ಬರಿಗೈ ಹುಡುಗ


ನಾ ಬರಿಗೈ ಹುಡುಗ
ನನ್ನಲ್ಲಿ ಏನಿಲ್ಲ..
ಕೊಡುವ ಮನಸು
ನೀಡುವ ಕೈ
ಎಂದು ಏನನ್ನೂ
ಕೊಟ್ಟಿಲ್ಲ!

ಪಡೆದೆ ಏನೆಲ್ಲಾ!
ಯಾರ್ಯಾರಿಂದಲೋ!!
ಲೆಕ್ಕವಿಡದೆ ಮರೆತು ಬಿಟ್ಟೆ!
ದಡ್ದನು ನಾನಲ್ಲ.!
ನೆನಪಿರುವದೇ ಆದರೂ
ಮರೆಯುವ ನಾಟಕ!
ನನಗಿಂತ ಚೆನ್ನಾಗಿ
ಯಾರು ಕಲಿಯಲೇ ಇಲ್ಲ!!

ಕಪಟವನ್ನೇ  ಮುಗ್ಧತೆಯಾಗಿ
ಬಿಂಬಿಸುವ ನನ್ನ ಪರಿ!!
ಯಾರಿಗೂ ಎಂದೂ ತಿಳಿಯಲಿಲ್ಲ..
ಏಲ್ಲರಲ್ಲೂ ಒಂದಾಗಿ
ನಾ ಕಂಡರೂ
ನನ್ನಂಥ ಏಕಾಂಗಿ ಯಾರಿಲ್ಲಾ.!!
ನನ್ನ ಮನಸಿಗೇ ನನ್ನಂತೆ
ಮೋಸಗೊಳಿಸುವ ಪರಿ
ನನ್ನ ಹಾಗೇ ಬೇರೆ ಯಾರಿಗೂ
ಬರುವುದಿಲ್ಲ!!.

ನಾ ಬರಿಗೈ ಹುಡುಗ.
ನನ್ನ ಹಾಗೇ
ನೀವು ಯಾರಿಲ್ಲ!!
ಕಣ್ಣನ್ನ್ನು ಮುಚ್ಚಿ
ಅಂತರಂಗದಲ್ಲಿ ಇಣುಕಿ,
ನೋಡಿ ನಿಮ್ಮೊಳಗೆ
ಇರುವುದು!
ನಾನು!!
ಅದು ನೀವಲ್ಲ!!




ನಿಮ್ಮ

ಹರ್ಷಾ






Comments

ಹರ್ಷ,

ಕಪಟವನ್ನೇ ಮುಗ್ಧತೆಯಾಗಿ ಬಿಂಬಿಸುವ ಪರಿ ಯಾಕೋ ಗೊತ್ತಿಲ್ಲ! ಮುಗ್ಧತೆ ಮುಗ್ಧತೆಯೇ ಆಗುಳಿದರೆ ಅದೆಷ್ಟು ಚಂದ! ಅದರಲ್ಲಿ ಕಪಟತನದ ಹೋಲಿಕೆ ಯಾಕೋ!? ಮುಗ್ಧತೆಯನ್ನೇ ಅನುಮಾನಿಸುವಂತ ಮನಸುಗಳು ಹುಟ್ಟಿಕೊಂಡರೆ ಪ್ರಪಂಚದಲ್ಲಿ ಅಂದವೆಲ್ಲಿಯದು? ಸತ್ಯ ಮತ್ತು ಸೌಂದರ್ಯಗಳು ಒಂದಕ್ಕೊಂದು ಪೂರಕ! ಪ್ರೇರಕ! ಅವುಗಳ ಹೋಲಿಕೆ ಕೂಡ ಕಪಟವಾಗದಿರಲಿ. ಹಾಗಿದ್ದರೆ ಕವಿತೆ ಕೂಡ ಮನಸಿನಂತೆ ಅಂದ.. ಆನಂದ ಕೊಡುತ್ತದೆ. ಇದು ನನ್ನ ಅನಿಸಿಕೆ. ಕವಿತೆ ಅರ್ಥಗರ್ಭಿತ.

Popular posts from this blog

ಅವಳ ನೆನಪು

ನಾನು ಮತ್ತು ಅಮ್ಮನ ನೆನಪು

ಸೌಂದರ್ಯ