ಬುದ್ಧನಲ್ಲ

ನಾನೇನು ಬುದ್ಧನಲ್ಲ ಆದರು
ಒಮ್ಮೊಮ್ಮೆ ವೈರಾಗ್ಯ ಹಾಯ್ದು
ಹೋಗುವದು ನನ್ನ ಮನಸ್ಸಿನಲ್ಲಿ .

ಸುತ್ತಲಿನ ಜನರ ನಡುವೆ ಹಾಯಾಗಿ
ನಾನು ನಗುತ್ತಿರಬೇಕಾದರು ಮನಸ್ಸಿನಲ್ಲಿ
ಚಡಪಡಿಸುತ್ತೇನೆ ನೋವಿನಲಿ ..

ಕೆಲವೊಮ್ಮೆ ಮೌನದಲಿ ಮಾತಾಡುತ್ತೇನೆ
ಆಗಾಗ ಮಾತಾಡುತಿದ್ದರು ಮನಸು
ಹಾತೊರೆಯುತ್ತದೆ ಮೌನದ ಮಡಿಲಿನಲ್ಲಿ

ಏನೆಲ್ಲ ಅರಿತರು ಯಾಕೆ ಮನಸ್ಸೇ
ಸುಮ್ಮನೆ ಯಾಕೆ ಈ ಮುಖವಾಡ
ಮುಗ್ಧನಂತೆ ಜಗತ್ತಿನಲ್ಲಿ

Comments

ಸುತ್ತಲಿನ ಜನರ ನಡುವೆ ಹಾಯಾಗಿ
ನಾನು ನಗುತ್ತಿರಬೇಕಾದರು, ಮನಸ್ಸಿನಲ್ಲಿ
ಚಡಪಡಿಸುತ್ತೇನೆ ನೋವಿನಲಿ ..

ನಮ್ಮ ನೋವು ಸುತ್ತಲಿನವರಿಗೆ ತಟ್ಟದಿರುವಂತೆ ನೋಡಬೇಕಾದರೆ ಈ ಎಲ್ಲಾ ಮುಖವಾಡ ಬೇಕು ಅಲ್ವಾ ಹರ್ಷರವರೆ....
ಹರ್ಷಾ said…
you are right chukki......... but some times it will be quite easy to our real face rather than this

Popular posts from this blog

ಅವಳ ನೆನಪು

ನಾನು ಮತ್ತು ಅಮ್ಮನ ನೆನಪು

ಸೌಂದರ್ಯ