Posts

ಅವರು ಹೀಗೇಕೆ ?

ನನ್ನ ಸಣ್ಣ ಸಣ್ಣ ಆಸೆಗಳು ನೆರವೆರದಿದ್ದಾಗ ನನ್ನ ಮೇಲೆ ನನಗೆ ತಾಳಲಾಗದ ಕೋಪ , ತಾಪ .. ಒಂದು ಸಿಕ್ಕಾಗ ಮತ್ತೊಂದರ ಬಯಕೆ , ಎಂದು ಮುಗಿಯದ ಬೇಕು, ಒಂದರ ಹಿಂದೆ ಮತ್ತೊಂದು ಬಯಕೆ ... ನಮ್ಮಮ್ಮ ನಮ್ಮಪ್ಪ ಒಂಥರಾ ವಿಚಿತ್ರ, ಅವರ ಬಾಳಿನಲ್ಲಿ ಯಾವಾಗಲು ಬರಿ ನನ್ನ ಬಾಳಿನ ಬಣ್ಣ ಬಣ್ಣದ ಚಿತ್ರ .. ಅವರ ಬೇಕು- ಬೇಡಗಳು ಎಂದು ಅವರನ್ನು ಬಾಧಿಸಲೇ ಇಲ್ಲ, ಐಶಾರಮದ ಬದುಕು ಮತ್ತ್ಯಾವದೋ ಕನಸಿಲ್ಲ . ನಗು ನಗುತ್ತಲೇ ನೋವನ್ನೆಲ್ಲ ಅನುಭವಿಸಿದರು, ಕಷ್ಟಪಟ್ಟರು ಆದರು ನನಗೇಕೆ ಅದರ ಅರಿವು ಎಂದು ಆಗಲೇ ಇಲ್ಲ .. ನಿಮ್ಮ ಹರೀಶ ಬೀರಗೆ

ಮುಗ್ಧ

ಅವನೊಬ್ಬ ಮುಗ್ಧ , ಸ್ವಲ್ಪ ಹುಚ್ಚನೆ ಸರಿ, ಬದುಕು ಪೂರ್ತಿ ಸೆಣೆಸಾಟ. ಮೋಸ ಅರಿಯದ ಜೀವಿ ಆದರು ಜಗತ್ತನೇ ಗೆಲ್ಲುವ ಬಯಕೆ . ತನ್ನ ನೋವಿಗಿಂತ ಬೇರೆಯವರ ನೋವಿಗೆ ಮಿಡಿಯುತಿತ್ತು ಎಂದೆಂದು ಆತನ ಹೃದಯ. ಬೇರೆಯವರ ದುಃಖಕ್ಕೆ ಕಂಬನಿ ಸುರಿಸುತಿದ್ದ ಸಹೃದಯಿ .. ಓ ದೇವರೇ ನಿನೆಂಥ ಪಾಪಿ, ಅದೊಂದು ಬೆಳೆಯುತಿದ್ದ ಮೊಗ್ಗು . ಹರೆಯದ ಯುವಕ ಆದರೆ ಎಂದೆಂದು ಮನಸಿನಿಂದ ಮಗು. ನಿಷ್ಯಬ್ದವಾಗಿಸಿದೆ ಆ ತೊದಲು ಮಾತುಗಳು ಬರಿ ಕ್ಷಣ ಮಾತ್ರದಲಿ . ಚಿಗುರಿನಲಿ ಚಿವುಟು ಹಾಕಿದೆ ಮತ್ತೊಂದು ಎಳೆಯ ಸಸಿಯನ್ನು , ನಿನ್ನ ಇರುವು ತೋರಿಸಬೇಕೆಂದು ... ನಿಮ್ಮ ಹರೀಶ (ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)

ಅಮ್ಮ

ಅಮ್ಮ ನನ್ನ ಬಾಳಿಗೆ ನೀನೆ ದಾರಿ ದೀಪ, ನಿನ್ನ ನೆನಪುಗಳು ಇರದ ಬದುಕು ತಾಳಲಾಗದ ಒಂದು ದೊಡ್ಡ ಶಾಪ . ದೂರವಾದೆ ನನ್ನ ಬಾಳಿನಿಂದ ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು ಮರಳಿ ಬರದ ಲೋಕಕ್ಕೆ ನಿಶ್ಯಬ್ದವಾಗಿ ಪಯಣಿಸಿದೆ . ತಲೆಯ ಮೇಲೆ ಕೈಯಾಡಿಸದೇ ನೀನು, ಎದ್ದಾಗಲೆಲ್ಲ ನಾನು ನನ್ನ ಸುತ್ತಲೆಲ್ಲಾ ಬರಿ ಅಂಧಕಾರವೇ ಕವಿಯುತ್ತಿತ್ತು. ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು ನಡೆಸಿ, ಮುಗ್ಧ ಮಗುವಾಗಿಸಿದೆ. ನಾನೇನು ಮಾಡಲಿ ಈಗ ಈ ಕ್ರೂರ ಜಗತ್ತಿನಲಿ ನಾನು ಎಕಾಂಗಿಯಮ್ಮ. ನಿಮ್ಮ ಹರೀಶ್

ಕನಸು

ಕದಡಿದ ಕನಸಲಿ ನೋವಿನ ಮಡುವಿನಲ್ಲಿ ತೊಳಲಾಡುತ್ತಿದೆ ಮನಸು ನನ್ನರಿವೆ ನನಗಿರದೇ ಎಲ್ಲೆಲ್ಲೋ ಹರಿದು ಮನವು ಕೈ ಜಾರುತ್ತಿದೆ ಕನಸು ಮೌಲ್ಯ ಕಳೆದುಕೊಂಡ ಬದುಕು, ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್ ಈ ಮನಸು ಹುಳುಕು . ನನ್ನ ಮಾತಿಗೆ ನಾನೆ ಬದ್ಧನಲ್ಲ ಸುಮ್ಮನೆ ಗೊಣಗುತ್ತೇನೆ ನಿಮ್ಮೆಲ್ಲರ್ ನಡುವೆ ಜಾಣನಾಗಿ ಸಾಕಿನ್ನು ಮನಸೇ ಸಾಕಾಗಿದೆ ನನಗೆ, ಇಗಲಾದರು ಮೋಸ ಮಾಡದಿರು ನನಗೆ ... ನಿಮ್ಮ ಹರೀಶ್

ನನ್ನ ನೆಚ್ಚಿನ ಹಾಡು

http://www.youtube.com/watch?v=uP0vv6QgH3E

ನಮ್ಮ ಮನೆಯ ಜ್ಯೋತಿ

ನಮ್ಮ ಮನೆಯ ಜ್ಯೋತಿ ನಮ್ಮಮ್ಮ, ತನ್ನ ಬೆಳಕಿನಲಿ ನಮ್ಮನ್ನೆಲ್ಲ ಕೊನೆಯವರೆಗೂ ಬೆಳಗಿದಳು .... ನಮ್ಮ ಬಾಳಿನ ಪ್ರತಿ ಬಯಕೆಗಳನ್ನು ಕಾಮಧೆನುವಿಗು ಮಿಗಿಲಾಗಿ ಅವಳು ಪುರೈಸಿದಳು ..... ಮಿಗಿಲಾದ ದೊಡ್ಡ ದೊಡ್ಡ ಪ್ರಶ್ನೆ ನಮ್ಮ ಬದುಕಿನಲಿ ನಮ್ಮಮ್ಮ , ಅಪ್ಪಾಜಿಯ ಕಿರುನಗೆಯಲಿ ಕರಗಿದವು . ಅವರ ಕಣ್ಣಂಚಿನ ಆತಂಕ ಮನದಲ್ಲಿರುವ ನೋವುಗಳು , ನಮ್ಮೆದುರಿಗೆ ಎಂದು ಕಾಣದೆ ಮುಚ್ಚಿ ಹಾಗೆ ಹೋದವು .. ನಮ್ಮ ನಗುವಿನಲ್ಲಿ ನಕ್ಕು , ನಮ್ಮ ನೋವಿಗೆ ಮರುಗಿ ನಮಗಾಗಿ ನಿಮ್ಮ ಬದುಕೇ ಸವೆದು ಹೋದವು ...

ನಿರ್ಲಜ್ಜ ಮನಸು

ಮನಸೇ ನೀನೇಕೆ ಹೀಗೆ ? ತುಸು ನಾಚಿಕೆಯು ಬೇಡವೇ ನಿನಗೆ ಇನ್ನೆಷ್ಟು ದಿನ ನನ್ನನ್ನು ಓಡಿಸುವೆ ನಿನ್ನ ಆಸೆಯ ದಾಸನಾಗಿಸಿ ನನಗೆ ಎಷ್ಟು ಸಿಕ್ಕರೂ ಮತ್ತೆ ಬಯಸುವೆ, ಮಿತಿಮೀರಿದ ದುರಾಸೆಯಲ್ಲಿ ... ಸಾಕಿನ್ನು ನಾನಿಲ್ಲ ನಿನ್ನ ದಾಸ, ನನ್ನ ಮತ್ತೆ ಕೇಳಬೇಕು ಇಂದಿನಿಂದ ನೀನು ಮುಂದೆ . ನಿಮ್ಮ ಹರೀಶ್

ನಾ ಬಯಸಿದ ಹೂವು

Image
ನಾ ಬಯಸಿದ ಹೂವು ನನ್ನದಾಗಲಿಲ್ಲ ಯಾರದು ಮುಡಿಸೇರಿ ಹೊರತು ನಿಂತಿತಲ್ಲಾ ಏನೆಲ್ಲ ಮಾಡಿದೆ ಮನಸೇ ನಿನಗೆ ತಿಳಿ ಹೇಳಲು .. ಆದರು ನೀನೇಕೆ ತಿಳಿಯಲಿಲ್ಲ ... ಮತ್ತೆ ಮತ್ತೆ ಅದೇ ಕೇಳುವೆ ಬದುಕು ಹೀಗೇಕೆ ? ಸಿಗಬಹುದು ಎಂದು ಗೊತ್ತಿದ್ದರು ಕೈ ಚಾಚಲಗದು ಬಾಳಲ್ಲಿ ... ಓ ಕ್ರೂರ ವಿಧೆಯೇ ಹೀಗೇಕೆ ಆಟವಾಡಿದೆ ನನ್ನ ಬಾಳಲ್ಲಿ .. ನಿಮ್ಮ ಹರೀಶ್

ನನ್ನ ಮಾತುಗಳು

ಮೌನವಾಗಲಿ ನನ್ನ ಮಾತುಗಳು ನನ್ನ ಅಂತರಂಗದಲ್ಲೇ ಸ್ಥಬ್ದವಾಗಿ ಯಾರಿಗೂ ನೋವನು ಕೊಡದೆ, ಚುಚ್ಚಲಿ ನನ್ನ ಹೃದಯಕೆ ಮುಳ್ಳಾಗಿ ..... ನನ್ನ ಮಾತುಗಳಲ್ಲಿ ನನ್ನತನದ ಪ್ರೀತಿಯಿಲ್ಲ, ವಿಷ ಕಾರುತ್ತಿವೆ ಸುತ್ತಲಿನ ಪರಿಸರದಲ್ಲಿ ಬರಿ ನೋವನ್ನೇ ಪಸರಿಸುತ ... ಸುಮ್ಮನಾಗುವ ಹರಸಾಹಸ ಮಾಡುತಿದ್ದೇನೆ ಆದರು ಹರಿದು ಬರುತ್ತವೆ ಲಂಗು ಲಗಾಮಿಲ್ಲದ ಕುದುರೆಯ ಹಗೆ ಬಾಯಿ ತಪ್ಪಿ .. ನನಗಾಗಿ ಬಾಳು ಸವೆಸಿದವರಿಗೆ ಬಿಸಿಕದಲೆಯಾಗಿ ನನ್ನ ಮಾತುಗಳು ಎಂದು ಮಾಸದ ಗಾಯ, ಕೊಡುತ್ತಿರಲು ನೋವ ತಾಳಲಾಗದು ದೇವರೇ ... ಸ್ಥಬ್ಧವಾಗಿಸು ನನ್ನುಸಿರು ಮುಂದೆಂದು ನಾನು ಮಾತಾಡದ ಹಾಗೆ.... ನಿಮ್ಮ ಹರೀಶ್

ಒಂದು ಸುಂದರ ಕನಸು

ಒಂದು ಸುಂದರ ಕನಸು ನೀಡು ತಾಯೆ ಜಗನ್ಮಾತೆ . ನಮ್ಮಮ್ಮನ ಮಡಿಲಿನಲ್ಲಿ ಮತ್ತೆ ಮಗುವಾಗಿಸು ನನ್ನ . ಎನನ್ನು ಅರಿಯದ ಆ ಹಸಿನಗೆ ನನ್ನ ಉಸಿರಾಗಲಿ ಮತ್ತೊಮ್ಮೆ ನನ್ನ ಈ ತುಟಿಗಳ ಹುಸಿನಗೆಯ ಮಾಸಿ ಮತ್ತೊಮ್ಮೆ ಶಿಶುವಾಗಿಸು. ಯಾರದೋ ನೋವಿಗೆ ಸ್ಪಂದಿಸುವ ಹೃದಯ ನಿಡು ನನಗೆ, ಬರಿ ಅಮೃತವೇ ಹೊರಹೊಮ್ಮಲಿ ನನ್ನದೆಯಲಿ, ಬತ್ತಿ ಹೋಗಲಿ ನನ್ನೆದೆಯಲಿ ವಿಷದ ಬುಗ್ಗೆ .. ತಿದ್ದಿ ತಿದ್ದಿ ನಮ್ಮಮ್ಮ ಕಲಿಸಿದ ಆ ಮುದ್ದು ಮುದ್ದು ಮಾತುಗಳು ರಾರಾಜಿಸಲಿ ನನ್ನ ತುಟಿಯ ಅಂಚಿನಲ್ಲಿ ಮರೆಮಾಚಿ ಕಪಟದ ಸವಿನುಡಿಯ .. ಎಂದು ಬತ್ತದ ಹಾಗೆ ನಮ್ಮಮ್ಮನ ಸವಿನೆನಹುಗಳು, ನನ್ನೆದೆಯಲೆಲ್ಲ ಬೆಳಗುತ್ತಿರಲಿ , ಎಂದೆಂದು ನನಗೆ ದಾರಿದೀಪವಾಗಿ .. ನಿಮ್ಮ ಹರೀಶ್

ಅಮ್ಮ

ಅಮ್ಮ, ಸೋತಿರುವನು ನಿನ್ನ ಮುದ್ದು ಕಂದ, ಕಾಲದ ಚಕ್ರವ್ಯುಹದಲಿ ಸಿಲುಕಿ ಏಕಾಂಗಿಯಾಗಿ .. ಬತ್ತಿ ಹೋಗುವ ಕನಸಿನ ಚಿಲುಮೆಯನು ಕಂಡು, ನಲುಗಿ ಹೋಗಿದೆ ಜೀವ ಸೋಲು ಸಾಕಾಗಿ .... ನನ್ನ ಕಣ್ಣಿಗೆ ಕನಸು ಕಟ್ಟುವ ಪರಿಯ ತಿಳಿಸಿ, ನನ್ನ ಬದುಕಿಗೆ ಸುಂದರ ಮುನ್ನುಡಿ ಬರೆದೆ ... ನೀನಿರುವಾಗ ಸೋಲಿನಲ್ಲು ನಲಿವಿತ್ತು ..ನನ್ನ ಬದುಕಿನಲಿ ಈಗ ಗೆಲುವಿನಲ್ಲು ನಲಿವಿಲ್ಲ ಅಮ್ಮ .... ಮರಳಿ ಬಾ ಮತ್ತೊಮ್ಮೆ ನನ್ನ ಬದುಕಿನಲಿ .. ತಲೆ ಸವರಿ ಮುತ್ತೊಂದ ಹಣೆಯ ಮೇಲೆ ಕೊಟ್ಟು ನಿಮ್ಮ ಹರ್ಷಾ

ಗೆಳತಿ,

ಗೆಳತಿ, ಮತ್ತೆ ನೆನಪಾಗುತಿದೆ , ಮಂಜಾದ ಕಣ್ಣು.. ನಿನ್ನ ಸುಪ್ತ ಕನಸುಗಳು ಬಾಡಿ ಹೋಗುವ ಹೆದರಿಕೆ ... ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು. ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ ..... ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ. ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆ...

ಮನಸ್ಸು

ಕಲುಷಿತವಾಗಿದೆ ಮನಸ್ಸು ಹುಳುಕು ಕೊಳಕೆಲ್ಲ ತುಂಬಿ ದುಂಬಿಯ ಬಯಕೆ ಹುಚ್ಚಿ ಬಿಡು ನಿನಗ್ಯಾಕೆ ? ಆಗಲಿಲ್ಲ ನೀನು ಪರಿಮಳ ಸೂಸುವ ಹೂವು ... ರಾಡಿಯಲ್ಲಿ ತೇಲುತ್ತಿರುವ ನಿನಗೆ ಸಿಗುವದು ಸೊಳ್ಳೆಗಳ ಪ್ರೀತಿ, ಎಂದೋ ಮಾರಿಬಿಟ್ಟೆ ನೀನು ಮನುಷ್ಯತ್ವ, ನ್ಯಾಯ, ನೀತಿ. ದೇವರ ಅಡಿಗೆ ಬಿಡು, ಯಾರದೋ ಮುಡಿಗೂ ಸೇರದೆ ಹೋದೆ. ಸಿಕ್ಕ ಸಿಕ್ಕವರ ಆಸೆಯ ಬಯಕೆಯಲ್ಲಿ ಬಳಲಿ ಹೋದೆ .. ಪಾಪ ನಿಸ್ಸಹಾಯಕ ಹೂವು ಪಾಪಿ ಚಿ ನೀನೇಕೆ ಇನ್ನು ಕೆಲ ಕಾಲ ತಾಳದೆ ಹೋದೆ.... ಹರ್ಷಾ

ಕವಿತೆ

Image
ಎಲ್ಲಿ ಹೋದೆ ಕವಿತೆ ನನ್ನಿಂದ ದೂರವಾಗಿ ಒಮ್ಮೆ ಮಿಂಚಿ ಮರುಕ್ಷಣದಲ್ಲೇ ನನ್ನ ಬಾಳಿಂದ ಮರೆಯಾಗಿ ನನ್ನ ಬದುಕು ಸುಂದರ ಹೂದೊಟವಾಗಿಸಿದ್ದೆ ನೀನು ಹೂವಿರದ ತೋಟಕ್ಕೆ ಬೇಲಿಯ ಹೊರೆಯೇಕೆ ? ನನ್ನ ಹೊಟ್ಟೆಯ ಹಸಿವಾಗಿದ್ದೆ , ನನ್ನಯ ಕಣ್ಣಿನ ನಿದ್ದೆ . ಅರ್ಥವಿರದ ನನ್ನ ಬದುಕಿಗೆ ನೀನೆ ಅರ್ಥ ಕೊಟ್ಟಿದ್ದೆ. ಬಾ ಕವಿತೆ ಬಿಡು ಸಾಕು ಈ ಕೋಪ, ತಾಪ ನೆನಪಿರಲಿ ನಿನಗೆ ನೀನಿರದ ಬದುಕು ನನಗೆ ಒಂದು ಶಾಪ . ಹರ್ಷಾ

ನೋವಿನ ಹೂವು

ನನ್ನ ಹೃದಯದಲಿ ಬೆಳೆಯುತಿದೆ ನೋವಿನ ಹೂವು . ನನ್ನನ್ನೇ ಬೂದಿ ಮಾಡುವ ಹಾಗೆ ಧಗ ಧಗಿಸುವ ಕಾವು ಓ ಮನಸೇ ನಿನಗೇಕೆ ಈ ಶಮನವಾಗದ ನೋವು . ಸಾಗುತಿದೆ ಬದುಕು, ಆದರು ನನ್ನ ಪಯಣ ಎಲ್ಲಿಗೆ ? ಬೆಂಕಿಯ ಜ್ವಾಲೆಯಾಗಿ ಕಾಡುತಿದೆ ಯಾಕೆ ಬಿಳಿ ಮಲ್ಲಿಗೆ ? ಓ ದೇವರೇ ಸಾಕು ಶಾಂತಿ ಕೊಡು ನನ್ನ ಈ ಮನಸಿಗೆ . ಹರ್ಷಾ

ಬಯಸಿದಾಗ ನಾನೊಮ್ಮೆ

ಬಯಸಿದಾಗ ನಾನೊಮ್ಮೆ ಬಿದಿ ನಾಯಿಹಾಂಗ ತಿರುಗಿದ್ದೆ ನಿನ್ನ ಹುಡುಕುತ್ತ ನಿನ್ನ ಹಿಂದೆ ಅತಿಯಾಗಿ ನಿನ್ನನ್ನು ಕದ್ದು ನೋಡುತಿದ್ದೆ ಲಗ್ನ ಮಂಟಪದ ಕಾಂಪೌಂಡ್ ಹಿಂದೆ ನಿ ನಕ್ಕಾಗ ಅರಳಿದ ತಾವರೆ ಗಾಳಿಗೆ ಸಿಕ್ಕಿತ್ತು ಎಂದು ಮನದಲ್ಲಿ ನಾನು ನೊಂದೆ. ನಿನ್ನ ಕಾಲಿಗೆ ಮುಳ್ಳು ಚುಚ್ಚಿದ ಗಿಡದ ಬುಡವನ್ನೇ ಕಿತ್ತಿ ಬಂದೆ ನಾನೊಮ್ಮೆ ನಿನ್ನ ಹಿಂದೆ ತಿರುಗುತಿದ್ದಾಗ ಹೀಗೆ ನೀನು ಅವನ ಜ್ಯೋತೆ ಮಾತನಾಡುವದು ಕೇಳಿ ಬಂದೆ ಆ ಮಾತುಗಳೆಲ್ಲ ಚೂಪಾದ ಬಾಣಗಳಂತೆ ನನ್ನ ಹಿಂದೆ ಬರುವದ ನೋಡಿ ನಾನು ನೊಂದೆ ನಿನ್ನ ಮಲ್ಲಿಗೆ ನಗು ಬಿದಿ ಮ್ಯಾಲ್ಯಾಕ ಚೆಲ್ಲುತಿ ಯಾರನ್ನು ಹುಚ್ಚನಾಗಿಸಬೇಕೆಂದು ನಿನಗಾಗಿ ಹುಚ್ಚಾಗಿ ತಿರುಗುತಿದ್ದಾಗ ನಾವು ನಿನ್ನ ಹಿಂದೆ ನಿ ನೋಡಿ ನೋಡದ ಹಾಗೆ ಹೋಗುತಿಯಾಕೆ ಬರಿ ಮುಂದೆ ಮುಂದೆ ನನ್ನ ಮನದಾಗೆ ಹತ್ತಿರುವ ಬಿರುಗಾಳಿ ಹತ್ತಿಕ್ಕಲಿ ಹ್ಯಾಂಗ ಇಂದು ಅದನ್ಯಾರು ನೋಡರು ಕರಿತಾರ ನನ್ನ ಬರಿ ಹುಚ್ಚನೆಂದು

ಎ ವಸಂತವೇ

ಎ ವಸಂತವೇ ಮತ್ತೆ ಬಂದೆ ಎಲ್ಲರ ಬದುಕಿನಲ್ಲಿ , ಏನು ಹೊಸ ಖುಷಿಯ ತಂದೆ ?. ನನ್ನ ಸುತ್ತಾಲೆಲ್ಲಾ ಹಸಿರು ತೊರಣದ ಸರಮಾಲೆಯನ್ನೇ.. ಕಂಗೊಳಿಸಿ ನಿಂದೆ.. ಮಧುರ ಕೋಗಿಲೆಯ ಇಂಪಾದ ಹಾಡಿಗೆ ತಲೆದೂಗುತಾ ನೀನು ಬೆರಗಾಗಿ ನಿಂದೆ ಒಂದು ಮಾತು ಹೇಳು ನನಗೆ, ಏಕೆ ಗೆಳೆಯನೆ ನನ್ನ ನೀನು ಮರೆತು ಹೋದೆ. ?. ನನ್ನ ಬದುಕಿನಲ್ಲಿ ಏಕೆ ಮತ್ತೆ ಆದೇ ಹಳೆಯ ನೋವನು, ಹೋಗಲಾಡಿಸದೇ ಸೋತು ನಿಂದೆ. ಬರೆಯುತ್ತೇನೆ ಕೆಲವು ಸಾಲು ನಿನ್ನ ಆಗಮನದ ಮೊದಲು, ಹೊಸ ಚೈತನ್ಯ ಮುಡಲಿ ನನ್ನಲ್ಲಿ ಎಂದು.... ಮತ್ತೆ ನೆನಪಾಗುವಳು ಅವಳು ಒಮ್ಮೆ ಕೇಳಿದರೇ ಸಾಕು ಕೋಗಿಲೆಯ ಇಂಪಾದ ಧ್ವನಿಯನೊಮ್ಮೆ...... ಸುತ್ತಲಿನ ಹಸಿರಿನಲ್ಲಿ ಎಲೆಯ ಹಿಂದೆ ಅವಿತು ತನ್ನನ್ನು, ನನ್ನ ಕಾಡಿಸುವ ಆಟ ಆಡುವ ಅವಳ ನೆನಪು.... ಕಣ್ಣು ಮುಚ್ಚಿ ಹಣೆಯ ಮೇಲೆ ಮುತ್ತಿಟ್ಟು ನೋಡುವಳು, ನಿಲ್ಲುತಿದ್ದಳು ಮುಗ್ದ ಹುಡುಗಿಯ ಹಾಗೆ, ಹೆದರಿಕೊಂಡು ನೋಡುವ ಅವಳ ಬಗೆ. ಹಳೆಯ ನೆನಪುಗಳೆಲ್ಲ ನಿನ್ನ ಆಗಮನದೊಂದಿಗೆ ಚಿಗುರುತ್ತವೆ ನನ್ನಲ್ಲಿ, ಹೊಸ ನೋವುಗಳಾಗಿ.. ಒಮ್ಮೆ ಹೆಳು ನನ್ನ ನಾನು ಮರೆಯಲಿ ಎಲ್ಲ ಹೇಗೆ.. ನಿನ್ನ ಸ್ವಾಗತಕ್ಕೆ ಬರೆಯಬೇಕೆಂದು ಅನಿಸಿತ್ತು ಪ್ರತಿ ಬಾರಿ ನೀನು ಬರುವಾಗ, ಗೊತ್ತಿರಲಾರದೇ ಬರೆಯುತ್ತೇನೆ ಮತ್ತೊಂದು ಕವನ ಅವಳಿಗಾಗಿ

