ಗೆಳೆಯಾ,
ಗೆಳೆಯಾ, ಹೇಗಿರುವೆ ? ಬಹುಶ ಚೆನ್ನಾಗಿರಬಹುದು ಎಂದು ಕೊಂಡಿದ್ದೇನೆ. ನನ್ನ ಬಗ್ಗೆ ಹೇಳುವಂಥ ವಿಶೇಷ ಏನು ಇಲ್ಲ . ಎಲ್ಲ ಕ್ಷೇಮ, ಅದೇ ೮ ಘಂಟೆ ಕಂಪ್ಯೂಟರ್ ಜ್ಯೋತೆ ಗುದ್ದಾಟ, ಮನೆ ತಲುಪಲು ಬೆಂಗಳೂರಿನ ಜನನಿಬಿಡ ಬಿದಿಗಳ ನಡುವೆ ಮೌನ ಹೋರಾಟ , ಮತ್ತದೇ ಬದುಕು ಮತ್ತದೇ ಜಂಜಾಟ, ಬದುಕಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕುಮಾರ ಒಂದು ಮಾತು ನಾವು ಚೇಂಜ್ ಬಯಸುತ್ತೇವೆ, ಆದರೆ ಕೆಲವೊಮ್ಮೆ ಬದಲಾವಣೆಗೆ ಹೆದರುತ್ತೇವೆ ಕೂಡ ... ಹೇ ಒಂದು ನಿಮಿಶ್ ಡೋಂಟ್ ವರಿ ಈ ಮಾತುಗಳು ನಿನ್ನವೇ, ಆದರೆ ನಾನು ಇವಾಗ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ . ಅಂತರ್ಜಾಲದ ಹಸನಿನಲ್ಲಿ ಮೊಳಕೆಯೊಡೆದ ಪ್ರೀತಿ ಪ್ರೇಮ ಸಾವಿರ ಸಾವಿರ, ಕೆಲವೊಮ್ಮೆ ಬರಿ ಅಂತರವಷ್ಟೇ ಅಲ್ಲ ಮನಸು ದೂರ ದೂರ ....ಗೆಳೆಯಾ ಈ ಸಾಲುಗಳು ನಿನ್ನ ಕವಿತೆಯದ್ದೆ ....ಪ್ಲೀಸ್ ಒಮ್ಮೆಯಾದರೂ ನಿಜ ಹೇಳು ಇದು ನಮ್ಮಿಬ್ಬರ ಕುರಿತು ಬರೆದದ್ದಂತು ಅಲ್ಲ ಅಲ್ಲವೇ? ನಮ್ಮ ಮನೆಯಂಗಳ ಬೆಳಗುವ ಚಂದಿರನನ್ನು ಮನೆಯ ಹಣತೆಯನ್ನಾಗಿಸುವ ಪ್ರಯತ್ನ ಮಾಡಬಾರದು, ನಿನ್ನ ಈ ಮಾತುಗಳು ನನಗೆ ನಿಜಕ್ಕೂ ವಿಚಿತ್ರವೆನಿಸುತಿತ್ತು. ಬರಿ ಇದೇಕೆ ನಿನ್ನ ಪ್ರತಿ ಮಾತು ನನಗೆ ಒಂದೇ ಒಗಟೇ, ರವಿ ನನಗೆ ಗೊತ್ತಿಲ್ಲ ಅದೇಕೋ ಏನೋ ನಿನ್ನ ಮಾತುಗಳು ನೀನು ಮಾಡುವ ಚರ್ಚೆಗಳು, ಯಾವುದೇ ವಿಷಯವನ್ನು ಬೇರೆ ಬೇರೆ ದ್ರಷ್ಟಿಕೊನದಲ್ಲಿ ನೀನು ನೋಡುವ ಬಗೆ ನಿಜಕ್ಕೂ ಅಧ್ಭುತ. ಆದರೆ ಒಂದಂತು ನಿಜ ನನಗೆ ಯಾವಾಗಲು ಅನಿಸುತಿತ್ತು ನಿನಗೆ ಸೋಲು ಇಷ್ಟ ...