ಹೃದಯ ವೀಣೆ ಮೀಟಿದಾಗ
Monday, January 9, 2012
Saturday, June 4, 2011
ಯಾರು ನಾನು ?
ಸುತ್ತುತ್ತ , ನನಗೆ ನಾನೆ
ಪ್ರಶ್ನೆ ಮಾಡುತ ಎತ್ತ
ಸಾಗಿದೆ ನನ್ನ ಪಯಣ
ಆಸೆಯ ಹೆಬ್ಬಾವು ನನ್ನಲ್ಲಿ
ಆಗಾಗ ತಲೆ ಎತ್ತಿ, ಕೊಚ್ಚಿ
ಹಾಕುವ ಮೊದಲು ಸ್ವಲ್ಪ
ವಿಷ ಕಾರುವದು ನಿಜ
ದ್ವೇಷ ರೋಷ ಅಸುಯೆಗಳು
ಬೇರು ಬಿಟ್ಟಿದ್ದು ನಿಜ ,
ಗಿಡವಾಗುವ ಮೊದಲೇ
ಮೆಟ್ಟಿ ಹಾಕಿದ್ದು ನಿಜ
ನಾನು ಅಂದರೆ ನಾನಲ್ಲ
ಹಾಗಿದ್ದರೆ ನಾನ್ಯಾರು
ಎಂದು ನೂರಾರು ಸರಿ
ಪ್ರಶ್ನಿಸಿದ್ದು ನಿಜ
ನೀನೆ ಸೃಷ್ಟಿಸಿದ ಜಗದಲ್ಲಿ
ನಿನ್ನ ಮಾತೆ ನಡೆಯುವದು,
ಮತ್ತೇಕೆ ಈ ಪಾಪ ಪುಣ್ಯಗಳು
ನಮ್ಮನ್ನು ಬಾಧಿಸುತ್ತವೆ
ನಾವೆಲ್ಲರೂ ಅರಿತು ಅರಿಯದೆ
ಮುಗ್ಧರಲ್ಲವೇ ತಂದೆಯೇ
ಮತ್ತ್ಯಾಕೆ ಈ ಪರಿಯ ಬಾಧೆ
ನೀಡಿ ಪಡೆಯುವೆ ಮಜಾ
ನಿಮ್ಮ
ಹರೀಶ್ ಬೀರಗೆ
Monday, March 28, 2011
ಗೆಳೆಯಾ,
ಹೇಗಿರುವೆ ? ಬಹುಶ ಚೆನ್ನಾಗಿರಬಹುದು ಎಂದು ಕೊಂಡಿದ್ದೇನೆ. ನನ್ನ ಬಗ್ಗೆ ಹೇಳುವಂಥ ವಿಶೇಷ ಏನು ಇಲ್ಲ . ಎಲ್ಲ ಕ್ಷೇಮ, ಅದೇ ೮ ಘಂಟೆ ಕಂಪ್ಯೂಟರ್ ಜ್ಯೋತೆ ಗುದ್ದಾಟ, ಮನೆ ತಲುಪಲು ಬೆಂಗಳೂರಿನ ಜನನಿಬಿಡ ಬಿದಿಗಳ ನಡುವೆ ಮೌನ ಹೋರಾಟ , ಮತ್ತದೇ ಬದುಕು ಮತ್ತದೇ ಜಂಜಾಟ, ಬದುಕಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಮಾರ ಒಂದು ಮಾತು ನಾವು ಚೇಂಜ್ ಬಯಸುತ್ತೇವೆ, ಆದರೆ ಕೆಲವೊಮ್ಮೆ ಬದಲಾವಣೆಗೆ ಹೆದರುತ್ತೇವೆ ಕೂಡ ... ಹೇ ಒಂದು ನಿಮಿಶ್ ಡೋಂಟ್ ವರಿ ಈ ಮಾತುಗಳು ನಿನ್ನವೇ, ಆದರೆ ನಾನು ಇವಾಗ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ .
ಅಂತರ್ಜಾಲದ ಹಸನಿನಲ್ಲಿ ಮೊಳಕೆಯೊಡೆದ ಪ್ರೀತಿ ಪ್ರೇಮ ಸಾವಿರ ಸಾವಿರ, ಕೆಲವೊಮ್ಮೆ ಬರಿ ಅಂತರವಷ್ಟೇ ಅಲ್ಲ ಮನಸು ದೂರ ದೂರ ....ಗೆಳೆಯಾ ಈ ಸಾಲುಗಳು ನಿನ್ನ ಕವಿತೆಯದ್ದೆ ....ಪ್ಲೀಸ್ ಒಮ್ಮೆಯಾದರೂ ನಿಜ ಹೇಳು ಇದು ನಮ್ಮಿಬ್ಬರ ಕುರಿತು ಬರೆದದ್ದಂತು ಅಲ್ಲ ಅಲ್ಲವೇ?
ನಮ್ಮ ಮನೆಯಂಗಳ ಬೆಳಗುವ ಚಂದಿರನನ್ನು ಮನೆಯ ಹಣತೆಯನ್ನಾಗಿಸುವ ಪ್ರಯತ್ನ ಮಾಡಬಾರದು, ನಿನ್ನ ಈ ಮಾತುಗಳು ನನಗೆ ನಿಜಕ್ಕೂ ವಿಚಿತ್ರವೆನಿಸುತಿತ್ತು. ಬರಿ ಇದೇಕೆ ನಿನ್ನ ಪ್ರತಿ ಮಾತು ನನಗೆ ಒಂದೇ ಒಗಟೇ, ರವಿ ನನಗೆ ಗೊತ್ತಿಲ್ಲ ಅದೇಕೋ ಏನೋ ನಿನ್ನ ಮಾತುಗಳು ನೀನು ಮಾಡುವ ಚರ್ಚೆಗಳು, ಯಾವುದೇ ವಿಷಯವನ್ನು ಬೇರೆ ಬೇರೆ ದ್ರಷ್ಟಿಕೊನದಲ್ಲಿ ನೀನು ನೋಡುವ ಬಗೆ ನಿಜಕ್ಕೂ ಅಧ್ಭುತ. ಆದರೆ ಒಂದಂತು ನಿಜ ನನಗೆ ಯಾವಾಗಲು ಅನಿಸುತಿತ್ತು ನಿನಗೆ ಸೋಲು ಇಷ್ಟ ಇಲ್ಲ ಅಂತ. ನಾನೊಬ್ಬಳೆ ಅಲ್ಲ ನನಗೆ ಗೊತ್ತಿತ್ತು ನನಗಿಂತ ತುಂಬಾನೇ ಸುಂದರವಿರುವ ಬಹಳಷ್ಟು ಹುಡುಗಿಯರು ನಿನಗೆ ತುಂಬಾನೇ ಪರಿಚಯ ಅಂತ, ಆದರೆ ಕೆಲವೊಮ್ಮೆ ಹೊಟ್ಟೆ ಕಿಚ್ಚು ಇದ್ದರು ನೀನು ಬೇರೆ ಹುಡುಗಿಯರನ್ನು ನೋಡುವ ಹಾಗೆ ಬರಿ ಹುಡುಗಿಯಂದು ನೋಡದೆ ತುಂಬಾನೇ ರೆಸ್ಪೆಕ್ಟ್ ಕೊಡ್ತಿದ್ದೆ. ನಾವಿಬ್ಬರು ಚರ್ಚಿಸದೆ ಇರದ ವಿಷಯಗಳಿರಲಿಲ್ಲ ಆದರೆ ಯಾಕೋ ಯಾವಾಗಲು ನೀನು ಗೆದ್ದಾಗ ನನಗೆ ತುಂಬಾ ಖುಷಿ, ನನ್ನ ಆ ಹುಸಿ ಕೋಪದ ಹಿಂದೆ ತುಂಬಾ ಖುಷಿ ಅಡಗಿರುತಿತ್ತು.
Sunday, March 13, 2011
ಬುದ್ಧನಲ್ಲ
ಆಗಾಗ ಮಾತಾಡುತಿದ್ದರು ಮನಸು
ಹಾತೊರೆಯುತ್ತದೆ ಮೌನದ ಮಡಿಲಿನಲ್ಲಿ
ಸುಮ್ಮನೆ ಯಾಕೆ ಈ ಮುಖವಾಡ
ಮುಗ್ಧನಂತೆ ಜಗತ್ತಿನಲ್ಲಿ
Tuesday, December 14, 2010
ಅವರು ಹೀಗೇಕೆ ?
ನೆರವೆರದಿದ್ದಾಗ ನನ್ನ
ಮೇಲೆ ನನಗೆ ತಾಳಲಾಗದ
ಕೋಪ , ತಾಪ ..
ಒಂದು ಸಿಕ್ಕಾಗ ಮತ್ತೊಂದರ
ಬಯಕೆ , ಎಂದು ಮುಗಿಯದ
ಬೇಕು, ಒಂದರ ಹಿಂದೆ
ಮತ್ತೊಂದು ಬಯಕೆ ...
ನಮ್ಮಮ್ಮ ನಮ್ಮಪ್ಪ ಒಂಥರಾ
ವಿಚಿತ್ರ, ಅವರ ಬಾಳಿನಲ್ಲಿ
ಯಾವಾಗಲು ಬರಿ ನನ್ನ ಬಾಳಿನ
ಬಣ್ಣ ಬಣ್ಣದ ಚಿತ್ರ ..
ಅವರ ಬೇಕು- ಬೇಡಗಳು
ಎಂದು ಅವರನ್ನು ಬಾಧಿಸಲೇ
ಇಲ್ಲ, ಐಶಾರಮದ ಬದುಕು
ಮತ್ತ್ಯಾವದೋ ಕನಸಿಲ್ಲ .
ನಗು ನಗುತ್ತಲೇ ನೋವನ್ನೆಲ್ಲ
ಅನುಭವಿಸಿದರು, ಕಷ್ಟಪಟ್ಟರು
ಆದರು ನನಗೇಕೆ ಅದರ ಅರಿವು
ಎಂದು ಆಗಲೇ ಇಲ್ಲ ..