ನಾನು ಮತ್ತು ಅಮ್ಮನ ನೆನಪು

Image
ಸುತ್ತಲಿನ ಸುಂದರ ಜಗತ್ತಿನಲ್ಲಿ ಸಂತೋಷವೇ ನನ್ನ ಮೈ ಮರೆಸುತಿದ್ದಾಗ ಅರೆ ಗಳಿಗೆ ಅಮ್ಮ ನಿನ್ನ ಮರೆತಿದ್ದೆ. ಕಣ್ಣು ಕೋರೈಸುವ ಬೆಳಕು ದಾರಿ ತಪ್ಪಿಸುವ ಮನಸು ಹರೆಯದ ನೂರಾರು ಕನಸುಗಳ ನಡುವೆ, ಅಮ್ಮ ನಿನ್ನ ಮರೆತಿದ್ದೆ. ನಶ್ವರ ಜಗತ್ತಿನ ನಿಶೆಯಲಿ ಅರೆ ಗಳಿಗೆ ನನ್ನನ್ನೇ ನಾನು ಮರೆತಾಗ ಹುಚ್ಚಾಗಿ, ಹೌದಮ್ಮ ನಿನ್ನ ಕೂಡಾ ಮರೆತಿದ್ದೆ. ಸಾಕಾಗಿ ಹೋಗಿದೆಯಮ್ಮ ಜಗತ್ತಿನ ಚಿತ್ರ ವಿಚಿತ್ರ ದ್ರಶ್ಯಗಳು, ಕನಸಿನೊಳಗೊಮ್ಮೆ ಬಂದು ಕಣ್ಣಿರ ಒರೆಸಮ್ಮ ಸಾಕಾಗಿದೆ ನಿನ್ನ ಕಂದ ನೀಗೆ ಬದುಕಿಂದು. ನಿಮ್ಮ ಹರ್ಷ

ಪ್ರೀತಿಯ ಕುಮಾರನಿಗೆ

Image
ಪ್ರೀತಿಯ ಕುಮಾರನಿಗೆ, ನನ್ನ ಬದುಕಿನಲ್ಲಿ ನಾನು ಎಲ್ಲಕಿಂತ ಹೆಚ್ಚಾಗಿ ಪ್ರೀತಿಸದ ವ್ಯಕ್ತಿ ನೀನು, ನಿನಗೂ ಗೊತ್ತಿರಬಹುದು, ನೀನೆ ಹೇಳಿದ್ದೆ ಅಂದು ರಾತ್ರಿ ನೀನು ನಿನ್ನ ತಮ್ಮನ ಜ್ಯೋತೇ ಮೂವಿಗೆ ಹೋಗಬೇಕಾದರೆ ನಿನ್ನ ಮೊಬೈಲ್ ಗೆ ಅದ್ಯವಾದೋ ಮಿಸ್ ಕಾಲ್. ನಿಜ ಹೇಳ್ತೀನಿ ನನ್ನಾಣೆಗು ಅದೊಂದು ರಾಂಗ್ ನಂಬರ್ ಕಾಲ್ ಅಷ್ಟೇ. ನೀನು ದೊಡ್ಡ ಹಟಮಾರಿ ಮರುದಿನ ಎಷ್ಟೊಂದು ಸಲ ಕಾಲ್ ಮಾಡಿದ್ದೆ ಕೊನೆಗೆ ನಾನೊಮ್ಮೆ ಫೋನ್ ಎತ್ತಿದಾಗ ನಿನ್ನ ಜ್ಯೋತೇ ನಾನು ಮಾತಾಡಿದ್ದೆ.ನಿನ್ನ ಆ ಮಾತಾಡೋ ಶೈಲಿ ನಿಜಕ್ಕೂ ಕಣೋ ಯಾವುದೇ ಹುಡುಗಿ, ಎಷ್ಟೇ ಕನ್ಸರ್ವೇಟಿವ್ ಆಗಿರಲಿ ನಿನ್ನ ಮಾತು ಕೆಳಿದರೆ ಢಮಾರ್, ಮತ್ತೆ ಮತ್ತೆ ಮಾತಾಡಿಸಬೇಕು ಅನಿಸುತ್ತೆ. ಮಿಸ್ ಕಾಲ್ ನಿಂದಾದ ಪರಿಚಯ ಬೇರೆಯವರಿಗೆ ಯಾವಾಗಲು ಯುವರ್ ಕಾಲ್ ಈಸ್ ವೇಟಿಂಗ್ ಅನ್ನೋ ಮಟ್ಟಕ್ಕೆ ತುಂಬಾ ಮಾತಡಿದ್ದಿವಿ,ಬಹಳಷ್ಟು ಸಲ ನಿನಗೆ ಗೊತ್ತಿರದ ವಿಷಾಯನೇ ಇಲ್ಲ ಅನಿಸುವ ಮಟ್ಟಿಗೆ ನಿನ್ನ ಕನ್ವಿನ್ಸಿಂಗ್ ಸ್ಟೈಲ್ ನನಗೆ ತುಂಬಾನೆ ಹುಚ್ಚು ಹಿಡಿಸುತಿತ್ತು. ನಾವಿಬ್ಬರು ಕೊನೆಗೊಮ್ಮೆ ಭೇಟಿ ಆದಾಗ ಒಮ್ಮೆಲೇ ನಿನ್ನ ಮುತ್ತಿಡಬೆಕು ಅನ್ನುವ ಭಾವನೆ ಉಕ್ಕಿತಾದರೂ, ಫ್ರೀ ಆಗಿ ಸಿಗೋ ಹುಡುಗಿ ಅನ್ಕೊಬಾರದು  ಅಂತ ಸುಮ್ಮನಾಗಿದ್ದೆ . ಥೂ ನೀವು ಕವಿಗಳು ಹೀಗೆನಾ, ಬರಿ ಭಾವನೆ ಕೆಡಿಸಿ ಕಾಡುವ ನೀಚರೇನೋ ಅಂತ ಅನಿಸುವ ಮಟ್ಟಿಗೆ ನನ್ನ ಭಾವನೆಗಳ್ಲನ್ನು ಕೆಣಕಿ ಒಮ್ಮೆಯೂ ಮುಟ್ಟದೆ ಹೋದ ಪಾಪಿ ನೀನು.ಪ...

ನೆನಪಿನ ಮಾತು

Image
ಯಾವ ನೆನಪಿನ ಮಾತು ಇಂದು ಕಾಡೀತು ಗೆಳತಿ, ಎಂದಿನಿಂದ ನೀನು ಆದೇದೊಡ್ಡ ಹೃದಯದ ಒಡತೀ? ಹೋದ ವರುಷದ ಚಳಿಗಾಲದ ರಾತ್ರಿಯೊಮ್ಮೆನನ್ನ ಅಪ್ಪಿಕೊಂಡು, ಮುತ್ತುಗಳಸುರಿಮಳೆ ಸುರಿಸಿದವಳು ನೀನೆ ಅಲ್ಲವೇ ಹುಡುಗಿ ? ಮಳೆಗಾಲದಲಿ ನಿಮ್ಮೋರಿಗೆ ಹೊರಟಾಗ ನನ್ನ ಬಿಟ್ಟು ಎರಡು ದಿನ, ನಿನ್ನ ಬಿಟ್ಟುಹೇಗಿರಲಿ ಎಂದು, ಮಳೆ ಹನಿಗಳಿಗಿಂತ ನಮ್ಮಕಣ್ಣಿರೆ ನೆಲವನ್ನೂ ನೆನೆಸಿದ್ದು ಹೇಗೆ ಮರೆತೆ ನೀನು? ಬೇಸಿಗೆಯಲ್ಲೊಮ್ಮೆ ನಾವಿಬ್ಬರು ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು ಚುಕ್ಕಿಗಳನ್ನುಹೆಕ್ಕಿ, ಹೆಕ್ಕಿ ಎಣಿಸಿದ್ದು, ಮುಂಜಾನೆ ಎರಡು ಚುಕ್ಕಿ ನಿನ್ನ ಕಣ್ಣಲ್ಲೇ ಇದೆ ಎಂದು ನಾನು ಆಂದಾಗ, ನನ್ನ ಹುಚ್ಚನೆಂದು ನಕ್ಕಿದ್ದು ನೆನಪಿದೆ ತಾನೇ? ನಿನ್ನ ನಾ ಮರೆತಿರುವೆ, ಅದೊಂದು ಕೆಟ್ಟ ಕನಸು, ನಿನಗಾಗಿ ಇಲ್ಲ ನನ್ನ ಈ ಮನಸು.. ಎನ್ನುವ ನಿನ್ನ ತುಟಿಗಳಲ್ಲಿ ಇನ್ನೂ ನನ್ನ ಮುತ್ತಿನ ಮತ್ತಿದೆ, ನಿನ್ನ ಆ ಕಣ್ಣುಗಳಲ್ಲಿ ಇಂದಿಗೂ ಕಾಣುತ್ತಿದೆ ನನ್ನ ಪ್ರತಿಬಿಂಬ, ನಿನ್ನ ನಾನು ನಂಬಲೇ? ಆಥವಾ ನಿನ್ನೊಳಗಿರುವ ನನ್ನ ನಾ ನಂಬಲೇ ಹೇಳು ಗೆಳತಿ? ನಿಮ್ಮ ಹರ್ಷಾ