ಎ ವಸಂತವೇ

ಎ ವಸಂತವೇ ಮತ್ತೆ ಬಂದೆ
ಎಲ್ಲರ ಬದುಕಿನಲ್ಲಿ , ಏನು
ಹೊಸ ಖುಷಿಯ ತಂದೆ ?.

ನನ್ನ ಸುತ್ತಾಲೆಲ್ಲಾ ಹಸಿರು
ತೊರಣದ ಸರಮಾಲೆಯನ್ನೇ..
ಕಂಗೊಳಿಸಿ ನಿಂದೆ..

ಮಧುರ ಕೋಗಿಲೆಯ ಇಂಪಾದ
ಹಾಡಿಗೆ ತಲೆದೂಗುತಾ ನೀನು
ಬೆರಗಾಗಿ ನಿಂದೆ

ಒಂದು ಮಾತು ಹೇಳು ನನಗೆ,
ಏಕೆ ಗೆಳೆಯನೆ ನನ್ನ ನೀನು
ಮರೆತು ಹೋದೆ. ?.

ನನ್ನ ಬದುಕಿನಲ್ಲಿ ಏಕೆ
ಮತ್ತೆ ಆದೇ ಹಳೆಯ ನೋವನು,
ಹೋಗಲಾಡಿಸದೇ ಸೋತು ನಿಂದೆ.

ಬರೆಯುತ್ತೇನೆ ಕೆಲವು ಸಾಲು ನಿನ್ನ
ಆಗಮನದ ಮೊದಲು, ಹೊಸ ಚೈತನ್ಯ
ಮುಡಲಿ ನನ್ನಲ್ಲಿ ಎಂದು....

ಮತ್ತೆ ನೆನಪಾಗುವಳು ಅವಳು
ಒಮ್ಮೆ ಕೇಳಿದರೇ ಸಾಕು ಕೋಗಿಲೆಯ
ಇಂಪಾದ ಧ್ವನಿಯನೊಮ್ಮೆ......

ಸುತ್ತಲಿನ ಹಸಿರಿನಲ್ಲಿ ಎಲೆಯ ಹಿಂದೆ
ಅವಿತು ತನ್ನನ್ನು, ನನ್ನ ಕಾಡಿಸುವ ಆಟ
ಆಡುವ ಅವಳ ನೆನಪು....

ಕಣ್ಣು ಮುಚ್ಚಿ ಹಣೆಯ ಮೇಲೆ ಮುತ್ತಿಟ್ಟು
ನೋಡುವಳು, ನಿಲ್ಲುತಿದ್ದಳು ಮುಗ್ದ ಹುಡುಗಿಯ
ಹಾಗೆ, ಹೆದರಿಕೊಂಡು ನೋಡುವ ಅವಳ ಬಗೆ.

ಹಳೆಯ ನೆನಪುಗಳೆಲ್ಲ ನಿನ್ನ ಆಗಮನದೊಂದಿಗೆ
ಚಿಗುರುತ್ತವೆ ನನ್ನಲ್ಲಿ, ಹೊಸ ನೋವುಗಳಾಗಿ..
ಒಮ್ಮೆ ಹೆಳು ನನ್ನ ನಾನು ಮರೆಯಲಿ ಎಲ್ಲ ಹೇಗೆ..

ನಿನ್ನ ಸ್ವಾಗತಕ್ಕೆ ಬರೆಯಬೇಕೆಂದು ಅನಿಸಿತ್ತು
ಪ್ರತಿ ಬಾರಿ ನೀನು ಬರುವಾಗ, ಗೊತ್ತಿರಲಾರದೇ
ಬರೆಯುತ್ತೇನೆ ಮತ್ತೊಂದು ಕವನ ಅವಳಿಗಾಗಿ

Comments

Popular posts from this blog

ನಾನು ಮತ್ತು ಅಮ್ಮನ ನೆನಪು

ಅವಳ ನೆನಪು

ಸೌಂದರ್ಯ