ನಿಮ್ಮ
ಹರೀಶ ಬೀರಗೆ
Sunday, October 24, 2010
ಮುಗ್ಧ
ಹುಚ್ಚನೆ ಸರಿ, ಬದುಕು
ಪೂರ್ತಿ ಸೆಣೆಸಾಟ.
ಮೋಸ ಅರಿಯದ ಜೀವಿ
ಆದರು ಜಗತ್ತನೇ ಗೆಲ್ಲುವ
ಬಯಕೆ .
ತನ್ನ ನೋವಿಗಿಂತ ಬೇರೆಯವರ
ನೋವಿಗೆ ಮಿಡಿಯುತಿತ್ತು
ಎಂದೆಂದು ಆತನ ಹೃದಯ.
ಬೇರೆಯವರ ದುಃಖಕ್ಕೆ
ಕಂಬನಿ ಸುರಿಸುತಿದ್ದ
ಸಹೃದಯಿ ..
ಓ ದೇವರೇ ನಿನೆಂಥ
ಪಾಪಿ, ಅದೊಂದು
ಬೆಳೆಯುತಿದ್ದ ಮೊಗ್ಗು .
ಹರೆಯದ ಯುವಕ
ಆದರೆ ಎಂದೆಂದು
ಮನಸಿನಿಂದ ಮಗು.
ನಿಷ್ಯಬ್ದವಾಗಿಸಿದೆ ಆ
ತೊದಲು ಮಾತುಗಳು
ಬರಿ ಕ್ಷಣ ಮಾತ್ರದಲಿ .
ಚಿಗುರಿನಲಿ ಚಿವುಟು ಹಾಕಿದೆ
ಮತ್ತೊಂದು ಎಳೆಯ
ಸಸಿಯನ್ನು , ನಿನ್ನ ಇರುವು
ತೋರಿಸಬೇಕೆಂದು ...
ನಿಮ್ಮ
ಹರೀಶ
(ಇದು ಕವನವಲ್ಲ, ನನ್ನ ಕಳೆದು ಹೋದ ಗೆಳೆಯನ ನೆನಪು ಮೂಡಿದಾಗ ಬರೆದ ಕೆಲವು ಸಾಲುಗಳಷ್ಟೇ...ಮಿಸ್ ಯೌ ಶಿವೂ ಸರ್)
ಅಮ್ಮ
ದಾರಿ ದೀಪ, ನಿನ್ನ ನೆನಪುಗಳು
ಇರದ ಬದುಕು ತಾಳಲಾಗದ
ಒಂದು ದೊಡ್ಡ ಶಾಪ .
ದೂರವಾದೆ ನನ್ನ ಬಾಳಿನಿಂದ
ನನ್ನನ್ನು ಎಕಾಂಗಿಯಾಗಿಸಿ, ಮತ್ತೆಂದು
ಮರಳಿ ಬರದ ಲೋಕಕ್ಕೆ
ನಿಶ್ಯಬ್ದವಾಗಿ ಪಯಣಿಸಿದೆ .
ತಲೆಯ ಮೇಲೆ ಕೈಯಾಡಿಸದೇ
ನೀನು, ಎದ್ದಾಗಲೆಲ್ಲ ನಾನು
ನನ್ನ ಸುತ್ತಲೆಲ್ಲಾ ಬರಿ
ಅಂಧಕಾರವೇ ಕವಿಯುತ್ತಿತ್ತು.
ಹೆಜ್ಜೆ ಹೆಜ್ಜೆಗೂ ನನ್ನ ಕೈ ಹಿಡಿದು
ನಡೆಸಿ, ಮುಗ್ಧ ಮಗುವಾಗಿಸಿದೆ.
ನಾನೇನು ಮಾಡಲಿ ಈಗ ಈ ಕ್ರೂರ
ಜಗತ್ತಿನಲಿ ನಾನು ಎಕಾಂಗಿಯಮ್ಮ.
ನಿಮ್ಮ
ಹರೀಶ್
Tuesday, October 12, 2010
ಕನಸು
ನೋವಿನ ಮಡುವಿನಲ್ಲಿ
ತೊಳಲಾಡುತ್ತಿದೆ ಮನಸು
ನನ್ನರಿವೆ ನನಗಿರದೇ
ಎಲ್ಲೆಲ್ಲೋ ಹರಿದು ಮನವು
ಕೈ ಜಾರುತ್ತಿದೆ ಕನಸು
ಮೌಲ್ಯ ಕಳೆದುಕೊಂಡ ಬದುಕು,
ಶುಬ್ರ ಬಟ್ಟೆಯ ಹಿಂದೆ ಮುಚ್ಚಿದ್
ಈ ಮನಸು ಹುಳುಕು .
ನನ್ನ ಮಾತಿಗೆ ನಾನೆ ಬದ್ಧನಲ್ಲ
ಸುಮ್ಮನೆ ಗೊಣಗುತ್ತೇನೆ
ನಿಮ್ಮೆಲ್ಲರ್ ನಡುವೆ ಜಾಣನಾಗಿ
ಸಾಕಿನ್ನು ಮನಸೇ ಸಾಕಾಗಿದೆ
ನನಗೆ, ಇಗಲಾದರು ಮೋಸ
ಮಾಡದಿರು ನನಗೆ ...
ನಿಮ್ಮ
ಹರೀಶ್
Tuesday, September 7, 2010
ನಮ್ಮ ಮನೆಯ ಜ್ಯೋತಿ
ನಮ್ಮಮ್ಮ, ತನ್ನ ಬೆಳಕಿನಲಿ
ನಮ್ಮನ್ನೆಲ್ಲ ಕೊನೆಯವರೆಗೂ
ಬೆಳಗಿದಳು ....
ನಮ್ಮ ಬಾಳಿನ ಪ್ರತಿ
ಬಯಕೆಗಳನ್ನು ಕಾಮಧೆನುವಿಗು
ಮಿಗಿಲಾಗಿ ಅವಳು
ಪುರೈಸಿದಳು .....
ಮಿಗಿಲಾದ ದೊಡ್ಡ ದೊಡ್ಡ
ಪ್ರಶ್ನೆ ನಮ್ಮ ಬದುಕಿನಲಿ
ನಮ್ಮಮ್ಮ , ಅಪ್ಪಾಜಿಯ
ಕಿರುನಗೆಯಲಿ ಕರಗಿದವು .
ಅವರ ಕಣ್ಣಂಚಿನ ಆತಂಕ
ಮನದಲ್ಲಿರುವ ನೋವುಗಳು ,
ನಮ್ಮೆದುರಿಗೆ ಎಂದು ಕಾಣದೆ
ಮುಚ್ಚಿ ಹಾಗೆ ಹೋದವು ..
ನಮ್ಮ ನಗುವಿನಲ್ಲಿ ನಕ್ಕು ,
ನಮ್ಮ ನೋವಿಗೆ ಮರುಗಿ
ನಮಗಾಗಿ ನಿಮ್ಮ ಬದುಕೇ
ಸವೆದು ಹೋದವು ...
Saturday, May 29, 2010
ನಿರ್ಲಜ್ಜ ಮನಸು
ತುಸು ನಾಚಿಕೆಯು
ಬೇಡವೇ ನಿನಗೆ
ಇನ್ನೆಷ್ಟು ದಿನ ನನ್ನನ್ನು
ಓಡಿಸುವೆ ನಿನ್ನ ಆಸೆಯ
ದಾಸನಾಗಿಸಿ ನನಗೆ
ಎಷ್ಟು ಸಿಕ್ಕರೂ ಮತ್ತೆ
ಬಯಸುವೆ, ಮಿತಿಮೀರಿದ
ದುರಾಸೆಯಲ್ಲಿ ...
ಸಾಕಿನ್ನು ನಾನಿಲ್ಲ ನಿನ್ನ
ದಾಸ, ನನ್ನ ಮತ್ತೆ ಕೇಳಬೇಕು
ಇಂದಿನಿಂದ ನೀನು ಮುಂದೆ .
ನಿಮ್ಮ
ಹರೀಶ್
ನಾ ಬಯಸಿದ ಹೂವು

ನಾ ಬಯಸಿದ ಹೂವು
ನನ್ನದಾಗಲಿಲ್ಲ
ಯಾರದು ಮುಡಿಸೇರಿ
ಹೊರತು ನಿಂತಿತಲ್ಲಾ
ಏನೆಲ್ಲ ಮಾಡಿದೆ ಮನಸೇ
ನಿನಗೆ ತಿಳಿ ಹೇಳಲು ..
ಆದರು ನೀನೇಕೆ
ತಿಳಿಯಲಿಲ್ಲ ...
ಮತ್ತೆ ಮತ್ತೆ ಅದೇ
ಕೇಳುವೆ
ಬದುಕು ಹೀಗೇಕೆ ?
ಸಿಗಬಹುದು ಎಂದು
ಗೊತ್ತಿದ್ದರು
ಕೈ ಚಾಚಲಗದು ಬಾಳಲ್ಲಿ ...
ಓ ಕ್ರೂರ ವಿಧೆಯೇ
ಹೀಗೇಕೆ
ಆಟವಾಡಿದೆ ನನ್ನ ಬಾಳಲ್ಲಿ ..
ನಿಮ್ಮ
ಹರೀಶ್
ನನ್ನ ಮಾತುಗಳು
ನನ್ನ ಅಂತರಂಗದಲ್ಲೇ ಸ್ಥಬ್ದವಾಗಿ
ಯಾರಿಗೂ ನೋವನು ಕೊಡದೆ, ಚುಚ್ಚಲಿ
ನನ್ನ ಹೃದಯಕೆ ಮುಳ್ಳಾಗಿ .....
ನನ್ನ ಮಾತುಗಳಲ್ಲಿ ನನ್ನತನದ
ಪ್ರೀತಿಯಿಲ್ಲ, ವಿಷ ಕಾರುತ್ತಿವೆ
ಸುತ್ತಲಿನ ಪರಿಸರದಲ್ಲಿ ಬರಿ
ನೋವನ್ನೇ ಪಸರಿಸುತ ...
