ಹೃದಯ ವೀಣೆ ಮಿಟಬೆಕೆ?

Sunday, October 18, 2015

ಭಾವನೆಗಳು

ಎಲ್ಲಾ ಭಾವನೆಗಳು
ಹರಿಯಬಿಡಲಾಗುವದಿಲ್ಲಾ
ಕೆಲವೊಂದು ಮುಚ್ಚಿಡಬೇಕು
ಬಚ್ಚಿಡಬೇಕು, ಹೃದಯದಲಿ
ಧುಮ್ಮುಕ್ಕಿ ಹರಿಯುತಿದ್ದರೂ
ತುಟಿಯಂಚಿನಲ್ಲಿ ಬಾರದ
ಹಾಗೆ ನಾಲಿಗೆಯನ್ನೇ
ಅಡ್ಡಗೋಡೆಯಾಗಿಸಬೇಕು.
ನೀ ಕೊಟ್ಟ ರಸನಿಮಿಶಗಳನ್ನು
ಒಬ್ಬನೇ ಸವಿದಿದ್ದೆ ಕೆಲವೊಮ್ಮೆ
ನಾ ಸ್ವಾರ್ಥಿಯಾಗಿ, ಮತ್ತೇ
ನೋವನ್ನು ಹಂಚಿಕೊಳ್ಳಲಿಕ್ಕೆ
ಮತ್ತ್ಯಾರದೋ ಭುಜವನ್ನೇಕೆ
ಹುಡುಕಬೇಕು?
ನೋವಿರಲಿ ನಲಿವಿರಲಿ
ಕಣ್ಣು ಮುಚ್ಚಿ ನಿನ್ನಲ್ಲಿ
ಒಂದಾಗಲೇಬೇಕು.
ಕವನಕ್ಕೆ ದಕ್ಕದ ನೂರಾರು
ಭಾವನೆಗಳು ಹೃದಯದಲ್ಲೇ
ಮೌನ ರಾಗ ಹಾಡಬೇಕು..

No comments: