಾ (Light 11 May 1998)

ಹೆಜ್ಜೆಗುರುತು

ಹೆಜ್ಜೆಗುರುತು ಮೂಡಿಸುವ ಹೆಬ್ಬಯಕೆಯಲ್ಲಿ ಹೆಜ್ಜೆ ಹೆಜ್ಜೆಗೂ ತುಳಿದರು. ಅಳಿಸು ಹೋಗುವ ಕೆಸರಿನಲ್ಲಿ ಗುರುತು ಕಂಡು ಮೆರೆದರು ನೆತ್ತರಿನ  ಕಾಲುವೆ ಹರಿಸಿ ಸಾಮ್ರಾಜ್ಯ ಕಟ್ಟಿ ಮೆರೆದರು! ಕಾಲಚಕ್ರದಲ್ಲಿ ತಾವೊಂದು ಘಳಿಗೆ ಎನ್ನುವದು ಮರೆತರು! ತಾ ಹೆಣೆದ ಬಲೆಯಲ್ಲಿ ಉಸಿರು ಕಟ್ಟಿ ತಾನೇ ಮಡಿದರು! ಅಳಿದು ಹೋದವು ಹೆಜ್ಜೆಗುರುತು ಸಾಮ್ರಾಜ್ಯ ನಶಿಸಿ ಹೋದವು! ಸಿಂಹಾಸನ ಬಿರುದುಗಳು ಎಲ್ಲಾ ಮರೇತು ಹೋದವು! ಹೆಜ್ಜೆಗುರುತು ಮೂಡಿಸು ನನ್ನ ಕಂದ ಬೇಡವೆನ್ನಲಾರೆ ನಿನ್ನ ನಾನೆಂದೂ ಕಾಲಚಕ್ರದಿ ನಶಿಸುವ ಮೋಹದ ಸಾಮ್ರಾಜ್ಯ ಕಟ್ಟದಿರು. ಹೃದಯನಾಳುವ ದೊರೆಯಾಗು, ನನ್ನ ಮಗುವೇ ಮೂಡಿಬರಲಿ ಏಲ್ಲರ ಹೃದಯದಲಿ.... ಎಂದೂ ಅಳಿಯದ ಹೆಜ್ಜೆಗುರುತು!! ನಿಮ್ಮ ಹರ್ಷಾ

ಕೋರಿಕೆ

ಓ ಮನಸೇ ಕಾಡದಿರು ನನ್ನ ನಾನೊಂದು ಮುಗ್ಧ ಜೀವ ಕಲಿಸದಿರು ಪರಿ ಪರಿಯ ಮಾತು ಪಸರಿಸದಿರಲಿ ಹೃದಯದಿ ವಿಷವ ಅಮ್ಮ ಕಲಿಸಿದ ತೊದಲು ಮಾತುಗಳು ಕಪಟವರಿಯದ ಸುಂದರ ಮುತ್ತುಗಳು ಬೆಳೆ-ಬೆಳೆಯುತ ಕಲಿತೇ ನೀನು  ಏನೆಲ್ಲಾ ವ್ಯಂಗ್ಯ ಕಪಟ ವಿಷಕಾರುವ ಮಾತುಗಳು ಓ ಮನಸೇ ಸಾಕಿನ್ನು ಮಗುವಾಗಬೇಕು ನಾನು ದಯೆತೋರು ಕೋರುವೆ ನೀಡದಿರು  ನೋವು  ಬಿತ್ತದಿರು ನನ್ನಲ್ಲಿ ಮುಂದೆಂದು ಬೇವು ನಿಮ್ಮ ಹರ್ಷಾ

ಬರಿಗೈ ಹುಡುಗ

ನಾ ಬರಿಗೈ ಹುಡುಗ ನನ್ನಲ್ಲಿ ಏನಿಲ್ಲ.. ಕೊಡುವ ಮನಸು ನೀಡುವ ಕೈ ಎಂದು ಏನನ್ನೂ ಕೊಟ್ಟಿಲ್ಲ! ಪಡೆದೆ ಏನೆಲ್ಲಾ! ಯಾರ್ಯಾರಿಂದಲೋ!! ಲೆಕ್ಕವಿಡದೆ ಮರೆತು ಬಿಟ್ಟೆ! ದಡ್ದನು ನಾನಲ್ಲ.! ನೆನಪಿರುವದೇ ಆದರೂ ಮರೆಯುವ ನಾಟಕ! ನನಗಿಂತ ಚೆನ್ನಾಗಿ ಯಾರು ಕಲಿಯಲೇ ಇಲ್ಲ!! ಕಪಟವನ್ನೇ  ಮುಗ್ಧತೆಯಾಗಿ ಬಿಂಬಿಸುವ ನನ್ನ ಪರಿ!! ಯಾರಿಗೂ ಎಂದೂ ತಿಳಿಯಲಿಲ್ಲ.. ಏಲ್ಲರಲ್ಲೂ ಒಂದಾಗಿ ನಾ ಕಂಡರೂ ನನ್ನಂಥ ಏಕಾಂಗಿ ಯಾರಿಲ್ಲಾ.!! ನನ್ನ ಮನಸಿಗೇ ನನ್ನಂತೆ ಮೋಸಗೊಳಿಸುವ ಪರಿ ನನ್ನ ಹಾಗೇ ಬೇರೆ ಯಾರಿಗೂ ಬರುವುದಿಲ್ಲ!!. ನಾ ಬರಿಗೈ ಹುಡುಗ. ನನ್ನ ಹಾಗೇ ನೀವು ಯಾರಿಲ್ಲ!! ಕಣ್ಣನ್ನ್ನು ಮುಚ್ಚಿ ಅಂತರಂಗದಲ್ಲಿ ಇಣುಕಿ, ನೋಡಿ ನಿಮ್ಮೊಳಗೆ ಇರುವುದು! ನಾನು!! ಅದು ನೀವಲ್ಲ!! ನಿಮ್ಮ ಹರ್ಷಾ

ರವಿಯೇ

ಕವಿದಿರುವದು ಕತ್ತಲೆ ಮನದಾಳದಲ್ಲಿ ,  ಬಾ ರವಿಯೇ, ದಯೆತೋರು ನಿನ್ನ ಕಿರಣಗಳ ಚೆಲ್ಲಿ.. ನೋವು ನಲಿವುಗಳ ದಾಟಿ, ಸುಖ ದುಃಖಗಳ ಮೆಟ್ಟಿ ಮುಂದೆ ಸಾಗುವ ಶಕ್ತಿ ದಯಪಾಲಿಸು. ಸ್ವಾರ್ಥ ಸಾಗರದಲ್ಲಿ ಈಜಿ ಗೆದ್ದರೂ.. ಮನದ ಶಾಂತಿಯನ್ನೆಲ್ಲೋ ಕಳೆದುಕೊಂಡೆ! ನಾಗರೀಕತೆಯ ಮುಖವಾಡದಲಿ ಅನಾಗರಿಕ ಮನಸನ್ನು ಮುಚ್ಚಿಟ್ಟು!, ಒಣ ಹಿರಿಮೆಯಲಿ ಕೃತಕ ನಗೆ  ಬೀರಿ ಮುಂದೆ ನಡೆದೆ! ಸಾಕು, ಹಗಲುವೇಷ, ಮನ ಕುಗ್ಗಿ ಹೋಗಿದೆ. ದಯೆ ತೋರು ಭುವಿಯ ಜಂಜಾಟದಲ್ಲಿ.. ಕಳೆದು ಹೋಗುವ ಮುನ್ನ ಕಿತ್ತು ಒಗೆಯಬೇಕು ಮೋಹಪಾಶವನ್ನ.. ನಿನ್ನ ಹರ್ಷ

ಮನಸೇ

 ಮನಸೇ ಹಾಗೇ, ತಿಳಿದು ತಿಳಿಯದ ಗೆಳತಿಯ ಹಾಗೆ. ಒಮ್ಮೆ ಮುನಿಸು ಒಮ್ಮೆ ಪ್ರೀತಿ ಮತ್ತೊಮ್ಮೆ ಮೌನದಲಿ ಶರಣಾಗುತ್ತೆ, ಏಕಾಂಗಿಯಾಗಿ ಬಿಟ್ಟು ನನ್ನ ಮುದ್ದು ಮಾಡಿ ಅಪ್ಪಿದ್ದರು ಒಪ್ಪದೇ ಬಿಟ್ಟು ಹೋಗುವುದು ದೂರವಾಗಿ. ನನ್ನಿಂದ ಕಾರಣವೂ ತಿಳಿಸದೇ ದಿನವೊಂದು ಹೊಸ ಒಗಟಾಗಿ. ನಿನ್ನ ಅರ್ಥ ಮಾಡಿಕೊಳ್ಳಲು ಏನೆಲ್ಲಾ ಮಾಡಿದೇ ಮನವೇ  ? ಜೊತೆಯಾಗಿ   ಹೆಣೆದಿಲ್ಲವೇ ಸಾವಿರಾರು ಕನಸು  ನೀನು ಬಯಸಿದಾಗ ಅತ್ತೆ . ನಗಿಸಿದಾಗ ನಕ್ಕೇ ..ಬದುಕೆಲ್ಲಾ  ಕುಣಿದೆ ನಾನು ನೀನು ಕುಣಿಸಿದ ತಾಳಕ್ಕೆ ಗೊಂಬೆಯ ಹಾಗೆ! ಒಮ್ಮೆ  ಅಮ್ಮನ ಹಾಗೇ ಕರುಣಾಮಯಿ ಕೆಲವೊಮ್ಮೆ  ಪ್ರೇಯಸಿಯ  ಮುನಿಸು  ಮತ್ತೆ  ಕೆಲವೊಮ್ಮೆ ಅರಿಯಲಾಗದ ಮುಗ್ಧ ಮಗುವಿನ ಹಠ .. ನಾವಿಬ್ಬರೂ ಕಂಡ ಕನಸುಗಳಿಗೆ ಬಣ್ಣ ಹಚ್ಚಿ ಸುಂದರ ಚಿತ್ರವಾಗಿಸಿ ತೋರಿಸುವೆ ರಮಿಸಿ ತರುವೆ ನನ್ನ ಮನಸನ್ನು   ಗಾಢವಾಗಿ ಬಿಗಿದಪ್ಪಿ ಧನ್ಯತೆಯಲ್ಲಿ... ನಿಮ್ಮ ಹರ್ಷಾ

ಬೆಳಕು ಕಾಣಲೇ ಇಲ್ಲಾ

ಜಗವೆಲ್ಲವೂ ರವಿ ನಿನ್ನ ಸುಂದರ ಕಿರಣಗಳಿಗೆ  ಮೈಯೊಡ್ಡಿ ಹೊಸ ಜೀವಂತಿಕೆಯ ಸುಖ ಅನುಭವಿಸುತಿದ್ದರೂ  ಹರುಷದಿಂದ.. ಆದರೂ ನನಗ್ಯಾಕೆ ಪ್ರೀತಿ? ಅರಿಯೆ ಅದೇನೋ ಮೋಹ ಹರಿಹರಿದು  ಬರುವುದು ಪ್ರೀತಿ ಕತ್ತಲೆಯ ಮೇಲೆ ಹಾಗೇ ತೆಗೆಯದೇ ಮನದ ಕಿಟಕಿ ಬಾಗಿಲ ಹಸನು ಮಾಡದ ಮನದ ಹೊಲದಲಿ  ಕೃಷಿಕನಾಗಲು ಹೊರಟೆ, ಅರಿಯದೇ ಕೊನೆಗೂ ಕಾಣಲಿಲ್ಲ ಮನವು ನೇಗಿಲು ಬರಿದೇ ಸುತ್ತುತಿದ್ದೆ! ಅರಿಯದೇ ಸುತ್ತ ಅಜ್ಞಾನದ  ಕಾವಲು! ನಿಮ್ಮ ಹರ್ಷಾ 

ನೆನಪಾದಾಗ ....

ಬದುಕಿನಲ್ಲಿ ಕೆಲವೊಮ್ಮೆ  ಏನೋ ದೂರ ಹೋದಾಗ ನೂರಾರು ನೆನಪುಗಳು ಎಲ್ಲಾ ಚೆಲ್ಲಪಿಲ್ಲಿಯಾದಾಗ ಕನುಸುಗಳ ಬಣ್ಣಗಳು ಕೈ ತಪ್ಪಿ ಚೆಲ್ಲಿದಾಗ, ತಪ್ಪು ಯಾರದಾಗಿದ್ದರು ಸಿಡುಕು ನನ್ನದಾಗಿದ್ದಾಗ, ನೀ ಸ್ಮೃತಿ ಪಟಲದಲ್ಲಿ ಮೂಡುವಿ ಗೆಳೆಯ ನಾನೊಬ್ಬನೆ ಇದ್ದಾಗ.. ನಿಮ್ಮ ಹರೀಶ್ 

ಮೌನವು

ಮೌನದ ಗೀತೆಗೆ ಮೌನವೇ ರಾಗವು ಮೌನವು ಮನದಲಿ ನೆಲಸಿರೆ ಮೌನವು ಪ್ರೀತಿಯ ರಾಗಕೆ ತಾಳವು ಮೌನವು ದುಃಖದ ಮನಸಿಗೇ ಔಷದ ಮೌನವು ಹುಟ್ಟುವ ಮಾತಿಗೇ ಮೂಲವು ಮೌನವು ಅರುಹಿದೇ ಕನಸನು ಒಲುಮೆಯ ಮೌನವು ಹೇಳಿದೆ ಕಥೆಯನ್ನು ನಿಶ್ಯಬ್ದ ಮೌನವು ಮೌನವೇ ಮೌನಕೆ ಸಾಟಿಯೇ ಮೌನವು ಬದುಕಿನ ಅರ್ಥವೂ ಅರಿಯದ ಮೌನವು ಅರಿಯಲು ಹೋದರೆ ಸಿಗುವದು ಮೌನವು ನಿಮ್ಮ ಹರೀಶ 

ನನ್ನವಳು

ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ
ಇದ್ದ ಜಾಗದಲ್ಲೇ ಕುಳಿತು ಕದ್ದು ನೋಡುವ ಹುಡುಗಿ ಕಣ್ಣಲ್ಲೇ ತೋರುವಳು ಕಿರುನಗೆಯ , ಮೋಡಿ ಮಾಡುವ ನಗೆಯ , ನನ್ನಿಂದ ಮುಚ್ಚಿಟ್ಟು ತೋರುವಳು ನನಗೆ ಹುಸಿಕೋಪ .. ಹೊರಗೆ ಕಬ್ಬಿಣದ ಕಡಲೆ ಮನಸಿಂದ ಹಸುಗೂಸು ಆದರು ಮುಗುಳ್ನಗೆಯಲ್ಲೇ ಸೆಳೆಯುವ ಸೆಲೆ ಅವಳ ಮೌನವು ಕವಿತೆ ಅವಳ ಮಾತು ತಂಗಾಳಿ ಕೇಳಬಯಸುವದು ಮನಸು ಮರಳಿ ಮರಳಿ ಮುಗ್ಧಳಾದರು ಅರಿಯೇ ಮಾಯೇ ಬಲ್ಲಳು ಏನೋ ಕತ್ತು ತಿರುಗಿಸಿದತ್ತ ಬರಿ ಇರುವದು ಅವಳ ಪ್ರೀತಿಯ ಬಲೆ ನಿಮ್ಮ ಹರ್ಷಾ

ಭ್ರಮೆ

ಮಾತು ಮರೆಯಾದಾಗ ಮೌನದಲ್ಲೇನೋ  ಅರಸುತ್ತಾ ಮರುಭೂಮಿಯ ನಡುವಲ್ಲಿ ಕಾನನವ ನೆನೆಯುತ್ತಾ ಕುಂಟು  ಪ್ರೇಯಸಿಯು ಕುಣಿಯುವ ನಿರೀಕ್ಷೆಯಲಿ ಕುರುಡನೋರ್ವ ಸೂರ್ಯನ ಉದಯಕ್ಕಾಗಿ ಕಾದಂತೆ ಬರಿ ಭ್ರಮೆಯ ಬದುಕನ್ನು ಸುತ್ತ ಹೆಣೆಯುತಿದ್ದರು ಸಹ ಸುಳ್ಳನ್ನೇ ನಿಜವೆಂದು ತಿಳಿಯುವದು ಬದುಕಿನ ಸಂತಸದ ಸೂತ್ರ ಬೀರುಗಾಳಿ ನಡುವೇ ಸಿಲುಕಿದರು ಜೀವದ ಹಂಗು ತೋರೆದರು ಬದುಕುವೇ ಎನ್ನುವ ನಂಬಿಕೆಯೇ ಮನುಷ್ಯನ ಜೀವಂತಿಕೆಗೆ ಆಧಾರ ನಿಮ್ಮ ಹರೀಶ್

ಸ್ವಾಗತ

ಅರಿಯೇ ಇದಾವ ಪರಿಯ ಕಾತರ ಪ್ರತಿಗಳಿಗೆಯು ಮನಸು ಅರಿಯದೇ ಮಾಡುವದು ಬರಿ ನಿನ್ನ ವಿಚಾರ ಅಗೋಚರ ನಿರಾಕಾರ ನನ್ನ ಬದುಕಿಗೊಂದು ಅರ್ಥ ನೀಡುವ ಮೂರ್ತಿ ನೀನೆ ಸಾಕಾರ ನನ್ನ ಕಣ್ಣಿನ ಕನಸು, ನನ್ನ ಹೃದಯಕೆ ಶಾಂತಿ, ನನ್ನ ಬದುಕಿಗೇ ನೀನೆ ಆಧಾರ ಸುಂದರ ಸುಮುಧರ ನಿನ್ನ ಇರುವಿಕೆಯೇ ನಮ್ಮ ಬದುಕಿಗೆ ದೈವದ ಸಾಕ್ಷಾತ್ಕಾರ ಅದ್ಭುತ ಜಗತ್ತು ಸೃಷ್ಟ್ಹಿಸಿದಾ ಪರಮಾತ್ಮನೇ ನಿನಗೆ ಕೋಟಿ ಕೋಟಿ  ನಮಸ್ಕಾರ ನಿಮ್ಮ ಹರ್ಷಾ

ಅವನು ಪ್ರಿತಿಸಲೇ ಇಲ್ಲ

ಅವನು ಪ್ರಿತಿಸಲೇ ಇಲ್ಲ   ನನ್ನ ಅಂದವ ಹೊಗಳಿ ,   ನನ್ನ ಕಣ್ ನ್ನುಗಳಲ್ಲಿ ಕಣ್ಣನಿಟ್ಟು ನೂರಾರು ಆಣೇ ಪ್ರಮಾಣ ಮಾಡಿದ ಆದರು ಆತ ಪ್ರಿತಿಸಲೇ ಇಲ್ಲ ಅವನು ಹೇಳಿದ ಮಾತುಗಳು ತೋರಿಸಿದ ಕನಸುಗಳು ಹಂಚಿಕೊಂಡ ಭಾವನೆಗಳು ಒಂದು ಸುಳ್ಳು ಎನಿಸಲೇ ಇಲ್ಲ ನನ್ನ ನೋವುಗಳನ್ನೆಲ್ಲಾ ಅನುಭವಿಸಿ ನನಗಾಗಿ ಮಿಡಿಯುತಿದ್ದ, ಅವನ್ಯಾಕೋ ಪರಕೀಯ ಅನಿಸಲೇ ಇಲ್ಲ ಇಷ್ಟು ಹತ್ತಿರವಾಗಿ ತುಂಬ ದೂರವಾದ, ನನ್ನ ಆಕ್ರಂದನವನ್ನು ಕೇಳಿಯೂ ಕೆಳದಾದ . ಅವನ್ಯಾಕೆ ನನ್ನ ಪ್ರೀತಿ ಮರೆತು ಹೋದ ನಿಮ್ಮ ಹರ್ಷಾ