ಸುಮ್ಮನಾಗುವ ಹರಸಾಹಸ
ಮಾಡುತಿದ್ದೇನೆ ಆದರು ಹರಿದು
ಬರುತ್ತವೆ ಲಂಗು ಲಗಾಮಿಲ್ಲದ
ಕುದುರೆಯ ಹಗೆ ಬಾಯಿ ತಪ್ಪಿ ..
ನನಗಾಗಿ ಬಾಳು ಸವೆಸಿದವರಿಗೆ
ಬಿಸಿಕದಲೆಯಾಗಿ ನನ್ನ ಮಾತುಗಳು
ಎಂದು ಮಾಸದ ಗಾಯ, ಕೊಡುತ್ತಿರಲು
ನೋವ ತಾಳಲಾಗದು ದೇವರೇ ...
ಸ್ಥಬ್ಧವಾಗಿಸು ನನ್ನುಸಿರು ಮುಂದೆಂದು
ನಾನು ಮಾತಾಡದ ಹಾಗೆ....
ನಿಮ್ಮ
ಹರೀಶ್
Tuesday, May 4, 2010
ಒಂದು ಸುಂದರ ಕನಸು
ನೀಡು ತಾಯೆ ಜಗನ್ಮಾತೆ .
ನಮ್ಮಮ್ಮನ ಮಡಿಲಿನಲ್ಲಿ
ಮತ್ತೆ ಮಗುವಾಗಿಸು ನನ್ನ .
ಎನನ್ನು ಅರಿಯದ ಆ ಹಸಿನಗೆ
ನನ್ನ ಉಸಿರಾಗಲಿ ಮತ್ತೊಮ್ಮೆ
ನನ್ನ ಈ ತುಟಿಗಳ ಹುಸಿನಗೆಯ
ಮಾಸಿ ಮತ್ತೊಮ್ಮೆ ಶಿಶುವಾಗಿಸು.
ಯಾರದೋ ನೋವಿಗೆ ಸ್ಪಂದಿಸುವ
ಹೃದಯ ನಿಡು ನನಗೆ, ಬರಿ ಅಮೃತವೇ
ಹೊರಹೊಮ್ಮಲಿ ನನ್ನದೆಯಲಿ, ಬತ್ತಿ
ಹೋಗಲಿ ನನ್ನೆದೆಯಲಿ ವಿಷದ ಬುಗ್ಗೆ ..
ತಿದ್ದಿ ತಿದ್ದಿ ನಮ್ಮಮ್ಮ ಕಲಿಸಿದ
ಆ ಮುದ್ದು ಮುದ್ದು ಮಾತುಗಳು
ರಾರಾಜಿಸಲಿ ನನ್ನ ತುಟಿಯ ಅಂಚಿನಲ್ಲಿ
ಮರೆಮಾಚಿ ಕಪಟದ ಸವಿನುಡಿಯ ..
ಎಂದು ಬತ್ತದ ಹಾಗೆ ನಮ್ಮಮ್ಮನ
ಸವಿನೆನಹುಗಳು, ನನ್ನೆದೆಯಲೆಲ್ಲ
ಬೆಳಗುತ್ತಿರಲಿ , ಎಂದೆಂದು
ನನಗೆ ದಾರಿದೀಪವಾಗಿ ..
ನಿಮ್ಮ
ಹರೀಶ್
ಅಮ್ಮ
ನಿನ್ನ ಮುದ್ದು ಕಂದ,
ಕಾಲದ ಚಕ್ರವ್ಯುಹದಲಿ ಸಿಲುಕಿ
ಏಕಾಂಗಿಯಾಗಿ ..
ಬತ್ತಿ ಹೋಗುವ ಕನಸಿನ
ಚಿಲುಮೆಯನು ಕಂಡು,
ನಲುಗಿ ಹೋಗಿದೆ ಜೀವ
ಸೋಲು ಸಾಕಾಗಿ ....
ನನ್ನ ಕಣ್ಣಿಗೆ ಕನಸು ಕಟ್ಟುವ
ಪರಿಯ ತಿಳಿಸಿ,
ನನ್ನ ಬದುಕಿಗೆ ಸುಂದರ
ಮುನ್ನುಡಿ ಬರೆದೆ ...
ನೀನಿರುವಾಗ ಸೋಲಿನಲ್ಲು
ನಲಿವಿತ್ತು ..ನನ್ನ ಬದುಕಿನಲಿ
ಈಗ ಗೆಲುವಿನಲ್ಲು
ನಲಿವಿಲ್ಲ ಅಮ್ಮ ....
ಮರಳಿ ಬಾ ಮತ್ತೊಮ್ಮೆ
ನನ್ನ ಬದುಕಿನಲಿ ..
ತಲೆ ಸವರಿ ಮುತ್ತೊಂದ
ಹಣೆಯ ಮೇಲೆ ಕೊಟ್ಟು
ನಿಮ್ಮ
ಹರ್ಷಾ
Saturday, March 20, 2010
ಗೆಳತಿ,
ಮತ್ತೆ ನೆನಪಾಗುತಿದೆ ,
ಮಂಜಾದ ಕಣ್ಣು..
ನಿನ್ನ ಸುಪ್ತ ಕನಸುಗಳು
ಬಾಡಿ ಹೋಗುವ ಹೆದರಿಕೆ ...
ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು.
ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ .....
ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ.
ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆನಾಗಿರಲಿಲ್ಲ ಆದರು ನಿನ್ನ ಮತ್ತೆ ಬೇರೆ, ನಾನು ನೋಡಿದ ಎಲ್ಲ ಹುಡುಗಿಯರಿಗಿಂತ ನೀನೇನು ಸುಂದರಿ ಅಲ್ಲ, ಆದರು ಅದೇಕೋ ನಿನ್ನ ಪ್ರತಿ ಅರಿವಾಗುತಿದೆ ಬೇರೆ.
ನಾನು ಮದುವೆಯ ಸಲುವಾಗಿ ಹುಡುಗಿ ನೋಡುತಲಿದ್ದೆ, ಆದರೆ ನೀನು ಇನ್ನು ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ ಅದು ಹೇಗೆ ನಮ್ಮಿಬ್ಬರ ನಡುವೆ ಪ್ರೀತಿ ಅಷ್ಟೊಂದು ಗಾಢವಾಗಿ ಬೆಳೆಯಿತು ಇನ್ನು ಅರ್ಥವಾಗ್ತಾ ಇಲ್ಲ. ನಿನ್ನ ಮತ್ತು ನನ್ನ ಪ್ರೀತಿಯ ಮೊದಲ ಕೊಂಡಿ ಮಾಯಾಜಾಲ ಮತ್ತು ಫೋನ್ , ಕನಸಿನ ಜಗತ್ತ್ತಿನ ನಮ್ಮ ಸ್ನೇಹ ವಾಸ್ತವದ ಜಗತ್ತಿಗೆ ಬಂದದ್ದು ನೀನು ದಾವಣಗೆರೆಯಿಂದ ಬೆಂಗಳೂರಿಗೆ ಕಾಲೇಜ್ ಗೆ ಬಂದಾಗ, ನನ್ನಾಣೆ ಮೋದ ಮೊದಲು ನಾನು ಕೂಡ ಚೆಲ್ಲಾಟನೆ ಮಾಡ್ತಿದ್ದೆ, ಮೊದಲ ಭೇಟಿಯಲ್ಲೇ ನೀನು ನನ್ನ ತುಟಿಗಳನ್ನು ಮುತ್ತಿನ ಮತ್ತಿನಿಂದ ಗಮ್ಮತ್ತೆರಿಸಿದೆ ಕ್ಷಣ ಕಲ ನಾನು ಕೂಡ ಸ್ಥಬ್ಧ, ಹೀಗೇಕೆ ಎಂದು ನಾನು ಕೇಳಿದಾಗ ನಿನ್ನ ಉತ್ತರ ಇಂದು ಕೂಡ ನನ್ನ ಕಿವಿಯಲ್ಲಿ ಸ್ಪಷ್ಟವಾಗಿ ಕೇಳುತ್ತೆ. ರೀ ಅಜ್ಜ ನೀವೇ ಹೇಳಿದ್ದು ತಾನೆ ನಾವಿಬ್ಬರು ಭೇಟಿ ಆದಾಗ ಅಪರಿಚಿತರ ಹಾಗೆ ವರ್ತಿಸಿದರೆ ನನಗೆ ಕೋಪ ಬರುತ್ತೆ ಅಂತ ಅದಕ್ಕೆ ಮುದುಕ ನಿನಗೆ ಮುತ್ತು ಕೊಟ್ಟೆ....ಅದೇ ಮೊದಲನೇ ಸಲ ನಾನು ತಪ್ಪು ಮಾಡುತಲಿದ್ದೇನೋ ಎನ್ನುವ ಭಾವನೆ ಮನಸಿನಲ್ಲಿ ಮೂಡಿತ್ತು. ಆದರೆ ನನ್ನ ಯೋಚನಾ ಲಹರಿಗೆ ನಿನ್ನ ಪ್ರಶ್ನೆ ಒಮ್ಮೆಲೇ ಬ್ರೆಕ್ಕ್ ಹಾಕಿತ್ತು
ಅಶೋಕ್.. ನೀವು ಕಲ್ಪಿಸಿಕೊಂಡಷ್ಟು ನಾನು ಚೆನ್ನಾಗಿಲ್ಲ ಅಲ್ವಾ ?
ಹೌದು ಲಕ್ಕಿ ನಿಜ, ಆದರೆ ನಿನ್ನ ಮಾತು, ನಿನ್ನ ನಡೆ, ನಿನ್ನ ಮುಗ್ಧತೆ ಎಲ್ಲ ನಿನ್ನನು ಎಲ್ಲರಿಗಿಂತ ಸುಂದರಿಯಗಿಸಿದೆ, ನಾನು ಇನ್ನು ವಿಚಾರ ಮಾಡುತ್ತಲೇ ಇದ್ದೆ. ಆದರೆ ಮತ್ತೆ ಅದೇ ಪ್ರಶ್ನೆ ನೀನು ಕೇಳಿದಾಗ ಆದೇಕೋ ಗೊತ್ತಿಲ್ಲ ನಿನ್ನ ಹಣೆಯ ಮೇಲೆ ಮುತ್ತಿಟ್ಟೆ, ಲೋ ಮುದುಕ ನಿನಗೆ ಮುತ್ತು ಎಲ್ಲಿ ಕೊಡಬೇಕು ಎನ್ನುವ ಪರಿಗ್ನ್ಯಾನ ಕೂಡ ಇಲ್ಲ ಎಂದು ಕಾಡಿಸಿದಾಗ ಒಮ್ಮೆಲೇ ಮುತ್ತಿನ ಸುರಿಮಳೆ ನೆ ಸುರಿಸಿದ್ದೆ.
