ಗೆಳತಿ,
ಗೆಳತಿ,
ಮತ್ತೆ ನೆನಪಾಗುತಿದೆ ,
ಮಂಜಾದ ಕಣ್ಣು..
ನಿನ್ನ ಸುಪ್ತ ಕನಸುಗಳು
ಬಾಡಿ ಹೋಗುವ ಹೆದರಿಕೆ ...
ಲಕ್ಕಿ...ನಿನ್ನನ್ನು ಮರೆತು ತುಂಬಾ ದಿನವಾಗಿದೆ, ಹಾಗೆಂದು ಕೊಳ್ಳುತ್ತೇನೆ. ಮೊನ್ನೆ ತುಂಬಾನೇ ಖುಷಿಯಾಗಿದ್ದೆ, ಸುಮ್ಮನೆ ಹಾಗೆ ಸಂಜೆಯ ಹೊತ್ತಿನಲ್ಲಿ ಹೊರಗೆ ಚಹಾ ಕುಡಿಯೋಕ್ಕೆ ಹೋಗಿದ್ದೆ. ಒಂದು ಜೋಡಿ ಹಕ್ಕಿಗಳು ಆಫೀಸಿನ ಹೊರಗಡೆ ಸುತ್ತುತಿದ್ದವು. ಆ ಹುಡುಗಿಯ ಮೊಂಡು ಮುಗೂ ಆದೇಕೋ ಒಮ್ಮೆಲೇ ನಿನ್ನ ನೆನಪನ್ನು ಮತ್ತೆ ಹಸಿರಾಗಿಸಿತು. ತುಂಬಾನೇ ಪ್ರಯತ್ನ ಪಟ್ಟೆ ನೋಡಬಾರದೆಂದು ಆದರು ಮನಸ್ಸು ತಾಳಲೇ ಇಲ್ಲ, ಮನಸಿನಲಿ ಒಮ್ಮೆಲೇ ಮೇಲಿನ ಸಾಲುಗಳು ಸುಳಿದು ಹೋದವು.
ಅಶೋಕ್ ಯೌ ಡೋಂಟ್ ಹ್ಯಾವ್ ವಿಲ್ ಪವರ್ .....
ಗೊತ್ತಿಲ್ಲ ಲಕ್ಕಿ ಬಹುಶ ನೀನು ನಿಜ ಇರಬಹುದು .. ಕೊನೆಗೂ ಒಂದು ಮಾತಂತೂ ನಿಜ , ನಮ್ಮ ಕನಸಿನ ಸಿಮೆಂಟ್ ನಿನಾಗಿದ್ದೆ, ಆದರೆ ನಾನು ಇಟ್ಟಿಗೆಯಾಗಲಿಲ್ಲ , ನಿನ್ನ ಮಾತು ಸತ್ಯ ಕಣೇ. ನನ್ನಲ್ಲಿ ಅದೇನು ಕಂಡೆ ಎಂದು ಪ್ರತಿ ಬರಿ ಕೇಳಿದಾಗ ನೀನು ಅದೇ ಹೇಳುತಿದ್ದೆ , ಏನ್ರೀ ಅದೆಷ್ಟು ಖುಷಿ ನನ್ನ ಬಾಯಿಂದ ನಿಮ್ಮನ್ನು ಹೊಗಳಿಸಿ ಕೊಳ್ಳಬೇಕು ಎನ್ನುವ ತವಕ.
ಅಶೋಕ, ಎಲ್ಲರ ಪ್ರೀತಿ ಪಯಣದಲ್ಲಿ ಪ್ರಾರಂಭ ತುಂಬಾ ಕಷ್ಟ. ಆದರೆ ನಮ್ಮ ಪ್ರೀತಿ ನೋಡು ಎಷ್ಟೊಂದು ವಿಚಿತ್ರ. ಪ್ರೀತಿ ಶುರು ಮಾಡಬೇಕಾದರೆ ಬ್ರೇಕ್ ಅಪ್ ಡೇಟ್ ಕೂಡ ಫಿಕ್ಸ್ ಮಾಡಿ ಆಗಿದೆಯೆಂದು ಎಷ್ಟೊಂದು ಸಲೀಸಾಗಿ ನಗುತಲಿದ್ದೆ. ನನಗೆ ಹುಡುಗಿಯರ ಸ್ನೇಹ ಹೊಸದೆ...