ಹೃದಯ ವೀಣೆ ಮಿಟಬೆಕೆ?

Wednesday, July 23, 2014

ಶಿಲಾಬಾಲೆ

ಶಿಲ್ಪಿ ಕಡೆದ ಬೇಲೂರ 
ಶಿಲಾಬಾಲೆಯ ಮೇಲೆ 
ಗಗನದಿಂದ ಕೈತಪ್ಪಿ ಆಯಿತು 
ಅಮೃತದ ಹನಿ ಸಿಂಚನ

ನನ್ನೊಲವೆಂದು ಹೇಳಲು 
ಮನ ಪರಿತಪಿಸುವುದು , 
ನಿನ್ನ ಕಂಡಾಗಲೆಲ್ಲ 
ನನ್ನ ಹೃದಯದಲಿ ರೋಮಾಂಚನ

ದೇಗುಲದ ಗೋಡೆಯಲ್ಲಿ
ನಿಂತು ಶತಶತಮಾನ
ಆದೆ ಸ್ನೇಹಿಯೇ ನೀನು
ಪರಿಶುದ್ಧ, ಪ್ರವರ್ಧಮಾನ

ಕಣ್ಣು ಕೋರೈಸುತ್ತಿಲ್ಲ
ಬರೀ ನಿನ್ನ ರೂಪ, ಅದರಲ್ಲಿ
ಅಡಗಿದೆ ಅರಿಯೆ ಅದಾವುದೋ
ಶಕ್ತಿ ಸ್ವರೂಪ

ಕರೆಯಲೇ ನಿನ್ನ ಕೈ ಬೀಸಿ
ಮನಸಾರೆ...? ಬೇಡ , ನೀನು
ಹೆಣ್ಣಲ್ಲ, ಹೆಣ್ಣಿನ ಸಾಕ್ಷಾತ್ಕಾರ
ನನಗೆ ನಿಲುಕದ ತಾರೆ

ನಿಮ್ಮ
ಹರ್ಷಾ 

 

No comments: