ನನ್ನ ಕವಿತೆ

ನನ್ನ ಕವಿತೆ, ಬರಿ
ಪದಗಳ ಜಂಜಾಟದಲ್ಲಿ
ಸೋಸಿ ಬಂದ ಸುಗಂಧವಲ್ಲ...

ನನ್ನವಳ ಮಲ್ಲಿಗೆಯ
ಕಂಪಿನ ಮಂಪರಿನಲ್ಲಿ
ತೊಯ್ದು ಬಂದ ತೊದಲು ನುಡಿ...

ನನ್ನ ಕವಿತೆ ಜಗತ್ತಿನ
ಅದ್ಭುತಗಳ ನೋಡಿ ಉದ್ಗರಿಸಿ
ಬಂದ ಸಾಲುಗಳಲ್ಲ....

ನನ್ನ ಕವಿತೆ ನನ್ನವಳ ಅಪ್ಪುಗೆಯ
ಬಿಸಿ ಸ್ಪರ್ಶದಂತೆ ಯಾವಾಗಲು ಸನಿಹ
ನನ್ನೊಡಗುಡಿ ನನ್ನಾ ಉಸಿರಾಗಿ..

ಇದು ನನ್ನಾ ಕವಿತೆಯೆಲ್ಲ ಗೆಳತಿ
ಈ ಕವನ ನಿನ್ನದೆ, ನಿನ್ನ ಕಣ್ಣಂಚಿನ
ನೊಟದಲಿ ಆಡಗಿರುವ ಸುಪ್ತ ನೊಟಗಳೆ,
ಮಾತಾಗದೇ ಮೌನವಾಗಿರುವ ನಿನ್ನ ತುಟಿಯಂಚಿನಲಿ
ಕಾಣುತಿರುವ ಅದುರುವ ಹೂವಿನ ದಳಗಳೆ, ಇಲ್ಲಿ ಮುಡಿರುವ
ಪ್ರತಿ ಪ್ರತಿ ಸಾಲುಗಳು.. ಇದೋ ಇದು ನಿನ್ನ ಕವನವೇ ಸರಿ..

ನಿಮ್ಮ

ಹರ್ಷ ಬೀರಗೇ

(Reply to Malini Jain poem 'Nanna Kavite' in Dam)

Comments

Popular posts from this blog

ಅವಳ ನೆನಪು

ನಾನು ಮತ್ತು ಅಮ್ಮನ ನೆನಪು

ಸೌಂದರ್ಯ