ಬೇಸರ

ಬೇಗ ಮುಳುಗು ಸೂರ್ಯಾನೆ
ಸಂಜೆಯಾಗಲೀ ಇಂದು..
ಸಾಗಿ ಹೋಗಲಿ ನನ್ನ ಬದುಕಿನ
ದಿನವೂ ಮತ್ತೊಂದು......

ಕಿಟಕಿಯಿಂದ ಕಣ್ಣು ಹಾಯಿಸಿ ನೋಡುತ್ತೇನೆ
ಮುಂಜಾವಿನಲಿ ಎದ್ದು, ಮಂಜಿನ
ಸೀರೆ ಉಟ್ಟ ಸುಂದರ ಪರ್ವತಗಳು,
ನನ್ನ ನೋಡಿ ನಾಚಿದಂತೆ ದೂರದಲಿ.....

ಕಣ್ಣು ಬಿಡದೆ ಕೆಳುತ್ತಾನೆ ಗೆಳೆಯ,
ಭಾಯಿ ಶೇವಿಂಗ್ ಆಯಿತಾ, ಇವತ್ತಿಂದು ಏನು
ಮೆನೂ ?, ಬರಿ ಇರುವಾಗ ಬ್ರೆಡ್ ಮತ್ತು
ಮ್ಯಾಗಿ ಎರಡೇ ಆಪ್ಶನು (option)................

ಇಲ್ಲಿನ ರಸ್ತೆಗಳು ನೋಡು, ಎಷ್ಟು ಸುಂದರ
ಇಲ್ಲಿನ ಪಾರ್ಕುಗಳು, ಇಲ್ಲಿನ ಮಾತೆ ಬೇರೆ
ಎಂದು ಪ್ರತಿ ಸಲ ಆವನೂ ಹೇಳುವಾಗ,
ಕೋಪದಿಂದ ಮುಷ್ಟಿ ಬಿಗಿಯಾಗುತ್ತದೆ
ತಡೆಯುತ್ತೇನೆ ಮನಸಿನಲ್ಲಿ ಬೇಡ ತಾಳು
ಕನ್ನಡ ಮಾತಡಲು ಇರುವದೋಂದೇ ಆಪ್ಶನು (option)

ಏನೇ ಅನ್ನಲಿ ನಮ್ಮ ಪೂಣೆ ಮಾತೆ ಬೇರೆ
ಯಾವ ಬಸ್ ನಲ್ಲಿ ಕುಳಿತರೂ ಎಲ್ಲಾ ನಮ್ಮವರೇ,
ಆವ್ರ್ಯಾರು ನಾವ್ಯಾರೂ ಅನ್ನುವದು ಇಬ್ಬರಿಗೂ ಗೊತ್ತಿಲ್ಲ
ವಡಾಪಾವ ಜ್ಯೋತೇ ಚಟ್ನಿ ತಿಂದ ಹಾಗೆ ಮಜಾನೇ ಬೇರೆ

ಒಮ್ಮೊಮೆ ಅಣುಕಿಸುವದು ನನ್ನ ಹುಡುಗಿಯ ಮುಖ
ಇಲ್ಲಿನ ಹುಡುಗಿಯರನ್ನು ನೋಡಿದಾಗೊಮ್ಮೆ, ಛಿ ಏನೋ ದಡ್ಡ
ಯಾರ ಜ್ಯೋತೇ ನನ್ನ ಹೋಲಿಸುತ್ತಿರುವೆ ಎಂದು
ಮುಖ ಕೆಡಿಸುತ್ತದೆಕೊಪದಲಿ ನನ್ನಿಂದ ದೂರವಾಗಿ ಹೋದ ಹಾಗೆ......

ನಿಮ್ಮ

ಹರ್ಷ

(ಟುರಿನ ನಾಗರದಲ್ಲಿದ್ದಾಗ ಬರೆದ ಕವನ)

Comments

Popular posts from this blog

ನಾನು ಮತ್ತು ಅಮ್ಮನ ನೆನಪು

ಅವಳ ನೆನಪು

ಸೌಂದರ್ಯ