ನಮ್ಮಿಬ್ಬರ ಪ್ರೀತಿ ತುಂಬಾ ಭಿನ್ನ ಎಂದು ನೀನು ಯಾವಾಗಲು ಹೇಳುತಿದ್ದೆ, ಹೌದು ಕಣೆ ಅದು ತುಂಬಾನೇ ಸತ್ಯ.ನಿನ್ನ ಪ್ರತಿ ಮಾತು ಮರೆಯುವದು ಎಷ್ಟೊಂದು ಕಷ್ಟ ಎಂದು ನನಗೆ ಇವಾಗ ಅರಿವಾಗುತ್ತಿದೆ, ನನ್ನನ್ನು ಕ್ಷಮಿಸು ಬಹುಶ ನಿನ್ನಲ್ಲಿ ಇರುವಷ್ಟು ವಿಲ್ ಪವರ್ ನನ್ನಲ್ಲಿ ಇರಲಿಲ್ಲ. ಇಂದಿಗೂ ನಿನ್ನ ಮಂಜಾದ ಆ ಕಣ್ಣುಗಳು ನೆನಪಾದಾಗ ನನ್ನ ಬದುಕಿನ ದೊಡ್ಡ ತಪ್ಪಿನ ಅರಿವಾಗುತ್ತದೆ. ಗೊತ್ತಿರದೇ ನನ್ನ ಕಣ್ಣುಗಳು ತೇವವಾಗುತ್ತವೆ.
ಲಕ್ಕಿ ನಿನ್ನಿಂದ ದೂರವಾಗುವದು ನನಗು ಸುಲಭವಾಗಿರಲಿಲ್ಲ, ಪ್ರತಿ ದಿನ ಪ್ರತಿ ಕ್ಷಣ ನಿನ್ನನು ಮೋಸ ಮಾಡುತಿದ್ದೇನೋ ಎಂದು ನನ್ನ ಮನಸ್ಸು ನನಗೆ ತುಂಬಾ ನೋವು ನೀಡುತ್ತಿತ್ತು . ನನ್ನಾಣೆ ನಾನು ನಿನ್ನನ್ನು ನನ್ನವಲಾಗಿಸಿಕೊಳ್ಳಬೇಕು ಎಂದು ತುಂಬಾನೇ ಪ್ರಯತ್ನ ಪಟ್ಟೆ ಆದರು ಆದೇಕೋ ವರ್ಕ್ ಔಟ್ ಆಗಲಿಲ್ಲ. ಯಾರ ತಪ್ಪು ಆದೆಲ್ಲ ಇಂದು ನನಗೆ ಹೇಳುವ ಬಯಕೆ ಕೂಡ ಇಲ್ಲ.
ನಿನ್ನ
ಮನಸ್ಸು
ಹುಳುಕು ಕೊಳಕೆಲ್ಲ ತುಂಬಿ
ದುಂಬಿಯ ಬಯಕೆ ಹುಚ್ಚಿ
ಬಿಡು ನಿನಗ್ಯಾಕೆ ?
ಆಗಲಿಲ್ಲ ನೀನು ಪರಿಮಳ
ಸೂಸುವ ಹೂವು ...
ರಾಡಿಯಲ್ಲಿ ತೇಲುತ್ತಿರುವ ನಿನಗೆ
ಸಿಗುವದು ಸೊಳ್ಳೆಗಳ ಪ್ರೀತಿ,
ಎಂದೋ ಮಾರಿಬಿಟ್ಟೆ ನೀನು
ಮನುಷ್ಯತ್ವ, ನ್ಯಾಯ, ನೀತಿ.
ದೇವರ ಅಡಿಗೆ ಬಿಡು, ಯಾರದೋ
ಮುಡಿಗೂ ಸೇರದೆ ಹೋದೆ.
ಸಿಕ್ಕ ಸಿಕ್ಕವರ ಆಸೆಯ
ಬಯಕೆಯಲ್ಲಿ ಬಳಲಿ ಹೋದೆ ..
ಪಾಪ ನಿಸ್ಸಹಾಯಕ ಹೂವು
ಪಾಪಿ ಚಿ ನೀನೇಕೆ ಇನ್ನು ಕೆಲ
ಕಾಲ ತಾಳದೆ ಹೋದೆ....
ಹರ್ಷಾ
Saturday, March 13, 2010
ಕವಿತೆ

ಎಲ್ಲಿ ಹೋದೆ ಕವಿತೆ
ನನ್ನಿಂದ ದೂರವಾಗಿ
ಒಮ್ಮೆ ಮಿಂಚಿ ಮರುಕ್ಷಣದಲ್ಲೇ
ನನ್ನ ಬಾಳಿಂದ ಮರೆಯಾಗಿ
ನನ್ನ ಬದುಕು ಸುಂದರ
ಹೂದೊಟವಾಗಿಸಿದ್ದೆ ನೀನು
ಹೂವಿರದ ತೋಟಕ್ಕೆ
ಬೇಲಿಯ ಹೊರೆಯೇಕೆ ?
ನನ್ನ ಹೊಟ್ಟೆಯ ಹಸಿವಾಗಿದ್ದೆ ,
ನನ್ನಯ ಕಣ್ಣಿನ ನಿದ್ದೆ .
ಅರ್ಥವಿರದ ನನ್ನ ಬದುಕಿಗೆ
ನೀನೆ ಅರ್ಥ ಕೊಟ್ಟಿದ್ದೆ.
ಬಾ ಕವಿತೆ ಬಿಡು ಸಾಕು
ಈ ಕೋಪ, ತಾಪ
ನೆನಪಿರಲಿ ನಿನಗೆ ನೀನಿರದ
ಬದುಕು ನನಗೆ ಒಂದು ಶಾಪ .
ಹರ್ಷಾ
Monday, October 5, 2009
ನೋವಿನ ಹೂವು
ನೋವಿನ ಹೂವು .
ನನ್ನನ್ನೇ ಬೂದಿ ಮಾಡುವ ಹಾಗೆ
ಧಗ ಧಗಿಸುವ ಕಾವು
ಓ ಮನಸೇ ನಿನಗೇಕೆ ಈ
ಶಮನವಾಗದ ನೋವು .
ಸಾಗುತಿದೆ ಬದುಕು, ಆದರು
ನನ್ನ ಪಯಣ ಎಲ್ಲಿಗೆ ?
ಬೆಂಕಿಯ ಜ್ವಾಲೆಯಾಗಿ ಕಾಡುತಿದೆ
ಯಾಕೆ ಬಿಳಿ ಮಲ್ಲಿಗೆ ?
ಓ ದೇವರೇ ಸಾಕು ಶಾಂತಿ
ಕೊಡು ನನ್ನ ಈ ಮನಸಿಗೆ .
ಹರ್ಷಾ
Wednesday, June 17, 2009
ಬಯಸಿದಾಗ ನಾನೊಮ್ಮೆ
ತಿರುಗಿದ್ದೆ ನಿನ್ನ ಹುಡುಕುತ್ತ ನಿನ್ನ ಹಿಂದೆ
ಅತಿಯಾಗಿ ನಿನ್ನನ್ನು ಕದ್ದು ನೋಡುತಿದ್ದೆ
ಲಗ್ನ ಮಂಟಪದ ಕಾಂಪೌಂಡ್ ಹಿಂದೆ
ನಿ ನಕ್ಕಾಗ ಅರಳಿದ ತಾವರೆ ಗಾಳಿಗೆ ಸಿಕ್ಕಿತ್ತು
ಎಂದು ಮನದಲ್ಲಿ ನಾನು ನೊಂದೆ.
ನಿನ್ನ ಕಾಲಿಗೆ ಮುಳ್ಳು ಚುಚ್ಚಿದ
ಗಿಡದ ಬುಡವನ್ನೇ ಕಿತ್ತಿ ಬಂದೆ
ನಾನೊಮ್ಮೆ ನಿನ್ನ ಹಿಂದೆ ತಿರುಗುತಿದ್ದಾಗ ಹೀಗೆ
ನೀನು ಅವನ ಜ್ಯೋತೆ ಮಾತನಾಡುವದು ಕೇಳಿ ಬಂದೆ
ಆ ಮಾತುಗಳೆಲ್ಲ ಚೂಪಾದ ಬಾಣಗಳಂತೆ
ನನ್ನ ಹಿಂದೆ ಬರುವದ ನೋಡಿ ನಾನು ನೊಂದೆ
ನಿನ್ನ ಮಲ್ಲಿಗೆ ನಗು ಬಿದಿ ಮ್ಯಾಲ್ಯಾಕ ಚೆಲ್ಲುತಿ
ಯಾರನ್ನು ಹುಚ್ಚನಾಗಿಸಬೇಕೆಂದು
ನಿನಗಾಗಿ ಹುಚ್ಚಾಗಿ ತಿರುಗುತಿದ್ದಾಗ
ನಾವು ನಿನ್ನ ಹಿಂದೆ
ನಿ ನೋಡಿ ನೋಡದ ಹಾಗೆ
ಹೋಗುತಿಯಾಕೆ ಬರಿ ಮುಂದೆ ಮುಂದೆ
ನನ್ನ ಮನದಾಗೆ ಹತ್ತಿರುವ ಬಿರುಗಾಳಿ ಹತ್ತಿಕ್ಕಲಿ ಹ್ಯಾಂಗ ಇಂದು
ಅದನ್ಯಾರು ನೋಡರು ಕರಿತಾರ ನನ್ನ ಬರಿ ಹುಚ್ಚನೆಂದು
Saturday, February 28, 2009
ಎ ವಸಂತವೇ
ಎಲ್ಲರ ಬದುಕಿನಲ್ಲಿ , ಏನು
ಹೊಸ ಖುಷಿಯ ತಂದೆ ?.
