Posts

Showing posts from October, 2013

ಕವಿತೇ

ಕೈಬಿಟ್ಟು ಹೋದಳು ಕವಿತೇ ನನ್ನಿಂದ ದೂರವಾಗಿ ಕಣ್ಣ ರೆಪ್ಪೇಯಲ್ಲಿ ಕಾಪಾಡಿದ್ದೇ ಬಚ್ಚಿಟ್ಟಿದೆ ಯಾರಿಗೂ ಕಾಣದ ಹಾಗೇ, ಅರಿವಿರದೆ ಸರ ಸರನೆ ಹರಿದು ಹೋದಳು ಕಣ್ಣೀರ ಹನಿಗಳಲ್ಲಿ ಸೇರಿ ಕೈತುತ್ತು ತಿನ್ನಿಸಿದ ಅಮ್ಮನ ನೆನಪಾದಾಗ, ನನ್ನವಳ ಮುಂಗುರುಳಿನಲ್ಲಿ ಚಂದ್ರನನ್ನು ಹುಡುಕಲು ಇಣುಕಿದಾಗ, ಕೆಲವೊಮ್ಮೆ ನಲಿವನಲಿ ಕೆಲವೊಮ್ಮೆ ನೋವಿನಲಿ ಮತ್ತೆ ಕೆಲವೊಮ್ಮೆ ಬೇಸರದ ತೆಕ್ಕೆಯಲ್ಲಿ ಒಬ್ಬಂಟಿಗನಾಗಿ ನರಳುತಿದ್ದಾಗ, ಅರಿಯದೇ ಪ್ರತ್ಯಕ್ಷವಾಗುತಿದ್ದಳು ಕವಿತೇ ಬಿಗಿದಪ್ಪಿ ನನ್ನ, ನೆರಳಾಗಿ ಸಾಗುತಿದ್ದಳು ನಾನು ಸಾಗಿದಡೆಯೆಲ್ಲ ಏನಾಯಿತು ಕವಿತೇ ಬಿಟ್ಟು ಹೋದದ್ದಾದರೂ ಯಾಕೆ? ತುಂಬಾ ಪ್ರೀತಿಸಿದ ನನಗೇ ವಿರಹ ವೇದನೆ ಯಾಕೇ ? ಬಾ ಕವಿತೇ ಮರಳಿ ನನ್ನ ಬಾಳಲ್ಲಿ ನೀನು, ಹರಿದು ಬರಲಿ ಮತ್ತೇ ಬೇಳಕು ದೂಡಿ ಕತ್ತಲೇಯನ್ನು ಹರ್ಷಾ