ಹೃದಯ ವೀಣೆ ಮಿಟಬೆಕೆ?

Saturday, March 15, 2008

ದೂರದ ಕನಸೀನೂರಿಗೆ..

ದೂರದ ಕನಸೀನೂರಿಗೆ,
ಕ್ಷಮಿಸು ನನ್ನ ನಾ
ಬರಲಾರೆ ನಿನ್ನ ಜೊತೆ
ನಾ ಗೆಳತಿ...

ಸೋತು ಸಾಕಾಗಿ ಹೋಗಿದೆ
ನನಗೆ ನೈಜ ಜಗತ್ತೇ,
ಹೆಳುವರು ಈ ಜಗತ್ತು ಮತ್ತು
ಇಲ್ಲಿರುವದು ಎಲ್ಲ ನೈಜ ಅಂತೆ.

ಎಲ್ಲ ಸುಳ್ಳಿನ ಕಂತೆ ತುಂಬಿ
ಹೋಗಿದೆ ಇಲ್ಲಿ, ಹೇಳು ಯಾವುದು
ವಾಸ್ತವ, ಯಾವುದು ಸುಳ್ಳು ತಿಳಿಯದೇ
ಸುಸ್ತಾಗಿ ಹೋಗಿದ್ದೇನೆ ನಾನು..

ನಿನ್ನ ಕನಸೀನೂರಿನಲ್ಲಿ ಹೇಳು
ಹೊಟ್ಟೆ ತುಂಬಲ್ಲು
ಮಾಡಬೇಕಾಗಿಲ್ಲವೇ ದೀನಪೂರ್ತಿ
ಕಂಪ್ಯೂಟರ್ ಜೊತೆ ಗುದ್ದಾಟ..?

ಖುಷಿ ಪಡಲು ಒದ್ದಾಡಬೇಕಾಗಿಲ್ಲವೆ
ಎಮ್. ಜಿ ರೋಡು ಪಿಜ್ಜಾ ಹಟ್ ಗಳ
ಸಹವಾಸ ಮುರು ತಾಸು ಬೇಸರ ದೂಡಲು ಆಸರೆ ಬೇಡವೇ
ಮುಲ್ಟಿಪ್ಲೆಕ್ಷಗಳ ನಿಬಿಡ ಜನರ ಕಾಟ..?

ಹಾಗಿದ್ದರೆ ಹೇಳು, ಇಂದೆ ಓಡೋಡಿ ಬರುವೆ
ನಿನ್ನ ಸನಿಹ , ಈ ವಾಸ್ತವದ ಜಗತ್ತನ್ನು ಬಿಟ್ಟು
ನಿನ್ನ ಹಿಂದೆ ಓಡೋಡಿ ಬರುವೆ ಇಂದೆ ಕೈ ಹಿಡಿದು
ಕರೆದೊಯ್ಯಿ ನನ್ನ ನಿನ್ನ ಕನಸಿನೂರಿಗೆ..

ಹರೀಶ್ ಎನ್. ಬೀರಗೆ

No comments: