ಹೃದಯ ವೀಣೆ ಮಿಟಬೆಕೆ?

Saturday, June 4, 2011

ಯಾರು ನಾನು ?

ಸಿಗದ ಪ್ರಶ್ನೆಯ ಸುತ್ತ
ಸುತ್ತುತ್ತ , ನನಗೆ ನಾನೆ
ಪ್ರಶ್ನೆ ಮಾಡುತ ಎತ್ತ
ಸಾಗಿದೆ ನನ್ನ ಪಯಣ

ಆಸೆಯ ಹೆಬ್ಬಾವು ನನ್ನಲ್ಲಿ
ಆಗಾಗ ತಲೆ ಎತ್ತಿ, ಕೊಚ್ಚಿ
ಹಾಕುವ ಮೊದಲು ಸ್ವಲ್ಪ
ವಿಷ ಕಾರುವದು ನಿಜ

ದ್ವೇಷ ರೋಷ ಅಸುಯೆಗಳು
ಬೇರು ಬಿಟ್ಟಿದ್ದು ನಿಜ ,
ಗಿಡವಾಗುವ ಮೊದಲೇ
ಮೆಟ್ಟಿ ಹಾಕಿದ್ದು ನಿಜ

ನಾನು ಅಂದರೆ ನಾನಲ್ಲ
ಹಾಗಿದ್ದರೆ ನಾನ್ಯಾರು
ಎಂದು ನೂರಾರು ಸರಿ
ಪ್ರಶ್ನಿಸಿದ್ದು ನಿಜ

ನೀನೆ ಸೃಷ್ಟಿಸಿದ ಜಗದಲ್ಲಿ
ನಿನ್ನ ಮಾತೆ ನಡೆಯುವದು,
ಮತ್ತೇಕೆ ಪಾಪ ಪುಣ್ಯಗಳು
ನಮ್ಮನ್ನು ಬಾಧಿಸುತ್ತವೆ

ನಾವೆಲ್ಲರೂ ಅರಿತು ಅರಿಯದೆ
ಮುಗ್ಧರಲ್ಲವೇ ತಂದೆಯೇ
ಮತ್ತ್ಯಾಕೆ ಈ ನೋವುಗಳು
ನಮ್ಮನ್ನು ಕಾಡುತ್ತವೆ ?

ಹರೀಶ್ ಬೀರಗೆ