ನನ್ನ ಸುತ್ತಾಲೆಲ್ಲಾ ಹಸಿರು
ತೊರಣದ ಸರಮಾಲೆಯನ್ನೇ..
ಕಂಗೊಳಿಸಿ ನಿಂದೆ..
ಮಧುರ ಕೋಗಿಲೆಯ ಇಂಪಾದ
ಹಾಡಿಗೆ ತಲೆದೂಗುತಾ ನೀನು
ಬೆರಗಾಗಿ ನಿಂದೆ
ಒಂದು ಮಾತು ಹೇಳು ನನಗೆ,
ಏಕೆ ಗೆಳೆಯನೆ ನನ್ನ ನೀನು
ಮರೆತು ಹೋದೆ. ?.
ನನ್ನ ಬದುಕಿನಲ್ಲಿ ಏಕೆ
ಮತ್ತೆ ಆದೇ ಹಳೆಯ ನೋವನು,
ಹೋಗಲಾಡಿಸದೇ ಸೋತು ನಿಂದೆ.
ಬರೆಯುತ್ತೇನೆ ಕೆಲವು ಸಾಲು ನಿನ್ನ
ಆಗಮನದ ಮೊದಲು, ಹೊಸ ಚೈತನ್ಯ
ಮುಡಲಿ ನನ್ನಲ್ಲಿ ಎಂದು....
ಮತ್ತೆ ನೆನಪಾಗುವಳು ಅವಳು
ಒಮ್ಮೆ ಕೇಳಿದರೇ ಸಾಕು ಕೋಗಿಲೆಯ
ಇಂಪಾದ ಧ್ವನಿಯನೊಮ್ಮೆ......
ಸುತ್ತಲಿನ ಹಸಿರಿನಲ್ಲಿ ಎಲೆಯ ಹಿಂದೆ
ಅವಿತು ತನ್ನನ್ನು, ನನ್ನ ಕಾಡಿಸುವ ಆಟ
ಆಡುವ ಅವಳ ನೆನಪು....
ಕಣ್ಣು ಮುಚ್ಚಿ ಹಣೆಯ ಮೇಲೆ ಮುತ್ತಿಟ್ಟು
ನೋಡುವಳು, ನಿಲ್ಲುತಿದ್ದಳು ಮುಗ್ದ ಹುಡುಗಿಯ
ಹಾಗೆ, ಹೆದರಿಕೊಂಡು ನೋಡುವ ಅವಳ ಬಗೆ.
ಹಳೆಯ ನೆನಪುಗಳೆಲ್ಲ ನಿನ್ನ ಆಗಮನದೊಂದಿಗೆ
ಚಿಗುರುತ್ತವೆ ನನ್ನಲ್ಲಿ, ಹೊಸ ನೋವುಗಳಾಗಿ..
ಒಮ್ಮೆ ಹೆಳು ನನ್ನ ನಾನು ಮರೆಯಲಿ ಎಲ್ಲ ಹೇಗೆ..
ನಿನ್ನ ಸ್ವಾಗತಕ್ಕೆ ಬರೆಯಬೇಕೆಂದು ಅನಿಸಿತ್ತು
ಪ್ರತಿ ಬಾರಿ ನೀನು ಬರುವಾಗ, ಗೊತ್ತಿರಲಾರದೇ
ಬರೆಯುತ್ತೇನೆ ಮತ್ತೊಂದು ಕವನ ಅವಳಿಗಾಗಿ
Sunday, November 16, 2008
ನಾನು ಮತ್ತು ಅಮ್ಮನ ನೆನಪು
ಸುತ್ತಲಿನ ಸುಂದರ ಜಗತ್ತಿನಲ್ಲಿ
ಸಂತೋಷವೇ ನನ್ನ
ಮೈ ಮರೆಸುತಿದ್ದಾಗ
ಅರೆ ಗಳಿಗೆ ಅಮ್ಮ ನಿನ್ನ ಮರೆತಿದ್ದೆ.
ಕಣ್ಣು ಕೋರೈಸುವ ಬೆಳಕು
ದಾರಿ ತಪ್ಪಿಸುವ ಮನಸು
ಹರೆಯದ ನೂರಾರು ಕನಸುಗಳ
ನಡುವೆ, ಅಮ್ಮ ನಿನ್ನ ಮರೆತಿದ್ದೆ.
ನಶ್ವರ ಜಗತ್ತಿನ ನಿಶೆಯಲಿ
ಅರೆ ಗಳಿಗೆ ನನ್ನನ್ನೇ ನಾನು
ಮರೆತಾಗ ಹುಚ್ಚಾಗಿ, ಹೌದಮ್ಮ
ನಿನ್ನ ಕೂಡಾ ಮರೆತಿದ್ದೆ.
ಸಾಕಾಗಿ ಹೋಗಿದೆಯಮ್ಮ ಜಗತ್ತಿನ
ಚಿತ್ರ ವಿಚಿತ್ರ ದ್ರಶ್ಯಗಳು,
ಕನಸಿನೊಳಗೊಮ್ಮೆ ಬಂದು ಕಣ್ಣಿರ
ಒರೆಸಮ್ಮ ಸಾಕಾಗಿದೆ ನಿನ್ನ ಕಂದ ನೀಗೆ ಬದುಕಿಂದು.
ನಿಮ್ಮ ಹರ್ಷ
Sunday, July 20, 2008


ಪ್ರೀತಿಯ ಕುಮಾರನಿಗೆ,
ನನ್ನ ಬದುಕಿನಲ್ಲಿ ನಾನು ಎಲ್ಲಕಿಂತ ಹೆಚ್ಚಾಗಿ ಪ್ರೀತಿಸದ ವ್ಯಕ್ತಿ ನೀನು, ನಿನಗೂ ಗೊತ್ತಿರಬಹುದು, ನೀನೆ ಹೇಳಿದ್ದೆ ಅಂದು ರಾತ್ರಿ ನೀನು ನಿನ್ನ ತಮ್ಮನ ಜ್ಯೋತೇ ಮೂವಿಗೆ ಹೋಗಬೇಕಾದರೆ ನಿನ್ನ ಮೊಬೈಲ್ ಗೆ ಅದ್ಯವಾದೋ ಮಿಸ್ ಕಾಲ್. ನಿಜ ಹೇಳ್ತೀನಿ ನನ್ನಾಣೆಗು ಅದೊಂದು ರಾಂಗ್ ನಂಬರ್ ಕಾಲ್ ಅಷ್ಟೇ. ನೀನು ದೊಡ್ಡ ಹಟಮಾರಿ ಮರುದಿನ ಎಷ್ಟೊಂದು ಸಲ ಕಾಲ್ ಮಾಡಿದ್ದೆ ಕೊನೆಗೆ ನಾನೊಮ್ಮೆ ಫೋನ್ ಎತ್ತಿದಾಗ ನಿನ್ನ ಜ್ಯೋತೇ ನಾನು ಮಾತಾಡಿದ್ದೆ.ನಿನ್ನ ಆ ಮಾತಾಡೋ ಶೈಲಿ ನಿಜಕ್ಕೂ ಕಣ್ಣೋ ಯಾವುದೇ ಹುಡುಗಿ, ಎಷ್ಟೇ ಕನ್ಸರ್ವೇಟಿವ್ ಆಗಿರಲಿ ನಿನ್ನ ಮಾತು ಕೆಳಿದರೆ ಢಮಾರ್, ಮತ್ತೆ ಮತ್ತೆ ಮಾತಾಡಿಸಬೇಕು ಅನಿಸುತ್ತೆ.
ಮಿಸ್ ಕಾಲ್ ನಿಂದಾದ ಪರಿಚಯ ಬೇರೆಯವರಿಗೆ ಯಾವಾಗಲು ಯುವರ್ ಕಾಲ್ ಈಸ್ ವೇಟಿಂಗ್ ಅನ್ನೋ ಮಟ್ಟಕ್ಕೆ ತುಂಬಾ ಮಾತಡಿದ್ದಿವಿ,ಬಹಳಷ್ಟು ಸಲ ನಿನಗೆ ಗೊತ್ತಿರದ ವಿಷಾಯನೇ ಇಲ್ಲ ಅನಿಸುವ ಮಟ್ಟಿಗೆ ನಿನ್ನ convinencing ಸ್ಟೈಲ್ ನನಗೆ ತುಂಬಾನೆ ಹುಚ್ಚು ಹಿಡಿಸುತಿತ್ತು. ನಾವಿಬ್ಬರು ಕೊನೆಗೊಮ್ಮೆ ಭೇಟಿ ಆದಾಗ ಒಮ್ಮೆಲೇ ನಿನ್ನ ಮುತ್ತಿಡಬೆಕು ಅನ್ನುವ ಭಾವನೆ ಉಕ್ಕಿತಾದರೂ, ಫ್ರೀ ಆಗಿ ಸಿಗೋ ಹುಡುಗಿ ಆಗಬಾರದು ಅಂತ ಸುಮ್ಮನೇ ಆಗಿದ್ದೆ. ಥೂ ನೀವು ಕವಿಗಳು ಹೀಗೆನ, ಬಾರಿ ಭಾವನೆ ಕೆಡಿಸಿ ಕಾಡುವ ನೀಚರೇನೋ ಅಂತ ಅನಿಸುವ ಮಟ್ಟಿಗೆ ನನ್ನ ಭಾವನೆಗಳ್ಲನ್ನು ಕೆಣಕಿ ಒಮ್ಮೆಯೂ ಮುಟ್ಟದೆ ಹೋದ ಪಾಪಿ ನೀನು.ಪ್ರತಿಯೊಮ್ಮೆ ನಿನ್ನ ಕಂಡಾಗ ನಿನ್ನ ಅಪ್ಪಿ ಮುತ್ತುಗಳ ಸರಮಾಲೆ, ಸುರಿಸಬೇಕು ಎಂದು ಕೊಂಡಿದ್ದೆ. ಕಳ್ಳ ನಿನಾಗೆಲ್ಲ ಗೊತ್ತು ಅದಕ್ಕೆ ಒಮ್ಮೆ ನೀನು ಹೆಳಿದ್ದೆ ನೋಡು ನಿನಗೆ ಇನ್ನು 20 ವಯಸ್ಸು, 2 ನೇ ಫೇಸ್ M.B.B.S ನಲ್ಲಿ ಒದುತಿದ್ದಿಯಾ, ನನಗೀಗ 29 ನಮ್ಮನೆಯವರ ಮನಸಿನ ಹಾಗೆ ಅವರು ಇಷ್ಟ ಪಡೋ ಹುಡುಗಿನ ಮದುವೆಯಾಗಬೇಕು. ಸುಮ್ಮನೇ ಭಾವಾವೇಶದಲ್ಲಿ ಬಂದು ನಿನ್ನ ಬದುಕು ಹಾಳು ಮಾಡುವದು ನನಗೆ ಇಷ್ಟ ಇಲ್ಲ. ನಿಜಕ್ಕೂ ಕಣೋ ನನಗೆ ನೀನು ತುಂಬಾ ಹಿಡಿಸಿದ್ದೆ, ನಿನ್ನ ನಿಜ ಮಾತುಗಳನ್ನು ಕೇಳಿ ಒಮ್ಮೆಲೇ ನಿನ್ನ ಮೇಲೆ ಮುತ್ತುಗಳ ಸುರಿಮಳೆ ಸುರಿಸಿದ್ದೆ. ನೀನು ನನಗೆ ಬಜಾರೀ ಅಂತ ತಿಳಿಲಿಲ್ಲ ತಾನೇ?. ತಿಳಿದರು ನನಗೇನೂ ಚಿಂತೆ ಇಲ್ಲ. ನೀನು ನಿಜಕ್ಕೂ ಅದಕ್ಕೆ suitable ಅಂತ ಅನಿಸಿತ್ತು ಕೊಟ್ಟಿ ಬಿಟ್ಟೆ.
ನಿನಗೆ ನೆನಪಿರಬಹುದು ಅಂದುಕೊಂಡಿದ್ದೆ ಅಂದು ಮೊದಲನೆ ಸಲ ನೀನು ನನಗೆ ಅಪ್ಪಿಕೊಂಡಿದ್ದೆ, ನೀನೆ ಹೆಳಿದೆ ಥೂ ನಾನೊಬ್ಬ ಸ್ವಾರ್ಥಿ ತರಹ ಬಿಹೇವ್ ಮಾಡ್ತಾ ಇದ್ದೀನಿ ಅಂತ. ಒಂದೇ ಘಂಟೆಯಲ್ಲಿ ನೀನು ಸುಮಾರು ಒಂದು ಪಾಕೆಟ್ ಸಿಗರೇಟ್ ಸೆದ್ತಾ ಇರಬೇಕಾದರೆ ನನಗೆ ಅರ್ಥ ಆಗಿತ್ತು, ಏನೋ ಸೀರೀಯಸ್ ಮ್ಯಾಟರ್ ಅಂತ. ಆವಾಗ ನೀನೆ ಹೇಳಿದ್ದೆ "ಪರಿ" ನನಗೆ ಹುಡುಗಿ ಡಿಸೈಡ್ ಆಗಿದೆ ಅಂತ.ಛೀ ನಿನ್ನ, ನೀನೇನು ತಿಳಿದಿದ್ದೆ ನಾನು ಅಳ್ತಾ ಕುಡ್ತಿನಿ ಅಂತನಾ? ಪ್ರೇರಣ ಳಾ ಫೋಟೋ ನೋಡಿದ ಮೇಲೆ ಅನಿಸಿತು, ನಿನಗೆ ನಿನ್ನ ಪೇರೆಂಟ್ಸ್ ಮೇಲೆ ನಿನಗೇಕೆ ಅಷ್ಟು ಪ್ರೀತಿ ಅಂತ. ನಾನು ನಿಜಕ್ಕೂ ಲಕ್ಕಿ ಕಣೋ ನಿನ್ನ ಸ್ವಲ್ಪವಾದರೂ ಪ್ರೀತಿ ನಾನು ಅವಳಿಂದ ಕಸಿದಿದ್ದೆ.
ನೀನ್ಯಾಕೋ ಸಿಗರೇಟ್ ಸೆದ್ತಿಯಾ ಇಷ್ಟೊಂದು ಬೇಡ ಅಂದಿದ್ದೆ ನಿನಾಗೆಷ್ಟೋ ಸಲ, ಆವಾಗ ನೀನು ಹೆಳುವ ಮಾತು " ಐ ವಿಲ್ ಲೀವ್ ಇಟ್ ವನ್ಸ್ ಈ ಗೇಟ್ ಮ್ಯಾರೀ ಎಲ್ಸ್ ಶಿ ವೋಂಟ್ ಅಲೋ ಮಿ ಟು ಕಿಸ್" ಥೂ ನಿನ್ನ ಲಕ್ಕಿ ಗರ್ಲ್ ಕಣೊ ಅವಳು, ನೀನು ಅವಳಿಗಾಗಿ ಚೇಂಜ್ ಆಗೋಕ್ಕೆ ಬಯಸ್ತಾ ಇದ್ದೀಯಾ. ಬಹುಶ ನಾನು ನಿನ್ನ ಹೆಂಡ್ತಿಯಾಗಿದ್ದಾರೆ ನೀನು ಸಿಗರೇಟ್ ಸೆದಬೇಕು ಅಂದುಕೊಂಡಾಗಲೆಲ್ಲ ನಿನ್ನ ತುಟಿಗಳನ್ನು ನನ್ನ ತುಟಿಗಳಿಂದ ಲಾಕ್ ಮಾಡಿ ಬಿಡ್ತಾ ಇದ್ದೆ, ಹೋಗ್ಲಿ ಬಿಡು ನಮ್ಮಿಬ್ಬರ ಕಥೆ ಇಷ್ಟೇ ಅಂತ ಅನಿಸುತ್ತೆ. ನಿನಗೆ ನೆನಪಿರಬಹುದು ಆಮೇಲಿನ ನಮ್ಮಿಬ್ಬರ ಭೇಟಿ ತುಂಬನೆ ಜಾಸ್ತಿಯಾಗಿತ್ತು. ನನಗಿನ್ನೂ ನೆನಪಿದೆ ನೀನೊಮ್ಮೆ ಹೇಳಿದ್ದೆ ನಾನು ಸಾಯ್ತಾ ಇರಬೇಕಾದರೆ ನಾನು ನಿನ್ನ ತೊಡೆಯ ಮೇಲೆ ನನ್ನ ಹಣೆ ಇಟ್ಟು ಸಾಯಬೇಕು ಅಂತ. ಛೀ ಎಂತ ಮಾತು ಹೆಳ್ತಿಯಾ, ಐ ವಿಲ್ ಕಿಲ್ ಯೂ ಅಂತ ನಾನು ಹೇಳಿದ್ದಾಗ ನೀನು ಅದೇನೋ ದೊಡ್ಡ ದೊಡ್ಡ ಫಿಲಾಸೊಫೀ ಹೇಳಿದ್ದೆ.
ನಿನ್ನ ಮದುವೆ ಡಿಸೈಡ್ ಆಗಿ ನೀನು ಪುಣೆ ಇಂದ ಬೆಂಗಳೋರಿಗೆ ಹೋಗ್ತಾ ಇರಬೇಕಾದರೆ ನಾನು ನಿನಗೆ ತುಂಬಾನೆ ನಗು ಮುಖದಿಂದ ಕಳುಹಿಸಿದ್ದೆ. ಮತ್ತೆ ನಮ್ಮಿಬ್ಬರ ಭೇಟಿ ಈ ತರಹ ಆಗುತ್ತೆ ಅಂದುಕೊಂಡಿರಲಿಲ್ಲ.ನೀನು ಹೋಗಿ ತುಂಬಾನೆ ವರುಶಗಳಾಗಿರಬಹುದು ಕುಮಾರ್, ಆದರೆ ನಿನ್ನ ನೆನಪು ನನಗೆ ಪ್ರತಿ ಕ್ಷಣ ಬರ್ತಾ ಇರುತ್ತೆ. ಸ್ಮೋಕಿಂಗ್ ನಿಂದಾಗಿ ಲಂಗ್ಸ್ ಕೆಡಿಸಿಕೊಂಡು ಬಾರು ಎಷ್ಟೊಂದು ಪೇಶೆಂಟ್ಸ್ ನೋಡ್ತಾ ಇರ್ತೀನಿ. ಛೀ ನಾನೆಷ್ಟು ಕೆಟ್ಟವಳು ನನ್ನ ಕುಮಾರನ ಬಗ್ಗೆ ಹೀಗೆಲ್ಲಾ ವಿಚಾರ ಮಾಡ್ತಿನಲ್ವಾ ಅಂತ ಕೆಟ್ಟದಾಗಿ ಅನಿಸುತ್ತೆ. ಆದರೂ ನೀನೆಷ್ಟು ಸಲೀಸಾಗಿ ಸಾವು ಬದುಕಿನ ಬಗ್ಗೆ ಮಾತಾಡ್ತಾ ಇದ್ದೆ. ಬಹುಶ ಅದಕ್ಕೆ ನಿಮ್ಮಮ್ಮನ ಆಕಸ್ಮಿಕ ಮರಣದ ಪ್ರಭಾವ ಕೂಡ ಇರಬಹುದು ಅಂತ ಗೆಸ್ ಮಾಡಿದ್ದೆ. ನಿನಗೊಮ್ಮೆ ನೆನಪಿದೆಯಾ ಆದೊಮ್ಮೆ ನಿನ್ನ ಎದೆಯ ಮೇಲೆ ನಾನು ತಲೆ ಇಟ್ಟು ಮಲಗಿರಬೇಕಾದರೆ ನಾನು ಹೇಳಿದ್ದೆ, ಏನೋ ನಿನ್ನ ಹಾರ್ಟ್ ಬೀಟ್ ತುಂಬಾ ನಿಧನ ಕಣ್ಣೋ ಬಹುಶ್ ತುಂಬಾ Cಓ2 ತುಂಬಿರಬಹುದು ಅಂತ ನಾನೆಂದಾಗ, ಡೊಂಟ್ ವರೀ ನಾನು ಸಾಯಬೇಕಾದರೆ ನಿನಗೇ ಎ ಹರ್ಟ್ ಮತ್ತು ಲಂಗ್ಸ್ ಎರಡು ಗಿಫ್ಟ್ ಕೊಟ್ಟಿರ್ತಿನಿ ಅಂದು ನಕ್ಕಿದ್ದೇ.
ಇಂದು ಎಮರ್ಜೆನ್ಸೀ ವಾರ್ಡ್‌ನ ಪೇಶೆಂಟ್ ನೋಡಿದ ಮೇಲೆ ಒಮ್ಮೆಲೇ ನನ್ನ ಬದುಕಿನಲ್ಲಿ ನಾನ್ಯಾಕೆ ಡಾಕ್ಟರ್ ಆಗಿದ್ದೀನಿ ಅಂತ ಮೊದಲನೆ ಸಲ ಅನಿಸಿತು. ಓ ದೇವರೇ ಹೀಗ್ಯಾಕೆ ಆಗುತ್ತೆ, ನನ್ನ ಕುಮಾರ್ ಸಾವು ಬದುಕಿನ ನಡುವೆ ಒದ್ದಡ್ತಾ ಇದ್ದಾನೆ. ಬೇರೆ ಯಾರಾದರೂ ಇದ್ದರೆ ಸಡನ್ ಆಗಿ ನಾನು ಏನೆಲ್ಲಾ ಮಾಡ್ತಿದ್ದೆ,ಇಂದು ನಾನೇಕೆ ನಿಸ್ಸಾಹಯಕಳು.
ದೇವರೇ ನನ್ನ ಕುಮಾರ್ ನನ್ನ ಎದುರಲ್ಲೇ ಹೀಗೇಕೆ ಬರಬೇಕಾಗಿತ್ತು, ನಿನ್ನ ಕಣ್ಣುಗಳಲ್ಲಿ ಇಂದು ಆದೇ ಮಾಂತ್ರಿಕತೆ ಇದೆ, ಆದರೂ ತುಂಬಾ ದಣಿದ ಹಾಗೆ ಕಾಣ್ತಾ ಇದ್ದೇ ಕಣೋ. ನಿನ್ನ ಪ್ರೇರಣಾ ಹೊರಗಡೆ ಅಳುತ್ತಾ ಕುಳ್ಳಿತಿದ್ದಳು, ತುಂಬಾ ಅದೃಷ್ಟವಂತೆ. ತನ್ನ ದುಖವನ್ನಾದರೂ ತೋರ್ಪಡಿಸಿಕೊಳ್ಳಬಹುದು, ಆದರೆ ನಾನು? ಛೀ ಏನೇನೋ ಯೋಚನೆ ಯಾಕೆ ಮಾಡ್ತೀನಿ ನಾನು ಸುಮ್ಮನೇ
"ಐ ಆಮ್ ಸಾರೀ ಕುಮಾರ್" ಬಟ್ ಸ್ಟಿಲ್ ಐ ಲವ್ ಯೂ. ಡಾಕ್ಟರ್ ಪ್ಲೀಸ್ ಸೇವ್ ಮೈ ಹಸ್ಬೆಂಡ್ ಎಂದು ಪ್ರೇರಣಾ
Dr. ಸಂಜೀವ ಗೆ ಗೋಗರೆಯುತ್ತಾ ಇದ್ದಾಗ ನನ್ನಿಂದ ತಾಳಲಾಗಲಿಲ್ಲ,
ಹೇ ಸಂಜೀವ್ ವೈ ಕ್ಯಾಂಟ್ ಯೂ ಮೇಕ್ ಇಟ್ ಫಾಸ್ಟ್ ?
Dr. ಪರಿ ವ್ಹಾಟ್ಸ್ ದಿಸ್? ಅರೆ ಯೂ ಓಕೇ?
ಐ ಅಂ ಸಾರೀ ಡಾಕ್ಟರ್? ಎಂದು ಕಾಣದ ಹಾಗೆ ಕಣ್ಣೀರನ್ನು ಒರೆಸಿದ್ದೆ.
ಈಟ್ಸ್ ಓಕೇ ಪರಿ, ಆಫ್ಟರ್ ಆಲ್ ವೀ ಡಾಕ್ಟರ್ಸ್ ಅರೆ ಆಲ್ಸೊ ಹ್ಯೂಮನ್ ಬೀಯಿಂಗ್ಸ್.
ಎಸ್ ಯೂ ಅರೆ ರೈಟ್ ಡಾಕ್ಟರ್....ಎನ್ನುತ್ತಾ ಸುಮ್ಮನೇ ಹೀಗೆ ಪರೀಕ್ಷಿಸುವ ಹಾಗೆ ಮಾಡುತ್ತಾ ನಿನ್ನ ತಲೆ ಸವರಿದ್ದೆ ಕಣೋ..ಯಾರು ಇರದಿದ್ದರೆ ನಿನಗೆ ಅಪ್ಪಿ ಮುತ್ತಿ ಕಣ್ಣೀರಿನ ಸ್ನಾನ ಮಾಡಿಸುತ್ತಿರಬಹುದೇನೋ ಕುಮಾರ್.
ಮುಂದೇನು ನಡಿಯಿತೊ ಏನು ಗೊತ್ತಿಲ್ಲ, ಆಪರೇಶನ್ ಥಿಟರ್, ಎ ಸೀ ಉ ವಾರ್ಡ್ ಇವೇನೂ ನನಗೆ ಹೊಸದಲ್ಲ, ಆದರೆ ಮೊದಲನೆ ಸಲ ನಾನೊಬ್ಬ ನಿಸ್ಸಹಾಯಕ ಪ್ರೇಯಸಿಯಾಗಿ ಕೂತಿದ್ದೆ. ಆಪರೇಶನ್ ತೇಟ್ರೇ ಓಅಳ್ಲ್ಗಾಡೆ ಹೋಗೋ ಮೊದಲು ಡಾಕ್ಟರ್.ಸಂಜೀವ್ ಗೆ ಹೇಳಿದ್ದೆ.
ಡಾಕ್ಟರ್ , ಐ ವಾಂಟ್ ಟು ಸೀ ಪೇಶೆಂಟ್ ಬಿಫೋರ್ ಆಲ್, ವನ್ಸ್ ಆಪರೇಶನ್ ಈಸ್ ಓವರ್.
ಓಕೇ ?
ಬಹುಷ್ ಯಾಕೆ ಎಂದು ಕೆಳುವ ಮನಸು ಡಾಕ್ಟರ್ ಸಂಜೀವ್‌ಗೆ ಆಗಲಿಲ್ಲ ಅನಿಸುತ್ತೆ, ನಾನು ಹೆಳುತಿದ್ದೆ ನನ್ನ ಕುಮಾರ್ ಆಂತ.
ಬಹುಶ ನೀನು ಗುಣವಾದ ಮೇಲೆ ನೀನು ಕಲ್ಪನೆಯೂ ಮಾಡಿರಲಿಕ್ಕಿಲ್ಲ ನಾನು ನಿನಗಾಗಿ ಹೊರಗಡೆ ಕಾಯುತ್ತಿರಬಹುದು ಎಂದು. ಬದುಕೇ ಹೀಗೆ ಪರದೆಯ ಹಿಂದೆ ಅಡಗಿರುವದು ಯಾವಾಗಲು ಬಾರಿ ತಾರ್ಕಿಕ ಸತ್ಯ.
ಐ ಆಮ್ ಸಾರೀ, ಎಂದು ಡಾಕ್ಟರ್. ಸಂಜೀವ್ ಧ್ವನಿ ಕೆಳಿದ ಕೂಡಲೇ ನೋ....ಐ ಹೇಟ್ ಯೂ ಗಾಡ್ ಎಂದು ಜೋರಾಗಿ ಚೀರಿದ್ದೆ.... ಇನ್ನೂ ಏನೆಲ್ಲಾ ಆಗುವ ಮುಂಚೇನೆ ಆಮ್ಮಾ ಬಂದು ಏನೈತೆ ಪರಿ? ಎಂದಾಗ, ವಾಸ್ತವಕ್ಕೆ ಬಂದಿದ್ದೆ, ಅಮ್ಮನು ಕಣ್ಣೀರು ಸುರಿಸುತಿದ್ದಳು, ಅಪ್ಪ ಕೂಡ ಏನು ಅರ್ಥವಾಗದೇ ನಿಂತಿದ್ದ. ನಾನು ಅಳುವದು ಕಂಡು ಅವರಿಬ್ಬರ ಕಣ್ಣಲ್ಲೂ ಕಣ್ಣೀರು ಕಾಣುತಿತ್ಟು. ಅಮ್ಮನನ್ನು ಅಪ್ಪಿಕೊಂಡು ಅವಳ ಸೀರೆಯೆನ್ನಲ್ಲ ಕಣ್ಣೀರಿಂದ ಒದ್ದೆಯಾಗಿಸಿದ್ದೆ. ಹುಚ್ಚು ಹುಡುಗಿ ಕೆಟ್ಟ ಕನಸನ್ನು ಕಂಡು ಇಯಾಸ್ತೊಂದು ಅಳುವದೆ? ಎಂದು ಅಮ್ಮ ಸಂತೆಸುತಿದ್ದಳು.
