Posts

Showing posts from January, 2013

ಸೂರ್ಯಾಸ್ತದ ಸಮಯ

ಸೂರ್ಯಾಸ್ತದ ಸಮಯ ಅವನ ಬೆಳಕಿನ ಸನಿಹ ಕುಳಿತು ಬಯಸಿತು ಮಗುವು ಒಂದು ಹೊಸ ದಿನವು. ಪುಟ್ಟ ಹೇಳಿಕೊಳ್ಳುತಿತ್ತು , ತನ್ನಲ್ಲಿ  ತಾನೇ ಅಮ್ಮ ಮಾಡಬೇಕು ಒಂದು ಬಿಸಿ ರೊಟ್ಟಿ! ತುಂಡು ನನಗೆ ಉಳಿದುದು ಅಣ್ಣ, ಅಪ್ಪ, ಅಮ್ಮಗೆ ಕೊಟ್ಟೆ ಮತ್ತೇ ಹಸಿವಿಗೇ ? ಇರುವದು ಭಿಕ್ಷೆ ತಟ್ಟೆ! ಯಾರ ಮನೆಯ ಮುಂದೇ ಕೈಚಾಚಿದರು ಅಂದರೂ ಪರವಾಗಿಲ್ಲ ದರಿದ್ರಗಳು.. ಅನ್ನಬಾರದು ಪಾಪದ ಪೀಡೆಗಳು.. ಹಳಸಿದನ್ನು ಕೊಟ್ಟರೂ ಹೇಳುವೆ ಧನ್ಯವಾದಗಳು. ಅಷ್ಟರಲ್ಲಿ ಸೂರ್ಯ ಮುಳುಗುತ್ತಿರಲು ಮಗು ಹೇಳಿತು, ಇನ್ನೂ ಸ್ವಲ್ಪ ತಾಳು ಮಾಮಾ.. ಎದುರು ಮನೇ ನಿಮ್ಮಿ ಕಾರು ಒರೆಸುವ ಬಟ್ಟೇ ಅದು ಕೊಟ್ಟರೂ  ನಾ ತುಂಬಾ ಸಂತೋಷಪಟ್ಟೆ! ಇನ್ನೂ ಏನೋ ಹೇಳುತಿರುವಾಗಲೇ ಮಗು.. ಕಛೇರಿ ಕೆಲಸ ಮುಗಿಸಿದ ರವಿ, ಅಸ್ತಂಗತನಾಗುತ್ತಲೇ ಹೇಳಿದ, ಬರೆದಿಡಪ್ಪ ಮನವಿ.. ನಾಳೆ ಕೊಡುವಿಯಂತೆ!! ನಿಮ್ಮ ಹರ್ಷಾ

ನೆನಪು

ನನ್ನ ಮನದ ಮೂಲೆಯಲ್ಲಿ ನಿನ್ನ ನೆನಪೆ ತುಂಬಿದೆ! ಮರೆಯಬಯಸುವೇ ಆದರೇನು ಹೊಸಕಾವ್ಯವಾಗಿ ನಿಂದಿದೆ! ನಿನ್ನ ಮಾತು ನನ್ನ ಮೌನದಿ ಕಥೆಯನೊಂದು ರಚಿಸಿದೆ! ನಿನ್ನ ನಗುವ ಚಿತ್ರ (ಮುಖವು) ಕಂಡು ನನ್ನ ಮುಖವು ಅರಳಿದೆ! ಜಗವು ಒಂದು ಓಟದ ಆಟ ಬೇಗ ಗುರಿಯಾ ತಲುಪಿದೆ ಸ್ವಲ್ಪ  ನಡಿದರು ಆಯಾಸಗೊಳ್ಳುವ ನೀನು ಹೇಗೆ ಓಡಿದೆ? ಜಗದ ಸಂತೆಯಲ್ಲಿ ನಿನ್ನ ಕಂತೆ ಬೇಗ ಮುಗಿಯಿತೇ? ಗುಲಾಬಿಯಂತೆ ಸಣ್ಣ ಬದುಕನು ಬಣ್ಣದಿಂದ ರಚಿಸಿದೆ! ನಿಮ್ಮ ಹರ್ಷಾ (Light 11 May 1998)

ಹೆಜ್ಜೆಗುರುತು

ಹೆಜ್ಜೆಗುರುತು ಮೂಡಿಸುವ ಹೆಬ್ಬಯಕೆಯಲ್ಲಿ ಹೆಜ್ಜೆ ಹೆಜ್ಜೆಗೂ ತುಳಿದರು. ಅಳಿಸು ಹೋಗುವ ಕೆಸರಿನಲ್ಲಿ ಗುರುತು ಕಂಡು ಮೆರೆದರು ನೆತ್ತರಿನ  ಕಾಲುವೆ ಹರಿಸಿ ಸಾಮ್ರಾಜ್ಯ ಕಟ್ಟಿ ಮೆರೆದರು! ಕಾಲಚಕ್ರದಲ್ಲಿ ತಾವೊಂದು ಘಳಿಗೆ ಎನ್ನುವದು ಮರೆತರು! ತಾ ಹೆಣೆದ ಬಲೆಯಲ್ಲಿ ಉಸಿರು ಕಟ್ಟಿ ತಾನೇ ಮಡಿದರು! ಅಳಿದು ಹೋದವು ಹೆಜ್ಜೆಗುರುತು ಸಾಮ್ರಾಜ್ಯ ನಶಿಸಿ ಹೋದವು! ಸಿಂಹಾಸನ ಬಿರುದುಗಳು ಎಲ್ಲಾ ಮರೇತು ಹೋದವು! ಹೆಜ್ಜೆಗುರುತು ಮೂಡಿಸು ನನ್ನ ಕಂದ ಬೇಡವೆನ್ನಲಾರೆ ನಿನ್ನ ನಾನೆಂದೂ ಕಾಲಚಕ್ರದಿ ನಶಿಸುವ ಮೋಹದ ಸಾಮ್ರಾಜ್ಯ ಕಟ್ಟದಿರು. ಹೃದಯನಾಳುವ ದೊರೆಯಾಗು, ನನ್ನ ಮಗುವೇ ಮೂಡಿಬರಲಿ ಏಲ್ಲರ ಹೃದಯದಲಿ.... ಎಂದೂ ಅಳಿಯದ ಹೆಜ್ಜೆಗುರುತು!! ನಿಮ್ಮ ಹರ್ಷಾ

ಕೋರಿಕೆ

ಓ ಮನಸೇ ಕಾಡದಿರು ನನ್ನ ನಾನೊಂದು ಮುಗ್ಧ ಜೀವ ಕಲಿಸದಿರು ಪರಿ ಪರಿಯ ಮಾತು ಪಸರಿಸದಿರಲಿ ಹೃದಯದಿ ವಿಷವ ಅಮ್ಮ ಕಲಿಸಿದ ತೊದಲು ಮಾತುಗಳು ಕಪಟವರಿಯದ ಸುಂದರ ಮುತ್ತುಗಳು ಬೆಳೆ-ಬೆಳೆಯುತ ಕಲಿತೇ ನೀನು  ಏನೆಲ್ಲಾ ವ್ಯಂಗ್ಯ ಕಪಟ ವಿಷಕಾರುವ ಮಾತುಗಳು ಓ ಮನಸೇ ಸಾಕಿನ್ನು ಮಗುವಾಗಬೇಕು ನಾನು ದಯೆತೋರು ಕೋರುವೆ ನೀಡದಿರು  ನೋವು  ಬಿತ್ತದಿರು ನನ್ನಲ್ಲಿ ಮುಂದೆಂದು ಬೇವು ನಿಮ್ಮ ಹರ್ಷಾ