ಅಮ್ಮ

ಅಮ್ಮ, ಸೋತಿರುವನು
ನಿನ್ನ ಮುದ್ದು ಕಂದ,
ಕಾಲದ ಚಕ್ರವ್ಯುಹದಲಿ ಸಿಲುಕಿ
ಏಕಾಂಗಿಯಾಗಿ ..

ಬತ್ತಿ ಹೋಗುವ ಕನಸಿನ
ಚಿಲುಮೆಯನು ಕಂಡು,
ನಲುಗಿ ಹೋಗಿದೆ ಜೀವ
ಸೋಲು ಸಾಕಾಗಿ ....

ನನ್ನ ಕಣ್ಣಿಗೆ ಕನಸು ಕಟ್ಟುವ
ಪರಿಯ ತಿಳಿಸಿ,
ನನ್ನ ಬದುಕಿಗೆ ಸುಂದರ
ಮುನ್ನುಡಿ ಬರೆದೆ ...

ನೀನಿರುವಾಗ ಸೋಲಿನಲ್ಲು
ನಲಿವಿತ್ತು ..ನನ್ನ ಬದುಕಿನಲಿ
ಈಗ ಗೆಲುವಿನಲ್ಲು
ನಲಿವಿಲ್ಲ ಅಮ್ಮ ....

ಮರಳಿ ಬಾ ಮತ್ತೊಮ್ಮೆ
ನನ್ನ ಬದುಕಿನಲಿ ..
ತಲೆ ಸವರಿ ಮುತ್ತೊಂದ
ಹಣೆಯ ಮೇಲೆ ಕೊಟ್ಟು

ನಿಮ್ಮ

ಹರ್ಷಾ




Comments

Lokesh shastri said…
Hi...!!! anna, I am Lokesh shastri (shivapur). i liked your new poem amma.
ಹರ್ಷಾ said…
Hi Lokesh,

Thanks.. for your comments.

Regards,

Harsha
ಮರಳಿ ಬಾ ಮತ್ತೊಮ್ಮೆ
ನನ್ನ ಬದುಕಿನಲಿ ..
ತಲೆ ಸವರಿ ಮುತ್ತೊಂದ
ಹಣೆಯ ಮೇಲೆ ಕೊಟ್ಟು

ಹರ್ಷಾರವರೆ, ನಿಮ್ಮಂತೆ ನಾನೂ ಕಾಯುತ್ತಿದ್ದೀನಿ ನನ್ನಪ್ಪನಿಗಾಗಿ...
ಹರ್ಷಾ said…
This comment has been removed by the author.
ಬಹಳ ಸೊಗಸಾಗಿದೆ. ತು೦ಬಾ ಖುಷಿಯಾಯಿತು.

Popular posts from this blog

ನಾನು ಮತ್ತು ಅಮ್ಮನ ನೆನಪು

ಅವಳ ನೆನಪು

ಸೌಂದರ್ಯ