ರಾತ್ರಿ 12 ಘಂಟೆ ಕಣೊ ಬಹುಶ ಮುಂಜಾನೆ 8 ಗಂಟೆಗೆ ನೀನು ಪುಣೆ ಬಿಟ್ಟು, ನನ್ನ ಬಿಟ್ಟು ಎಂದೆಂದಿಗೂ ಹೋಗ್ತಾ ಇದ್ದೀಯಾ. ನಿನಗಾಗಿ ನಿನ್ನೆ ತುಂಬಾ ಶಾಪಿಂಗ್ ಮಾಲ್ಸ್ ಅಡ್ಡಾಡಿದೆ, ಆದರೂ ನಿನ್ನೆದರು ಎಲ್ಲಾ ತುಂಬಾ ಚೀಪ್ ಆಗಿ ಕಾಣಿಸಿತು. ಥೂ ಮುಂಜಾನೆ ಬೇಗ ನಿನ್ನ ಜ್ಯೊತೆ ಸ್ವಲ್ಪ ಸಮಯ ಕಳೆಯಬೆಕು ಅಂದು ಕೊಂಡಿದ್ದೆ ಆದರೆ ಈ ಕೆಟ್ಟ ಕನಸು. ನಿದ್ದೆನು ಬರ್ತಾ ಇರಲಿಲ್ಲ. ಹೀಗೆ ಆ ಕನಸನ್ನೆಲ್ಲ ನಿನ್ನ ಜ್ಯೊತೆ ಶೇರ್ ಮಾಡ ಬೇಕು ಅಂತ ಅನಿಸಿತು. ಆದನ್ನೆ ಪತ್ರವಾಗಿಸಿ ನಿನಗೆ ಗಿಫ್ಟ್ ಆಗಿ ಕೊಡ್ತಾ ಇದ್ದೇನೆ. ಕುಮಾರ್ ಇಷ್ಟಾಗಿಯೂ ನಾನು ನಿನಗೆ ಏನು ಮಾಡಬೇಡ ಎಂದು ಹೇಳುತ್ತಿಲ್ಲ. ಆದರೂ ನಿನ್ನಿಷ್ಟ ನನಗಾಗಿ ಸ್ಮೋಕಿಂಗ್ ಬಿಡು ಕಣೋ. ನೀನು ಹೋಗುವ ಮೊದಲು ನಿನಗೆ ಒಂದು ಡೀಪ್ ಕಿಸ್ ಕೊಟ್ಟಿರ್ತೀನಿ, ಪ್ಲೀಸ್ ನಾನು ಮುತ್ತಿಟ್ಟ ಆ ತುಟಿಗಳ ಮೇಲೆ ಎಂದು cigarate ಫಿಲ್ಟರ್ ಮುಟ್ಟಬಾರದು ಕಣೋ. ನನಗಾಗಿ ಪ್ಲೀಸ್.
ಇಂತೂ ನಿನ್ನ ಹುಡುಗಿ
ಪರಿ- ಮಿಸ್ ಯೂ ಮುದುಕ.
Tuesday, May 6, 2008
ನೆನಪಿನ ಮಾತು

ಇಂದು ಕಾಡೀತು ಗೆಳತಿ,
ಎಂದಿನಿಂದ ನೀನು
ಆದೇದೊಡ್ಡ ಹೃದಯದ ಒಡತೀ?
ಹೋದ ವರುಷದ ಚಳಿಗಾಲದ
ರಾತ್ರಿಯೊಮ್ಮೆನನ್ನ ಅಪ್ಪಿಕೊಂಡು,
ಮುತ್ತುಗಳಸುರಿಮಳೆ ಸುರಿಸಿದವಳು
ನೀನೆ ಅಲ್ಲವೇ ಹುಡುಗಿ ?
ಮಳೆಗಾಲದಲಿ ನಿಮ್ಮೋರಿಗೆ ಹೊರಟಾಗ
ನನ್ನ ಬಿಟ್ಟು ಎರಡು ದಿನ, ನಿನ್ನ
ಬಿಟ್ಟುಹೇಗಿರಲಿ ಎಂದು, ಮಳೆ ಹನಿಗಳಿಗಿಂತ
ನಮ್ಮಕಣ್ಣಿರೆ ನೆಲವನ್ನೂ ನೆನೆಸಿದ್ದು ಹೇಗೆ ಮರೆತೆ ನೀನು?
ಬೇಸಿಗೆಯಲ್ಲೊಮ್ಮೆ ನಾವಿಬ್ಬರು
ಸೇರಿ ರಾತ್ರಿ ಆಗಸದ ಚುಕ್ಕಿಗಳನ್ನು
ಚುಕ್ಕಿಗಳನ್ನುಹೆಕ್ಕಿ, ಹೆಕ್ಕಿ ಎಣಿಸಿದ್ದು, ಮುಂಜಾನೆ
ಎರಡು ಚುಕ್ಕಿ ನಿನ್ನ ಕಣ್ಣಲ್ಲೇ ಇದೆ
ಎಂದು ನಾನು ಆಂದಾಗ,
ನನ್ನ ಹುಚ್ಚನೆಂದು ನಕ್ಕಿದ್ದು ನೆನಪಿದೆ ತಾನೇ?
ನಿನ್ನ ನ ಮರೆತಿರುವೆ, ಅದೊಂದು
ಕೆಟ್ಟ ಕನಸು, ನಿನಗಾಗಿ ಇಲ್ಲ ನನ್ನ ಮನಸು..
ಎನ್ನುವ ನಿನ್ನ ತುಟಿಗಳಲ್ಲಿ ಇನ್ನೂ ನನ್ನ
ಮುತ್ತಿನ ಮತ್ತಿದೆ, ನಿನ್ನ ಆ ಕಣ್ಣುಗಳಲ್ಲಿ
ಇಂದಿಗೂ ಕಾಣುತ್ತಿದೆ ನನ್ನ ಪ್ರತಿಬಿಂಬ,
ನಿನ್ನ ನಾನು ನಂಬಲೇ? ಆಥವಾ ನಿನ್ನೊಳಗಿರುವ
ನನ್ನ ನಾ ನಂಬಲೇ ಹೇಳು ಗೆಳತಿ?
Saturday, April 19, 2008
ಹೃದಯ ವೀಣೆ ಮೀಟಿದಾಗ

ಗೆಳತಿ ನನ್ನ ಮೌನದ ಮಾತುಗಳು.
ಯಾಕೆ ಸ್ಪಂದಿಸದೇ ಹೋಯಿತು ನಿನ್ನ
ಆ ವೀಣೆಯ ತಂತಿಗಳು
ನನ್ನ ಬಿಂಬವ ಹುಡುಕಲು
ಕಾತರಿಸಿದೆ ನಿನ್ನ ಕಣ್ಣುಗಳಲ್ಲಿ
ಒಂದು ಸಲ ತಲೆ ಎತ್ತಿಕುಡಾ
ನೋಡಲಿಲ್ಲ ಯಾಕೆ ನನ್ನ ಕಣ್ಣುಗಳಲ್ಲಿ
ದೂರದ ಉರಿಂದ ಓಡೋಡಿ ಬಂದೆ
ಗೆಳತಿ ನಿನ್ನ ವೀಣೆಯ ನಾದ ಕೇಳಿ
ನಾನಿರುವಾಗ ನಿನ್ನೆದುರು ಯಾಕೆ ನಿನಗೆ
ಮೌನ ರಾಗವೇ ಹಿತವಾಯಿತು ಗೆಳತಿ
ನಿನ್ನ ಮೌನ ರಾಗ, ನನ್ನ ಉಸಿರು
ಕೊಲ್ಲುವ ಮೊದಲೇ ಒಮ್ಮೆ ಮೀಟಾಬಾರದೆಕೆ
ಗೆಳತಿ ನಿನ್ನ ವಿಣೆಯ ತಂತಿ
ಸುತ್ತಲಿನ ನಿಶಬ್ದದ ಭೀತಿಯನೂ
ಹೋಗಲಾಡಿಸಿ ಒಮ್ಮೆಲೇ ಯಾಕೆ
ಹೊರಬರಬಾರದು ನಮ್ಮಿಬ್ಬರ ಪ್ರೀತಿ
Saturday, April 5, 2008
ಅವಳ ನೆನಪು

ತಂಗಾಳೀ ನಡುವಾಗ
ಕುಳಿತಾಗಲೆಲ್ಲಾ......
ಮರೆಯಬೇಕು
ಅಂದುಕೊಂಡಾಗಲೆಲ್ಲಾ.
ಒತ್ತೊತ್ತಿ ಬರುತಾವ
ಅಚ್ಚಾದ ನೆನಪು.
ಆ ನಿನ್ನ ಮಲ್ಲಿಗೆ
ಕಣ್ಣಿನ ಹೊಳಪು
ಆ ನಿನ್ನ ಸುಂದರ
ತುಟಿಗಳ ಕೆಂಪು
ನನ್ನ ಸುತ್ತಲೆಲ್ಲಾ
ಬಿಸಿ ಸ್ಪರ್ಶವಾಗಿ.....
ಹತ್ತಿರದಲೇ ನಿಂತು
ಮಾತಾಡಿದ ಹಾಗೇ...
ಹಣೆಯ ಮೇಲೊಂದು
ಮುತ್ತಿಟ್ಟ ಹಾಗೇ..
ದೂರದಲಿ ನಿಂತು
ಅಣಕಿಸುವ ಹಾಗೇ....
ಎಚ್ಚೆತ್ಟು ಕೊಳ್ಳುವಷ್ಟರಲ್ಲಿ
ಮರೆಯಾಗುತ್ತವೆ
ಸುತ್ತಲಿನ ತಂಗಾಳಿಯಲ್ಲಿ
ನೀರ ಹನಿಗಳಾಗಿ
ಲೀನವಾಗಿ ಹೋಗುತ್ತವೆ
ನೋಡುತ್ತಿರುವ ಹಾಗೇ
ಎದ್ದು ನಡೆಯುವಾಗ
ಹನಿಹುಲ್ಲು ಮುತ್ತಿಟ್ಟರು
ಅವಕ್ಕಾಗಿ ನೋಡುವೆ
ಪಾದಗಳತ್ತ.
ನೀ ಕಾಣದೆ ಇರಲು ಸುಸ್ತಾಗಿ
ನುಕುತ್ತಿರುವೆ
ಬದುಕ ಕ್ಷಣಗಳು
ಒಂದೊಂದನ್ನೇ ಎಣಿಸುತ್ತಾ.
Harshaa
