ನಿನ್ನ ನೆನಪು ಇಂದು ಅಮ್ಮ ನನಗೆ ಮತ್ತೆ ಮತ್ತೆ ಕಾಡುತಿದೆ..... ನೀನಿಲ್ಲದ ಬದುಕು ಏಕೋ ಇಂದು ತುಂಬಾ ಬೇಸರ ಎನಿಸುತಿದೆ.... ರೆಪ್ಪೆ ಮುಚ್ಚಲು ಹೆದರುವದು ಕಣ್ಣೀರ್ ಹನಿಗಳು ಯಾರಿಗೂ ಕಾಣದಿರಲಿ ಎಂದು ತಲೆಯ ಮೇಲೆ ಯಾರಾದರೂ ಕೈ ಇಟ್ಟರು ಹೀಗೆ, ಹಿಂತುರುಗಿ ನೋಡುವೆ ನೀನಿರಬಹುದು ಎಂದು ಮುಂಜಾವಿನಲಿ ರಂಗೋಲಿ ಹಾಕುವ ಹೆಣ್ಣುಮಕ್ಕಳಾತ್ತ ಕದ್ದು ನೋಡುವೆ ನಿನ್ನ ಮುಖ ಕಾಣಿಸಬಹುದು ಎಂದು ಪ್ರತಿ ದಿನ ಬಹಳ ಹೊತ್ತಿನವರೆಗೂ ಮಲಗುವೆ ನೀನು ಹಣೆಯ ಮೇಲೆ ಮುತ್ತಿಕ್ಕಿ ಎಬ್ಬಿಸುವೆಯೆಂದು
ಮನಸು ಚೋರ್ ಬಜಾರು ನಾನಿರಬೇಕು ಅದರಿಂದ ಹುಷಾರು ಅದು ಬಯಸುವ ವಸ್ತು ಯಾರಪ್ಪನದಾದರೇನು ಸೊತ್ತು, ಕೇಳದು ಯಾರ ಮಾತು ಪಡೆದೇ ತೋರಿಸುವದು ತನ್ನ ಹುಕುಮತ್ತು ಯಾರದೋ ಅಂಗಳದ ಗುಲಾಬಿ ನನ್ನಯ ಮುಡಿಗೆ ಯಾಕೆ? ಆದರು ಕೇಳದು ಕೀಳುವ ಮುನ್ನ ನಾನು ಮಾಡುವದು ತಪ್ಪು ಅನಿಸದು. ಲಗಾಮು ಹಾಕಲು ಅದು ವಿವೇಕವಿರದ ಕುದರೆಯೇನಲ್ಲ ಬಲು ಜಾಣೇ.. ಆದರು ಸ್ವಾರ್ಥಿ, ತನ್ನ ಖುಷಿಗಾಗಿ ಯಾರಿಗೂ ನೋವು ಕೊಡಲು ಹೇಸದು. ಏ ದೇವರೇ ನಡೆಸು ಏನಾದರೂ ಕರಾಮತ್ತು ಠಿಕಾಣಿಗೇ ಬರಲಿ ನನ್ನ ಮನಸು ನಾನಲ್ಲವೇ ನಿನ್ನ ಸೊತ್ತು? ನಿಮ್ಮ ಹರ್ಷಾ
ಎಲ್ಲಾ ಭಾವನೆಗಳು ಹರಿಯಬಿಡಲಾಗುವದಿಲ್ಲಾ ಕೆಲವೊಂದು ಮುಚ್ಚಿಡಬೇಕು ಬಚ್ಚಿಡಬೇಕು, ಹೃದಯದಲಿ ಧುಮ್ಮುಕ್ಕಿ ಹರಿಯುತಿದ್ದರೂ ತುಟಿಯಂಚಿನಲ್ಲಿ ಬಾರದ ಹಾಗೆ ನಾಲಿಗೆಯನ್ನೇ ಅಡ್ಡಗೋಡೆಯಾಗಿಸಬೇಕು. ನೀ ಕೊಟ್ಟ ರಸನಿಮಿಶಗಳನ್ನು ಒಬ್ಬನೇ ಸವಿದಿದ್ದೆ ಕೆಲವೊಮ್ಮೆ ನಾ ಸ್ವಾರ್ಥಿಯಾಗಿ, ಮತ್ತೇ ನೋವನ್ನು ಹಂಚಿಕೊಳ್ಳಲಿಕ್ಕೆ ಮತ್ತ್ಯಾರದೋ ಭುಜವನ್ನೇಕೆ ಹುಡುಕಬೇಕು? ನೋವಿರಲಿ ನಲಿವಿರಲಿ ಕಣ್ಣು ಮುಚ್ಚಿ ನಿನ್ನಲ್ಲಿ ಒಂದಾಗಲೇಬೇಕು. ಕವನಕ್ಕೆ ದಕ್ಕದ ನೂರಾರು ಭಾವನೆಗಳು ಹೃದಯದಲ್ಲೇ ಮೌನ ರಾಗ ಹಾಡಬೇಕು..
Comments