ಬಾ ಗೆಳತಿ

ನನ್ನ ಪ್ರೀತಿಯ ಕಂಪು
ಅರಿಯದೇ ಹೊದೆಯಾ ಗೆಳತಿ...
ನನ್ನ ಮನಸಿನ ಮಾತು
ಕೇಳದೇ ಹೋಯಿತೆ ನಿನಗೆ...
ನಿನ್ನ ಪ್ರೀತಿಯು ನನ್ನ
ಮೌನದ ಮಾತನರಿತು
ಮತ್ತೆ ಹೊಸ ಚಿಗುರಿನಂತೆ
ಹಸನಾಗುವದು ಎಂದಿದ್ದೆ..
ಹಗಲು, ರಾತ್ರಿ, ನಿದ್ದೆ, ಎಚ್ಚಾರ
ಇದಾವುದರ ಹಂಗಿಲ್ಲ ನನ್ನಾ
ಪ್ರೀತಿಗೆ ಇದು ಎಂದೆಂದಿಗೂ
ನಿರಂತರ. ಇದಕಿಲ್ಲ ಯಾವ ಆಂತರ
ನಿನ್ನ ನೋಡಿದಾಗ ತೆರೆದ ರೆಪ್ಪೆ
ಇನ್ನೂ ಮುಚ್ಚಿಲ್ಲಾ.. ನನ್ನ
ಕಣ್ಣುಗಳಿಗೆ ನಿನ್ನ ಚಿತ್ರ
ಮಾಸುವ ಭೀತಿ......
ಹುಸಿ ಮುನಿಸು ಬಿಡು ಹುಚ್ಚಿ..
ಹಾರಿ ಬಾ ಒಮ್ಮೆ ಗುಬ್ಬಚ್ಚಿಯ
ತರಹ ನನ್ನ ಹೃದಯದ ಗೂಡಿನಲಿ
ನೆನ್ನ ನೆನಪಿನಲಿ ನನ್ನುಸಿರು ನಿಲ್ಲುವ ಮೊದಲು.......
ನಿಮ್ಮ
ಹರ್ಷ ಬೀರಗೆ
(Reply to Rajni poem in Dam)
Comments