ಕನಸಿನ ಕನ್ಯೆ

ಬದುಕಿನಲ್ಲಿ ಬಾ ಗೆಳತಿ
ಯಾಕೆ ಕಾಡಿಸುವೆ ನನ್ನ
ಪ್ರತಿ ದಿನ ಕನಸಲ್ಲಿ...
ಹೇಗೆ ತಿಳಿಸಿ ಹೆಳಲಿ
ನಿನಗೆ, ಎಷ್ಟೊಂದು ಪ್ರೀತಿ
ಇದೆ, ನಿನಗಾಗಿ ಈ ಮನಸಲ್ಲಿ.
ಪ್ರತಿ ಗಳಿಗೆ ಬಯಸುವೆ
ಕಣ್ಣು ಮುಚ್ಚಲು, ನಿನ್ನ
ಸುಂದರ ಮೊಗವು ಕಾಣಲು......
ಹೆದರುವದು ಈ ಮನಸು
ಎಚ್ಚೆತ್ಟುಕೊಳ್ಳಲು, ಕಣ್ಣು ಬಿಟ್ಟರೆ
ನೀನು ತಪ್ಪಿ ಹೋಗುವೆಯೆಂದು.
ಈ ನನ್ನ ನಿದ್ರೆ ಚಿರನಿದ್ರೆಯಾದರೂ ಚಿಂತೆ ಇಲ್ಲ,
ನನ್ನ ಮುಚ್ಚಿದ ರೆಪ್ಪೆಗಳಮೇಲೊಮ್ಮೆ
ನೀನು ಮುತ್ತಿಟ್ಟರೆ ಸಾಕು ಗೆಳತಿ...
Comments