ನಿನ್ನ ಮರೆಯವ ಮುನ್ನ..... ನನ್ನುಸಿರು....

ಮುಂಜಾವಿನ ಅರಳಿ ನಿಂತ ಗುಲಾಬಿ ಹೂವಲ್ಲ ಗೆಳತಿ ನಮ್ಮಬ್ಬಿರಾ ಈ ಪ್ರೀತಿ.... ಸುಡುವ ರವಿಯ ತಾಪಕ್ಕೆ ಕರಗಿ ನೀರ ಹನಿಯಾಗುವ ಮಂಜಂತೇ ಕ್ಷಣಿಕವಲ್ಲ ಈ ಪ್ರೀತಿ.. ಒಮ್ಮೊಮ್ಮೆ ಬಿಸಿ ಕ್ಷಣದಲ್ಲೇ ಮರೆಯಾಗುವ ತಂಗಾಳಿಯಲ್ಲ ಗೆಳತಿ ನಮ್ಮಿಬ್ಬರ ಈ ಪ್ರೀತಿ...... ನಿನ್ನ ನೀನು ಮರೆತರು ಮರೆಯಬಹುದು, ನನ್ನ ಬದುಕಿನ ಕೊನೆಯ ಉಸಿರಿನವರೆಗೂ.... ನಿನ್ನ ನೆನಪನ್ನು ಹೆಕ್ಕಿ ಹೆಕ್ಕಿ ನನ್ನೆದೆಯ ಮೇಲೆಲ್ಲಾ ಕೆತ್ತುವೆ ಸುಂದರ ಚಿತ್ತಾರವಾಗಿಸಿ.... ನಿನ್ನ ಮರೆಯುವ ಮಾತು ಜಗತ್ತಿನ ದೊಡ್ಡ ಮಿಥ್ಯ.. ನಮ್ಮಿಬ್ಬರ ಪ್ರೀತಿ ಎಂದು ಸುಳ್ಳಗಾದ ಸತ್ಯ..... ನನ್ನ ಉಸಿರು ನಿಲ್ಲುವ ಕೊನೆಯ ಗಳಿಗೆಯಲ್ಲೂ.. ಮನ ತುಂಬಿ ಪ್ರಾಥಿಸುವೆ ನನ್ನ ದೇವರನ್ನೊಮ್ಮೆ ಅವಳ ಕೆಲವು ನೆನಪುಗಳನ್ನು ಮತ್ತೇ ಮತ್ತೇ ನೆನಪಿಸು ನನಗೆ, ಸುಂದರ ಕಾವ್ಯವಾಗಲಿ ನನ್ನ ಸಾವು ಅವಳ ನೆನಪಿನ ಅಪ್ಪುಗೆಯಲಿ... ನಿಮ್ಮ ಹರ್ಷ